ಒಟ್ಟು 7 ಕಡೆಗಳಲ್ಲಿ , 6 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನು ಸಾಹಸವಂತ ಈ ನಮ್ಮ ಹನುಮಂತ ಪ ವಾನರರೇ ನೀವ್ ಕೇಳಿ ಇವನೆಂಥ ಧೀಮಂತ ಅ.ಪ. ಸಾಗರವ ದಾಟುವೊಡೆ ಸಾಧ್ಯವೇ ಪರರಿಗೆ ಹೇಗೆ ಪೊಕ್ಕನೋ ಕಾಣೆ ದೈತ್ಯಪುರವ ಹೋಗಿ ಪುನರಪಿ ಬಂದನೆಂತು ತಾ ಜೀವದಲಿ ಬೀಗುತಿಹ ರಾವಣನ ಗರ್ವವನು ಮುರಿದಿಹನು 1 ಭೂಮಿಸುತೆ ಸೀತೆಯ ಕ್ಷೇಮವಾರ್ತೆಯನೆನಗೆ ನೇಮದಲಿ ತಂದಿತ್ತ ಕುಶಲಮತಿಯು | ಸ್ವಾಮಿಕಾರ್ಯವನಿಂತು ಸಾಧಿಸಿದ ಈ ಮಹಾವೀರನಿಗೆ ಸಮರಾರು ಧರೆಯೊಳಗೆ 2 ಮಿತಿಯಿಲ್ಲದುಪಕಾರ ಮಾಡಿರ್ಪನಿವಗಿನ್ನು ಪ್ರತಿಫಲವ ನಾನೇನು ಕೊಡಬಲ್ಲೆನು | ಪ್ರತಿಯಿಲ್ಲದೆನ್ನ ಆಲಿಂಗನವನೀವೆ ಶ್ರೀ ಪತಿ ಕರಿಗಿರೀಶನ ಪರಮಭಕ್ತನು ಈತ 3
--------------
ವರಾವಾಣಿರಾಮರಾಯದಾಸರು
ಕಂಡೆನೋ ಕಂಡೆ ಗುರುಚಿದಂಬರನಾ ತನು ಗೊಂಡು ಭೂಮಂಡಲದೊಳು ಚರಿಸುವನಾ ಪ ಪರಮಾತ್ಮ ಪರತತ್ವವನು ತಿಳಿದವನ ಧರೆಯ ಜನರನÀು ಪಾವನವ ಮಾಡುವನಾ ಕರುಣ ಸಮುದ್ರ ದೀನರ ದಯಾಪರನಾ ನೆರೆನಂಬಿದವರಿಗೆ ವರವ ಕೊಡುವನಾ 1 ಮಳೆ ಛಳಿ ಬಿಸಿಲು ಹಸಿವಿಗಂಜದವನ ಕಲ್ಲು ಮುಳ್ಳು ಬೆಟ್ಟವೆನ್ನದೆ ಚರಿಸುವನ ನೆಲೆಗಾಣದಂತಹ ಅಪಾರ ಮಹಿಮನು ಕಲಿಮನದೊಡ್ಡದಾನಂದ ನಿರ್ಗುಣನ 2 ಸ್ಮರಹರನಂತೆ ಭಸಿತ ದಿಗಂಬರನಾ ಕೆರೆಬಾವಿ ದೇವಾಲಯವನು ಕಟ್ಟಿಸುವನ ಪುರಹರನಂತೆ ಢಿಕ್ಕನೆ ಧರಿಸಿಹನ ನರ ಗುರಿಗಳು ಬಲ್ಲರೇನೋ ಇಂಥವನಾ 3 ಯಮನಿಯಮ ಅಷ್ಟಾಂಗ ನಿರತನ ಕಮಲಾರಿ ಪಿತನಂತೆ ಗಂಭೀರದವನ ಹಿಮವಂತನಂತೆ ಧೈರ್ಯದೊಳಿರುತಿಹನ ಕಮಲ ಬಾಂಧವನಂತೆ ತೇಜದಿಂದಿರುತಿಹನ 4 ಅರಿಗಳನರುವರ ನುಗ್ಗೊತ್ತಿದವನ ಕರಣೇಂದ್ರಿಯಂಗಳ ನಿಗ್ರಹಿಸಿದವನ ಪರಮ ದಾಸಗೆ ಆಲಿಂಗನವನಿತ್ತನಾ ಸ್ಥಿರ ಚಿದಾನಂದ ಪುರದ ದಿಗಂಬರನ 5
--------------
ಕವಿ ಪರಮದೇವದಾಸರು
ಘಿಲ್ಲು ಘಿಲ್ಲೆನ್ನುತಲಿಘಮಕದಿಪಾಂಡವರುಫುಲ್ಲನಾಭನÀ ದಯಪಲ್ಲವನೋಡಿ ನಿಲ್ಲದಲೆ ಎಲ್ಲರೂ ಪ. ಸೂರಿ ಬಿಡವೋನೆ ದಯವನೆ1 ಸಲ್ಲು ಸಲ್ಲಿಗೆ ಲಕ್ಷ್ಮಿನಲ್ಲನ ಸ್ತುತಿಸುತಮಲ್ಲಿಗೆ ತುರುಬಿನಮಲ್ಲಿಗೆ ತುರುಬಿನ ಚಲುವಿಯರೆಲ್ಲ ಹೊರಡಲುಮಲ್ಲ ಮರ್ದನನ ಮನೆ ನೋಡ2 ಎಲ್ಲರು ಹೊರಡಲು ಹಲ್ಲಿ ಮಾತಾಡಿದವುಫುಲ್ಲನಾಭನ ದಯ ಚಲ್ಲುವುದೆನುತಲಿಫುಲ್ಲನಾಭನ ದಯ ಚಲ್ಲುವುದೆನುತಲಿವಾಲಿ ಗಂಟಿಟ್ಟ ನಕುಲನು3 ಅಂಗಳಕೆ ಬರುತಿರೆ ಮಂಗಳವಾದ್ಯಗಳಾದವುಹಂಗ ಹಾರಿದವು ಎಡಗಡೆಹಂಗ ಹಾರಿದವು ಎಡಗಡೆ ರಂಗಯ್ಯಆಲಿಂಗನವ ಕೊಡುವೋನು ನಿಜವೆಂದು 4 ತೇರಿನ ಬೀದಿಯ ದ್ವಾರದಿ ಬರುತಿರೆಕಾಗೆ ಹಾರಿದವು ಬಲಗಡೆ ಕಾಗೆ ಹಾರಿದವು ಬಲಗಡೆ ರುಕ್ಮಿಣಿಸೂರಿ ಬಿಡುವಳು ದಯವನ್ನೆ5 ರೂಢಿಗೊಡೆಯನ ಕೈಲಿ ನೀಡಿ ಮಂತ್ರಾಕ್ಷತೆನೋಡುವರು ದ್ವಿಜರು ದಯದಿಂದ ನೋಡುವರು ದ್ವಿಜರು ದಯದಿಂದ ಸತ್ಯಭಾಮಮಾಡುವಳು ಪರಮ ಕರುಣವ 6 ಅಕ್ಕಿ ತೆಂಗಿನಕಾಯಿ ಚಿಕ್ಕ ನಿಂಬೆ ಹಣ್ಣುಅಚ್ಚ ಮಲ್ಲಿಗೆ ಇದುರಿಗೆಅಚ್ಚ ಮಲ್ಲಿಗೆ ಇದುರಿಗೆ ರಮಿಯರಸುನಕ್ಕು ನುಡಿವನು ನಮಕೂಡ 7
--------------
ಗಲಗಲಿಅವ್ವನವರು
ಮನದಣಿ ನೋಡಿದೆನೊ ಸನಕಾದಿನಮಿತ ಮನದಣಿ ನೋಡಿದೆನು ದೃಢದಿ ಪ ನಿನಗೆ ಸರಿಯಿಲ್ಲ ಭುವನತ್ರಯದಿ ಮನಕೆ ಬೇಸರವಿಲ್ಲದನುದಿನ ತನುವನಪ್ಪಿಹಿಡಿದು ಭಕುತರ ಮನದ ವರಗಳನಡೆಸಿ ಸಲಹುವ ಕನಿಕರಾರ್ಣವ ವಿಠಲ ನಿನ್ನಡಿ ಅ.ಪ ಒಂದು ದಿನ ಆ ತ್ರೇತಾಯುಗದಲ್ಲಿ ಋಷಿಗಡಣ ಕೂಡಿ ಬಂದು ನಿಮ್ಮಯ ಚರಣಸನ್ನಿಧಿಲಿ ಭಯಭಕುತಿಯಿಂದ ವಂದಿಸಾಲಿಂಗನೆಯ ಕೋರುತಲಿ ಅಭಯ ಬೇಡುತಲಿ ನಿಂದ ಋಷಿಗಳಿಗ್ಹಲವು ಪರಿಯಲಿ ತಂದೆ ನೀ ಸಮ್ಮತವ ಪೇಳಿ ಬಂದು ದ್ವಾಪರಾಂತ್ಯಯುಗದಲಿ ಒಂದು ಅರಲವ ಅಗಲದಲೆ ನಿಮ್ಮ ಪೊಂದಿ ಆಲಿಂಗನವನೀಯುವೆ ನೆಂದು ವರವಿತ್ತ ವಿಠಲ ನಿಮ್ಮಡಿ 1 ಅಪಾರಮಹಿಮಜಾಲ ಅವತರಿತಿಸಿದಿ ದ್ವಾಪರಯುಗದಿ ಬಾಲಕೃಷ್ಣ ನೀನಾಗಿ ಶ್ರೀಪತಿ ಸುಜನಪಾಲ ದನುಜಕುಲಕಾಲ ಪಾಪಸಂಹಿತ ಅಮಿತಲೀಲ ಶಾಪಪರಿಹಾರ ವೇಣುಲೋಲ ತಾಪಸೋತ್ತಮರಿಷ್ಟ ನೀಡಲು ಗೋಪಿಕಾಸ್ತ್ರೀಯರೆನಿಸಿ ಪುಟ್ಟಿಸಿ ಗೌಪ್ಯದಾಲಿಂಗನವನಿತ್ತ ಭೂಪ ಭೂಪತಿ ವಿಠಲ ನಿಮ್ಮಡಿ 2 ಸುಗುಣ ಸಂತರಹೃದಯಸಂಚಾರ ದಾಸಾನುದಾಸರು ಪೊಗಳಿ ಭಜಿಸುವ ಗಾನಪ್ರಿಯಕರ ಮೌಲಕೌಸ್ತುಭ ಜಗದಜೀವನ ಪಾವನಾಕಾರ ಪರಮಸುಖಕರ ಅಗಣಿತಾಗಣಿತಮಹಿಮಭರಿತ ಪೊಗಳಲಳವೆ ನಿಮ್ಮ ಚರಿತ ತ್ರಿ ಜಗನಾಟಕ ಸುಲಭದಲಿ ನೀ ಅಗಲದನವರತಸಮ ಈ ಕಲಿ ಯುಗದಿ ಭಕ್ತರಿಗಾಲಿಂಗನೀಯುವ ನಿಗಮಗೋಚರ ವಿಠಲ ನಿನ್ನಡಿ 3 ಮಂದಹಾಸ ಮಂದರೋದ್ಧಾರ ಸುರಕಲ್ಪಧೇನು ಇಂದಿರೆಯರ ಪ್ರಾಣ ಮನೋಹರ ಹೇ ದೀನಬಂಧು ಸುಂದರಾಂಗ ಸುಗುಣಗುಣಹಾರ ಬಂಧನಿವಾರ ಸಿಂಧುಕಲಕಿದಪಾರ ಶೂರ ಕುಂದದೆ ಮೊರೆಕಾಯ್ದ ಸುರರ ಹೊಂದಿಭಜಿಸುವ ಭಕುತಜನಕಾ ನಂದ ನೀಡುತ ಚಂದನೋಡುತ ಸಿಂಧುನಿಲಯ ಮುಕ್ಕುಂದ ಮುರಹರಿ ಅಂದಮಾದ ವಿಠಲ ನಿಮ್ಮಡಿ 4 ಸುತ್ತಮುತ್ತ ಭಕ್ತರಾಲಯವು ಹಿಂಭಾಗದಲ್ಲಿ ಸತ್ಯಭಾಮ ರುಕ್ಮಿಣೀಕಾಂತನು ಮುಂಭಾಗದಲಿ ನಿತ್ಯನಿರ್ಮಲ ಚಂದ್ರಭಾಗಿನಿಯು ನಡುಮಧ್ಯ ರಂಗವು ಭಕ್ತಗೊಲಿದು ಭೂವೈಕುಂಠವ ಸತ್ಯವೆನಿಸಿ ಮೀರಿ ಮೆರೆವ ಭಕ್ತಜನರ ಕೈಯೆತ್ತಿ ಸಾರುವ ಪೃಥ್ವಿಗಧಿಕ ಮಹ ಪಂಢರಾಪುರ ಮುಕ್ತಿ ತವರೆಂಬ ಮಂದಿರದಲ್ಲಿ ಕರ್ತುಶ್ರೀರಾಮ ವಿಠಲ ನಿನ್ನಡಿ5
--------------
ರಾಮದಾಸರು
ಸಖಿ ಕೇಳೇ ಇನ್ನು ಹರುಷದ ಮಾತಾ| ಸಕಲ ಜನರಿಗೆ ಆನಂದ ವೀವಾ| ಪ ಇಂತೆಂದು ಹರಿಯು ನಾನಾಪರಿ ವಿರಹದ| ಸಂತಾಪ ಮಾತವ ನುಡಿಯಲು ಕೇಳಿ| ಅಂತರಂಗದ ಕೋಪವಬಿಟ್ಟು ಎದ್ದು|ಅ| ನಂತನ ಬಿಗಿದಪ್ಪಿದಳು ಅಂಬುಜಾಕ್ಷಿ 1 ಲಲಿತಾಂಗಿ ಆಲಿಂಗನವ ನೀಯೇ ಹರಿಗಾಗಾ| ಒಲಿದು ಉಕ್ಕೇರಿತು ಆನಂದ ಉದಧಿ| ಸತಿ ಮಾತಾಡುವ ದೇವ ಶ್ರೀ| ಲಲನೇಯಾ ಸದ್ಬುವನೆಯಾ ಪೂರಿಸಿದನು 2 ಈ ಪರಿಯಾಡಿದ ಶ್ರೀ ಹರಿ ಚರಿತೆಯಾ| ನಾ ಪೇಳಿದುದು ಭಾವ ಭಕುತಿಯಲಿಂದಾ| ಆ ಪದಿಂದಲಿ ಕೊಂಡಾಡುವ ಮನುಜನ| ತಾ ಪಾಲಿಸುವಾ ಮಹಿಪತಿ ಸುತ ಪ್ರೀಯಾ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಹಿರಿಯ ಅತ್ತಿಗೆಯರ ಗರವು ಕಂಡೆವೆಮೇರುಗಿರಿಗಿಂತ ಕೋಟಿ ಅಧಿಕವೆ ಸಖಿಯೆನಾ ಹ್ಯಾಂಗೆಸುಮ್ಮನಿರಲಿ ಪ. ಓಡಿ ಬಂದವಳು ಒಳಗೆ ಸೇರಿಮಾತಾಡಳು ನೋಡಳು ನಮ್ಮ ಅಣ್ಣನ ಮಡದಿಯುನೋಡಳು ನಮ್ಮ ಅಣ್ಣನು ಮಡದಿಗೆಮಾಡಿದ ಮೋಹ ತಲೆಗೇರಿ1 ಹೆಣ್ಣು ರುಕ್ಮಿಣಿ ತಮ್ಮ ಅಣ್ಣನವಂಚಿಸಿಓಡಿ ಬಂದು ಕಣ್ಣಿಲೆನೋಡಿ ಕರೆಯಳುಕಣ್ಣಿಲೆ ನೋಡಿ ಕರೆಯಳು ಇವಳು ನಮ್ಮಅಣ್ಣನ ಬಲವ ಹಿಡಕೊಂಡು2 ಇಂದು ರುಕ್ಮಿಣಿ ತಿಳಿದು ಬಂದಳು ಭಾಳೆ ವಿನಯದಿಬಂದಳು