ಒಟ್ಟು 4 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಂಪ್ರದಾಯ ಆರುತೀಯಾ ಬೆಳಗೆ ಬೇಗಾ ಸಾರಸಾಕ್ಷ ದೇವನೀಗೆ ಪ ನಾರಿಮಣಿಯರೆಲ್ಲ ಕೂಡೀ | ತಾರೆ ಮುಕ್ತಿನಾರುತೀಯಾ ಅ.ಪ ರಕ್ಕಸಾಂತಕ ದೇವನೀಗೆ | ಸಕ್ಕುಬಾಯಿ ವರದನಿಗೇ ಲಕ್ಕೂಮೀಯ ಪ್ರೀಯನೀಗೆ | ಮಂಗಳಾ ಜಯಮಂಗಳಾ 1 ನಾರಸಿಂಹಾ ವಿಠಲನೀಗೆ | ಚಾರುಮಹಿಮಾತೋರಿದವಗೇ ನಾರೆಯರು ಹರುಷದಿಂದಾ | ತಾರೆ ಮುತ್ತಿನಾರುತೀಯಾ 2
--------------
ಓರಬಾಯಿ ಲಕ್ಷ್ಮೀದೇವಮ್ಮ
ಆರುತೀಯ ತಾರೆ ಶ್ರೀಹರಿಗೆ ಸುರಸಾರ್ವಭೌಮಗೆ ಪ ಬೇಗನೆ ಸಾರಸಾಂಬಕಿಅ.ಪ ಮಾರಜನಕಗೆ ವಾರಿಜಭವ ಕು- ಮಾರ ಜನಕ ಮುಖಾಮರೇಡ್ಯಗೆ ಚಾಪ ಮುರಿದ ಸುಕು- ಮಾರ ಶರೀರ ಸೀತಾರಾಮ ಚಂದ್ರಗೆ 1 ಇಂದಿರವರಗೆ ಮಂದರಧರ ಪು- ರಂದರಾನುಜ ಸಿಂಧುಶಯನಗೆ ಮಂದಯಾನೆ ಛಂದದಿಂದ ಬಂದೀಗ ವಂದೀಶ್ಯಾನಂದಾದಿ ಬೆಳಗಲು 2 ವಾರಣಭಯ ನಿವಾರಣ ಜಗ- ತ್ಕಾರಣಗೆ ಸುಖಪೂರ್ಣದೇಹಗೆ ಸೇರಿ ತನ್ನ ಸೇವಿಪರಘ ದೂರ ಕೊಪ್ಪರ ಶ್ರೀ ನಾರಸಿಂಹನಿಗೆ 3
--------------
ಕಾರ್ಪರ ನರಹರಿದಾಸರು
ಆರುತೀಯ ಬೆಳಗಿರೀಗ ನಾರಿಯೇರು ಶ್ರೀನಿವಾಸಗಾರುತೀಯ ಪ. ಆರುತೀಯ ಬೆಳಗಿರೀಗ ಸಾರಸಾಕ್ಷ ಪದ್ಮಿನೀಯ ಸೇರಿ ಲಕುನಿಯಿಂದ ಮೆರೆವೊ ಮೂರುಲೋಕದೊಡೆಯ ಕೃಷ್ಣಾ ಅ.ಪ. ಮೀನನಾಗಿ ವೇದ ತಂದು ದಾನವರ ವಂಚಿಸುತ್ತ ಯಾನದಲ್ಲಿ ಭೂಮಿ ತಂದ ದೀನರಕ್ಷಕ ನಾರಸಿಂಹಗೆ 1 ಚಲುವ ಬ್ರಹ್ಮಚಾರಿಯಾಗಿ ಛಲದಿ ಕ್ಷತ್ರಿಯೇರ ಕೊಂದು ಒಲಿವ ಶಿವನ ಬಿಲ್ಲ ಮುರಿದು ನಲಿದು ಬಂದ ಗೋಪಿಕಂದಗಾ 2 ನಾರಿಯೇರ ವ್ರತವನಳಿದು ತೆÉೀಜಿಯೇರಿ ಮೆರೆವ ಧೀರ ವಾರವಾರ ಪೂಜೆಗೆಂದು ಶೂರ ಶ್ರೀ ಶ್ರೀನಿವಾಸಗಾರುತೀಯ 3
--------------
ಸರಸ್ವತಿ ಬಾಯಿ