ಒಟ್ಟು 5 ಕಡೆಗಳಲ್ಲಿ , 3 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅನುದಿನ ವಿಷಯ ಸುಖವು ಎಂದು ಕನಸಿಲಾದರು ಸ್ಮರಿಸಲಾಗದು ಮನವೆ ಪ ಘನ ಸಂತೋಷವಿಲ್ಲವಿದು ನಿತ್ಯಾನಿತ್ಯ ಸುಖ ಬಯಸಿ ಮನದಲ್ಲಿ ನೀ ಸ್ಮರಿಸೆ ಹರಿಯೆ | ತೊರೆಯ ಅ.ಪ ಅಶನ ವಸನ ಪಶುವ್ರಾತ ವಶವಿರುವಾಭರಣ ಹಸನಾದ ರಥ ಪದಾತಿಗಳು ಸ್ವಸ್ವರೂಪವಲ್ಲ ಭಿನ್ನ ತಿಳಿಯೊ | ಮಮತೆ ಅಳಿಯೊ 1 ಬುದ್ಧಿ ವಿದ್ಯಾಕುಶಲ ಗತಿ ಅಧ್ವರ್ಯ ಪ್ರಭು ಮನ್ನಣೆ ಶುದ್ಧ ರೂಪ ಲಾವಣ್ಯ ಯೌವನ ಸಿರಿ ಶೌರ್ಯ ಪರಾಕ್ರಮ ವದ್ಯವಾಗಿ ಪೋಪುದು ಸ್ಥಿರವಲ್ಲ | ಸುಳ್ಳಲ್ಲ 2 ಇಚ್ಛೆಯಿಲ್ಲದೆ ನೀನು ಜನರ ಮೆಚ್ಚಿಗಾಗಿ ಮಾಡಿದ ದಾನ ವೆಚ್ಚವಾಗಿ ಪೋಪವೊ ಧನವಲ್ಲದೆ ನಿಚ್ಚಳ ಪುಣ್ಯಬಾರದು ಮನವೆ ಹೆಚ್ಚಿನ ಸ್ತೋತ್ರಕೆ ಮರುಳಾಗಿ ನೆಚ್ಚದಿರು ವಿಹಿತೋಕ್ತಿಯ | ಬಿಡದಿರು ಸನ್ಮತಿಯ 3 ಆರ್ತನಾಗದಲೆ ನೀನು ಕೀರ್ತಿಗೋಸುಗ ಕಥಾಶ್ರವಣ ಕರ್ತಭಾವದಿ ಸತತ ಮಾಡೆ ವರ್ತಿಸುವ ಪುಣ್ಯಪ್ರಾಪ್ತಿ ವೈಷಿಕ ಸುಖವಲ್ಲದೆ ಶಾಸ್ತ್ರಮರ್ಮ ತಿಳಿಯದೊ | ಅಹಂ ಮಮವಳಿಯದೊ 4 ಮಾನಿತನು ನಾನೆಂದು ನಾನಾ ಮತವಾಶ್ರಯಿಸಿ ಜ್ಞಾನಿಗಳಿಗೆ ಶಿರಬಾಗಲೊಲ್ಲಿ ಏನು ಇದರಿಂದೆಂಬ ತ್ರಿಕರಣ ಶುದ್ಧಿಕಾರಣ ದ್ಯುನದಿ ಸ್ನಾನವಾಹವಲ್ಲಾ | ಇದು ಬಿಡಸಲ್ಲಾ 5 ಕೈಗೊಳುವುದೇ ಮಾನ ಅನ್ಯಾಧೀನವೆನ್ನದೆಂಬುದೇ ಲಜ್ಜಾ ಅನುಭವ ಜ್ಞಾನಿಗಳ ಸಹವಾಸ ಸ್ನಾನ ಸಚ್ಛಾಸ್ತ್ರಾಲಾಪ ನಾನು ನನ್ನದು ಬಿಡುವುದೇ ತ್ಯಾಗ | ಇದೇ ಯೋಗ 6 ಕರಣ ವಿಷಯಗಳಲ್ಲಿ ಹರಿಯ ಚಿಂತಿಸುತ ನಿತ್ಯ ವರ ಯೋಗ ಭೋಗದಲ್ಲಿ ವರ ರಾಮಚಂದ್ರವಿಠಲರಾಯನು ನಿನ್ನ ದುರಿತ ಕಳೆದು ಪಾಲಿಸುವ7
--------------
ವಿಜಯ ರಾಮಚಂದ್ರವಿಠಲ
ಆರ್ತನಾಭೀಷ್ಟವನು | ಪೂರ್ತಿಗೊಳಿಸೊ ಪ ಕಾರ್ತಸ್ವರ ಮೊದಲಾದ | ವಾರ್ತೆ ನಾನೊಲ್ಲೇ ಅ.ಪ. ಫಲ ಗಿಡೆಲೆ ಮರ ಬಳ್ಳಿ | ಜಲ ಬಿಂದು ನವ ನದಿಯುಜಲ ನಿಧಿಯು ವನಗಿರಿಯು | ಜಲ ಚರಾಚರಧೀ ||ಒಳ ಹೊರಗೆ ಸಂವ್ಯಾಪ್ತ | ಚಲಿಪೆ ನೆಲೆಯಿಲ್ಲದಲೆತಿಳಿಸೊ ತವ ಮಹಿಮೆಗಳ | ಅಲವ ಭೋದಾತ್ಮಾ 1 ಕಂಡ ನೀರೊಳು ಮುಳುಗಿ | ಅಂಡಲೆದು ಬೆಂಡಾದೆಪುಂಡರೀಕಾಕ್ಷ ಪದ | ಬಂಡುಣಿ ಎನಿಸದೇ ||ಹಿಂಡು ತೀರದ ಗತ | ಪಾಂಡುರಂಗನ ರೂಪಕಂಡು ಹಿಗ್ಗುವುದೆಂದೊ | ಕುಂಡಲಿಯ ಶಯನಾ 2 ಜ್ಞಾನಾಯು ರೂಪಕನೂ | ಪ್ರಾಣಾಂತರಾತ್ಮ ನಿನಜ್ಞಾನ ಕೊಟ್ಟು ಧರಿಸೊ | ಗಾನ ಪ್ರಿಯನೇ ||ಪ್ರಾಣನಿಗೆ ಪ್ರಾಣ ಗುರು | ಗೋವಿಂದ ವಿಠ್ಠಲನೆನೀನಾಗಿ ಒಲಿಯದಲೆ | ಅನ್ಯಗತಿ ಕಾಣೇ3
--------------
ಗುರುಗೋವಿಂದವಿಠಲರು
ಕ್ಲೇಶ ಪ ಅಸ್ತಿತ್ವಕ್ಚರ್ಮಾದಿ ಮಾಂಸ | ಧಾತುಸಪ್ತಾವರಣ ಕಾಯದೊಳಗೆ ಆ ವಾಸ |ಲಿಪ್ತನಾಗದೆ ಇದ್ದು ಶ್ರೀಶ | ಜೀವರಾಪ್ತ ಸಾಧನ ಮಾಡಿ ಮಾಡಿದೆ ಅನಿಶಾ 1 ಸಪ್ತವು ದಶದ್ವಯ ಸಹಸಾ | ನಾಡಿಸಪ್ತಾಬ್ಜದೊಳು ಸನ್ನಿವಾಸ |ಭಕ್ತರಿಗೊಲಿವೆಯೊ ಮೇಶ | ನಿನ್ನಗುಪ್ತ ಮಹಿಮೆ ನೀನೆ ತಿಳಿಸೊ ಸರ್ವೇಶ 2 ಭೋಕ್ತ | ನಾಗಿಮುಕ್ತಾನಂದದಲಿದ್ದು ಮೆರೆವೆ ವಿಧಾತಾ 3 ಆರ್ತನಾಗುತ ಬೇಡ್ವೆ ಹರಿಯೇ | ನಿನ್ನವ್ಯಾಪ್ತಿ ತೋರೋ ಸರ್ವ ಲೋಕದ ಧೊರೆಯೆಮೂರ್ತಿ ನಿಲ್ಲಲಿ ಮನದಿ ಹರಿಯೇ | ನಿನ್ನಕೀರ್ತಿ ಕೊಂಡಾಡಿಸು ಸತತದಿ ಶೌರೀ 4 ತಪ್ತ ಕಾಂಚನದಂತೆ ಹೃದಯ | ದಲ್ಲಿದೀಪ್ತನಾಗಿದ್ದರು ಕಾಣದ ಪರಿಯೆ |ಸುಪ್ತಿಯ ಕಳೆ ತವ ಮೂರ್ತಿಯ | ತೋರೊಗೋಪ್ತ ಗುರು ಗೋವಿಂದ ವಿಠಲಯ್ಯ 5
--------------
ಗುರುಗೋವಿಂದವಿಠಲರು
ಗುರು ವಾದಿರಾಜ ಯತಿಯಾ ನೆನಸುವದು ನಿರುತ ಕರುಣಿಪ ಮತಿಯಾ ಪ ಆರ್ತನಾ ಸರಿದಾರು ನವನ ವರ್ತಮಾನವನೆ ಕೇಳಿ ಕರ್ತೃತ್ವ ಪರಿಹರಿಸಿ ಸಂಸೃತಿಯ ಗರ್ತದಿಂದೆತ್ತಿ ನೋಳ್ಪ 1 ದುರಿತ ರಾಶಿಗಳ ಶೀಳಿ ಹೊರದೆಗೆದು ಮರುತ ಶಾಸ್ತ್ರವನೆ ಪೇಳಿ ಪರಮಾರ್ಥ ಮಾರ್ಗವಾ ತೋರಿ ಸುಖಬಡಿಸಿ ಧರಿಯೊಳಗೆ ಮೆರೆದೆ ಧೀರ 2 ವಂದಿಸಿ ಸೌಂದರ್ಯಪುರಿಯ ವಾಸ ವರಪ್ರದ ನಂದ ಸತ್ಕೀರ್ತಿ ಭೂಪ ವಂದಿಸಿದವರಿಗೆ ಲೇಸಾಗಿ ಕೊಡುವ ಮು ಕುಂದನಂಘ್ರಿಯ ದಾಸ 3 ತೀರ್ಥಯಾತ್ರೆಯನೆ ಮಾಡಿ ಹರಿ ಭೇದಾರ್ಥದಿಂದಲೆ ಕೊಂಡಾಡಿ ಅರ್ಥಾಸೆಗಳ ಈಡಾಡಿ ಹಯಮೊಗನ ಅರ್ಥಿಯಿಂದಲಿ ಪೂಜಿಪ4 ತ್ರಿಜಗದೊಳಗಿನವರಿಗೆ ಎಣೆಗಾಣೆ ಕುಜನ ಮತ ಸೋಲಿಸುವಲ್ಲಿ ವಿಜಯವಿಠ್ಠಲನೆ ದೈವವೆಂದು ಧ್ವಜವೆತ್ತಿ ತಿರುಗಿದ ಮುನಿಪ 5
--------------
ವಿಜಯದಾಸ
ಪತಿ ಎನಿಸಿ | ವೀಣೆಯನು ಪಿಡಿಯುತ್ತಲೀ ||ಕ್ಷೋಣಿ ಬೆಳಗಾವಿ ಬ್ರಾಹ್ಮಣ | ಶ್ರೇಣಿಯಲಿ ನೀ ನಿಂತೆಯೋ ||ಕಾಣೆನೊ ನಿನಗೆಣೆಯ | ಕಾಣೆ ಕರುಣಿಗಳರಸ ಜ್ಞಾನಿ ಜನ ಮನೊವಾಂಛಿತಾ |ಮಾಣದಲೆ ನೀ ನೀವೆ | ಪ್ರಾಣ ಪದಕನೆ ಹನುಮಜ್ಞಾನ ಭಕುತಿಯ ಬೇಡುವೇ 1 ವಾತ ವ್ರಾತ ಕಿನ್ನಣೆಯುಂಟೆಮಾತುಳಾರಿಯ ದೂತ ಜಯೆ ಜಾತಾ ||ಸೋತು ಬಲು ಭವದೊಳಗೆ | ಆರ್ತನಾಗುತ ನಿನ್ನ ಕಾತುರೆತಲಿಂ ಪ್ರಾರ್ಥಿಪೇ 2 ವೃಂದಾವನಾರ್ಯರಿಂದ್ವಂದಿತವು ಎಂದೆನಿಪ ವೃಂದಾವನಿಲ್ಲಿ ಇಹುದೂ |ವೃಂದಾರ ಕೇಂದ್ರ ಜನ | ಬಂದಿಲ್ಲಿ ರಾಜರ |ವೃಂದಾವನರ್ಚಿಸುವರೋ |ನಂದನನು ದಶರಥಗೆ | ನಂದನನು ದೇವಕಿಗೆ | ನಂದನನು ಸತ್ಯವತಿಗೇ |ಒಂದೊಂದು ಹಯಶೀರ್ಷ | ಅಂದರೂಪಗಳಿಂದ ನಂದನನು ಭಕ್ತ ಜನಕೇ 3 ಜೀವಾಂತರಂಗದಲಿ | ಜೀವಾಂತರಾತ್ಮನನ ದ್ವೈವಿಧ್ಯ ರೂಪ ಸೇವಾ |ತಾವಕದಿ ನೀ ಮಾತರಿಶ್ವಾಖ್ಯನೆಂದೆನಿಸಿ ಸೇವಿಸುವೆ ಘರ್ಮೋಕ್ತದಿ ||ಜೀವ ಸಕಲೋತ್ತಮನೆ | ದಾವ ಶಿಖಿ ಭವವನಕೆದೇವ ಬಲಿಭುಜ ಮಾರುತೀ |ದೇವಾದಿ ವಂದ್ಯ ಗುರು | ಗೋವಿಂದ ವಿಠ್ಠಲನಭಾವದಲಿ ತೋರಿ ಪೊರೆಯೊ 4
--------------
ಗುರುಗೋವಿಂದವಿಠಲರು