ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆರಗೊಡವೆ ನಮಗಿನ್ಯಾಕೊ ಹರಿ ಅ ಪಾರ ಮಹಿಮನ ದಯವೊಂದೆ ಸಾಕೊ ಪ ಮಾರಿಗೀರಾಗಲಿ ದೂರಿ ಸಕಲರೆನ್ನ ಸಾರಸಾಕ್ಷನ ಬಲವೊಂದೆ ಬೇಕೊ ಅ.ಪ ಜಗಜನ ಕಂಡಂತೆ ಬೊಗಳಲಿ ಬೊಗಳಿ ಬೊಗಳಿ ನಮ್ಮ ಶಪ್ಪರಿಯಲಿ ನಿಗಮಾಗಮನುತ ಜಗಜೀವೇಶನ ಸೊಗಸಿನ ಕೃಪೆಯೊಂದೆ ನಮಗಿರಲಿ 1 ದುರುಳ ಕೃತ್ತಿಮನೆಂದು ಜರಿಯಲಿ ಜರಿಜರಿದು ಮರೆದ್ಹೋಗಲಿ ಚರಣದಂತಿ ಪರಮ ಪಾವನಂಘ್ರಿ ಕರುಣಾಮೃತವೊಂದೆ ನಮಗಿರಲಿ 2 ಕ್ಷೇಮ ತುಸು ಕಾಣದಳಿದ್ಹೋಗಲಿ ಕಾಮಜನಕ ನಮ್ಮ ಸ್ವಾಮಿ ಶ್ರೀರಾಮನ ನಾಮಧ್ಯಾನವೊಂದೇ ನಮಗಿರಲಿ 3
--------------
ರಾಮದಾಸರು
ನಾಚಿಕೆಪಡಬೇಡ - ಮನದೊಳು -ಯೋಚಿಸಿ ಕೆಡಬೇಡ ಪ.ನಿಚ್ಚ ನೆನೆಯೊ ನಮ್ಮಚ್ಯುತನಾಮವ |ಮೆಚ್ಚಿ ಕೊಟ್ಟರೆ -ಅಚ್ಯುತಪದವೀವಅಪಹರಿಹರಿಯೆಂದೊದರೋ - ಹತ್ತಿದ - |ದುರಿತಗಳಿಗೆ ಬೆದರೋ ||ವಾರಿಜಾಕ್ಷನ - ವೈಕುಂಠಪುರವ |ಸೇರಿಸೇರಿ ನೀ ಕುಣಿಕುಣಿದಾಡೊ 1ಆರಗೊಡವೆ ಏನೋ - ನರಕದ |ದಾರಿ ತಪ್ಪಿಸುವರೆ ||ನೀರಜಾಕ್ಷ ನಮ್ಮನಿರ್ಜರ ಪತಿಯಲಿ |ಸೇರಿ - ಸೇರಿಸಿ ಮನ ನಲಿನಲಿದಾಡೊ 2ಭಕ್ತಜನರ ಕೂಡೊ - ಭವಭಯ |ಬತ್ತಿಪೋಪುದು ನೋಡೊ ||ಮುಕ್ತಿದಾಯಕ ಶ್ರೀ ಪುರಂದರವಿಠಲನ |ಭಕ್ತಿಯಿಂದ ನೀ ಹಾಡಿ ಕೊಂಡಾಡೊ 3
--------------
ಪುರಂದರದಾಸರು