ಬನ್ನಿರಿ ಬನ್ನಿರಿ ಪುರಜನರೆಲ್ಲರು
ಕೃಷ್ಣನ ದರುಶನಕೆ ಪೋಗುವ ಪ
ಕೃಷ್ಣನು ಜನಿಸಿದ ಈ ದಿನ
ಇಷ್ಟವ ಪ್ರಾರ್ಥಿಸಲು ಪೋಗುವಅ.ಪ
ದುಂದುಭಿ ನಾದವು ಕೇಳುತಿದೆ ಬಲು
ಮಂದಿಯ ತಂಡವು ಹೋಗುತಿದೆ
ಕಂದನ ರೂಪದಿ ಬಂದಿಹ ಆನಕ
ದುಂದುಭಿ ಕುವರನ ಸಂಭ್ರಮ ನೋಡಲು 1
ಪೇಳಿರಿ ನಿಮ್ಮಯ ಕೊರತೆಗಳೆÀಲ್ಲವ
ಕೇಳಿರಿ ವರಗಳ ಧೈರ್ಯದಲಿ
ಬಾಲನು ಸುಲಭದಿ ಒಲಿಯುವ ಒಳ್ಳೆಯ
ಕಾಲವಿದೆಲ್ಲರಿಗೆ ಬೇಗನೆ 2
ಜನುಮ ಜನುಮಗಳ ಪುಣ್ಯದ ರಾಶಿಯು
ಜನುಮಾಷ್ಟಮಿ ದಿನದಿ ಲೋಕಕೆ
ಜನುಮಾದ್ಯಷ್ಟಕದಾತನ ದರುಶನ
ಮನಕೆ ಪ್ರಸನ್ನತೆ ಕೊಡುವುದು ಪೋಗುವ 3