ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದುರ್ಗೆ ಪಾಲಿಸೆ ಕರುಣದಿ | ಮಹಾ ಲಕುಮಿ ದುರ್ಗೆ ಪಾಲಿಸೆ ಕರುಣದಿ ಪ. ಅಪವರ್ಗ ಪದವಿ ಇತ್ತು ದುರ್ಗಮವಾಗಿಹ ದುಃಖವ ಬಿಡಿಸಿ ಭಾರ್ಗವಿರಮಣನ ಮಾರ್ಗವ ತೋರೆ ಭೋರ್ಗರೆಯುತ ಖಳರ ನಿಗ್ರಹಿಸುವಳೆ ಅ.ಪ. ಕ್ಷೀರವಾರಿಧಿ ತನಯೆ | ಶ್ರೀ ರಮಣನ ಜಾಯೆ ನಾರಸಿಂಹನ ಅರಸಿಯೆ ಸಾರಿದೆ ನಿನ ಪದ ತೋರಿಸೆ ಹರಿಪದ ಕಾರುಣ್ಯಾತ್ಮಳೆ ಕರುಣವ ಬೀರೆ ವಾರವಾರಕೆ ನಿನ್ನ ಆರಾಧಿಸುವಂಥ ಚಾರುಮತಿಯ ನೀಡೆ ನಾರಿರನ್ನಳೆ 1 ಪದ್ಮಾವತಿಯೆ ಪದ್ಮಿನಿ | ಪದ್ಮಾಕ್ಷಿದೇವಿ ಪದ್ಮಸಂಭವೆ ಕಾಮಿನಿ ಪದ್ಮನಾಭ ಶ್ರೀ ಶ್ರೀನಿವಾಸನ ಪದ್ಮಪಾದವ ಹೃತ್ಪದ್ಮದಿ ತೋರೆ ಪದ್ಮಸರೋವರ ತೀರವಾಸಿ ಕರ ಪದ್ಮಯುತಳೆ ಮುಖಪದ್ಮವ ತೋರೆ2 ರೂಪತ್ರಯಳೆ ಕಾಮಿನಿ | ಕಾಮಪೂರಿಣೀ ತಾಪಹರಿಸೆ ಭಾಮಿನಿ ಪಾಪಗಳÉಲ್ಲವ ನೀ ಪರಿಹರಿಸುತ ಗೋಪಾಲಕೃಷ್ಣವಿಠ್ಠಲನನು ತೋರುತ ನೀ ಪರಿ ನುಡಿವೆನೆ ನೀ ಪಾಲಿಸುವುದು ಆಪವರ್ಗದಲಿ 3
--------------
ಅಂಬಾಬಾಯಿ