ಒಟ್ಟು 5 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎನ್ನಾಗಮವ ಹೀಗಾಯಿತೊ ದೇವ ಇನ್ನು ನೀ ಎನ್ನನು ಸಲಹುವ ಬಗೆಯಂತೊ ಪ ಸಕ್ಕರಿ ತಾಯೆಂದು ಸಂತಿಗೆ ಕಳುಹಲು ತಕ್ಕಡಿ ಲಶುನವ ತಂದ ತರಳನಂತೆ 1 ಪರಮ ನಿರ್ಮಲವಾದ ತುಲಸಿ ತಾಯೆನೆ ದುಷ್ಟ ತುರುಚಿಯನೆ ತಂದ ತರಳನಂತೆ 2 ಮಸಿಯ ಒರೆಸಿಕೊಂಡು ಬಾಯೆನ್ನೆ ಶಿಶು ತಾನೆ ಕೆಸರು ಪೂಸಿಕೊಂಡು ಬಂದ ತರಳನಂತೆ3 ಕಳುಹಿದಾ ಪಿರಿಯರು ಹಳಿಯಲಿ ಚಿಂತಿಲ್ಲ ಗೆಳೆಯಾರು ನಗುವ ಚಿಂತೆಯೆ ಘನವೆಲೊ ದೇವ4 ಆಪುತ ಪ್ರಿಯ ಬಂಧು ವ್ಯಾಪಕ ನೀನೆಂದು ಜ್ಞಾಪಕಗೊಳಿಸಿದೆ ವಾಸುದೇವವಿಠಲ 5
--------------
ವ್ಯಾಸತತ್ವಜ್ಞದಾಸರು
ಜ್ಞಾನವನ್ನೇ ತಿಳಿದುಕೋ ಮನುಜ ಜ್ಞಾನವನ್ನೇ ತಿಳಿದುಕೋ ಪ ಸತ್ತು ಹುಟ್ಟಿಯೇ ಸತ್ತು ಮುಂದಣ ಜನ್ಮಕು ಮತ್ತುಮತ್ತು ಗಳಿಸಿಕೊಂಡು ವಿಪತ್ತು ಮತ್ತೆ ಬಂದಿದೆ ಮೃತ್ಯು 1 ಹಾದಿಯಿದೆ ಸಾಪು ಕಾಣದೆ ಬಿಡುವೆ ಆಪುಬಯಕೆ ಯೋನಿಯ ಕೂಪು ಹಾಕಿ ಹಾಕಿ ಭಾಪು 2 ಹಸಿವು ಬಿಡೋ ಹಸಿವು ಯಾಕೆ ಆದಿ ಪಶುವುಬಗುಳ ಬೇಡ ಹುಸಿಯು ನಾಚುತಿದೆ ಬಸಿರು3 ಹೆಚ್ಚ ಬೇಡ ಹೆಚ್ಚು ಅಹಂಕಾರ ಮುಚ್ಚುಓದಿಗೆ ಬೆಂಕಿಯ ಹಚ್ಚು ಮಾಡಿಕೊಂಡೆಯ ಕಿಚ್ಚು4 ಜ್ಞಾನವ ತಿಳಿಯಿನ್ನು ಯಮಗೆ ಕೊಡಬೇಡ ಬೆನ್ನುಆರುತಾನಿಹನೆನ್ನು ಚಿದಾನಂದನೆ ಎನ್ನ5
--------------
ಚಿದಾನಂದ ಅವಧೂತರು
ಮಧ್ವಾರ್ಯ - ಮಧ್ವಾರ್ಯ ಪ ಅದ್ವೈತಾರಣ್ಯ | ಪ್ರಧ್ವಂಸಾನಲ ಅ.ಪ. ಬಡವರು ಎನಿಸಿದ | ನಡುಮನೆ ದ್ವಿಜನಲಿಸಡಗರದಲಿ ಜನ | ಮೃಡನುತ ಗುರುವೇ 1 ಬಾಲನೆ ವೃಷಭನ | ಬಾಲ ಪಿಡಿದು ದೇ ವಾಲಯ ವನದಲಿ | ಲೀಲೆಯ ತೋರ್ದೆ2ಹಸು ಕೂಸಾಗಿಯೆ | ಬಿಸಿ ಹುರುಳಿ ಮೆದ್ದೆವೃಷ ವಿಕ್ರಯಿ ಋಣ | ತಿದ್ದಿದೆ ಬೀಜದಿ 3ಅಚ್ಚ್ಯುತ ಪ್ರೇಕ್ಷರಿಂ | ತಚ್ಚತುರಾಶ್ರಮಸ್ವೇಚ್ಛೇಲಿ ಸ್ವೀಕರ | ಕೃಛ್ರಾದ್ಯಾಚರ 4 ಇಷ್ಟ ಸಿದ್ದಿಗತ | ಭ್ರಷ್ಟ ವಿಷಯಗಳಎಷ್ಟೊ ತೋರಿ ಸುವಿ | ಶಿಷ್ಟನು ಎನಿಸಿದೆ 5 ಬೋಧ ಬದರಿಯಲಿಸಾದರ ಸ್ವೀಕೃತ | $ಗಾಧ ಭಾಷ್ಯಕೃತ 6 ಮೂಲ ಮೂರು ಹತ್ತು | ಏಳು ಗ್ರಂಥಗಳುಲೀಲೆಯಿಂದ ಕೃತ | ಶೀಲ ಸುಜನರಿಗೆ 7 ನಾನೆ ದೇವನೆಂ | ದ್ಹೀನ ಮಾಯಿಗಳಗೋಣು ಮುರಿದು ಸು | ಜ್ಞಾನವನಿತ್ತೆಯೊ8 ಏಕ ವಾಕ್ಯದಿಂ | ದೈತ್ಯವನಳಿಯುತಏಕ ಮೇವ ಹರಿ | ಏಕಾತ್ಮನೆಂದೇ 9 ಬುದ್ಧ್ಯಾಬ್ಧಿಯು ಬರೆ ಗೆದ್ದು | ವಾದದಲಿಅದ್ವೈತವ ಮುರಿ | ದದ್ವಿತೀಯ ಗುರು 10 ಕುಸುಮ ಫಲ | ನಿತ್ತು ತೋರ್ದೆ ನಿಜ 11 ಗೋಪಿ ಚಂದನದಿ | ಶ್ರೀಪ ಗೋಪ ಬರೆಶ್ರೀಪತಿ ಸ್ಥಾಪಿತ | ಆಪುರಿ ಉಡುಪಲಿ 12 ಅಷ್ಟಯತಿಗಳಿಂ | ಕೃಷ್ಣ ಪೂಜೆಗಳಸುಷ್ಠು ಗೈಯ್ಯಲೇ | ರ್ಪಟ್ಟಿತು ನಿನ್ನಿಂ13 ಐತರೇಯ ಸುವಿ | ನೀತರೆನಿಪ ತವಛಾತ್ರರಿಗಾಗಿಯೆ | ಕೂತು ಪೇಳ್ದೆ ಗುರು14 ಶೇಷ ಮುಖ್ಯರಾ | ಕಾಶದಿ ನಿಂತುಪದೇಶವ ಕೇಳುತ | ತೋಷವ ಪಟ್ಟರು 15 ತಕಿಟ ತಕಿಟವೆಂ | ದುತ್ಕಟ ನಾಟ್ಯದಿಪ್ರಕಟ ಹರ್ಷ ಸ್ತ್ರೀ | ನಿಕರಾವಳಿಯಿಂ16 ದೇವ ತತಿಯು ತಮ | ದೇವ ವಾದ್ಯದಿಂಪೂವ ಮಳೆಯ ಗರೆ | ಆವೃತನದರಿಂ 17 ಕೃತ ಕಾರ್ಯನೆ ತವ | ಸ್ತುತಿಯಗೈಯ್ಯ ಸುರತತಿಯ ಬದರಿ ಪುರ | ಗತ ನೆಂದೆವಿಸಿದೆ 18 ವ್ಯಾಸಾತ್ಮನು ಗುರು | ಗೋವಿಂದ ವಿಠಲನದಾಸ ಹೃದಯದವ | ಕಾಶದಿ ಭಾಸಿಸು 19
--------------
ಗುರುಗೋವಿಂದವಿಠಲರು
