ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಂಬು ನಂಬು ಶ್ರೀನರಹರಿ ಪಾದವÀ ನರನೇ ಪಾಮರನೆ ಪಾತಕ ಕೃಷ್ಣಾ ಮೂರ್ತಿಯನ್ನೇ ಪ ಸಾಧು ಸಜ್ಜನ ಸಂತರ ಸಲಹುವ ಸಕಲ ಲೋಕ ಕರ್ತನಾ ಮೇದಿನಿ ಭಕ್ತರ ಮನದಲಿ ಚರಿಸುವ ಮಂಗಳ ಮಹಿಮನ ಆದಿಮೂರುತಿ ಆನೇಕ ಚರಿತಾ ಅನಂತ ಅವತಾರನಾ ಅನುದಿನ ಮರೆಯದೆ ನೀ ಯಿನ್ನಾ 1 ಶ್ರೀನಿವಾಸ ಆಶ್ರಿತ ಜನಪೋಷಕ ಶಾಶ್ವತನಾಗಿಹನಾ ಗಾನಲೋಲ ಶ್ರೀವೇಣುನಾದನ ಕರಿರಾಜ ವರದನ ದಾನವಾಂತಕನ ದಶರಥತನಯನ ದೇವಾದಿದೇವನ್ನ ಮಾನವ ಮದನ ಜನಕನಾದನಾ 2 ಭೂಸುರ ನಾಯಕನ ಮಾಧವ ಗೋವಿಂದನ ಮುಕ್ಕುಂದನಾದ ಅವನಾ 'ಹೆನ್ನೆವಿಠ್ಠಲನಾ’ 3
--------------
ಹೆನ್ನೆರಂಗದಾಸರು
ಮೋದ ಪ್ರದ ನರಹರಿ | ವಿಠಲ ಪೊರೆ ಇವಳಾ ಪ ಪಾದ್ಯ ಪ್ರ | ಹ್ಲಾದ ರಕ್ಷಕನೇ ಅ.ಪ. ನೀನೇವೆ ಗತಿಯೆಂದು | ಆನೇಕ ವಿಧ ನಿನ್ನಸಾನುರಾಗದಿ ಪೊಗಳ್ವ | ಮಾನುನೀ ಮಣಿಗೇಜ್ಞಾನೋದಯವ ಗೈದು | ಕಾಣಿಸೋ ಸದ್ಗತಿಯಮಾನ ಮಾನ್ಯದ ಹರಿಯೆ | ಆನತೇಷ್ಟದನೇ 1 ಜೀವ ಅಸ್ವಾಂತಂತ್ರ | ದೇವ ನಿಜ ಸ್ವಾತಂತ್ರಈ ವಿಧದ ಸುಜ್ಞಾನ | ಓದಿ ಪಾಲಿಸುತಾ |ಕೇವಲಾನಂದ ಮಯ | ದೇವ ತವ ಸೇವೆಯನುಭಾವ ಭಕ್ತಿಯಲಿಂದ | ಗೈದ ಮನನೀಯೋ2 ನೆರೆಹೊರೆಯ ಜನರೇನು | ಮರಳಿ ಬಹು ಬಾಂಧವರುಹರಿ ನಿನ್ನ ಪರಿವಾರ | ಸರಿಯೆಂಬ ಮತಿಯಾಕರುಣಿಸುತ ತರಳೆಗೇ | ಪರುಷಾರ್ಥ ಸಾಧನದಪರಿಯನರುಹುತ ಪೊರೆಯೊ | ವರಲಕ್ಷ್ಮಿ ಪತಿಯೇ 3 ಸಾಧನ ಸುಜೀವಿಗಳ | ಕಾದು ಬಾಯ್ದೆರೆಯುತಿರೆಮೋದ ಬಡಿಸುವುದು ಚಿತ್ | ಸಾಧು ಜನವಂದ್ಯಾಮೋದ ಮುನಿ ಪಾದಾಬ್ಜ | ಆದರದಿ ವಂದಿಪಳೋಹೇ ದಯಾಂಬುಧೆ ಮನದಿ | ಮೈದೊರೊ ಹರಿಯೇ 4 ಬೋವ ನೀನಾದೇನೀ ವೊಲಿಯಲಿನ್ನೇನು | ಆವುದಾಸಾಧ್ಯವೋಪೂವಿಲ್ಲನಯ್ಯ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಶ್ರೀನಾಥ ವಿಠಲ ಹರಿ | ನೀನೆ ಪೊರೆ ಇವನಾ ಪ ಮಾನನಿಧಿ ಮಧ್ವಾಖ್ಯ | ವಂದಿತ ಸಂಚರಣಾ ಅ.