ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗೆಲಿಯಬಲ್ಲವರಾರು ಮೂಜಗದಿ ಪಣೆಯ ಬರಹ ಗೆಲಿಯಬಲ್ಲವರಾರು ಮೂಜಗದಿ ಪ ಗೆಲಿಯಬಲ್ಲವರಾರು ಮೂಜಗದೊಳಗೆ ಬಲ್ಲಿದರೆಂಬರೆಲ್ಲರು ಜಲಜಪೀಠನ ಲಿಪಿಗೆ ಸಿಲ್ಕಿ ತೊಳಲಿ ಬಲಳಿದರ್ಹಲವು ಪರಿಯಲಿ ಅ.ಪ ಒಂದೇ ಧರ್ಮದಿಗೂಡಿ ತಾ ನಡೆದ ವಿಕ್ರಮನೆಂಬುವ ಒಂದೆ ಕೊಡೆಲಿಡೀಭುವನವಾಳಿದ ಸದ್ಧರ್ಮ ತನದಿಂ ದೊಂದೆ ಆ ಸುಮರೂಪ ಪ್ರಜರ ಪಾಲಿಸಿದ ಉದ್ದಂಡನೆನಿಸಿದ ಒಂದು ಪಾಪಾಚರಣೆಗೈಯದೆ ಒಂದು ಬಿಡಿದಖಿಲ್ವಿದ್ಯವರಿದ ಒಂದು ಅರಿಯದೆ ತನ್ನ ಕೈಕಾಲು ಒಂದೇ ಮಾತಿಗೆ ಕಳೆದುಕೊಂಡ 1 ಎರಡುಹೊತ್ತು ಸತ್ಯಮಂ ಬಿಡದ ಸುಚಿಂತದಿರುವ ಎರಡನೇ ಗುಣ ಸ್ವಪ್ನದರಿಯದ ನಳಚಕ್ರವರ್ತಿ ಎರಡು ತಿಳಿಯದೆ ಜೂಜನಾಡಿದ ಮಹವಿಪಿನಕೈದಿದ ಎರಡು ಮಕ್ಕಳ ವನದಿ ಅಗಲಿದ ಎರಡನರಿಯದೆ ಮಲಗಿದರಸಿಯ ಎರಡನೆಬಗೆದಡವಿಯಲಿ ಬಿಟ್ಟು ಎರಡನೇರಾಯನಶ್ವ ತಿರುವಿದ 2 ಮೂರು ಜಗ ಅರೆಲವದಿ ತಿರುಗುವ ದಿನದಿನವುಬಿಡದೆ ಮೂರುಮೂರ್ತಿದರ್ಶನವ ಪಡೆಯುವ ಆ ಪರಮಪಾವನ ಮೂರು ಕಾಲದ ಜ್ಞಾನ ಬಲ್ಲವ ನಾರದನೆಂಬುವ ಮೂರುಮಂದಿ ಶಕ್ತಿಯರಿಗೆ ಮೂರು ಬಟ್ಟೆಯ ಸುದ್ದಿ ಪೇಳಿ ಮೂರು ಮೂರ್ತಿಗಳುಪಾಯನರಿಯದೆ ಮೂರಿಪ್ಪತ್ತು ಮಕ್ಕಳ್ಹಡದ 3 ನಾಲ್ಕುಯುಗ ಪ್ರಮಾಣಗಳ ತಿಳಿದ ಬ್ರಹ್ಮನುಬಿಡದೆ ನಾಲ್ಕುವೇದಗಳ್ಹಸ್ತದೋಳ್ಪಿಡಿದು ವಿಧವಿಧದಿ ಎಂಭತ್ತು ನಾಲ್ಕುಲಕ್ಷಜೀವರಾಶಿಗಳ ಬರಿದೆ ಉತ್ಪತ್ತಿಗೈದು ನಾಲ್ಕುಭುಜನ ಸುರನೆಂದೆನಿಸಿ ನಾಲ್ಕು ವಿಧ ಮತಿವಂತನಾದವ ನಾಲ್ಕು ಒಂದು ಮುಖ ಮೊದಲಿಗಿರ್ದನು ನಾಲ್ಕೆ ಮುಖದವನೆನಿಸಿಕೊಂಡು 4 ಐದುಬಾಣನಪಿತನಸಖನಾದ ಉರಿನೇತ್ರ ಬಿಟ್ಟು ಐದುಬಾಣನ ಭಸ್ಮ ಮಾಡಿದ ಅಪಾರ ಶಂಭೋ ಐದು ಒಂದು ಮುಖದವನ ತಾ ಪಡೆದ ಹರಿಕರುಣದಿಂದ ಐದು ಒಂದು ಮುಖದವನಿಂ ತಾರಕ ನೈದುವಂದುದಲ್ಲೆ ಸೀಳಿಸಿ ದೈದುತತ್ವಕಾಲಯೆನಿಸಿದ ಐದುಮುಖಸ್ಮಶಾನ ಸೇರಿದ 5 ಆರು ಎರಡೈಶ್ವರ್ಯಗಳಲೊಳ ವೈಕುಂಠನಾಯಕ ಆರು ಎಂಟುಲೋಕಗಳ ಪರಿಪಾಲ ಬಿಡದೇಳು ಇಪ್ಪತ್ತು ಆರುಕೋಟಿ ಅಮರಾದಿಗಳ ಮೂಲ ಮಹಮಂತ್ರ ಜಾಲ ಆರುನಾಲ್ಕು ಭುಜನ ಮೊರೆ ಕೇ ಳಾರುನಾಲ್ಕು ಶಿರನ ವಧಿಸಿದ ಆರುನಾಲ್ಕರಗಧಿಕನೆನಿಸಿ ಆರುನಾಲ್ಕವತಾರ ತಾಳಿದ 6 ಆರಿಗಾದರು ಬಿಡದೀ ಬರವಣಿಗೆ ಬಿದ್ದಂತೆ ಫಲಿಸಿತು ತೀರಲಿಲ್ಲದಂತಂಥ ಹಿರಿಯರಿಗೆ ಸಾಧ್ಯದಪ್ಪಿ ಮಹ ಘೋರ ಬಡಿಸಿತು ಸರ್ವ ಶಕ್ತರಿಗೆ ಬ್ರಹ್ಮನಸುಡಗಿ ವಾರಿಜನು ಬರೆದ ಬರೆಹ ಮೀರಿ ನಡೆದೇನೆಂದರಿನ್ನು ಸಾರಮೋಕ್ಷಕ್ಕಧಿಪ ನಮ್ಮ ಧೀರಪ್ರಭು ಶ್ರೀರಾಮ ಬಲ್ಲ 7
--------------
ರಾಮದಾಸರು
ಸಿಟ್ಟು ತ್ಯಜಿಸಲೆ ಖೊಟ್ಟಿ ಮನವೆ ಎಷ್ಟು ಪೇಳಲಿ ನಿನಗೆ ಸಿಟ್ಟಿನಿಂದಲಿ ಎಷ್ಟೋ ಜನರು ಕೆಟ್ಟು ಪೋದದ್ದರಿಯಲೊ ಪ ಸಿಟ್ಟಿನಿಂದ ಹಿರಣ್ಯಕನ ಎಷ್ಟು ವರಬಲ ಕೆಟ್ಟಿತ್ತೊ ಸಿಟ್ಟಿನಿಂದಲೆ ರಾಣವನ ಆರುಕೋಟಿ ಆಯುಷ್ಯ ಅಳಿಯಿತೊ 1 ಸಿಟ್ಟಿನಿಂದಲೆ ಮುಪ್ಪುರಂಗಳ ಅಷ್ಟಭೋಗವು ತೀರಿತೋ ಸಿಟ್ಟಿನಿಂದಲೆ ಕುರುಪನ ಕುಲ ನಷ್ಟವಾಗಿಪೋಯಿತೊ2 ದುಷ್ಟ ಕಂಸನು ಸಿಟ್ಟಿನಿಂದ ನಷ್ಟ ಪೊಂದಿದ್ದರಿಯೆಲೊ ಸಿಟ್ಟಿನಿಂದಲೆ ಸೇರಿದರು ಯಮ ಪಟ್ಟಣವ ದಿಟ್ಟರೆಂಬರೆಲ್ಲರು 3 ಸಿಟ್ಟಿಗೆದ್ದ ವಿಶ್ವಾಮಿತ್ರನ ಎಷ್ಟು ತಪವೇನಾಯಿತು ಸಿಟ್ಟಿಗೆ ಮನಗೊಟ್ಟ ಬಳಿಕ ನಷ್ಟ ತಪ್ಪದು ಕಾಣೆಲೊ 4 ಅಷ್ಟು ಯಾತಕೆ ನೀನೆ ಯೋಚಿಸು ಸಿಟ್ಟಿನಿಂದ ನೀನೇನಾದಿ ಶಿಷ್ಟ ಶ್ರೀರಾಮನಡಿಗೆ ಪೊಂದಿ ಸಿಟ್ಟನಳಿದು ಬದುಕೆಲೊ 5
--------------
ರಾಮದಾಸರು