ಒಟ್ಟು 10 ಕಡೆಗಳಲ್ಲಿ , 7 ದಾಸರು , 9 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಒಂದು ಬಾರಿ ಸ್ಮರಣೆ ಸಾಲದೆ ಆನಂದ- ಪ. ತೀರ್ಥರ ಪೂರ್ಣಪ್ರಜ್ಞರ ಸರ್ವಜ್ಞರಾಯರ ಮಧ್ವರಾಯರಅ.ಪ. ಹಿಂದನೇಕ ಜನ್ಮಗಳಲಿ ನೊಂದು ಯೋನಿಯಲ್ಲಿ ಬಂದುಇಂದಿರೇಶ ಹರಿಯ ಪಾದವ ಹೊಂದಬೇಕೆಂಬುವರಿಗೆ 1 ಪ್ರಕೃತಿ ಬಂಧದಲ್ಲಿ ಸಿಲುಕಿ ಸಕಲ ವಿಷಯಗಳಲಿ ನೊಂದುಅಕಳಂಕಚರಿತ ಹರಿಯ ಪಾದಭಕುತಿ ಬೇಕೆಂಬುವರಿಗೆ 2 ಆರುಮಂದಿ ವ್ಶೆರಿಗಳನು ಸೇರಲೀಸದಂತೆ ಜರಿದುಧೀರನಾಗಿ ಹರಿಯ ಪಾದವ ಸೇರಬೇಕೆಂಬುವರಿಗೆ 3 ಘೋರ ಸಂಸಾರಾಂಬುಧಿಗೆ ಪರಮಜ್ಞಾನವೆಂಬ ವಾಡೆಏರಿ ಮೆಲ್ಲನೆ ಹರಿಯಪಾದ ಸೇರಬೇಕೆಂಬುವರಿಗೆ4 ಹೀನಬುದ್ಧಿಯಿಂದ ಶ್ರೀ ಹಯವದನನ್ನ ಜರಿದು ತಾನು ಬದುಕಲರಿಯದಿರಲು ತೋರಿಕೊಟ್ಟ ಮಧ್ವಮುನಿಯ 5
--------------
ವಾದಿರಾಜ
ಕರುಣಿಸೊ ಗುರು ತಾರಿಸೊ ಶರಣರಕ್ಷಕ ನಮ್ಮ ಕರುಣಾಕರ ದೇವ ಧ್ರುವ ¨Àವಜನ್ಮದಲಿ ಬಂದು ಬಹುಬಳಲಿದೆ ನಾನು ಅವಿದ್ಯದಾಟಕೆ ಐವರು ಕೂಡಿ ತಾ ಜೀವನ ಮುಕ್ತಿಗಾಣಿಸಗೊಡದಿಹರು 1 ಮೂರೊಂದು ಮಂದಿಯು ಸೇರಗೊಡದೆ ಪಥ ಆರುಮಂದಿಯ ಕೂಡಿ ಕಾಡುತಲಿ ಆರು ಮತ್ತೆರಡುಮಂಡೆಯ ಕಾವಲಿಗೆ ನಾನು ಆರೆನಯ್ಯ ಶ್ರೀಗುರುಶಿರೋಮಣಿಯೆ 2 ಹತ್ತು ಹೊಳಿಯು ಸುತ್ತ ಅಡ್ಡಗಟ್ಟಿಹುದು ಪಥ ನಡಲೀಸದೆ ಇಂತಿವ ತಾರಿಸಿ ಮೂಢsÀಮಹಿಪತಿಯ ಸಂತತ ಸದ್ಗತಿಸುಖ ಈವುದೆನಗಿನ್ನು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನಿಂತು ಫುಗಡಿ ಹಾಕ ಭ್ರಾಂತತನವ್ಯಾಕ ಸಂತ ಜನನಿಯರು ನೋಡಿ ತಲೆಯ ದೂಗಬೇಕ ಪ ಆಶೆಯಲಿ ತಾನು ಕುಳಿತು ಹಾಕುದೇನು | ಘಾಸಿಯಾಗುವ ಆರುಮಂದಿಯಾ ಕೂಡಿದರೇ ನೀನು 1 ಗರುವ ತನ ಬಿಟ್ಟು ತಿರುಗಣೆಯಾ ನುಟ್ಟು | ಆರಹು ಶರಗಿನಿಂದ ಬಿಗಿದು ಹಾಕ ಮಲಕ ಗಂಟು 2 ಲಜ್ಜೆ ವಳಿದು ನೋಡೇ ಹರಿಯಸ್ತುತಿ ಮಾಡಿ | ಘಜ್ಜಿಗೆ ಬಂಡಮ್ಯಾಲ ಯಚ್ಚರ ಮೈಯ್ಯ ಮರೆಯಿಬ್ಯಾಡೇ 3 ಎರಡು ಸವೆ ನಿನೆಹಾ ಜ್ಞಾನ ಸಖೀ ಕೈಯ್ಯಾ | ಜರಿಯದಂತೆ ಹಿಡಿದು ತಿರುಗು ನಡವಿಧ ಪರಿಯಾ 4 ಫುಗಡಿ ಇದೇ ಆಡೀ ಪ್ರೇಮಭಾವ ಕೂಡೀ | ಮುಗುತಿ ಕೊಡುವ ತಂದೆ ಮಹಿಪತಿ ಸ್ವಾಮಿ ದಯಮಾಡಿ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನೀ ಕರುಣದಿಂದ ಪಾಲಿಸದಿದ್ದರೆ ಇನ್ನುನಾ ಕಾಣೆ ಮನ್ನಿಸುವರ ಪ. ಸಾಕಾರ ಮೂರುತಿ ಸರ್ವೋತ್ತಮನೆನೀ ಕಾಯೊ ಪರಾಕುಮಾಡದೆ ಎನ್ನನು ದೇವ ಅ.ಪ. ಗುರುಹಿರಿಯರನು ಕಂಡು ತರಳತನದಲಿ ನಾನುಚರಣಕೆರಗದೆ ತಿರುಗಿದೆವರ ಸಕಲ ಸಂಪದವ ಬೇಡಿ ಬಯಸುತ ನಿನ್ನಸ್ಮರಣೆಯನು ಮರೆತಿದ್ದೆನೊಸ್ಮರನ ಬಾಣಕೆ ಸಿಲುಕಿ ಪರಸತಿಗೆ ಮರುಳಾಗಿದುರ್ಗತಿಗೆ ನೆಲೆಯಾದೆನೊಸಿರಿಯರಸನೆ ನಿನ್ನ ಚರಣವನು ನಂಬಿದೆನೊಕರುಣದಿಂ ಕಡೆಹಾಯಿಸೊ 1 ಆರುಮಂದಿಗಳೆಂಬ ಕ್ರೂರವೈರಿಗಳಿಂದಗಾರಾದೆನವರ ದೆಸೆಗೆಮಾರಿಹಬ್ಬದÀ ಕುರಿಯು ತೋರಣವ ಮೆಲುವಂತೆತೋರುತಿದೆ ಎನ್ನ ಮತಿಗೆಘೋರ ಸಂಸಾರವೆಂಬೋ ವಾರಿಧಿಯ ದಾಟಿಸುವಚಾರುತರ ಬಿರುದು ನಿನಗೆಮಾರನಯ್ಯನೆ ನಿನ್ನ ಚರಣವನು ನಂಬಿದೆನುಪಾರಗಾಣಿಸೊ ಎನ್ನನು 2 ಹಲವು ಜನ್ಮಗಳಲ್ಲಿ ಬಲುನೊಂದು ಬಾಯಾರಿತೊಳತೊಳಲಿ ಬಳಲುತಿಹೆನುಸಲೆ ಉದರ ಪೋಷಣೆಗೆ ತಲೆಹುಳುಕ ನಾಯಂತೆಹಲವು ಮನೆ ತಿರುಗುತಿಹೆನೊಜಲದ ಮೇಲಿನ ಗುಳ್ಳೆಯಂತಿಪ್ಪ ಈ ದೇಹನೆಲೆಯೆಂದು ನೆಚ್ಚುತಿಹೆನೊಜಲಜನಾಭನೆ ನಿಮ್ಮ ಮಹಿಮೆಯನು ಪೊಗಳುವೆನುಚೆಲುವ ಶ್ರೀ ಹಯವದನ ರನ್ನ 3
--------------
ವಾದಿರಾಜ