ಪ. ಯೋನಿ ಆನೇಕದಲಿ | ಜನುಮಗಳ ತಾಪೊತ್ತುಮೌನಿ ಜನ ಸಂಯೋಗ | ಸತ್ಸಂಗಗಳ ಪಡೆದೂಧ್ಯಾನ ಸಾಧನಕಾಗಿ | ಮೌನಿರಾಯರ ಸೇವೆಸಾನುರಾಗದಿ ಗೈಯ್ಯೆ | ಶ್ರೀನಾಥ ಒಲಿದೇ 1 ದಾಸ ಸತ್ಪಂಥಾನು | ವಾಸಿಪೆನು ಎಂದೆನುತವಿೂೀಸಲದ ಸನ್ಮನದಿ | ಪ್ರಾರ್ಥಿಸುತ್ತಿಹಗೇಲೇಸು ತೈಜಸನಾಜ್ಞೆ | ಪೋಷಿಸುತ ವಿಠಲನ ಸಸೂಸಿ ಸೇವಿಸಿ ಇತ್ತೆ | ಅಂಕಿತವನಿವಗೇ 2 ಮಾರಾರಿ ಸದ್ವಿನುತ | ತಾರತಮ್ಯವ ತಿಳಿಸಿಮಾರೆರಡು ಭೇಧಗಳ | ಅರಹುತಲಿ ಇವಗೇಪಾರಗಾಣಿಸು ಭವವ | ನೀರೋಜೋದ್ಭವನಯ್ಯಕಾರುಣಿಕ ಶ್ರೀಹರಿಯೆ | ಕಾರುಣ್ಯ ಮೂರ್ತೇ 3 ಸಖನಾಗಿ ಇವನಲ್ಲಿ | ಸುಖ ಕವನ ಪೇಳಿಸುತ ಪ್ರಕಟ ಗೈ ತವರೂಪ | ನಿಕಟ ಹೃದ್ಗುಹದೀವಿಖನಸಾಂಡದ ಓಡೆಯ | ಸಕಲ ಪ್ರೇರಕ ನಿನ್ನಅಕುಟಿಲದೆ ಮನದಿಂದ | ಪ್ರಾರ್ಥಿಸುವೆ ಹರಿಯೇ 4 ಸಿರಿ ಭೂಮಿ ರಮಣನೇಅರಹಲೇನಿಹುದಿನ್ನು | ಸರ್ವಜ್ಞ ಮಾರ್ತೇಕರುಣ ದೃಷ್ಟಿಲಿ ನೋಡಿ | ಪರಿಹರಿಸೊ ದುಷ್ಕರ್ಮಹರಿಯೆ ಗುರು ಗೋವಿಂದ | ವಿಠಲ ಮಾರುತಿಯೆ 5
--------------
ಗುರುಗೋವಿಂದವಿಠಲರು
ಸ್ವಯಂ ಭಾನು ಉದಯವಾದ ನೋಡಿ ದಯಕರುಣಾನಂದದ ಕೃಪೆಮಾಡಿ ಧ್ರುವ ರವಿಕೋಟಿತೇಜನೆ ಬಂದ ಮೂಡಿ ಭವಭ್ರಮದ ಕತ್ತಲ್ಹೋಯಿತೋಡಿ ದೇವದೇವೋತ್ತಮನ ಪ್ರಭೆ ಕೂಡಿ ದಿವಾರಾತ್ರಿಲ್ಲದಾಯಿತು ನೋಡಿ 1 ಜ್ಞಾನ ಗಮ್ಯವಾಗಿದ್ದ ಸುವಸ್ತ ಕಾಣಬಾವ್ಹಾಯಿತು ಮನಸ್ವಸ್ತ ಮನದಿಂದೆವೆ ಆಯಿತು ಮನಸ್ವಸ್ತ ಘನಮಯವೆ ತೋರಿತು ಸಮಸ್ತ 2 ತಾನೆ ತನ್ನಿಂದುದಯವಾದ ಪೂರ್ಣ ನಾನಾವೆಂಬುದ್ಹೋಯಿತನುಮಾನ ಆನೇಕಲಿದೋರಿತು ಇದೆ ಖೂನ ದೀನ ಮಹಿಪತಿ ಸ್ವಹಿತ ಸುಧನ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು