ಒಟ್ಟು 3 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸರ್ವತಂತ್ರ ಸ್ವತಂತ್ರ | ನಿರ್ವಿಕಾರನೆ ದೇವ ಅವ್ವ ಲಕುಮಿಗು ಪ್ರೇರಕ ಪ ದುರ್ವಿಭಾವ್ಯನೆ ಜಗಕೆ | ದರ್ವಿ ಜೀವನ ಕಾವಹವಣೆ ನಿನದಲ್ಲೇ ಸ್ವಾಮಿ ಅ.ಪ. ಕಾಯ ರಕ್ಷಿಸಿದೇ 1 ಕಾಯ ವೈರಿ ಪತಿ ನೀನೆ | ಜಾಯೆಯಿಂದೊಡಗೂಡಿಗೇಯ ಸಂಕರುಷಣನೆ | ಆಯತನ ಪೊರೆದೇ 2 ಸಾಯಮಭಿಧಾನದ | ಸವನ ಮೂರಲಿ ದಿವ್ಯಗಾಯಿತ್ರಿ ದ್ವಯ ಮಾತೃಕಾ |ಆಯತನದೊಳಗಿದ್ದು | ಆದಿತ್ಯ ದೇವಕಿಂಆಯುರ್ಹವಿಷವ ಗೊಳ್ಳುತಾ |ಜೀಯ ನೀ ಪೊರೆಯುತಿರೆ | ಧಾತು ಸಪ್ತಕ ತನುವಧಾರ್ಯವಾಗಿಹುದೊ | ದ್ಯುಮ್ನ |ಗೇಯ ಗುರು ಗೋವಿಂದ | ವಿಠಲನೆ ತವ ಪದಕೆಕಾಯ ಇದನರ್ಪಿಸುವ | ದೇಯ ಕೊಡು ಸತತ 3
--------------
ಗುರುಗೋವಿಂದವಿಠಲರು
ದೇಹಿಯೆಂಬವನೊಡನೆ ನಾಸ್ತಿಯೆನಬೇಡ ಕಾಯೊ ವೆಂಕಟಪತಿಯೆ ಕಾರುಣ್ಯವಾರಿಧಿಯೆ ಪ ಮಾಡಿದಪರಾಧಗಳ ನೋಡಿ ಕ್ಷಮಿಸಿಯೆ ಯೆನಗೆ ರೂಢಿಯೊಳು ಬೆಳೆಸಿರಿಯ ಕೈಗೂಡಿಸಿ ಆಡಿ ತಪ್ಪಿದ ನುಡಿಯ ಕೂಡಿ ನಡೆಸುತ ಮುಂದೆ ಬೇಡಿದಿಷ್ಟವನಿತ್ತು ಮಾತಾಡಬೇಕೆನುತ 1 ನರನಾದ ಕುರಿಯಿದನು ಸಲಹಬೇಕೆಂದೆನುತ ಮೊರೆಯಿಟ್ಟು ನಿನ್ನಡಿಗೆ ಶರಣಾದೆನು ಕರುಣವಾರಿಧಿ ನಿನ್ನ ಚರಣದಾಭರಣನಿಗೆ ಹರಣವನು ಮರೆವಾಗೆ ಸ್ಮರಣೆ ನೀಡೆನುತ 2 ಗುಣವಾದ ಪತ್ರಿಕೆಯ ಕ್ಷಣದೊಳಗೆ ಹರಿದೆನ್ನ ಕಣುಮನಕೆ ದೃಢವಾದ ಗುಣವ ತೋರೆನುತ ಫಣಿಶಯನ ನಿನ್ನಡಿಗೆ ಮಣಿದು ಬೇಡುವೆ ನಾನು ಉಣಲಾಗದೋಗರವ ಉಣಿಸಬೇಡೆನುತ 3 ಕೆಟ್ಟ ಕೆಲಸವನಿದಿರು ದೃಷ್ಟಿಗಿಕ್ಕದೆÀಯೆನ್ನ ಬಿಟ್ಟು ಕಳೆಯಲು ಬೇಡ ಸೃಷ್ಟಿಪಾಲಕನೆ ಇಟ್ಟಡಿಯ ಕಮಲವನು ಮುಟ್ಟಿ ಭಜಿಸುವೆ ನಾನು ಹುಟ್ಟಿದೀ ಬವರದೊಳು ಕಷ್ಟ ಬೇಡೆನುತ 4 ಶುದ್ಧ ಸ್ನಾನವ ತೊರೆದು ಇದ್ದ ಜಪಗಳ ಮರೆದು ಕರ್ಮ ಒದ್ದು ಕಳೆದು ಉದ್ದಂಡವಾಗಿ ನಡೆದಿರ್ದ ಪಾಪಂಗಳನು ತಿದ್ದಿಟ್ಟು ಎನ್ನನುರೆ ಉದ್ಧರಿಸಬೇಕಯ್ಯ 5 ಪೊಡೆವಿಯೊಳಗೆನ್ನಂಥ ಕಡುಮೂರ್ಖರನು ಕಾಣೆ ಮಡದಿಯೆಂಬಡವಿಯೊಳು ಕೈದುಡುಕಿದು ಪಡೆದ ಮಕ್ಕಳ ಮುಂದೆ ಕಡೆ ಹಾಯುವವರಿಲ್ಲ ಒಡೆಯನಾಗಿಯೆ ಯೆನ್ನ ಬಿಡದೆ ಸಲಹೆನುತ 6 ನಾರಿ ಮಕ್ಕಳಿಗೆಲ್ಲ ಮೀರಿದಾಪತ್ತಿನಲಿ ತೋರಿಸುವೆ ನಿನ್ನ ಚರಣಂಗಳೆನುತ ಹಾರೈಸಿದ್ಹರಕೆಯಿದು ಭಾರವಾಗಿಯೆ ಶಿರದಿ ಏರಿದುದನಿಳುಹುವರೆ ದಾರಿ ತೋರೆನುತ 7 ತ್ರಾಹಿ ವೆಂಕಟರಾಯ ಕಾಯೊ ನಿನ್ನಯ ಮಾಯೆ ಮೋಹಿಸುತ ಜಗವೆಲ್ಲ ಬಾಯ ಬಿಡುತಿಹುದು ದೇಹಿಯೆನುತಿಹ ಜನಸಹಾಯನಲ್ಲವೆ ನೀನು ಮಾಯವಾಗದೆ ಮುಂದೆ ಆಯತನ ತೋರೆನುತ 8 ಸುರವಂದ್ಯ ಮುರಮಥನ ಗುರುದೈವ ಪರಮಾತ್ಮ ವರಲಕ್ಷ್ಮಿಕರವೆನಿಪ ಹರಿವೆಂಕಟೇಶ ಮರೆವಾಗದಿರು ಯೆನ್ನ ಕರೆದು ನೆರೆ ಸೌಖ್ಯವನು ಸ್ಥಿರವಾಗು ಎನ್ನೊಡನೆ ವರಾಹತಿಮ್ಮಪ್ಪ 9
--------------
ವರಹತಿಮ್ಮಪ್ಪ