ಒಟ್ಟು 7 ಕಡೆಗಳಲ್ಲಿ , 5 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆರೇನು ಮಾಡುವರು ಅವನಿಯೊಳಗೆ | ಕರ್ಮ ಫಣಿಯಲ್ಲಿ ಬರೆದುದಕೆ ಪ ಮಾಡಿದಡಿಗಿಯು ಕೆಡಲು ಮನಿಯ ಗಂಡನು ಬಿಡಲು | ಸತಿ ತನ್ನ ಕುಣಿಸ್ಯಾಡಲು ನಿಜದಿ || ಗೋಡೆಗೆ ಬರೆದ ಹುಲಿ ಘಡಘಡನೆ ತಿನಬರಲು | ಆಡಿದ ಮತುಗಳು ಅಖಿಳಿರು ನಿಜವೆನಲು 1 ಹೊಲ ಬೇಲಿ ಮೆಯ್ದರೆ ಮೊಲ ಇರಿಯ ಬಂದರೆ | ತಲೆಗೆ ತನ್ನ ಕೈ ಪೆಟ್ಟು ತಾಕಿದರೆ || ಹೆರಳು ಹಾವಾದರೆ ಗೆಳೆಯ ರಿಪುವಾದರೆ | ಕಲಿಸಿದ ಅವಲಕ್ಕಿ ಕಲಪರಟಿ ನುಂಗಿದರೆ 2 ಹೆತ್ತ ತಾಯಿ ಹಿಡಿದು ಮಕ್ಕಳಿಗೆ ವಿಷ ಹಾಕಿದರೆ | ಪೆತ್ತ ತಂದೆಯು ಹೊರಗೆ ಮಾಡಿದರೆ || ತೊತ್ತು ಅರಸಿಗೆ ಪ್ರತ್ಯುತ್ತರವನಾಡಿದರೆ | ಕತ್ತಲೆ ಬೆನ್ನಟ್ಟಿ ಕರಡ್ಯಾಗಿ ಬಂದರೆ 3 ಕಣ್ಣವೊಳಗಿನ ಗೊಂಬಿ ಕಾದ ಬಂದರೆ | ಹೆಣ್ಣಿನ ಹರಟೆ ಹೆಚ್ಚಾದರೆ | ಅನ್ನವನು ಉಣ್ಣಲು ಅಜೀರ್ಣವಾದರೆ | ಪುಣ್ಯಕ್ಷೇತ್ರಗಳಲ್ಲಿ ಪಾಪ ಅಟ್ಟಿಸಿದರೆ 4 ಏರಿ ಕುಳಿತ ಕುಂಬಿ ಎರಡಾಗಿ ಮುರಿದರೆ | ವಾರಿಧಿಗಳು ಮೇರೆ ಮೀರಿದರೆ || ಆರಿದ ಇದ್ದಲಿಗಳು ಅಗ್ನಿಯಾದರೆ | ನಮ್ಮ ವಿಜಯವಿಠ್ಠಲನಿರುವ ತನಕ 5
--------------
ವಿಜಯದಾಸ
ಪಾಪಾತ್ಮ ನಾನಲ್ಲ ಪಾಪವೆನದಿನಿತಿಲ್ಲ ಪ ಶ್ರೀಪತಿಯೆ ನಿನಗೆ ನೀನೇ ಮಾಡಿಕೊಂಡೆ ಅ ವರದನು ಕರದಲಿ ಉಷ್ಣಜಲ ಮೃತ್ತಿಕೆಯತರಲು ಕೈ ಸುಟ್ಟಾಗ ಪಣೆಯ ಠೊಣೆದು ಬೈದೆಮರಳಿ ನಾಚಿಕೆ ಇರದೆ ಚರಣಕೆ ಪಾವುಗೆ ತಂ-ದಿರಿಸಿದಪರಾಧ ಎನ್ನದೊ ನಿನ್ನದೊ ದೇವ 1 ಬಂದ ಭೃಗು ಮುನಿ ಎದೆಯನೊದೆಯೆ ಆತಗೆ ಪಾಪಅಂದು ಮೂದಲಿಸಿ ಬೈದವರಿಗೆ ದೋಷನಿಂದುದೇ ಹಣೆಯೊಳಗೆಸೆಯೆ ಭೀಷ್ಮಂಗಘವುಹೊಂದಿದಾ ಪಾಂಡವರಿಗೆ ಕುಂದು ಬಂದಿತೆ ದೇವ2 ಕುರುಡನಿಗೆ ದಾರಿಯನು ತೋರದೆ ಆತಗೆ ಮುನಿದುದರಿಗೆ ನೂಕಿದಡೆ ಅವನು ಏನು ಮಾಡುವನುಶಿರಕೆ ತಪ್ಪಾಗಿ ಗುರಿಯಿಡಲದು ಸರಳ ತಪ್ಪೆಅರಸನಾಳ ಕೊಂದಡೆ ಆರೇನು ಮಾಡುವರು 3 ಕುಣಿಸಿದರೆ ಆಡುವುದು ಬೊಂಬೆ ಸೂತ್ರಮುಖದಿಇನಿತುಂಟೆ ಕಪಟನಾಟಕ ಸೂತ್ರಧಾರಿಇನಿತಾಡಿಸಿದರಾಡುವೆ ಪಾಪ ಪುಣ್ಯಂಗಳಿಂದಎಣಿಕೆಗಾನಲ್ಲ ನೀನಲ್ಲದಿಲ್ಲ 4 ತಂದೆತಾಯಿಗಳು ತಮ್ಮ ಕಂದಗೆ ಸರ್ಪಮುಖದಿಂದ ಕಚ್ಚಿಸಲು ಆ ತಪ್ಪು ಕಂದನದೆಮುಂದರಿಯದಜ್ಞಾನಿಯೆಂದು ಕ್ಷಮಿಸೆಲ್ಲವನು ತಂದೆ ವೇಲಾಪುರದ ಆದಿಕೇಶವನೆ5
--------------
ಕನಕದಾಸ
ಬೈಯದವನಿಗಿಂತಲೂ ಬೈಯುವವನೇ ಮೇಲು ಹೊಯ್ಯದವಗಿಂತಲೂ ಹೊಯ್ಯುವವನೆ ಮೇಲು ಪ ಬಾಯೆನಲು ಬರಲೊಲ್ಲೆ ಮಾಯಾಕಾರ ನಿನ್ನಅ.ಪ ಒಬ್ಬ ಧರಣಿಯನೊಯ್ದ ಒಬ್ಬ ಖಡ್ಗವ ಹಿಡಿದ ಒಬ್ಬ ಧರಣಿಯನೆ ಕದ್ದ ಒಬ್ಬ ಬೈದಾ ಉಬ್ಬಿ ನೀ ಸಂತಸದಿ ಅಬ್ಬರಿಸಿ ಪರಿದೈದೆ ಒಬ್ಬೊಬ್ಬರಿಗೂ ದಿವ್ಯ ದರ್ಶನವನು 1 ಜಾರನೆಂದರು ಕೆಲರು ಚೋರನೆಂದರು ಕೆಲರು ಪೋರನಿವನೆಂದರು ನಾರಿಯರು ಪಲರು ಆರೇನ ಬೈದರೂ ದೂರಿ ನಿಂದಿಸಿದರೂ ಸ್ಮರಿಸಿದಾ ನಿಮಿಷಾರ್ಧ ಹರಿ ನಿನ್ನ ಭಕ್ತರ 2 ಇರಬಹುದು ಹಸಿವು ಬಾಯಾರಿಕೆಗಳಿಂದ ಅರಿವು ನಿದ್ರಾ ನೀರಡಿಕೆಗಳ ತೊರೆದು ಅರಸುವಾ ಸಮಯದಲಿ ಬರುವೆ ನೀನದರಿಂದ 3 ಇಳೆಯನೇ ತೆತ್ತವನ ತುಳಿದು ಕೈಸೆರೆ [ಮಾಡ್ದೆ] ಹಳಿದು ನಿಂದಿಸಿದವನ ಬಳಿಗೆ ಹೋದೆ ಮುಳಿಸಿನಿಂದೊದ್ದವನ ಕಾಲುಗಳ ನೀತೊಳೆದೆ ಹಳಿವು ಬೈಗಳು ನಿನಗೆ ಹಿತವು ಮಾಂಗಿರಿಯ ರಂಗ 4
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಯಮದೂತರಿನ್ನೇನು ಮಾಡುವರು ಪೇಳೊರಮೆಯರಸ ರಘುನಾಥ ನಿನ್ನರಿಕೆಯುಳ್ಳವರಿಗೆ ಪ ಮಂಡಲದೊಳಗೊಬ್ಬ ಜಾರಸ್ತ್ರೀಯಳು ತನ್ನಗಂಡನರಿಕೆಯಿಂದ ವ್ಯಭಿಚಾರಗೈಯೆಮಂಡಲ ಪತಿಯು ಶೋಧಿಸಿ ಹಿಡಿದೆಳೆ ತಂದುಭಂಡು ಮಾಡಲು