ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮರೆಯದಿರು ಹರಿಯಮರೆವರೆ ಮೂರು ಲೋಕದ ದೊರಿಯ ಪ ಮದಗಜ ಹರಿಯೆಂದು ಕರೆಯಲುಒದಗಿ ಆಕ್ಷಣ ಬಂದುಮುದದಿ ನಕ್ರನ ಕೊಂದು ಸಲ-ಹಿದ ಸದ್ಭಕ್ತರ ಬಂಧುಹದುಳ ಪ್ರಹ್ಲಾದನ ಹೆದರಿಸಿದಸುರನಉದರವ ಬಗೆದಂಥದುಭುತ ಮಹಿಮನ1 ನಾರಿಯು ತನ್ನ ಕರೆದ ಮಾತ್ರದಿಸೀರೆಯ ಮಳೆಗರೆದಕ್ರೂರ ಖಳನ ತರಿದು ಆ ಪಾಂಡವರಆರಣ್ಯದಿ ಪೊರೆದಗಾರಾದಜಮಿಳ ನಾರಗ ಎನಲುಪಾರಗಾಣಿಸಿದಪಾರ ಗುಣನಿಧಿಯ 2 ದುರಿತ ಭವ ಪಾಶಾ - ಅವಗೆಂದೆಂದಿಗಿಲ್ಲ ಕ್ಷೇಶಾತಂದೆ ಕದರುಂಡಲಗಿ ಹನುಮಯ್ಯನೊಡೆಯಚಂದಾದಿಕೇಶವನ ನೆನೆದವರೆಂದಿಗು ಧನ್ಯರು3
--------------
ಕನಕದಾಸ
ಉಪಕಾರ ಮರೆವುದುಚಿತವಲ್ಲೋ |ತಪನಾಪ್ತಾಕ್ಷನೆ ನಮ್ಮ ಹಿರಿಯರಂದು ಮಾಡಿದಾ ಪಹರಿಯೆ ನಿನ್ನವರಿಗಮೃತವ ನೀಡುವೆನೆಂದು |ಭರದಿಂದ ಮಥÀನ ಮಾಡಿಸಿದೆ ಕಡಲ ||ಗರಳವುದ್ಭವಿಸಲು ದಿವಿಜರಂಜಲು ಆಗ |ತ್ವರದಿಂದದರಭಯ ಪರಿಹರಿಸಿದರಾರೊ 1ಆರಣ್ಯದೊಳು ನೀನಿರಲು ನಿನ್ನೊಲ್ಲಭಿಯ |ಆ ರಾವಣನೊಯ್ಯಲು ಕಪಿಗಳೆಲ್ಲ ||ಹಾರಲಾರೆವೊ ಸಮೂದ್ರಾ ಎನ್ನಲು ಬೇಗ |ಭಾರತೀ ರಮಣನೇ ಪೋಗಿ ವಾರ್ತೆಯ ತಂದ 2ಶರಧಿಕಟ್ಟುವುದಕ್ಕೆ ರೋಮ ರೋಮದಿ ಗುಡ್ಡ |ಧರಿಸಿ ತಂದನು ನೊಂದೆನೆನ್ನದಲೆ |ಹರಿಜಿತು ಶರದಿಂದ ಬಿಗಿಯೆ ಪ್ಲವಗರೆಲ್ಲಾ |ಧರಣಿ ಹೊಂದಲು ಸಂಜೀವನ ತಂದು ಉಳುಹಿದ 3ವಸುದೇವಜನಾಗಿ ನೀಂ ಜರಿಜನ ಭಯದಿಂದ |ವಸುಧೆಯೊಳಗೆ ನಿಲ್ಲಲಾರದಿದ್ದೆ ||ಶಶಿಕುಲದಲ್ಲಿವಾತಜನಿಸಿ ಅವನ ಕೊಂದು |ಕುಸುಮನಾಭನೆ ನಿನ್ನ ಭಯ ಬಿಡಿಸಿದನಲ್ಲೋ 4ಮಣಿಮಂತಜಗದೊಳು ನಿನ್ನ ಮಹಿಮೆಯನ್ನು |ಮುಣುಗಿಸಿದನು ತ್ವರಿತ ನಮ್ಮ ಗುರುವು ||ಘನಶಾಸ್ತ್ರಂಗಳ ರಚಿಸಿ ದುರ್ಮತವ ಸೋಲಿಸಿ |ಮನಸಿಜಪಿತನೇ ಪರನೆಂದು ಮೆರೆಸಿದ5ಇಷ್ಟು ಸೇವೆಯ ಮಾಡಿ ಮೆಚ್ಚಿಸಿದನು ಗೇಣು |ಬಟ್ಟೆಬೇಡಿದನೇನೋ ಆತ ನಿನ್ನ ||ಬಿಟ್ಟದ್ದಾನಾದಿತು ನಮ್ಮ ವಂಶಕರಿಗೆ |ಕೊಟ್ಟು ರಕ್ಷಿಸುವನು ಸ್ವಾಮಿ ಒಳ್ಳೆವನೆಂದು 6ಈಸು ಪರಿಯಿಂದ ನಮ್ಮ ಭಾರತೀಕಾಂತ |ತಾ ಸೋತಿರಲು ನಿನಗೆ ನಮ್ಮನೀಗ ||ಘಾಸಿಮಾಡದೆ ಸಲಹುವದುಚಿತವೋ ಶ್ರೀ ಪ್ರಾ- |ಣೇಶ ವಿಠ್ಠಲರೇಯ ಅಪಕೀರ್ತಿ ಕೊಳಬೇಡ7
