ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗೆಳೆತನ ಹಿಡಿದನೆ ಬಗಳೆಯ ಕೂಡೆಗೆಳೆತನ ಆರಿಗೂ ದೊರಕದತನಯ ಸತಿಯು ಧನವೆಂಬುದ ಸೇರದಜನನ ಮರಣಕೆ ಹೊರತಾದ ಪ ಎನ್ನ ಕಾಲು ಬಗಳೆ ಕಾಲಾಗಿಎನ್ನ ಹಸ್ತ ಬಗಳೆ ಹಸ್ತವಾಗಿಎನ್ನ ಬುಜ ಬಗಳೆ ಬುಜವಾಗಿಎನ್ನ ಕಣ್ಣೇ ಬಗಳೆ ಕಣ್ಣಾಗಿ 1 ಎನ್ನ ದೇಹವು ಬಗಳೆ ದೇಹವಾಗಿಎನ್ನ ಇಂದ್ರಿಯ ಬಗಳೆ ಇಂದ್ರಿಯವಾಗಿಎನ್ನ ಮನವು ಬಗಳೆ ಮನವಾಗಿಎನ್ನ ಜೀವ ಬಗಳೆ ಜೀವವಾಗಿ 2 ನಾನೇ ಬಗಳೆಯಾಗಿ ಬಗಳೆಯೇ ನಾನಾಗಿನಾನು ನೀನು ಎಂಬೆರಡುಳಿದುಜ್ಞಾನ ಚಿದಾನಂದ ಬ್ರಹ್ಮಾಸ್ತ್ರ ತಾನಾಗಿತಾನೇ ತಾನಾದ ಗೆಳೆತನವ 3
--------------
ಚಿದಾನಂದ ಅವಧೂತರು
ಬೂದಿಯ ಹಚ್ಚಿರೊ ಶುದ್ಧ ವೈಷ್ಣವರಿದ- ರಾದಿಯ ತಿಳಿಯಲು ಕೇಳಿ ಬಲ್ಲವರು ಪ ಮೂಲಾಗ್ನಿಯಿಂದಲೆ ಸುಟ್ಟಿಹ ಬೂದಿ ಮೂಲ ಮಂತ್ರಂಗಳ ಜಪಿಸುವ ಬೂದಿ ಮೂಲಾಧಾರವ ತೋರುವ ಬೂದಿ ಕಾಲ ಕರ್ಮಂಗಳ ಕಡಿವಂಥ ಬೂದಿ 1 ಏಳು ಸುತ್ತಿನ ಒಳಗೆ ಇರುವಂಥ ಬೂದಿ ಏಳು ವೈರಗಳನ್ನು ಕಳೆವಂಥ ಬೂದಿ ಏಳು ಅಗಳ ದಾಟಿ ಹಾರುವ ಬೂದಿ ಬ- ಹಳ ಜ್ಞಾನಿಗಳೆಲ್ಲ ಧರಿಸುವ ಬೂದಿ 2 ಒಂಭತ್ತು ಕಡೆಯಿಂದ ಒಲಿದಿಟ್ಟ ಬೂದಿ ಕುಂಭಕದೊಳಗದ ಇರಿಸುವ ಬೂದಿ ಸಂಭ್ರಮದಿ ಅರಸನ ಗೆಲುವಂಥ ಬೂದಿ ಅಂಬರಕಾಗಿಯೆ ಲಂಬಿಪ ಬೂದಿ 3 ಪಂಚಾಗ್ನಿಯಿಂದಲೆ ಬೆಂದಿಹ ಬೂದಿ ಪಂಚತತ್ವಂಗಳನು ಗೆಲುವಂಥ ಬೂದಿ ಪಂಚ ಮೃತ್ಯುಗಳನ್ನು ಕಳೆವಂಥ ಬೂದಿ ವಂಚಿಸಿಕೊಳ್ಳದೆ ಧರಿಸುವ ಬೂದಿ 4 ಆರು ವೈರಿಗಳನ್ನು ತೂರುವ ಬೂದಿ ಆರು ಭಾವಗಳನ್ನು ಬೇರಿಟ್ಟ ಬೂದಿ ಆರು ಭ್ರಮೆಗಳನ್ನು ಕಡಿದಿಟ್ಟ ಬೂದಿ ಆರಿಗೂ ತೋರದೆ ಹಾರುವ ಬೂದಿ 5 ಅಷ್ಟಮದಂಗಳ ಕಟ್ಟುವ ಬೂದಿ ದುಷ್ಟಾತ್ಮರನ್ನು ಅಟ್ಟುವ ಬೂದಿ ಕುಟ್ಟೆ ಹಿಡಿವ ಬೀಜಕಿಟ್ಟಿಹ ಬೂದಿ ಭ್ರಷ್ಟಕರ್ಮಗಳನ್ನು ಸುಟ್ಟಂಥ ಬೂದಿ 6 ಸಕಲ ಋಷಿಗಳೆಲ್ಲ ಧರಿಸುವ ಬೂದಿ ತ್ರಿಕರ್ಣ ಶುದ್ಧದಿ ತುಂಬಿದ ಬೂದಿ ಮಕರಕುಂಡಲಧರ ಮರುಳಹ ಬೂದಿ ಸಖನಹ ವರಾಹತಿಮ್ಮಪ್ಪ ಬೂದಿ 7
--------------
ವರಹತಿಮ್ಮಪ್ಪ
ಶ್ರೀಹರಿಸ್ತುತಿ ಅಕ್ಕಾ ನೋಡೆ ಚಿಕ್ಕ ಕೃಷ್ಣನೂ ಪೊಕ್ಕಿಹ ರಿಂದಾವನಕೀಗ ಬಾ ಪ. ಸಿಕ್ಕನೆ ಪೋಗದಿರೆ ಲಕ್ಕುಮಿಯರಸ ದಕ್ಕಿಸಿಕೊಳ್ಳೆವೆ ಸಿಕ್ಕದೆ ಬಿಟ್ಟಾರೆ ಅ.ಪ. ಸದ್ದು ಮಾಡದೆ ಬನ್ನಿ ಇಲ್ಲಿದ್ದವರೆಲ್ಲ ಮುದ್ದು ಶ್ರೀ ಕೃಷ್ಣನ ಬಳಸುವ ಬಾರೆ ವಾಹನ ಎದ್ದು ಅಭಯನೀವ ಶುದ್ಧ ಕೋಲಾಟಕೆ ಸಿದ್ಧನಾಗುವನೆ 1 ನವನೀತ ಚೋರನ ರವಿಶತಕೋಟಿ ಕಿರೀಟ ಪ್ರಕಾಶ ಜವದಿ ಪೊಳೆವ ಗೋವಲಯಪಾಲನ ಅವನೀಧವನೊಲಿಸಲು ಪೋಗುವ ಬಾ 2 ಆರಿಗೂ ಸಿಗನೆ ನಾರದ ವಂದ್ಯನೆ ತಾರಕೆಗಳ ಮಧ್ಯ ಚಂದ್ರನಂತಿಹನೆ ನಾರಾಯಣ ಶ್ರೀ ಶ್ರೀನಿವಾಸನ ಸೇರಿ ಸುಖವ ಸುರಿಸಲು ತವಕದಿ 3
--------------
ಸರಸ್ವತಿ ಬಾಯಿ
ಆರಿಗೂ ಕೊಟ್ಟು ನಾನ್ಹುಟ್ಟಿಲ್ಲ ಸ್ವಾಮಿಹಾರೈಸಲೆಂತೀಯ್ವಿ ಭಕ್ತಜನ ಪ್ರೇಮಿ ಪವಸನಕಾಣದೆ ಪೋಗಿ ದೆಸೆ ಬತ್ತಲೆ ಬಂದುಬಸವಳಿದು ಬಾಯಾರಿ ದೆಸೆಗೆಟ್ಟು ಬೇಡುವರಕುಶಲಂಗಳರಿಯದೆ ಹಾಸ್ಯಗೈಯುತ ನಕ್ಕೆವಸನನಾಂ ಬಯಸಲೆಂತೊಸೆದು ನೀಂ ಕೊಡುವಿ1ಧನವಂತನಾಗಿ ನಾ ಧನವಿಲ್ಲದವರಿಗೆಶುನಕನಂದದಿ ಕೂಗುತಣಕವಾಡಿದೆನುಕನಸು ಮನಸಿನಲಿ ವಿನುತಧರ್ಮವನರಿಯೆರಿಣಕಳೆದು ಹರಿಯೆನೆ ನಿನಗೆ ಕರುಣೆಂತು 2ಮೂರುದಿನವಾಯಿತು ಘೋರಬಡುವೆನು ತುಸು ಆಹಾರ ಹಾಣದೆ ಕೃಪೆ ದಾರಿಗೆ ಬರದೆನುತಭೋರಿಟ್ಟು ಕೂಗ್ವುದ ಸಾರಿ ಕೇಳುತ ನಾನುದೂರ್ಹೋದೆ ಎನ್ನ ತಪ್ಪು ಕ್ಷಮಿಸು ಶ್ರೀರಾಮ 3
--------------
ರಾಮದಾಸರು
ನೆಚ್ಚದಿರೀ ಭಾಗ್ಯ ಆರಿಗೂ ಸ್ಥಿರವಲ್ಲನೆಚ್ಚದಿರೆಚ್ಚರಿಕೆಹೆಚ್ಚದೆ ಹಿಗ್ಗದೆ ಇದ್ದರೆ ಲೋಕಕೆಮೆಚ್ಚು ಕೇಳೆಚ್ಚರಿಕೆ ಪ.ಪೊಡವಿಪರೊಲೂಮೆ ಸುಸ್ಥಿರವೆಂದು ಗರ್ವದಿನೆಡೆಯದಿರೆಚ್ಚರಿಕೆಕೊಡವನಂಧಕ ಪೊತ್ತು ನಡೆವಂತೆ ಅಧಿಕಾರಕಡೆಉಒಲ್ಲ ಎಚ್ಚರಿಕೆಕಡುಚಪಲನು ತಾನೆಂದು ಪರರವಗಡಿ ಸದಿರೆಚ್ಚರಿಕೆಬಡವರೆಡರ ಲಾಲಿಸದೆಮುಂದಕ್ಕಿ ಹೆಚ್ಚುಇಡಬೇಡವೆಚ್ಚರಿಕೆ 1ದೊರೆಗಳ ಒಲವಲಂಯಂತೆಂದಲ್ಲರೊಳುಹಗೆತರವಲ್ಲ ಎಚ್ಚರಿಕೆಉರಗನ ಮುತ್ತಿ ಕಟ್ಟಿರುವೆಯು ಕೊರೆದಂಥತೆರನಪ್ಪುದೆಚ್ಚರಿಕೆಗುರುಹಿರಿಯರ ಕಂಡು ಚರಣಕೆ ಶಿರಬಾಗಿನಡೆಯುತಿರೆಚ್ಚರಿಕೆಸಿರಿಯೆಂಬ ಸೊಡರಿಗೆ ಮಾನ್ಯರ ಅವಮಾನಬಿರುಗಾಳಿ ಎಚ್ಚರಿಕೆ 2ಲೋಕಾಪವಾದಕೆ ಅಂಜಿ ನಡೆಯುವುದು ವಿವೇಕ ಕೇಳಚ್ಚರಿಕೆನಾಕೇಂದ್ರನಾದರೂ ಬಿಡದಪಕೀರ್ತಿ ಪರಾಕು ಕೇಳೆಚ್ಚರಿಕೆಕಾಕು ಮನುಜರಕೊಂಡೆಯ ಕೇಳೀ ಕೋಪದುದ್ರೇಕ ಬೇಡೆಚ್ಚರಿಕೆಭೂಕಾಂತೆ ನಡು - ನಡುಗುವಳು ನಿಷ್ಠುರವಾದವಾಕುಕೇಳೆಚ್ಚರಿಕೆ3ನಳ - ಮಾಂಧಾತರೆಂಬವರೇನಾದರುತಿಳಿದು ನೋಡೆಚ್ಚರಿಕೆಅಳಿವುದು ಈ ದೇಹ ಉಳಿವೂದೆಂದೇ ಕೀರ್ತಿಇಳೆಯೊಳಗೆಚ್ಚರಿಕೆಅಳಲಿಸಿ ಪರರನು ಗಳಿಸಿದಂಥ ಹೊನ್ನುಉಳಿಯದು ಎಚ್ಚರಿಕೆಉಳಿದಲ್ಪಕಾಲದಿ ಬಡವರಾದವರನುಹಳಿಯದಿರೆಚ್ಚರಿಕೆ 4ಪರಸತಿ - ಪರಧನಕಳುಪಲು ಸಿರಿಮೊಗದಿರುಹುವಳಚ್ಚರಿಕೆನೆರೆ ಛಿದ್ರಕುಂಭದ ನೀರಿನಂತಾಯುಷ್ಯಸರಿಯುವುದೆಚ್ಚರಿಕೆಬರುವ ಹಾನಿವೃದ್ಧಿ ತನ್ನ ಕಾಲದ ಮೀರಲರಿಯದು ಎಚ್ಚರಿಕೆವರದ ಪುರಂದರವಿಠಲರಾಯನಮರೆಯದಿರೆಚ್ಚರಿಕೆ 5
--------------
ಪುರಂದರದಾಸರು