ಭಾಳೆ ವಿನಯದಿ ದ್ರೌಪತಿಯಆಲಿಂಗನವÀ ಮಾಡಿ ಕರೆದಳು 3 ಬಾರವ್ವ ಸುಭದ್ರೆ ಏರವ್ವ ಸೋಪಾನ ತೋರವ್ವ ನಿನ್ನ ವಚನವತೋರವ್ವ ನಿನ್ನ ವಚನವ ಎನುತಲಿ ದ್ವಾರದಿ ಕೈಯ್ಯ ಹಿಡಕೊಂಡು4 ಬಂದ ಬೀಗಿತ್ತಿಯರು ಚಂದದಿಂದ ಇದುರುಗೊಂಡು ಮಂದಹಾಸದಲೆ ನುಡಿಸುತಮಂದ ಹಾಸದಲೆ ನುಡಿಸುತ ರುಕ್ಮಿಣಿ ಬಂದವರು ಯಾರು ಮನೆಯೊಳು 5 ಸೊಂಡಿಲನಗರದ ಪಾಂಡು ಭೂಪನ ಸೊಸೆಗಂಡುಗಲಿ ಪಾರ್ಥನ ಆರ್ಧಾಂಗಿಗಂಡುಗಲಿ ಪಾರ್ಥನ ಆರ್ಧಾಂಗಿ ಸುಭದ್ರಾಮುಯ್ಯವ ಕೈಕೊಂಡು ಬ್ಯಾಗ ತಿರುಗಿಸು 6 ಹರದಿ ರುಕ್ಮಿಣಿ ದೇವಿ ಸೆರಗ ಹಿಡಿದು ದ್ರೌಪದಿಯದೊರೆಗಳ ಹೆಸರು ನಮಗ್ಹೇಳೆ ದೊರೆಗಳ ಹೆಸರು ನಮಗ್ಹೇಳೆ ರಾಮೇಶನ ಪರಮಭಕ್ತರಿಗೆ ನುಡಿದಳು 7
--------------
ಗಲಗಲಿಅವ್ವನವರು
ಹಕ್ಕಿಯ ಹೆಗಲೇರಿ ಬಂದವಗೆ ನೋಡಕ್ಕ ಮನಸೋತೆ ನಾನವಗೆ ಪ.ಸತ್ರಾಜಿತನ ಮಗಳೆತ್ತಿದ ಉನ್ಮತ್ತ ನರಕನೊಳು ಕಾದಿದಮತ್ತೆ ಕೆಡಹಿದ ಅವನಂಗವಸತಿಗಿತ್ತನು ಆಲಿಂಗನವ 1ಹದಿನಾರು ಸಾವಿರ ನಾರಿಯರ ಸೆರೆಮುದದಿಂದ ಬಿಡಿಸಿಮಾಮನೋಹರಅದಿತಿಯಕುಂಡಲತಳೆದಾ ಹರವಿಧಿಸುರ ನೃಪರನು ಸಲಹಿದ2ಉತ್ತಮ ಪ್ರಾಗ್ಜೋತಿಷ ಪುರವ ಭಗದತ್ತಗೆ ಕೊಟ್ಟ ವರಾಭಯವಕರ್ತಕೃಷ್ಣಯ್ಯನ ನಂಬಿದೆ ಶ್ರೀಮೂರ್ತಿಯ ಪಾದವ ಹೊಂದಿದೆ 3ನರಕ ಚತುರ್ದಶಿ ಪರ್ವವಹರಿಹರುಷದಿ ಪ್ರಕಟಿಸಿದನು ದೇವಶರಣಾಗತಜನ ವತ್ಸಲ ರಂಗಪರಮಭಾಗವತರ ಪ್ರತಿಪಾಲ4ಹೊಗಳಿ ಕೃಷ್ಣಯ್ಯನ ಮಹಿಮೆಯ ಮುಕ್ತಿನಗರದ ಅರಸನ ಕೀರ್ತಿಯಜಗದೀಶ ಪ್ರಸನ್ವೆಂಕಟೇಶನೆ ಭಕ್ತರಘಹಾರಿ ರವಿಕೋಟಿಕಾಶನೆ 5
--------------
ಪ್ರಸನ್ನವೆಂಕಟದಾಸರು