--------------
ಪ್ರಾಣೇಶದಾಸರು
ಙ್ಞÕನವೊಂದೇ ಸಾಕು ಮುಕ್ತಿಗೆ - ಇ - |ನ್ನೇನು ಬೇಕು ಹುಚ್ಚುಮರುಳು ಮಾನವನೆ ಪ.ಪಿತ ಮಾತೆಸತಿ ಸುತರನಗಲಿರಬೇಡ |ಯತಿಯಾಗಿ ಆರಣ್ಯ ಚರಿಸಲು ಬೇಡ ||ವ್ರತ - ನೇಮವ ಮಾಡಿ ದಣಿಯಲು ಬೇಡ |ಸತಿಯಿಲ್ಲದವಗೆ ಸದ್ಗತಿಯಿಲ್ಲೋ ಮೂಢ 1ಜಪತಪವನೆ ಮಾಡಿ ಸೊರಗಲುಬೇಡ |ಕಪಿಯಂತೆ ಅಡಿಗಡಿಗೆ ಹಾರಲುಬೇಡ ||(ಉಪವಾಸಪಾಶಕ್ಕೆ) ಸಿಕ್ಕಲುಬೇಡ |ಚಪಲತನದಲೇನು ಫಲವಿಲ್ಲೋ ಮೂಢ 2ಜಾಗರದಲಿ ನಿದ್ರೆ ಕೆಡಿಸಲು ಬೇಡ |ಓಗರವನು ಬಿಟ್ಟು ಒಣಗಲು ಬೇಡ ||ಸೋಗುಮಾಡಿ ಹೊತ್ತು ಕಳಿಯಲು ಬೇಡ |ಗೊಗೆ ಹಾಗೆ ಕಣ್ಣು ತಿರುಗಿಸಬೇಡ 3ಹೊನ್ನು - ಹೆಣ್ಣು - ಮಣ್ಣು ಜರೆದಿರಬೇಡ |ಅನ್ನ - ವಸ್ತ್ರಗಳನ್ನು ತೊರೆದಿರಬೇಡ ||ಬಣ್ಣದ ದೇಹವ ನೆಚ್ಚಲುಬೇಡ |ತಣ್ಣೀರೊಳಗೆ ಮುಳುಗಿ ನಡುಗಲು ಬೇಡ 4ಮಹಾವಿಷ್ಣುಮೂರ್ತಿಯ ಮರೆತಿರಬೇಡ |ಸಾಹಸದಿಂದಲಿ ಶ್ರಮ ಪಡಬೇಡ ||ಕುಹಕ ಬುದ್ಧಿಯಲಿ ಕುಣಿದಾಡಬೇಡ |ಮಹಿಮ ಪುರಂದರವಿಠಲನ ಮರೆಯದಿರೊ ಮೂಢ 5
--------------
ಪುರಂದರದಾಸರು
ಹುಚ್ಚು ಹಿಡಿಸಿದೆಯಾಮಾಧವ|ನಿಚ್ಚನಿನ್ನ ಪಾದಾಂಬುಜವ ಭಜಿಪರಿಗೆ ಪಮತ್ತಗಜವೆಂಟು ಸೊಕ್ಕಿಲಿ ಕೊಲ್ವವು |ಕುತ್ತಿಗೆ ಮುರಿವರಾರು ಮಂದಿಯೂ ||ಎತ್ತ ಹೋಯಿತೋ ಬುದ್ಧಿ ಕುಳಿತುಕೊಂಡರೆ ಮೇಲೆ |ಹುತ್ತ ಬೆಳದರೆಚ್ಚರಿಕೆಯಿಲ್ಲದಂಥ 1ದಾರಾಸುತರೆನ್ನದಾರೆಂದು ನೋ |ಡರಾಗಾರ ನಮ್ಮದೆಂದು ಪೋಷಿಸರು ||ಆರಣ್ಯದಲಿ ಮುಸುಕಿಕ್ಕಿ ಧ್ಯಾನಿಸುವರು |ಶಾರೀರದ ಪರವಿಯನ್ನು ಬಿಟ್ಟಹರು 2ಬಿದ್ದು ಯದ್ದ ಕಾಳು ಆದುಕೊಂಡುಂಬರು |ಇದ್ದ ಬದುಕು ಜೋಕೆ ಮಾಡೊಲ್ಲರು ||ಪ್ರದ್ಯುಮ್ನ ಪ್ರಾಣೇಶ ವಿಠಲನೇ ಇಂಥ |ಬುದ್ಧಿಯ ಪ್ರೇರಿಸಿ ನೋಡಿ ಹಿಗ್ಗುವೆನೀ 3
--------------
ಪ್ರಾಣೇಶದಾಸರು