ಒಟ್ಟು 5 ಕಡೆಗಳಲ್ಲಿ , 2 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುರವೆ ಪೊರೆಯೊ ಯನ್ನ | ಆವಗುಣಮರೆದು ರಾಘವೇಂದ್ರಾ ಪ ನೆರೆನಂಬಿದರ ಸುರತರುವೇ ಹೇಪುರಟ ಕಶಿಪುಜ ಗರುಡವಹನ ಪ್ರೀಯ ಅ.ಪ. ಸುಜನ ವತ್ಸಲ | ಗೆಲುವ ಕಾಣೆನೊ ಕರ್ಮನಿರ್ವಹದಿಜಲಜನಾಭನ ಚರಣ ಪುಷ್ಕರ | ಸುಲಭ ಷಟ್ಟದ ಸೆನಿಸೊ ಗುರುವರ 1 ಯತಿಕುಲ ಸಾರ್ವಭೌಮ | ನಿಮ್ಮಯ ನಾಮಾಮೃತವನುಣಿಸಲು ನಿಸ್ಸೀಮಾ ||ಪತಿತ ಪಾವನ ಹರಿಯ | ಸತತದಿ ನುತಿಸುವಮತಿಯಿತ್ತು ಪಾಲಿಸೊ | ಶತಕ್ರತು ಪಿತ ಪಿತನೆ ||ರತಿಪತಿಯ ಪತನೆನಿಸಿದಾತನ | ನತಿಸಿ ನುತಿಸುತ ಕರೆಯುತಲಿ ಗತಿ ಪ್ರದಾಯಕ ಹರಿಯ ವ್ಯಾಪ್ತಿಯ | ಪಿತಗೆ ತೋರಿದ ಅತುಳ ಮಹಿಮಾ 2 ಮಂತ್ರ ನಿಕೇತನನೆ ಯತಿಕುಲರನ್ನ ಮಂತ್ರಾರ್ಥ ರಚಿಸಿದನೇ ||ಗ್ರಂಥೀಯ ಹರಿಸೂವ | ತಂತ್ರವ ತೋರೋ ಅತಂತ್ರವಾಗಿದೆಯನ್ನ | ಮಂತ್ರ ಸಾಧನವೂ || ಪ್ರಾಂತಗಾಣದೆ ಚಿಂತಿಸುವೆ ಸರ್ವಸ್ವ | ತಂತ್ರ ಗುರುಗೋವಿಂದ ವಿಠಲನ ಅಂತರಂಗದಿ ತೋರಿ ಸಲಹೋ | ಕ್ರಾಂತನಾಗುವೆ ನಿಮ್ಮ ಪದಕೇ3
--------------
ಗುರುಗೋವಿಂದವಿಠಲರು
ಜಯದೇವಿ ಜಯದೇವಿ ಜಯ ಆದಿಶಕ್ತಿ| ಜಯಜಯಚಂದ್ರಲೆಮಾತೆ ರವಿಶತ ನಿಜದೀಪ್ತಿ ಪ ಸುರಮುನಿ ಸೇವಿತವಾದಾ ಚಾರುವಿಲಾಸದಲೀ | ಇರುತಿರೆ ನಾರಾಯಣಮುನಿ ಭಕುತಿಗೆ ಪ್ರೇಮದಲೀ | ಕರುಣದಿಭೀಮರಥಿಯಾ ಬಂದು ನೀ ತೀರದಲಿ | ದಾರಿ ತಪ್ಪಿದ ದುರುಳನ ಮರ್ದಿಸಿ ಭೃಮರದಲಿ 1 ಅಂದಿಗಿಂದಿಗೆ ನಿಂತು ಪ್ರಸನ್ನತಿ ಗ್ರಾಮದಲಿ | ದ್ವಂದ್ವಚರಣವ ದೋರಿ ಮುಕುತಿಗೆ ಖೂನದಲಿ | ಬಂದವ ದರ್ಶನ ಸ್ಪರ್ಶನ ಪೂಜನ ಮಾಡುತಲಿ | ಚಂದದಿ ಇಹಪರ ಸುಖವಾ ಪಡೆದರು ಸುಲಭದಲಿ2 ವಿವೇಕ ಹರಿವಾಣದಿ ಭಾವದಾರತಿ ನಿಲಿಸಿ | ತೀವಿದ ಸಮ್ಮಜ್ಞಾನದ ಜ್ಯೋತಿಯ ಪ್ರಜ್ವಲಿಸಿ | ಆವಗುಬೆಳಗುವ ಮಹೀಪತಿ ನಂದನತಾನಮಿಸಿ | ಅನುದಿನ ಅಪರಾಧವ ಕ್ಷಮಿಸಿ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಜಯದೇವಿ ಜಯದೇವಿ ಜಯಭಗವದ್ಗೀತೆ | ಶ್ರಯ ಸುಖದಾಯಕಮಾತೇ ಶೃತಿ ಸ್ಮøತಿ ವಿಖ್ಯಾತೇ ಪ ಮೋಹ ಕಡಲೋಳಗರ್ಜುನ ಮುಳುಗುತ ತೇಲುತಲಿ | ಸೋಹ್ಯವ ಕಾಣದೆತನ್ನೊಳು ತಾನೇ ಮರೆದಿರಲೀ| ಬೋಧ ಪ್ರತಾಪದಲೀ| ಮಹಾ ಸುಜ್ಞಾನದ ತೆಪ್ಪದಿ ದಾಟಿಸಿದವನಿಯಲಿ 1 ಅಂದಿಗಿಂದಿಗೆ ಋಷಿ ಮುನಿ ಸಜ್ಜನ ಮೊದಲಾಗಿ | ಕುಂದದಿ ಪಂಡಿತರೆಲ್ಲರು ಮತಿ ಯುಕ್ತಿಯಲೊದಗಿ | ಸುಂದರ ಟೀಕೆಯ ಮಾಡುತ ಪಾಡುತ ಅನುವಾಗಿ | ಚಂದದಿ ನಿಂತರು ಅನುಭವದಲಿ ವಿಸ್ಮಿತರಾಗಿ 2 ಆವನು ಭಾವದಿ ಪೂಜಿಸಿ ಓದಿಸಿ ಕೇಳುವನು| ಸಾವಿರ ಸಾಧನವೇತಕೆ ಜೀವನ್ಮುಕ್ತವನು | ದೇವಮನುಜರಿಗೆ ತಿಳಿಯದು ಪದಪದ ಮಹಿಮೆಯನು | ಆವಗು ಸ್ಮರಿಸುವ ಮಹೀಪತಿ ನಂದನು ನಿಮ್ಮವನು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ದಾಸರಿವರ ನೋಡಿರೊ | ಗುರು ವಿಜಯ |ದಾಸರಿವರ ಪಾಡಿರೋ ಪ ವ್ಯಾಸರಾಜ್ಞೆಯಲಿಂದ | ವ್ಯಾಸ ಕಾಶಿಗೆ ಪೋಗಿ |ಶ್ರೀಶಾನುಗ್ರಹದಲಿ | ಭಾಸಿಸೀ ಮೆರೆದಂಥ ಅ.ಪ. ಎರಡನೆ ಯುಗದೊಳಗೆ | ಸುರಲೀಲ | ವರಕಪಿ ಎಂದೆನೆಸಿ |ಶಿರಿ ರಾಮಚಂದ್ರನ್ನ | ಚರಣ ಸೇವಕರಾಗಿಸುರ ವಿರೋಧಿಗಳ ಬಹಳ ಸಂಹರಿಸಿದ 1 ಯಾದವರಲಿ ಜನಿಸಿ | ನಿಕಂಪಾಖ್ಯ | ಶ್ರೀದಕೃಷ್ಣನ ಭಜಿಸಿ |ಮಾಧವ ಗೆದುರಾಂತ | ದೈತ್ಯರ ಸದೆಬಡಿದುಯಾದವೇಶನ ಪದ | ಕರ್ಪಿಸಿ ಮೆರೆದಂಥ 2 ಪುರಂದರ ದಾಸರ | ವರ ಗೃಹದಲಿ ಇದ್ದುಹರಿಚರಿತೆ ಶ್ರವಣದಿ | ವಿಪ್ರನಾಗ್ಯುದೀಸಿದ 3 ಮಧ್ವಪತಿಯ ನಾಮದಿ | ಭೃಗ್ವಂಶದಿ | ಮುದ್ದು ಮಗನೆನಿಸಿಮಧ್ವೇಶ ಹರಿಪಾದ | ಶ್ರದ್ಧೆಯಿಂದಲಿ ಭಜಿಸಿಮಧ್ವರಾಯರ ಮತ | ತುತಿಸಿ ಮೋದಿಸಿದಂಥ 4 ಚೀಕನಪರಿ ಕ್ಷೇತ್ರದೀ | ದಾಸಪ್ಪನು | ಆ ಕೂಸಮ್ಮನ ಉದರದಿಬೇಕಾಗಿ ಜನಿಸುತ್ತ | ಪ್ರಾಕು ಪ್ರಾರಬ್ದವನೇಕ ಬಗೆಯಲಿ ಉಂಡ | ಮಾಕಳತ್ರನ ಕಂಡ 5 ಪುರಂದರ | ದಾಸರೂಪಿಯಲಿಂದ |ಸೂಸಿ ಶಾಸ್ತ್ರವ ಮಧ್ವ | ಭಾಷ್ಯಾನು ಸಾರದಿ |ಭಾಷೆ ಕನ್ನಡದಲ್ಲಿ | ಮೀಸಲೆನಿಸಿ ಪೇಳ್ದ 6 ಧ್ಯಾನೋಪಾಸನೆ ಕರ್ಮವ | ಯೋಗ್ಯರಿಗೆ | ಗಾನಗೈದಿಹ ಸುಜ್ಞಾನೀ | ಮಾನ್ಯ ಮಾನದ ದುಷ್ಟ | ಗಾನಕೆ ಮನ ಕೊಡದೆಮೌನಿಯಾಗುವ ಮಾರ್ಗ | ದಾನವ ಮಾಡೀದ 7 ಸ್ವಪ್ನದಲ್ಲೆನಗವರೂ | ದರ್ಶನದಿ | ಕೃಪ್ಪೆಯಲನುಗ್ರಹಿಸಿ |ಅಪ್ಪಾರ ಮಹಿಮರು | ತಪ್ಪದೆ ತ್ರಯ ಬಾರಿಒಪ್ಪಿ ತೀರ್ಥವನಿತ್ತು ಕಳುಹಿದ ಮಹಾಂತ 8 ವತ್ಸರ ಕಾರ್ತೀಕ | ಸಿತ ದಶಮಿ | ಆವಗುರುವಾಸರದಿಭಾವಜ ಪಿತ ಗುರು | ಗೋವಿಂದ ವಿಠಲನಭಾವದಿ ಕಂಡು ಸುಯೋಗದಿ ಪೊರಟಂಥ 9
--------------
ಗುರುಗೋವಿಂದವಿಠಲರು
ಶರಣಾರ್ಥಿ ಶಿವಶರಣಾರ್ಥಿ | ಹರಿಹರ ಎಂದು ಶಿವಪದ ಕಂಡವಗೆ ಪ ಗುರುವಿಗೆರಗೆ ನಿಜ ಗುರುತಕೆ ಬಂದಿನ್ನು | ಧರೆಯೊಳು ಪುಣ್ಯ ಜಂಗಮನೆ ವಾಸಿ | ಅರಹುಮರಹು ಮೀರಿ ಸಹಜಾವಸ್ಥಿಗೆ | ಬೆರದಿಹ ಶರಣಗೆ 1 ಎದೆಸೆಜ್ಜೆಯೊಳಗಿಹ ಘನಲಿಂಗ ಪೂಜಿಸಿ | ಮುದದಿಂದ ಭಕ್ತಿಯ ಪಾವುಡದೀ | ಸದ್ಭಾವ ಸೂತ್ರದಿ ಆವಗುಧರಿಸಿಹ | ವಿದಿತ ಲಿಂಗಾಂಗಿಗೆ 2 ಆಶೆಯಸುಟ್ಟು ವಿಭೂತಿಯ ಹಚ್ಚಿದ | ಧ್ಯಾಸದಂಡ ಕೈಲಿ ಪಿಡಿದು | ಲೇಸಾದ ಸುಗುಣ ರುದ್ರಾಕ್ಷಿಯ ತೊಟ್ಟು | ಭಾಸಿಪ ಸಂತಗೆ 3 ಶಾಂತಿಯ ತೊಡರವ ಕಟ್ಟಿ ವಿವೇಕದ | ಮುಂತಾದ ಕಾಷಾಯ ಪೊದ್ದಿಹನಾ | ಸಂತತ ಗುರುಧರ್ಮ ಭಿಕ್ಷೆಯನುಂಡು | ವಿಶ್ರಾಂತಿಯ ಮಠ ಹಿಡಿದ ವಿರಕ್ತಗೆ 4 ಶರಣನೆನುತಾ ಅನ್ಯರ ಶರಣರ ಮಾಡೀ | ಶರಣ ತಾನೆಂಬ ವೃತ್ತಿಯನುಳಿದು | ದ್ಧರಿಸಿದ ಮೂರ್ತಿಗೆ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು