ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮೀನಾಕ್ಷಿದೇವಿ ಮಾಮಮ ಮಧುರ ಪ ಸದಾ ನಿನ್ನ ಆನತರಿಗೆ ಡಿಂಗರಿಗನು ನಾನಮ್ಮ ಅ.ಪ ಬಹು ಜನ್ಮದಿಂದ ಮಾಡಿದ ಪುಣ್ಯ ವಿಹಿತ ಫಲದಿಂದ ತವಪದ ಪಂಕೇ ರುಹವ ಕಂಡೆನು ಇಂದಿಗಹಹ ಧನ್ಯನು ನಾನು 1 ಕಲುಷವಿರಹಿತೆ ಕರಪಿಡಿದೀ ಜಲಜಾಕ್ಷನಡಿದಾವರೆಗಳ ತೋರಮ್ಮ 2 ದಾಸರ ದಾಸ್ಯವನು ಕರುಣಿಸಿ ಲೇಸುಪಾಲಿಸೆ ಸುಂದರೇಶನರ್ಧಾಂಗಿಯೆ 3 ಹಿರಿಯರಿಗೆಲ್ಲಾ ವರಗಳ ಕೊಟ್ಟು ಪೊರೆದುದನೆಲ್ಲ ಕೇಳಿ ನಿನ್ನ ಚರಣವ ನಂಬಿದೆ ಸ್ಥಿರ ಮನವನು ಕೊಡೆ 4 ತಾಮಸನರನು ಬಾಲಕನೆಂದು ಪ್ರೇಮದಿ ನೋಡೆ ಗುರುರಾಮ ವಿಠಲನ ತಂಗಿ5
--------------
ಗುರುರಾಮವಿಠಲ
ಹಸೆಗೆ ಬಾರೈರಾಮಾ ಪ ಬಿಸಜಾಪ್ತ ವಂಶಲಲಾಮ ಅ.ಪ ಮಾನಸ ಪೀಠಕೆ ಜಾನಕಿದೇವಿ ಸಹಿತಾ ಆನತರಿಗೆ ಸೌಖ್ಯವ ಬೀರುತಲಿ 1 ಬ್ರಹ್ಮಮಹೇಶ್ವರ ಸುಮ್ಮಾನದಿ ಕೈಕೊಡಲು ಧರ್ಮಸ್ಥಾಪಿಸೆ ಧರಣಿ ಮಂಡಲದಿ 2 ಹನುಮಂತ ಜಾಂಬವ ಇನತನಯಾಂಗದಾದಿ ಘನಕಪಿವೀರರು ಕಾದುಕೊಂಡಿರುವರು 3 ನೀಮನವಲಿದನುಗ್ರಹಿಸಿ ಬೇಗದಿ4 ಅಂತಃಕರುಣಾಸಿದ್ಧಿಯಂ ತವಕದಿ ಕೊಟ್ಟು ಅಂತರಾತ್ಮಕ ಗುರುರಾಮ ವಿಠಲನೆ 5
--------------
ಗುರುರಾಮವಿಠಲ