ಒಟ್ಟು 5 ಕಡೆಗಳಲ್ಲಿ , 2 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆನಂದಾದ್ರಿ ಕ್ಷೇತ್ರದಲ್ಲಿ ಆನಂದವ ಕಂಡೆ ಪ. ಆನಂದ ಕಂದನ ಗುಣಗಳ ಆನಂದನಿಲಯರು ಪೇಳಲು ಅ.ಪ. ಆನಂದವಾಯಿತು ಮನಕೆ ಆನಂದಗೋಕುಲದೊಡೆಯನು ಆನಂದತೀರ್ಥರ ಕರದಲಿ ಆನಂದ ಸೇವೆಯ ಕೊಳುತಿರೆ 1 ಆನಂದಾದ್ರಿ ಶಿಖರದಲ್ಲಿ ಸ್ವಾನಂದ ಸೂಚನೆ ತೋರಲು ಏನೆಂದು ಬಣ್ಣಿಸಲಿನ್ನು ಸ್ವಾನಂದರು ಶ್ರೀ ಗುರು ದಯದಿ 2 ಆನೆಂದರೆ ಶಿಕ್ಷಿಸುವನು ಹರಿ ನೀನೆಂದರೆ ರಕ್ಷಿಸುವನು ದೊರಿ ಆನಂದವನ ತರುವಂತೆ ಆನಂದಭೀಷ್ಟವ ಕೊಡುವ 3 ಆನಂದಜ್ಞಾನಪೂರ್ಣ ಆನಂದ ನಿತ್ಯರೂಪ ಆನಂದ ಗುಣಪೂರ್ಣ ನಿ- ತ್ಯಾನಂದ ಭಕ್ತರಿಗೀವ4 ಗೋಪಾಲಕೃಷ್ಣವಿಠಲ ನೀ ಪರಮದೈವವೆನಲು ತಾಪವÀ ಭವಹರಿಸಿ ಕಾಪಾಡೊ ಹರಿಯ ಲೀಲೆ 5
--------------
ಅಂಬಾಬಾಯಿ
ಆನಂದಾದ್ರಿ ವಾಸ | ವಿಠಲ ಪೊರೆ ಇವನಾ ಪ ಮಾನಮೇಯ ಜ್ಞಾನ | ಸಾನುಕೂಲಿಸಿ ಇವಗೆನೀನಾಗಿ ಪೊರೆಯೊ ಹರಿ | ಕೋನೇರಿವಾಸಾ ಅ.ಪ. ಚಿತ್ರ ಚಾರಿತ್ರ | ಶುಭಗಾತ್ರನೇ ಶತಪತ್ರನೇತ್ರಕರವಾದ ದ್ವಂದ್ವ | ಸೂತ್ರಾಂತರಾತ್ಮ |ಮಿತ್ರನಾನುಗ್ರಹಕೆ | ಪಾತ್ರನ ಸಲಹೊ ಮಾಕಳತ್ರನೇ ನಿನ್ನ ಸುಪ | ವಿತ್ರ ಪದ ನಮಿಪೇ 1 ಕರುಣವೆಂತುಟೊ ನಿನಗೆ | ಶರಣಜನ ವತ್ಸಲನೇಕರೆದೊಯ್ದು ಸ್ವಪ್ನದಲಿ | ಹರ ಗಿರಿಜೆ ತೋರೀ |ಮರಳಿ ಬ್ರಹ್ಮನ ಲೋಕ | ದರುಶನಾನಂದದಲಿಕರೆದೊಯ್ದು ಕರುಣಾಳು | ಸುರಸೇವ್ಯ ಬದರಿಗೆ 2 ದಶಮತಿಗೆ ಬೋಧಿಸುವ | ವ್ಯಾಸದರ್ಶನ ಭಾವಿದಶಮತಿಯ ಸಹವಿರುವ | ವ್ಯಾಸ ಭಕ್ತನ್ನಾ |ಹಸನಾಗಿ ತೋರಿ ನೀ | ವಸುಮತಿಗೆ ಕರೆತಂದುಬೆಸಸಿದೆಯಾ ಫಲದೈವ | ದರ್ಶನಕೆ ಇವನಾ 3 ಬದ್ಧನಾದರು ಇಹದಿ | ಶುದ್ಧ ಸಂಸ್ಕøತನಿಹನುಮಧ್ವಮತ ದಾಸತ್ವ | ಶ್ರದ್ಧೆಯುಳ್ಳವನೇಬುದ್ಧಿಯಲಿ ಎನಗೆ ಉ | ದ್ಬುದ್ಭವನೆ ಮಾಡ್ದ ಪರಿತಿದ್ದಿ ಅಂಕಿತವಿತ್ತು | ಬುದ್ಧಿ ಪೇಳಿಹೆನೋ 4 ಸಂಚಿತ ಕರ್ಮ | ತೀವ್ರದಲಿ ದಹಿಸೇಗೋವುಗಳ ಪಾಲ ಗುರು | ಗೋವಿಂದ ವಿಠ್ಠಲನೆಭಾವದಲಿ ಬಿನ್ನವಿಪೆ | ನೀ ವೊಲಿದು ಸಲಿಸೋ 5
--------------
ಗುರುಗೋವಿಂದವಿಠಲರು
ಆನಂದಾದ್ರಿವಿಠಲ | ನೀನೇ ಪೊರೆ ಇವಳಾ ಪ ಜ್ಞಾನಿಜನವಂದ್ಯ ಹರಿ | ಶ್ರೀನಿವಾಸಾಖ್ಯ ಅ.ಪ. ತರಳೆ ಬಹುನೊಂದಿಹಳೊ | ಕರುಣಾ ಮಾಳ್ಪುದು ದೇವದುರಿತವನ ದಾವಾಗ್ನಿ | ಶರಣಜನರೊಡೆಯಾ | ಮರುತ ಮತದಲ್ಲಿರುತೆ | ನೆರೆ ನಂಬಿಬಂದಿಹಳೊಕರುಣದಿಂ ಕೈಗೊಟ್ಟು | ಪರಿಪಾಲಿಸಿವಳಾ 1 ಅನ್ಯದೇವರ ಪೂಜೆ | ಇನ್ನಾದರು ಬಿಡಿಸಿನನ್ನೆಯಿಂ ನಿನ್ನನ್ನೆ | ಪೂಜಿಸುವ ಭಾಗ್ಯಾಇನ್ನಾದರೂ ಕೊಟ್ಟು | ಪನ್ನಂಗಶಯನಹರಿಮನ್ನಿಸೊ ಇವಳ ಹರಿ | ಅನ್ನಂತ ಮಹಿಮಾ 2 ಸಾಧುಜನ ಸದ್ವಂದ್ಯ | ಸತ್ಸಂಗವನೆ ಕೊಟ್ಟುಮಾಧವನೆ ನೀನಾಗಿ | ಕಾದುಕೊ ಹರಿಯೇಭೇಧಮತ ತತ್ವಗಳ | ಬೋಧಿಸುತ ಇವಳೀಗೆಸಾಧನವ ಗೈಸುವುದೋ | ಬಾದರಾಯಣನೇ 3 ಪತಿಸುತರು ಹಿತರಲ್ಲಿ | ವ್ಯಾಪ್ತ ನೀನೆಂಬಂಥಾಮತಿಯನೇ ಕೊಟ್ಟು ಸ | ದ್ಗತಿಯನೆ ಕರುಣಿಸೋ |ಸತತ ನಿನ್ನಯ ನಾಮ | ರತಿಯನೆ ಕರುಣಿಸುತಮತಿಮತಾಂವರರಂಘ್ರಿ | ಭಕ್ತಿಯನೆ ಈಯೋ 4 ಭಾವಜನಯ್ಯ ಎನೆಓವಿ ಬಿನ್ನವಿಪೆ ಹರಿ | ಸಲಿಸುವುದು ಇವನೇವೆಗುರ್ವಂತ ರಾತ್ಮಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ವಿಜಯ ಗುರು ತವಪಾದರಜವ ಕರುಣಿಸಿ ಎನಗೆ ಭುಜಗಶಯನನ ಧ್ಯಾನ ಭಜನೆ ನೀಡುವುದು ಪ. ತವ ಶಿಷ್ಯವಂಶ ಸಂಜಾತಳೆನ್ನುತಲಿ ಬಹು ತವಕದಲಿ ಕರುಣಾರ್ದ ದೃಷ್ಟಿಯಿಂದ ತವ ಸೇವೆ ಎನಗಿತ್ತು ತವ ಕೀರ್ತನೆಯ ನುಡಿಸಿ ಮೂರ್ತಿ ತೋರೆನ್ನ ಭವತಾಪ ಹರಿಸಯ್ಯ 1 ನಿನ್ನ ಮಹಿಮೆಯ ಗುಟ್ಟು ವರ್ಣಿಪರು ಯಾರಿನ್ನು ನಿನ್ನ ಚರ್ಯೆಯ ಚರಿತೆ ಬರೆದವರ್ಯಾರೊ ನಿನ್ನ ನಿಜ ಸಂಕಲ್ಪ ಇನ್ನು ಅರಿಯುವರುಂಟೆ ಬನ್ನ ಭವ ಉಂಟೆ 2 ಆ ದೇವಮುನಿ ಆಜ್ಞೆ ಮೋದದಲಿ ಸ್ವೀಕರಿಸಿ ಪಾದನ್ಯೂನತೆ ಕವನ ಪೂರ್ಣಗೊಳಿಸಿ ವೇದಶಾಸ್ತ್ರಗಳರ್ಥ ಸುಲಭದಲಿ ತಿಳಿಸುತಲಿ ಹಾದಿ ತೋರಿದೆ ಶಿಷ್ಯರಾದ ಸುಜನರಿಗೆ 3 ಸತ್ಕರ್ಮ ಫಲಗಳನು ನಿತ್ಯದೊಳಗರ್ಪಿಸಲು ಉತ್ತಮನು ಆರೆಂಬ ಚಿತ್ತದಳಲ ಮುಕ್ತಿಯೋಗ್ಯರಿಗೆ ಬಹು ಯುಕ್ತಿಯಿಂದಲಿ ತೋರಿ ಉತ್ತಮನು ಹರಿಯೆಂದು ಶಕ್ತಿಯಿಂ ಸ್ಥಾಪಿಸಿದ 4 ವೈಕುಂಠಪುರದೊಳಗೆ ಶ್ರೀ ಕರನ ವಕ್ಷಕ್ಕೆ ಸೋಕಿಸಿದೆ ಚರಣವನು ಜೋಕೆಯಿಂದ ಈ ಕಾರ್ಯಕಾರಣವ ನಾ ಕೇಳಿ ನುಡಿವಂಥ ವಾಕು ಲಾಲಿಸುತ ವಿವೇಕ ಮತಿ ಕರುಣಿಪುದು 5 ಆ ಕಮಲನಾಭನಾ ಹೃದಯ ಕರುಣಾಮೃತವು ಸೋಕಿ ತುಂಬಿಹುದು ತವ ಚರಣ ಕಮಲದಲಿ ನಾ ಕೇಳ ಬಂದೆನಾ ಕರುಣಾಮೃತದ ಕಣವ ಯಾಕೆ ಮರೆಮುಚ್ಚಿನ್ನು ನೀ ಕೊಡೈ ತವಕದಲಿ 6 ಪಾದ ರೂಢಿಗೊಡೆಯಗೆ ಲಕುಮಿ ಓಡಿದಳು ಕರವೀರಪುರಕೆ ಸ್ವಾಮಿ ಬೇಡಾಗೆ ವೈಕುಂಠ ನೋಡಿ ಆನಂದಾದ್ರಿ ಮಾಡಿದನು ಮಂದಿರವ ಕೂಡಿ ಪದ್ಮಿನಿಯ 7 ನೋಡಿ ವೈಕುಂಠದೊಳು ನಾಡಿಗೊಡೆಯನ ಚರ್ಯ ರೂಢಿಯೊಳು ಜನಿಸಿ ಭೂಸುರವಂಶದಿ ದುರಿತ ಈಡಾಡಿ ಹರಿದಾಸ್ಯವನು ಬೇಡಿ ಬಯಸುತ ಪೊಂದಿ ನಾಡಿನೊಳು ಮೆರೆದೆ 8 ಪ್ರತಿವರ್ಷ ಬಿಡದೆ ತಿರುಪತಿ ಯಾತ್ರೆ ಭಕ್ತಿಯಲಿ ಪತಿತಪಾವನನ ಓಲೈಸಿ ಮೆರೆದೆ ಕ್ಷಿತಿಯಕ್ಷೇತ್ರ ಅಪ್ರತಿಮಹಿಮ ಸಂಚರಿಸಿ ಕ್ಷಿತಿಗೆ ತೋರಿದೆ ನಿನ್ನ ಮಹಿಮೆ ಜಾಲಗಳ 9 ಅಂಕಿತವದಲ್ಲದೆ ದಾಸತ್ವ ಸಿದ್ಧಿಸದು ಕಿಂಕರಗೆ ಅಂಕಿತವೆ ಕುರುಹು ಎಂದು ಅಂಕಿತವ ಪಡೆದು ಚಕ್ರಾಂಕಿತನ ಗುಣ ಮಹಿಮೆ ಶಂಕಿಸದೆ ಪೇಳ್ದೆ ತವ ಕಿಂಕರೋದ್ಧಾರಕನೆ 10 ನಿನ್ನ ಮಹಿಮಾದಿಗಳ ವರ್ಣಿಸಲು ಎನ್ನಳವೆ ಚನ್ನ ಗುರು ವಿಜಯವಿಠ್ಠಲನ ಪದಕಮಲ ಚನ್ನಾಗಿ ಕಂಡು ಹೃನ್ಮಂದಿರದಿ ಸತತದಲಿ ತನ್ಮಂತ್ರ ಕಿರಣವೆಮ್ಮಲ್ಲಿ ಬೀರಿದ ಕರುಣಿ 11 ವಿಕ್ರಮ ಕಾರ್ತೀಕ ಶುದ್ಧ ದಶವಿೂ ದಿವ್ಯ ಶುಕ್ರ ನಾಮರು ವಾರ ಶುಭದಿನದಿ ಇಂದು ಅಕ್ಕರದಿ ಕರಸಿಲ್ಲಿ ಉಕ್ಕಿಸಿದೆ ತವ ಸ್ತೋತ್ರ ಮಕ್ಕಳಂದದಿ ಪೊರೆವ ಅಕ್ಕರೆಯು ಉಂಟೊ 12 ಮಧ್ವರಾಯರ ಕುಲದಿ ಉದ್ಭವಿಸಿದಂಥ ಈ ಶುದ್ಧ ವೈಷ್ಣವ ಕುಲದಿ ಜನಿಸಿ ಬಂದೆ ಶುದ್ಧ ದಾಸತ್ವದ ಮುದ್ರಾಂಕಿತದ ರತ್ನ ಪಾದ ಕಂಡೆ 13 ಪಾಪಿ ಜನರುದ್ಧರಿಪ ಪಾವನಗಾತ್ರನೆ ಆ ಪಯೋಜಾಸನರ ತರತಮ್ಯವ ಸ್ಥಾಪಿಸಿದ ಮಹಿಮನೆ ಸದ್ಗುಣಾಂಬುಧಿ ನಿಲಯ ಗೋಪಾಲಕೃಷ್ಣವಿಠ್ಠಲನ ಪದಭೃಂಗ 14
--------------
ಅಂಬಾಬಾಯಿ