ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುರು ನಾರಪ್ಪಯ್ಯನ ಚರಣಕಮಲಯುಗ್ಮ ಮಾನವ ಪ ನಿರುತ ಸ್ಮರಿಸುವ ಶರಣು ಜನರಘ- ತರಿದಭೀಷ್ಠೆಯ ಗರಿಯಲೋಸುಗ ಧರಣಿ ವಲಯದಿ ಮೆರೆವ ವೆಂಕಟ ಗಿರಿಯ ರಮಣನ ಕರೆದು ತಂದಿಹ ಅ.ಪ ಧರೆಸುರರೊಳು ಜನಿಸಿರಲು ಭ್ರಾತ್ರರುನಾನಾ ಪರಿಬಾಧಿಸಲು ಸಹಿಸಿ ಚರಣ ಯಾತ್ರೆಯಲಿಂದ ಗಿರಿಯಕಾಣುತ ಮಲಗಿರಲು ಸ್ವಪ್ನದಿಸೂಚಿಸಿ ಧರಣಿ ದೇವನೆ ನಿನಗೆ ದರುಶನ ಕೊಡಲು ನಾ ಬರುವೆನೆಂದಾಜ್ಞಾಪಿಸಿ ಭಕ್ತನನುಸರಿಸಿ ತುರುಸ್ವರೂಪವ ಧರಿಸಿ ಬರುತಿರೆ ಕುರಿಕಿಹಳ್ಳಿಯ ಗ್ರಾಮದಿಂದಲಿ ತರುವರಾಶ್ವತ್ಥದಲಿ ಸಲೆ ಪಾಲ್ಗರಿದ ದೇವನ ಕರೆದು ತಂದಿಹ 1 ನಾರಾಯಣಾರ್ಯರು ಕಾರ್ಪರಾರಣ್ಯದಿ ಆರಾಧಿಸುತಲಿರುತ ಆರಾರು ಭಕುತರು ಗೋಧನ ಧಾನ್ಯದಿ ಸಾರಾವಸ್ತುಗಳೀಯುತ್ತ ಗೋರಕ್ಷಣವ ಮಾಡಿರೆನುತ ತಮ್ಮಯ ಬಂಧು ಬಾಲಕರಿಗೆ ಪೇಳುತ್ತ ಭಯ ಬ್ಯಾಡಿರೆನುತ ಚಾರು ಶಿಲೆಯೊಳಗೊಂದು ದಿನ ಅಂಗಾರದಲಿ ಶ್ರೀ ಭಾರತೀಶನ ಮೂರುತಿಯ ಬರೆದೀತ ಭಯ ಪರಿ- ಹಾರಕನು ನಿಮಗೆಂದು ಪೇಳಿದ 2 ಧರಣಿ ಪಾಲಕನಿಂದ ನಿರ್ಮಿತಮಾದ ಬಂ- ಧುರ ನಿಲಯದಿ ರಾಜಿತ ತರುಮೂಲದೊಳಗವ- ತರಿಸಿ ಷೋಡಶ ಸಂಖ್ಯ ಕರಗಳಿಂದಲಿ ಶೋಭಿತ ವರ ಕೃಷ್ಣಾ ಜಲದೊಳಗಿರುವ ಪ್ರತಿಮೆಯ ತಂದು ತರು ಬಳಿಯಲಿ ಸ್ಥಾಪಿತ ಶ್ರೀಭೂಸಮೇತ ಮೂರ್ತಿ ನಿರುತ ಪೂಜೆಯಕೊಳುತ ಧರೆಯೊಳು ಶರಣು ಜನರನು ಪೊರೆವ ಕಾರ್ಪರ ನಿಲಯ'ಸಿರಿನರ ಹರಿ'ಯನೊಲಿಸಿದ3
--------------
ಕಾರ್ಪರ ನರಹರಿದಾಸರು
ಶ್ರೀ ರಾಘವೇಂದ್ರರು ಈ ಪದಾರಾಧಾನಾ, ಪಾವನ ಮಹಾ ಪಾವೇಭ ಸಂಚಾನನಾ ಪ ತಾಪತ್ರಯ ಹರ, ರಾಘವೇಂದ್ರರ ಬಹುಪದವ್ಯಾಪಾರನಾ, ಅನುದಿನಾ ಅ.ಪ. ದುರಿತ ರೇಣು ಮುಂತಾದ ತೃಣಪ ರಕ್ಷಿಪಗಿಡು ತೃಣ ಪರಿಹಾರವಿದೆ, ನಾಘಾದೆ 1 ಅಂಧ ಬದಿರ ಮೂಕರು ಸೇವಿಸುತ ನಂದಾಗಳೇರುವರು ವೃಂದಾವನ ಸೇವೆ, ಗೈದು ವಂದಿಸಿ ದಿವ್ಯ ಕಂದನ್ನೆತ್ತಾಡಿಸಿರೋ, ಜೋ ಎನ್ನಿರೊ 2 ಕುಪ್ಠ ಭಗೇಂದ್ರಕ್ಷಯಾ, ಬಾಲಗ್ರಹ ದುಷ್ಟ ಪಿಶಾಚಭಯ ಕಷ್ಟ ಓಡಿಸಿ ದಯ ದಯದೃಷ್ಟಿಯಿಂದ ನಿಖಿ- ಳಾಷ್ಠ ವಿಟ್ಟು ಕರೆವಾ, ತಾ ಮೆರೆವಾ 3 ಆರಾಧಿಸುತಲಿ ಬಂದ, ನವಲಗುಂದ ಸಾರಸಿಂದಾರ್ಯರಿಂದ ಕ್ಷೀರ ಸೇಚನ ಮೂವತ್ತಾರು ವರುಷ ಗುರುವಾರ ಮೃಷ್ಠಾನ್ನದಿಂದ, ಆನಂದ 4 ಬಹಳ ಗುಣಗಳ ನೋಡಿ, ಒಲಿದು ಒಲಿದು ಮಂತ್ರಾ ಲಯದೊಳು ನಿಂತು ಶೀಲ ಸಂಪತ್ತಿಗೆ ಒಲಿದಿಹ ರಾಜ ಗೋಪಾಲ ಭಕ್ತರ ಚಯಾ ಆಶ್ಚರ್ಯ ಶ್ರೀರಸ್ತು5
--------------
ರಾಜಗೋಪಾಲದಾಸರು