ಪಾಹಿ ರಮಾ ಮನೊಹರ ಪಾಪಿ ಪ
ಪಾಹಿ ಸದಾಗಮವೇದ್ಯ ಸಕಲ ಕ
ಲ್ಯಾಣ ಗುಣಾರ್ಣವ ಲೀಲಾಮಾನುಷ ಅ.ಪ
ಆನೆಯೊಂದು ಕರೆಯಲು ಆ ಕ್ಷಣದಲಿ
ನೀನೇ ಬಂದುದೇಕೆ ದೇವ
ನೀನೇ ಪಡೆದ ಮಕ್ಕಳ ದೈನ್ಯದ ನುಡಿ
ನೀನಲ್ಲದೆ ಕೇಳುವರ್ಯಾರಿರುವರು1
ತುರುವಿನ ಕೆಚ್ಚಲ ಕರು ಗುದ್ದಿದರದು
ಕರೆಯದೇ ಕ್ಷೀರವನು ದೇವ
ಮರೆತು ಎನ್ನ ಅಪರಾಧಗಳೆಲ್ಲವ
ಮರೆಯದಿರೆಲೊ ಎನ್ನಯ ಬಾಂಧವ್ಯವ 2
ಅತ್ತು ಕರೆದು ಔತಣ ನೀಡಿದ ಪರಿ
ನಿತ್ಯ ಸೇವೆಯಾಯ್ತೋ ಕೃಷ್ಣ
ನಿತ್ಯ ಪೂರ್ಣ ಕರುಣಾಮಯ ಕರುಣಿಸೊ
ಚಿತ್ತ ಪ್ರಸನ್ನತೆ ಸಾರ್ಥಕ ಜೀವನ 3