ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಾರಾಯಣ ಹರಿ ನಾಮವ ಭಜಿಪಗೆ ನರಕದ ಭಯವುಂಟೆ ನಾರದ ಸನಕ ಸನಂದನ ಸುರನರ ಪಾಲಿತ ಕರುಣಾಕರನರಹರಿ ಎಂದು ಪ ಖಗರಾಜಗಳುಕದ ಉರಗನುಂಟೆ ದೊಡ್ಡ ಮೃಗರಾಜ ಗಳುಕದ ಆನೆಯುಂಟೆ ನಿತ್ಯ ಜಗದುದರನೆ ಜಗದೊಡೆಯ ಜಾಹ್ನವಿಪಿತ ತ್ರಿಗುಣ ನಿರ್ಗುಣನೆಂದು1 ತ್ರಯಂಬಕ ನುರಿಗಣ್ಣ ಲುಳಿದವರುಂಟೆ ಬಲಿಬಂಧನ ನರಹರಿ ಎಂದು 2 ಕುಳಿಶಕಳುಕದ ಪರ್ವತವುಂಟೆ ಚಲುವ ನಳಿನ ಮಿತ್ರನ ಮುಂದೆ ತಮವುಂಟೆ ಕಾಮ ಚೆಲುವ ಜಲಜಮಿತ್ರ ಕುಲಲಲಾಮನೆ ಎಂದು 3 ಹರಿಯೆ ರಕ್ಷಿಸಲು ಕೊಂದವರುಂಟೆ ಮನ ಮುರಿದು ಕೊಂದರೆ ಕಾವವರುಂಟೆ ಮುರಹರ ನಾರಾಯಣ ನರಹರಿ ಕರಿವರದ ಪಾಲಿತ ಸುರನರರ ಸೇವಿತನೆಂದು 4 ಹುತಾಶನನಿಗಳುಕದ ಕಾನನವುಂಟೆ ವನರುಹಾಂಬಕ ವಾಯುತನಯ ಕೋಣೆಯ ಲಕ್ಷ್ಮಿರಮಣ ಸನಕ ಸುತ ಚಿನುಮಯಾತ್ಮಕನೆಂದು 5
--------------
ಕವಿ ಪರಮದೇವದಾಸರು
ನೋಡುವಾ ಬನ್ನಿರೆ ರಂಗಯ್ಯನ ನೋಡುವಾ ಬನ್ನಿರೇ ಪ. ಬೇಡಿಕೊಳ್ಳುವ ನಾವು ಅ.ಪ. ಕುಂಭಮಾಸದಲಿ ಭಕ್ತರು ಬಿಟ್ಟಾನಂದಮಂಟಪದಿನಿಂದು ಪೂಜೆ ಗೊಂ[ಬ] ಹರುಷದಿ ಮಂದಹಾಸದಿ ಬಂದ ಶ್ರೀರಂಗನ 1 ಹಂಸ ಯಾಳಿ ಸಿಂಹ ಆನೆಯು ಮೊದಲಾದ ಗರುಡ ಹನುಮ ಕಲ್ಪ ವೃಕ್ಷವು ಸರ್ಪವಾಹನವೇರಿ ಅರ್ಥಿಯಿಂದಲೆ ಬರುವ ಶ್ರೀರಂಗನ 2 ಶುದ್ಧದಶಮಿಯಲಿ ರಂಗಯ್ಯ ಮುದ್ದು ಸತಿಯರ ಒಡಗೊಂಡು ಅ ಲ್ಲಿದ್ದ ಮಂಟಪದಲಿ ಹರುಷದೀ ತಾನಿ[ದ್ದ] ಶ್ರೀರಂಗನ 3 ತೆಪ್ಪಮಂಟಪವ ಭಕ್ತರೆಲ್ಲ ವಿಸ್ತಾರದಲಿ ಕಟ್ಟಿ ಪತ್ನಿಸಹಿತಲೆ ತೆಪ್ಪವ ಹತ್ತಿ ಸುತ್ತಿಸುತ್ತಿ ಮೂರುಬಾರಿ ಬರುವ [ಶ್ರೀರಂಗನ] 4 ಮಧ್ಯಮಂಟಪದಿ ತಾನಿದ್ದು ಭಕ್ತರಿತ್ತ [ಸವಿಯಾದ] ಕ್ಷೀರವು ಉದ್ದಿನವಡೆ ಹುಗ್ಗಿ ಮೆದ್ದು ಬರುವ ಶ್ರೀಮುದ್ದುರಂಗನ 5 ಪುಷ್ಪಬಾಣಂಗಳು ಸುತ್ತಿಬಿಡುವ ಚಕ್ರಬಾಣಂಗಳು ನಕ್ಷತ್ರಬಾಣಂಗಳ ಲಕ್ಷ್ಮಿಯೆದುರಲರ್ತಿಯಿಂದಲೆ ನೋಡಿ ನಿಂದ ಶ್ರೀರಂಗನ 6 ತಾ ಕರುಣದಿಂದಲೆ ತೀರ್ಥಸ್ನಾನವನಿತ್ತು ಬರುವ ವೆಂಕಟರಂಗನ 7
--------------
ಯದುಗಿರಿಯಮ್ಮ
ಯೋಗಿ ಎಂಬ ಆನೆ ಬಂದಿತಯ್ಯಆನೆ ಬಂದಿತು ಪ್ರಪಂಚ ಪೇಟೆಯತಾನೆ ಕೀಳುತ ತಳಪಟ ಮಾಡುತ ಪ ಪಾಷಗಳೆಂದೆಂಬ ಸರಪಳಿ ಹರಿದುಈಷಣಗಳು ಎಂಬ ಸಂಕೋಲೆ ಮುರಿದುದ್ವೇಷವೆನಿಪ ಗಾಡಿಕಾರರನರೆದುಕ್ಲೇಷವೆನಿಪ ಕಾವಲವರ ಜಡಿದು 1 ದಶವಾಯುಗಳೆಂಬ ದನಗಳನೋಡಿಸಿವ್ಯಸನ ಕುದುರೆಗಳ ಸೀಳಿ ಸೀಳಿಕ್ಕಿಹಸಿವು ತೃಷೆಗಳನು ಕಾಲೊಳಿಕ್ಕಿಕಸೆಕಸೆ ಅಂಗಡಿಗಳನು ತೂರಿಕ್ಕಿ2 ಬಹುಮತಗಳು ಎಂಬ ಮನೆಯನೆ ಕೆಡಹಿಇಹಪರ ವಾಸನೆ ಕೊಟ್ಟಿಗೆ ಕೊಡಹಿಮಹಾ ಅಭಿಮಾನದ ನಾಯಿಗಳ ಮುಡುಹಿಬಹು ಕಲ್ಪನೆಯ ಕುರಿ ಕೋಳಿಗಳ ಉಡುಹಿ3 ಬೋಧ ಲಹರಿಯಲಿ ತೂಗುತಜ್ಞಾನ ಸೊಕ್ಕಿನಲಿ ಕೆಕ್ಕರಿಸಿ ನೋಡುತ ತಾನೆ ತಾನಾಗಿ ತನ್ನ ಮರೆಯುತ 4 ಬೆಳಗುವ ಸುಷುಮ್ನ ಬಾಜಾರವಿಡಿದುಗೆಲುವಿನಲಿ ಭ್ರೂಮಧ್ಯ ಜಾಡಿನಲಿನೆಡೆದುತಿಳಿಗೊಳ ಸಹಸ್ರಾರದ ನೀರ ಕುಡಿದುಬಲು ಚಿದಾನಂದವೆಂಬ ಆನೆಯು ನಡೆದು 5
--------------
ಚಿದಾನಂದ ಅವಧೂತರು