ಒಟ್ಟು 4 ಕಡೆಗಳಲ್ಲಿ , 2 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದಾವಲ್ಲಿ ಕೂತಿದ್ದೀಯೊ ರೋಗಿಷ್ಠ ಕಾಯ ಎನ್ನನು ಕಾಯ್ಕೊಂಡು ಪ ಜೀವಕಂಟಕನಾಗಿ ಹೇಯದಿಂದೊಡಗೂಡಿ ಆವಕಾಲದಿ ರೋಗದ್ಹೊರಳುತ ಎಲೆ ಖೋಡಿ ಅ.ಪ ಏನು ಕರ್ಮವ ಮಾಡಿದ್ದೋ ಪಾಪಾತ್ಮ ನೀ ಹೀನಸ್ಥಿತಿಯ ಪೊಂದಿದಿ ನಾನಾವಿಧದಿ ಮಹಬೇನೆಯಿಂ ನರಳುತ ನೀನೆನ್ನ ಜತೆಗೂಡಿ ಬನ್ನಬಡಿಸುವಿ ಪಾಪಿ1 ಹೊಲಸಿನ ದ್ವಾರದಿಂದ ಇಹ್ಯಕೆ ಬಂದಿ ಮಲಮೂತ್ರ ತುಂಬಿಕೊಂಡು ತೊಳೆಯದಿರಲು ನಿಮಿಷ ಹೊಲಸಿಕ್ಕಿನಾರುವಿ ತಿಳಿದುನೋಡಲು ನಿನ್ನ ಸಲಿಗೆಯಿಂ ನಾ ಕೆಡುವೆ 2 ಎನ್ನ ಜೊತೆಯ ಪೊಂದಿರ್ದ ಕಾರಣದಿಂ ನಾ ನಿನ್ನ ಕ್ಷೇಮವ ಬಯಸುವೆ ಎನ್ನಯ್ಯ ಶ್ರೀರಾಮನುನ್ನತಡಿಗಳ ನಂಬಿ ಸನ್ನುತಿಯಿಂ ಕ್ಷಮೆಬೇಡಿ ಧನ್ಯನಾಗೆಲೋದೇಹ್ಯ3
--------------
ರಾಮದಾಸರು
ನೀನೆ ನಿಜಗುರುವಾಗುಎನಗೆ ಮಾಧವ ಪ ಮರವೆಯೆಂಬ ಪರದೆ ಹರಿದು ಅರಿವುಯೆಂಬಾಲಯದೊಳಿರಿಸಿ ದುರಿತಪರ್ವತ ತರಿದು ಪೊರೆಯುವ ಚರಣದಾಸರ ಭಾಗ್ಯನಿಧಿಯೆ 1 ಹೀನಸಂಸಾರೆಂಬುವ ಮಹ ಕಾನನದಿ ಬಳಲಿಸದೆ ಅನುದಿನ ಧ್ಯಾನಮೃತ ಪಾನಗೈಸುವ ಧ್ಯಾನಿಪರ ಮಹಪ್ರಾಣದರಸೇ 2 ಆವಕಾಲದಿ ಬಿಡದೆ ನಿಮಿಷ ಜೀವ ಭಕುತರ ಭಾವದ್ವಾಸಿಸಿ ಜಾವ ಜಾವಕೆ ಬುದ್ಧಿ ಕಲಿಸುವ ದೇವದೇವರ ದಿವ್ಯದೇವರೆ 3 ಸಕಲಕೋಟಿಮಂತ್ರಗಳಿಗೆ ನಿಖಿಲ ನೀನೆ ಆಧಾರನಾಗಿ ಅಖಿಲರೂಪದಿ ಜಗವ ಬೆಳಗುವ ಭಕುತಿದಾಯಕ ಸುಖದ ಶರಧಿಯೆ 4 ಸಾರಿ ಭಜಕರ ಭಾರವಹಿಸಿ ಘೋರಭವಸಾಗರವ ಗೆಲಿಸಿ ಧೀರ ಶ್ರೀಗುರುರಾಮ ಪ್ರಭುವೇ 5
--------------
ರಾಮದಾಸರು