ಲಂಕೆ ನಿರ್ಧಾಮ ಮಾಡಲು ಇಲ್ಲದೆ ಈ ಸೀತಾ ಲಲನೆ ಕ್ಷೇಮವು ತರಲು ಶಂಕೆಯಿಲ್ಲದ ಬಿರುದಾಂಕನ ಸೇವಕರು ಅಂಕರಲಿ ಪೇಳಿರಲಧಿಕ ಬಲವಂತರೆಲ್ಲಾ ಪ ಭೇದಿಸಿ ದೈತ್ಯರ ಹಿಡಿಯಲೊ ಆಪುರಿಸೇರಿ ಹೊಡೆದು ಮಾರಿಯ ಮಾಡಲು ದೃಢವು ಎನ್ನಯಮಾತುಬಿಡದೆ ಆರಾವಣನಾ ಹೊಡೆದು ಹೆಡ ಮುಡಿ ಕಟ್ಟಿ ----ಲ್ಲಿ ತರಲು ಇಲ್ಲದೆ 1 ವಾರಿಧಿ ಲಂಘಿಸಲು ಒಳಹೊಕ್ಕು ದೈತ್ಯ ವಂಶವೇ ಭೇದಿಸಲೆ ಸಾರಿ ಹೇಳುವೆ ಇನ್ನು ಸರಸಜ್ಞರೆಲ್ಲ ಕೇಳಿ ವಾರೆಲ್ಲ ಎನ್ನ ಮಾತು ಒಂದೇ ನಿಮಿಷದಿ ಹೇಳಿನ್ನೂ 2 ನಿಟ್ಟಾಗಿ ಒಳಹೋಗಲು ಹೋಗುತಲಿ ನಗರಸುಟ್ಟು ಬೂದಿಯ ಮಾಡಲು ಘಟ್ಟ್ಯಾಗಿ ಕೇಳಿರಿನ್ನು ಘನ 'ಹೊನ್ನವಿಠ್ಠಲ 'ನಾದ ಧಿಟ್ಟ ಶ್ರೀರಾಮರ ಭಂಟ ಹನುಮಂತನಾನು 3
--------------
ಹೆನ್ನೆರಂಗದಾಸರು
ಲಕ್ಷ್ಮೀ ವೆಂಕಟೇಶ ವಿಠಲ | ರಕ್ಷಿಸೋ ಇವಳಾ ಪ ವಿಶ್ವ ವ್ಯಾಪಕನೇ ಅ.ಪ. ಪುಟ್ಟಿ ಸತ್ಕುಲದಲ್ಲಿ | ತೊಟ್ಟು ಸತ್ಸಿದ್ಧಾಂತ ಇಷ್ಟ ಪಡುತಿಹಳಯ್ಯ | ಕಷ್ಟದಾಸತ್ವಾಇಷ್ಟ ಮೂರುತಿ ನೀನು | ತೈಜಸೀ ರೂಪದಲಿಸ್ಪಷ್ಟ ತೋರಿದ ಹರಿಯೆ | ಇತ್ತೆ ಉಪದೇಶಾ 1 ಮರುತ ಮತದಲಿ ದೀಕ್ಷೆ | ಹಿರಿಯರನು ಸರಣೆಯಲಿನಿರುತ ಆಸಕ್ತಿಯನು | ಕರುಣಿಸುತ ಭವದಾಶರಧಿಯನೆ ದಾಟಿಸುವ | ಮಾರ್ಗವನೆ ತೋರೊ ಹರಿಕರುಣಾಂಬುನಿಧಿಯೆಂದು | ಮೊರೆ ನಿನಗೆ ಇಡುವೇ 2 ಕಷ್ಟ ನಿಷ್ಠೂರಗಳ | ಸುಷ್ಠುಸಮತೆಲಿ ಉಂಬಶ್ರೇಷ್ಠ ಮತಿಯನೆ ಇತ್ತು | ರಕ್ಷಿಸೋ ಇವಳಾ |ಅಷ್ಟ ಸೌಭಾಗ್ಯಗಳ | ಕೊಟ್ಟು ಕಾಯಲಿ ಬೇಕೊಕೃಷ್ಣ ಮೂರುತಿ ಹರಿಯೆ | ಭಕ್ತ ವತ್ಸಲ್ಲಾ 3 ಪರಮಾರ್ಥ ಸಾಧನಕೆ | ಗುರು ಕರುಣಬೇಕೆಂಬವರಮತಿಯ ಕರುಣಿಸುತ | ಪೊರೆಯ ಬೇಕಿವಳಾಗರುಡ ಗಮನನೆ ದೇವ | ಸರ್ವಾಂತರಾತ್ಮಕನೆಕರುಣದಿಂ ಕೈ ಪಿಡಿದು | ಉದ್ಧರಿಸೋ ಇವಳಾ 4 ಪಾವಮಾನಿಯ ಪ್ರೀಯ | ಭಾವದಲಿ ಮೈದೋರಿಜೀವಿಯನು ಉದ್ಧರಿಸೋ | ದೇವ ದೇವೇಶಾಗೋವತ್ಸದನಿ ಕೇಳಿ | ಆಪು ಪೊರೆವಂತೆ ತೋರಿಗೋವಿದಾಂಪತಿ ಗುರೂ | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು