ಶ್ರೀ ವಾದಿರಾಜರು
ಆವಕಾರಣ ಮೂಗು ತಿರುಹಿದೆಯೋ ಶ್ರೀ ವಾದಿರಾಜೇಂದ್ರ ಪ
ಆವಾವ ಬಗೆಯಿಂದ ನಾ ನೋಡೆ ನಿನ್ಹೊರತು ಗತಿಕಾಣೆನೊ ನಿನ್ನಾಣೆಗೊ ಅ.ಪ.
ಪತಿ ಬಂದು ಕರಪಿಡಿದು ಹಿತಿಸುವಾತೆರದಿ ಹಿತಿಸದೇ ಮತ್ತಾವ 1
ಕ್ಷಿತಿಯೊಳಗೆ ಇನ್ನಾರು ಹಿತವ ಬಯಸುವರಾರು ನಿನ್ಹೊರತು ಪೇಳೋಅಸಮ ಕರುಣಾಬ್ಧಿ ಶಿರಿಹಯವದನ ನಿನ್ನಾಧೀನನಾದ ಬಳಿಕ ಎನ್ನುದಾಶಿಸುವರೇ 2
ದಾನವಾದರೆ ಸಲಹೊ ಬೇಗ ಇರದಿರೆ ಬ್ಯಾಡೋ ಈಗ ಶಿರಿ ಅರಸ ನಮ್ಮ ತಂದೆವರದಗೋಪಾಲವಿಠಲನ ಸಹ ಬಾ ಬಂದ ಕಾಯದೆ ಮತ್ತಾವ 3