ಪಾಲಿಸೆನ್ನ ಶ್ರೀಲೋಲ ಕೃಪಾಳು ಪ ಬಾಲಕನುಕ್ತಿಯ ಲಾಲಿಸಿ ಕೇಳೀ ಅ.ಪ ಕಾರಾಗಾರ ಶರೀರದಾಯಗಳ ದಾರಾ[ಧಿ]ಪತ್ಯದ ದಾರಿಯನಿ[ತು]ಗಳ1 ಆರುಮಂದಿ ಬಲುಶೂರರು ಖಳರು ಚೋರರು ಚಿತ್ತವ ಹಾರಿಸುತಿಹರು 2 ತನುಸಂಬಂಧದ ಜನರರ್ಥಿಯಲಿ ಕೊನೆವರು ದುರ್ಮೃಗವನು ಪೋಲುತಲಿ 3 ತಾಪತ್ರಯ ಪರಿತಾಪದ ಬೇಗೆ ಈ ಪರಿಮೋಚನ ಶ್ರೀಪತಿ ಹೇಗೆ 4 ಕರುಣದಿ ಶ್ರೀಪುಲಗಿರಿಯೊಳಿರುವನೆ ಶರಣರಪೊರೆಯುವ ವರದ ವಿಠಲನೆ 5
--------------
ವೆಂಕಟವರದಾರ್ಯರು
ಭಿಕ್ಷಾಂ ದೇಹಿಮೇ ಸ್ವಾಮಿನ್ ಕುಕ್ಷಿಯು ತುಂಬುವ ತೆರದಲಿ ಭಕ್ತಿಯ ಪ ಭಿಕ್ಷೆಯ ಬೇಡಲು ಶಿಕ್ಷಿತನಲ್ಲವೊ ಕುಕ್ಷಿಯು ಬರಿದಾಗಿಹುದು ಭಕ್ತಿಯ ಅ.ಪ ಆರುಮಂದಿ ಶತ್ರುಗಳಿರುವರು ಬಲು ಕ್ರೂರರಿವರು ಎನ್ನನು ಬಿಡರೊ ದೂರ ಕಳುಹಲಾಹಾರವು ಸಾಲದು ಶಮ ದಮ 1 ನಮ್ಮವರಿರುವರು ಹತ್ತುಮಂದಿಗಳು ಸುಮ್ಮನಿರರು ಒಂದರಘಳಿಗೆ ಸಮ್ಮತಿಗೊಡದಿರೆ ಬಳಲಿಸುವರು ಇವ ರ್ಹಮ್ಮನು ಮುರಿಯುವೆ ವಿಷಯ ವಿರಕ್ತಿಯ 2 ಕತ್ತಲೆಯಲಿ ಬಂದಿರುವೆನು ಹೊಟ್ಟೆಯು ಹತ್ತಿ ಹೋಯಿತೊ ಹಸಿವಿನಲಿ ಎತ್ತ ಸುತ್ತಿದರೂ ತುತ್ತನು ಕಾಣೆನೊ ಭಕ್ತ ಪ್ರಸನ್ನ ದಯಾಜಲನಿಧೇ ಜ್ಞಾನ 3
--------------
ವಿದ್ಯಾಪ್ರಸನ್ನತೀರ್ಥರು
ಒಗತನದೊಳು ಸುಖವಿಲ್ಲ ಒಲ್ಲೆಂದರೆ ನೀ ಬಿಡೆಯಲ್ಲಜಗದೊಳುಹಗರಣಮಿಗಿಲಾಯಿತು ಪನ್ನಂಗನಗನಗರ ನಿವಾಸಮೂರು ಬಣ್ಣಿಗೆಯ ಮನೆಗೆ ಮೂರೆರಡು ಭೂತಗಳುಐದುಮಂದಿ ಭಾವನವರು ಐದುಮೈದುನರು ಕೂಡಿಆರಾರು ಎರಡುಸಾವಿರ ದಾರಿಲಿ ಹೋಗಿ ಬರುವರುಒಬ್ಬ ಬೆಳಕು ಮಾಡುವ ಮತ್ತೊಬ್ಬ ಕತ್ತಲೆಗೈಸುವಆರುಹತ್ತರ ಮೂಲದಿ ಆರುಮಂದಿ ಬಿಡದೆ ಎನ್ನಹಡೆದ ತಾಯಿ ಮಾಯದಿ ಹಿಡಿದು ಬದುಕು ಮಾಡಿಸುವಳುಅತ್ತೆ ಅತ್ತಿಗೆಯು ಎನ್ನ ಸುತ್ತಮುತ್ತ ಕಾದುಕಟ್ಟಿಮನೆಯೊಳು ನಾಳಿನ ಗ್ರಾಸಕ್ಕನುಮಾನ ಸಂದೇಹವಿಲ್ಲನಿನ್ನ ಹೊಂದಿ ಇಷ್ಟು ಬವಣೆಯನ್ನು ಬಡಲೀ ಜನರು
--------------
ಗೋಪಾಲದಾಸರು
ಸಾಕು ಸಾಕು ಸಂಸಾರ ಸಂಖ್ಯಾಗಿಲ್ಲ ಒಲ್ಲೆ ಒಗೆತನವ ಪ.ಆರುಮಂದಿ ಗಂಡರಾಳುವರು ಎನ್ನಆರುಮಂದಿಗೆ ಮೂರು ಸುತರೆನಗೆಆರು ಮೂರೇಳ್ಪರುಭಾವ - ಮೈದುನರೆಲ್ಲಆರರೆಂದರೆ ಬಿಡರು ಆರಿಗುಸುರಲಮ್ಮ 1ಹತ್ತುಮಂದಿ ಬೆನ್ನ ಮುತ್ತಿಕೊಂಡರೆಮತ್ತೆ ಬಿಟ್ಟೆನೆಂದೆ ಬಿಡಗೊಡರುಅತ್ತಿಗೆ ನಗೆಹಣ್ಣಿ ಹೊತ್ತು ಹೊತ್ತನೊಳೆಮ್ಮನೆತ್ತಿಯೊಳು ಹಸ್ತವಿಟ್ಟೆನ್ನ ಸಲುವರಮ್ಮ 2ಪಂತರೈವರು ಎನ್ನ ತೊಂತ ಹಂತಯೆಂದುಸಂಚಿತದ ಕರ್ಮವನುಣಿಸುವರುವಂಚನೆಯಳಿದ ಪ್ರಪಂಚವನು ಕಳೆದಿಹಮಿಂಚಿನ ಪರಿಯವಿರಿಂಚಿಬರೆದಿಹನಮ್ಮ3ಜೇಷ್ಠನಾಗಿಹ ಪುತ್ರ ಧರ್ಮನ ಅಗಲಿಸಿಭ್ರಷ್ಟ ಆತ್ತೆಯು ಮೈತ್ಯುವಾಗಿಹಳುಮೆಟ್ಟಿಲಿನ ಹೊರಗೆ ಕಣ್ಣಿಟ್ಟು ಸಾಧುಗಳನುದೃಷ್ಟಿಸಿ ನೋಳ್ಪನೆಂದರೆ ಕ್ಷಣ ಬಿಡರಮ್ಮ 4ಒಂಬತ್ತು ಬಾಗಿಲ ಊಳಿಗವನು ಮಾಳ್ಪಕುಂಬತದ ನರತ ಕಾವರ ದಾಳಿಢಂಭಕವನು ಬಿಟ್ಟು ಇಂಬಿನೊಳಟ್ಟು ವಿಶ್ವಂಭರ ಪುರಂದರವಿಠಲ ಧ್ಯಾನದಗುಟ್ಟು5
--------------
ಪುರಂದರದಾಸರು
ಸ್ಥಳವಿಲ್ಲವೈ ಭಾಗವತರೇ - ಈಗಒಳಗೆ ಹೊರಗೆಸಂದಣಿತುಂಬಿದೆ ನೋಡಿಪ.ಆಯ್ದೊಕ್ಕಲಿದರೊಳಗುಂಟು - ಮತ್ತೆಆಯ್ಕು ಮಂದಿಯ ಬೇರೆ ಉಂಟುಆಯ್ದು ನಾಲ್ಕು ಇದರೊಳಗುಂಟು - ನೀವುಬೈದರೆ ಏನು ತೆಗೆಯಿರಿ ನಿಮ್ಮ ಗುಂಟು 1ಆರುಮಂದಿ ಕಳ್ಳರುಂಟು - ಮತ್ತಾರು ಮಂದಿಗೆ ಮತ್ತೆ ಪ್ರೇರಕರುಂಟುಪ್ರೇರಕರಿಗೆ ಕರ್ತರುಂಟು - ವಿಚಾರಿಸುವುದಕೆ ನಿಮಗೇನುಂಟು ? 2ಅತ್ತೆಯವಳು ಬಲುಖೋಡಿ - ಎನ್ನಒತ್ತಿ ಆಳುವ ಪುರುಷನು ಬುಲುಹೇಡಿಮತ್ತೆ ಮಾವನು ಅಡನಾಡಿ - ಸರಿಹೊತ್ತಿಗೆಬರುವ ಮೈದುನ ಬಲುಕೇಡಿ3ನಗೆಹೆಣ್ಣು ಎಂಬುವಳು ಕೋಪಿ - ಮಲಮಗಳು ಕಂಡರೆ ಸೇರಳು ಬಲು ಪಾಪಿಹಗೆಗಾತಿಅತ್ತಿಗೆ ಶಾಪಿ - ಸುತ್ತಬೊಗಳುವಳು ತಾಳೆನು ನಾನು ಮುಂಗೋಪಿ 4ಎಷ್ಟು ಹೇಳಲಿ ನಿಮಗೆಲ್ಲ - ಈಕಷ್ಟ ಸಂಸಾರದೊಳಗೆ ಸುಖವಿಲ್ಲಸ್ಪಷ್ಟವಾಗಿ ಪೇಳ್ಪೆ ಸೊಲ್ಲ - ದೇವಸೃಷ್ಟೀಶ ಪುರಂದರವಿಠಲ ಬಲ್ಲ 5
--------------
ಪುರಂದರದಾಸರು