ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪರಿಹರಿಸು ದಯಾನಿಧಿ ಶರಣರ ಸಂಕಟವಾ ಧರೆಯ ತಳದಿ ನಾ ಪರಮಧೀನನು ಮರೆಯದಿಯೋ ಪದವಾ ಪ ಜಲದೊಳಗೆ ಪೊಕ್ಕರೂ ನಿನ್ನ ಬಿಡುವನಲ್ಲಾ ಬಲುಬೆಟ್ಟದ ಬುಡದೊಳು ಕುಳಿತರು ಪಿಡಿವೆನಲ್ಲಾ ನೆಲವಿಡಿದು ಕೋರೆಯಲಿ ತೋರ್ದರು ಅರಿವೆನಲ್ಲಾ ಗಲವರೆಗೆ ಸಿಂಹಮೊಗ ಧರಿಸಿದರೂ ಸರಿ ಬೆಚ್ಚಿ ಬೆವರೋನಲ್ಲಾ 1 ಸರಿ ತಿರಕನಂತೆ ನೀ ತಿಳಿದರೂ ಬಿಡುವನಲ್ಲಾ ಕರತಳದಿ ಕೊಡಲಿಯ ಪಿಡಿದರೂ ಸರಿವನಲ್ಲಾ ನೆರೆ ಧರಿಸಿ ಜಟವನ ಪೊಕ್ಕರೂ ಬಿಡುವನಲ್ಲಾ ಕರದಿ ಚಕ್ರವ ಪಿಡಿದು ತೋರಲೆಂದೆಂದಿಗುಜ್ವಲನಲ್ಲಾ 2 ವಸನಗಳಿಲ್ಲದೆ ನುಸುಳನರಿದೆನಲ್ಲಾ ಎಸೆವ ಸಮತುರಗವೇರಿ ಪೋಗಲು ಬಿಡುವನಲ್ಲಾ ದಶರೂಪಿ ನಿನ್ನನು ಬಿಡುವ ಶರಣನಲ್ಲಾ ಕುಸುಮನಾಭ ಶಿರಿ ನರಸಿಂಹವಿಠ್ಠಲ ಆಲಿಸೆನ್ನ ಸೊಲ್ಲಾ 3
--------------
ನರಸಿಂಹವಿಠಲರು
ಪಾಲಿಸೆನ್ನನೂ ರಾಮ ಪಂಥವ್ಯಾತಕೋ ಪ ಕಾಲವೈರಿ ಕಪಟನಾಟಕ | ಆಲಿಸೆನ್ನ ಬಿನ್ನಪವಂ ಚಾಲನೆ ಶ್ರೀಲೋಲನೇ ನೀಂ ಅ.ಪ ರಕ್ಷಕಾಮಣಿ ಸಾಧುಜನ ರಕ್ಷಾಮಣಿ ಅಕ್ಷಯ ಸುಜನರಾಶ್ರಿತÀ ನಿನ್ನ ಭಿಕ್ಷವನಾಂಬೇಡುವೆನೈ ಪಕ್ಷಿವಾಹನ ಜಗದಧ್ಯಕ್ಷನೇ ಸೀತಾರಾಮ 1 ಪಂಡಿತಾಮಣಿ ಜ್ಞಾನಕುಂಡಲಿನಗರೀಶ ನೀ ನಂಡಜ ವಾಹನನಹುದೊ ಪಂಡರಿಪುರನಾಯಕ ಚಾ ಮುಂಡಿ ವರದಾಯಕ ನೀಂ [ಶ್ರೀರಾಮ] 2 ಶಾಶ್ವತ ಜನಭಾಷಾ ಭಾಸ್ಕರಕೋಟಿ ತೇಜಾ ಈಶ್ವರ ಮತ್‍ಗುರು ತುಲಶೀರಾಮಾ 3
--------------
ಚನ್ನಪಟ್ಟಣದ ಅಹೋಬಲದಾಸರು
ಭಕ್ತ ಜನೋದ್ಧಾರನ್ಯಾರೋ ದೇವನ್ಯಾರೋ ಪ ನಿಜಮುಕ್ತಿ ದಾಯಕನೆ ಕೇಶವ ಪಾದತೋರೋ ಅ.ಪ ಭಕ್ತಿ ಜ್ಞಾನ ವಿಚಾರಕೆನ್ನನು ಹೊಕ್ತಿಗೊಳಿಸೆಂತೆಂದು ಬೇಡುವೆ ಶಕ್ತಿರೂಪನು ತಾಳಿ ತಿರುಗಿ ವಿ ರಕ್ತನಾದಾಂತ ಪರಾತ್ಮನೆ 1 ಬಾಲಕೃಷ್ಣನೆ ಬಾರೊ ಭಕ್ತನು ಶೀಲ ಗೋಕುಲಪಾಲ ಶ್ರೀಹರಿ ಆಲಿಸೆನ್ನಯ ಬಿನ್ನಪದ ನಿಜ ನೀಲಮೇಘಶ್ಯಾಮ ರಂಗಾ 2 ಧರಣಿ ಚೆನ್ನಪುರೀಶ ನಿಮ್ಮಯ ಚರಣ[ಧೂಳಿಯ]ಕುರುಹು ತೋರಿದ ಗುರುವು ತುಲಶೀರಾಮನೆ ನಿಜ ಪರಮತತ್ವವಿಲಾಸ ದೇವ 3
--------------
ಚನ್ನಪಟ್ಟಣದ ಅಹೋಬಲದಾಸರು