ಬೆದರುವಳೆ ಕೇಳೆಲೊ ಹರಿ1 ಕಳವಿನ ಒಡವೆಯ ಒಡೆಯಗೆ ಪಾಲೀವಕಳಬಂಟ ಕನ್ನವ ಕೊರೆಯುತಿರೆಕಳವು ಮಾಡಿದನೆಂದು ಹಿಡಿದೆಳೆತಂದರೆತಳವಾರನೇನು ಮಾಡುವನು ಕೇಳೆಲೊ ಹರಿ 2 ಮನವಚನದಲಿ ಮಾಡಿದ ಪುಣ್ಯ ಪಾಪಗಳನಿನಗರ್ಪಿಸುವೆ ಕಾಲಕಾಲದಲಿಘನ ಕೃಪಾಂಬುಧಿ ಕಾಗಿನೆಲೆಯಾದಿಕೇಶವಎನಗೆ ಆರೇನು ಮಾಡುವರು ಕೇಳೆಲೊ ಹರಿ 3
--------------
ಕನಕದಾಸ
ಆರೇನ ಮಾಡುವರು ಆರಿಂದಲೇನಹುದುಪೂರ್ವಜನ್ಮದ ಕರ್ಮವಿಧಿ ಬೆನ್ನಬಿಡದು ಪಐದು ವರುಷದತರಳ ತಾನೆತ್ತ ತಪವೆತ್ತ |ಬೈದು ಮಲತಾಯಿ ಅಡವಿಗೆ ನೂಕಲು ||ಸುಯ್ದು ಕೋಪಾಗ್ನಿಯಲಿ ಪೊರಮಟ್ಟು ಪೋಪಾಗ |ಐದೆ ಬಂಧುಗಳಿದ್ದು ಏನ ಮಾಡಿದರು1ನೃಪರೊಳಗೆಅತಿ ಶ್ರೇಷ್ಠ ಬಲವಂತ ರಘುರಾಮ |ಅಪರಿಮಿತ ಶೂರ ಲಕ್ಷ್ಮಣದೇವರು |ಚಪಲಾಕ್ಷಿ ಸೀತೆಯನು ಖಳನು ಕದ್ದೊಯ್ವಾಗ |ವಿಪರೀತ ವೀರರಿದ್ದೇನ ಮಾಡಿದರು ? 2ಪಾಪಿ ದುಶ್ಯಾಸ ದ್ರೌಪದಿಯ ಸೀರೆಯ ಸೆಳೆದು |ಕೋಪದಿಂ ಮಾನಭಂಗವ ಮಾಡಲು ||ಆಪತ್ತು ಬೆನ್ನಟ್ಟಿ ಹಾ ಕೃಷ್ಣ | - ಎನುವಾಗ |ಭೂಪತಿಗಳೈವರಿದ್ದೇನ ಮಾಡಿದರು ? 3ರಣದೊಳಗೆ ಅಭಿಮನ್ಯು ಚಕ್ರವ್ಯೂಹವ ಪೊಕ್ಕು |ಸೆಣಸಿ ಷಡುರಥದೊಡನೆ ಹೊಯ್ದಾಡಲು ||ಅಣಕವಿಲ್ಲದೆ ಕಾದಿ ಅಸುವಳಿದು ಪೋಪಾಗ |ತ್ರಿಣಯಸಖಿ ಪಾರ್ಥರಿದ್ದೇನ ಮಾಡಿದರು 4ಬ್ರಹ್ಮಶಿರ ಕರಕಟ್ಟಿ ಶಿವನ ಪೀಡಿಸುತಿರಲು |ಸುಮ್ಮನೇ ಜಗವನೆಲ್ಲವ ತಿರುಗಿದ ||ಬೊಮ್ಮಮೂರುತಿಯಾದ ಪುರಂದರವಿಠಲನೇನಮ್ಮಅಳವಲ್ಲ ವಿಧಿಮೀರಿ ಬಾಳುವರೆ5
--------------
ಪುರಂದರದಾಸರು
ಆರೇನ ಮಾಡುವರು ಭುವನದೊಳಗೆ |ಪೂರ್ವಜನ್ಮದಕರ್ಮ ಪಣೆಯಲ್ಲಿ ಬರೆದುದಕೆಪಮಾಡಿದಡಿಗೆಯದು ಕೆಡಲು ಮನೆಯ ಗಂಡನು ಬಿಡಲು |ಕೊಡಿ ಇದ್ದಾಸತಿಯ ಕುಣಿಸಾಡಲು ||ಗೋಡೆಯಲಿ ಬರೆದ ಹುಲಿ ಘುಡುಘುಡಿಸಿ ತಿನಬರಲು |ಆಡದಂತಹ ಮಾತ ಅಖಿಳರೂ ನಿಜವೆನಲು 1ಹೆತ್ತಾತಾಯ್ ಕರೆದು ಮಕ್ಕಳಿಗೆ ವಿಷ ಹಾಕಿದರೆ |ಮತ್ತೆ ತಂದೆಯ ಕರೆದು ಹೊರಗೆ ಮಾರಿದರೆ ||ತೊತ್ತು ಅರಸಿಗೆಪ್ರತಿ - ಉತ್ತರವ ನಡೆಸಿದರೆ |ಕತ್ತಲೆ ಕರಡಿಯಾಗಿ ಬೆನ್ನಟ್ಟಿ ಕಟ್ಟಿದರೆ 2ಹೊಲಬೇಲಿ ಮೇದರೆ - ಮೊಲ ಎದ್ದು ಇರಿದರೆತಲೆಗೆ ತನ್ನಯ ಕೈಯ ಪೆಟ್ಟು ತಾಗಿದರೆ ||ಹೆಳಲು ಹಾವಾದರೆ - ಗೆಳೆಯ ರಿಪುವಾದರೆ |ಕಲಿಸಿದ್ದ ಅವಲಕ್ಕಿ ಕಲಪರಟಿ ನುಂಗಿದರೆ 3ಕಣ್ಣೊಳಗಿನಾ ಬೊಂಬೆ ಕಚ್ಚಾಡ ಬಂದರೆ |ಹೆಣ್ಣಿನಾ ಹೋರಾಟ ಹೆಚ್ಚಾದರೆ ||ಅನ್ನ ಉಣ್ಣದ ಮನುಜಗಜೀರ್ಣವಾದರೆ |ಪುಣ್ಯತೀರ್ಥಂಗಳಲಿ ಪಾಪ ಘಟಿಸಿದರೆ 4ಏರಿ ಕುಳಿತಾ ಕುಂಬೆ ಎರಡಾಗಿ ಬಿಚ್ಚಿದರೆ |ವಾರಿಧಿಗಳು ಉಕ್ಕಿ ಮೇರೆ ಮೀರಿದರೆ ||ಆರಿದಾ ಇದ್ದಲಿಯು ಅಗ್ನಿಯಾಗುರಿದರೆ |ಧೀರಪುರಂದರ ವಿಠಲನ ದಯವು ತಪ್ಪಿದರೆ5
--------------
ಪುರಂದರದಾಸರು
ಶಿಷ್ಯನು ಶಿಷ್ಯನು ಎಂದು ತುಂಬಿಯಿಹುದುಜಗ ಶಿಷ್ಯನದ್ಯಾತರಶಿಷ್ಯಶಿಷ್ಯನಾದರೆ ತನುಮನವನರ್ಪಿಸಿ ದೃಢದಲಿಶಿಷ್ಯನಾದರೆ ಸಚ್ಛಿಷ್ಯಪಹೇಳಿದಲ್ಲಿಗೆ ಹೋಗಿ ಹೇಳಿದುದನೆ ಮಾಡಿ ಬಾಲನಂತಿಹನವಶಿಷ್ಯಕಾಲತ್ರಯಗಳಲಿಗುರುಪೂಜೆವಂದನೆ ತಪ್ಪದೆ ನಡೆಸುವವಶಿಷ್ಯಬಾಲೆಸುತರು ಬಂದರಾದರೆ ತನ್ನಂತೆ ಬಾಳ್ವೆ ಮಾಡೆಂಬವಶಿಷ್ಯ1ಮಾನವನಾಗಿ ಆರೇನೆಂದರೆ ಅಭಿಮಾನ ಹಿಡಿಯದವಶಿಷ್ಯಹೀನ ಕೆಲಸಗಳ ಮಾಣಿಸುತೆಲ್ಲವ ತಾನೆ ದೂರನಹಶಿಷ್ಯಏನಿದು ನಿನ್ನ ಹಣೆಯ ಬರಹವೆಂದೆನೆ ಯೋಚನೆಗೊಳಗಾಗದವಶಿಷ್ಯ2ದೇಹಾಭಿಮಾನವನು ಗುರುಪಾದವಕೊಪ್ಪಿಸಿ ಶಠತೆಯ ಕಳೆದವಶಿಷ್ಯಕರುಣಾಳು ಸದ್ಗುರು ತತ್ವ ಜ್ಞಾನವ ಹೇಳೆ ಆಲಿಸಿ ನಲಿವವಶಿಷ್ಯಅರಿತು ಮನಕೆ ಜ್ಞಾನವ ತಂದು ಅದರಂತೆ ನಡೆವವಶಿಷ್ಯಗುರುಚಿದಾನಂದ ಸದ್ಗುರು ವಾಕ್ಯದಿ ಗುರುವಾದವನವಶಿಷ್ಯ3
--------------
ಚಿದಾನಂದ ಅವಧೂತರು