ಪೇಳಲಳವಲ್ಲ ನಮ್ಮಯ್ಯನಾಟ ತಿಳಿವರಾರಿಲ್ಲ ಪ ಪೇಳೇನೆಂದರೆ ನಿಲುಕೊ ಮಾತಲ್ಲ ಹೇಳಿಕೆ ಕೇಳಿಕೆಗೆ ಮೀರಿದ ಮೇಲುಮಹಿಮನ ಲೀಲಾಜಾಲವ ಅ.ಪ ಸಾಧ್ಯ ಮಾತಲ್ಲ ಜಗಸೂತ್ರನಾಟಕೆ ಆದಿ ಅಂತಿಲ್ಲ ಜಗಮೂರರೊಳಗೆ ಸಾಧನಿಕರೆಲ್ಲ ನಿಜಭೇದ ತಿಳಿದಿಲ್ಲ ಸಾಧನಿಟ್ಟು ಆವಕಾಲದಿಂ ನಾದ ತಡೆಯದೆ ವೇದಗಳ ಬಿಡ ದೋದಿ ದಣಿದು ಇನ್ನು ಆದಿಮಹಿಮನ ಪಾದಕಾಣವು 1 ಬಾಗಿ ಅನುಗಾಲ ನಿಜತತ್ವಭೇದಿಸಿ ನೀಗಿ ಭವಮಾಲ ಜಡವಾದ ದುರ್ಭವ ರೋಗಗಳುಯೆಲ್ಲ ಪಾರಾಗಿ ನಿರ್ಮಲ ರಾಗಿ ಪರಮಯೋಗ ಒಲಿಸಿ ಯೋಗಿಗಳು ಮಹ ಉಗ್ರತಪದಿಂ ಯೋಗಬೆಳಗಿನೊಳಗೆ ನೋಡಲು ನಾಗಶಯನ ಮಹಿಮೆ ತಿಳಿಯದು 2 ಸಾನಂದಾದಿಗಳು ಮಹ ಭೃಗು ಗಾರ್ಗೇಯ ಮನು ಮುನ್ಯಾದಿಗಳು ದೇವರ್ಷಿ ನಾರದ ಶೌನಕಾದಿಗಳು ಘನ ಸಪ್ತಋಷಿಗಳು ಅನಂತಾನಂತ ಪ್ರಳಯದಿಂದ ಜ್ಞಾನ ಬೆಳಗಿನೋಳ್ನಿಂತು ನೋಡಿ ಕಾಣದೆ ಶ್ರೀರಾಮಪಾದ ಮೌನದೋಳ್ಮುಳುಗೇಳುತಿಹರು 3
--------------
ರಾಮದಾಸರು
ಆರ ಮಕ್ಕಳಾರ ರಾಣಿ ಆರ ಸಂಪದವಾರಿಜಾಕ್ಷನಿಟ್ಟ ತೆರದಿ ಇರು ಎಲೆಲೆ ಆತ್ಮಾ ಪ.ಬೇಡಿದರೆ ಕೊಡ ದೇವ ಬೇಡದಿದ್ದರೀವ ದೇವನೋಡುತಿಹ ಸುಮ್ಮನೆ ತಾನಾಡಿಪ ಜಗವರೂಢಿಯಲ್ಲಿ ಎಳೆ ಮಕ್ಕಳಾಡುವಂತೆ ಕೊಟ್ಟು ಕಳೆದುಓಡಿಸಾಡುತಿಹ ಯಂತ್ರಾರೂಢನ ಬಳಗಿದೆಲ್ಲ 1ಕಂದನ್ನಿಟ್ಟು ತಂದೆ ತಾಯಿ ತಂದೆ ತಾಯಿ ಮುಂದೆ ಕಂದನಹಿಂದೆ ಮುಂದೊಯ್ಯುವನ್ಯಮ ಸಂಬಂಧರಿಗ್ಹೇಳಿಚಂದದಿ ಜಗಜ್ಜೀವರು ದಂದುಗದಿ ತೊಳಲೆ ಕಂಡುಮಂದಸ್ಮಿತದೊಳಿಪ್ಪ ಮುಕುಂದನ ಮಾಯವಲ್ಲದೆ 2ಹಾವು ಹಾರವಕ್ಕು ಮೃತ ಜೀವರು ಸಂಜೀವರಕ್ಕುಪಾವಕತಂಪಕ್ಕು ವಿಷ ಪೀಯೂಷಮಕ್ಕುಆವಕಾಲದಿ ಶ್ರೀ ಪ್ರಸನ್ವೆಂಕಟೇಶನಂಘ್ರಿಯಭಾವದೊಳರ್ಚಿಸು ಕ್ಷುದ್ರ ಜೀವಿಗಳಾಸೆ ಸಲ್ಲ 3
--------------
ಪ್ರಸನ್ನವೆಂಕಟದಾಸರು