ಒಟ್ಟು 6 ಕಡೆಗಳಲ್ಲಿ , 5 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಧ್ಯಾಯ ಏಳು ಜ್ಞಾಪಿತೋ ಬಕುಲಾವಾಕ್ಯಾಚ್ಛುಕ ಜೀವಾನು ಮೋದಿತಃ ಭೂಪೇನ ನಿಶ್ಚಿತೋ ಮಾಯಾದ್ವಿಪಹಾ ಯೋವರೋ ಹರಿಃ ವಚನ ಅರಸಿ ತನ್ನ ತೊಡೆಯಲಿರುವ ಪರಿಯು ಮಾತಾಡಿದಳು ಕೊರವಿ ಮಾತಿನರಗಿಳಿಯೆ ನೀನು ಅರಸಿ ಮಾತಿಗೆ ಬಾಯ ತೆರೆದು ಮಾತಾಡದಲೆ ಪರಮಗಂಭೀರ ಳಾಗಿರುವ ಪದ್ಮಾವತಿಯ ಕರಪಿಡಿದು ಏಕಾಂತ ದಲಿ ಕೇಳಿದಾಗ ಪರಮ ಅಂತ:ಕರಣೆ ಪರವಶದಿ ಆಗ 1 ರಾಗ:ಭೈರವಿ ಅಟತಾಳ ನಾ ಕೊಡಲೋಪ ಪ್ರೀತಿಯ ಮಗಳೆ ನಿನ್ನ ಮಾತಿಗೆ ಹೊರ್ತಿಲ್ಲ ಖ್ಯಾತೀಲೆ ವೇಂಕಟನಾಥ ನೆಂತೆನಿಪಗೆ ಅ.ಪ ಅರಸಗೆ ಪೇಳಲ್ಯೊ ನಾ ಬಲ್ಲಂಥ ಹಿರಿಯರ ಕೇಳಲ್ಯೊ ಸರಿ ಬಂದವರ ನೋಡಿಕಳಹಲ್ಯೊ 1 ಮಂದಿಯ ಕೇಳಲ್ಯೋ ನಾ ಕೊಡಲಾರದೆ ಜರಿಯಲÉ್ಯೂೀ 2 ಮಿತ್ರೇರ ಸಂಗತಿಯೋ ಅದು ಮಿಥ್ಯವೋ 3 ವಚನ ಕಾಮಜನಕರ ಸ್ಮರಿಸುತಲೆ ಜನರಮುಂದ್ಹೇಳುವದಕನು ಬಂದದÀು ತಾನೆ ಅನು ಅಪಹಾಸ್ಯವನು ಒಬ್ಬರನೋವು ತನಗೆಂಬುವದÀು ಹೇಳುವದಕನುಮಾನವ್ಯಾಕೆ 1 ರಾಗ:ನೀಲಾಂಬರಿ ಭಿಲಂದಿತಾಳ ಪತಿ ಅವನ ಸರಿಯಿಲ್ಲವನಿಯೊಳಗ ಅವನೇ ಜಗಜ್ಜೀವನನೆ ಪ ಮಂಜುಳಮಾತಿಗೆ ರಂಜ ಪಾದ ಕಂಜಕೆ ಅರ್ಪಿಸು ಅಂಜುವದ್ಯಾಕಮ್ಮ ಅಂಜನಾದ್ರೀಶಗೆ ಅಂಜಲುಬೇಡ ನಿರಂಜನೆ ಭಯಭಂಜನೆ 1 ಹೂವಿನ ತೋಟಕೆ ಪೋಗಲು ಚಿತ್ತಪಲ್ಲಟವಾಗಿ ನೀಟಾಗಿ ನಿರ್ಮಿಸಿ ಆಟವಮಾಡುವ ಕಪಟ ನಾಟಕನೆ 2 ಭೂಷಣ ಉರದಲ್ಲಿ ಶ್ರೀವತ್ಸವು ಚಲ್ವಿಕೆ ನೋಡಲು ಎಲ್ಲ ಜ್ಯೋತಿಗಳವನಲ್ಲಿ ನಿವಾಳಿಸಿ ಚಲ್ಲವುದು ಅಲ್ಲೇನಿಲ್ಲೆಂದು ಮತ್ತೆಲ್ಲಿ ಹಂಬಲಿಸದೆ ಅಲ್ಯವಗರ್ಪಿಸು ಆಹ್ಲಾದದಿಂದಲ್ಲೇ ಬಲ್ಲಿದನಾಂತಾದ್ರಿಯಲ್ಲಿರುವ ಎನ್ನೊಲ್ಲಭನೆ ಪ್ರಾಣದೊಲ್ಲಭನೆ 3 ವಚನ ಮಗಳಿಗÉಂದಳು ನಾ ನಿನ್ನ ಜಗ ಗಗನ ರಾಜನ ರಾಣಿ ಸುಗುಣ ಬಕುಲಾ ಬರುವರ ಕೂಡಿ ಬರುವಳಾ ಅಗಸಿಯೊಳಗೆ 1 ಹೊರಳಿ ನೋಡಿದ ಬರುವಳಿವಳ್ಯಾರೆಂದು ಕೊರವಿ ಕರೆಸಿದಳು ಬೇಗ ಸರಸಿ- ಎಂದು ಸುರಿಸಿ ಅಮೃತದ ವಾಣಿ ಬೆರೆಸಿ ಸ್ನೇಹವ ಮತ್ತೆ ತರಿಸಿ ರತ್ನದಪೀಠ ಇರಿಸಿ ಕೂಡೆಂದು ಕುಳ್ಳಿರಿಸಿ ಕೇಳಿದಳಾಗ ಹರುಷದಿಂದಾ2 ರಾಗ:ಗೌರಿ ಆಟತಾಳ ಲಲನೆ ನೀ ದಾರಮ್ಮ ಹೆಸರೇನು? ಶೇಷಾ ಚಲವಾಸಿ ಬಕುಲಾವತಿ ನಾನು 1 ಎಲ್ಲಿಗ್ಹೋಗುವೆ ಮುಂದೆ ನೀನು? ತಿಳಿ ಇಲ್ಲಿಗೆ ಬಂದೆ ನೇಮಿಸಿ ನಾನು 2 ನಿನ್ನ ಮನದ ಕಾರ್ಯಗಳೇನು? ಮುಖ್ಯ ಕನ್ಯಾರ್ಥಿಯಾಗಿ ಬಂದೆನು ನಾನು 3 ದಾವಾತ ವರನಾಗಿರುವನು?ದಿವ್ಯ ದೇವ ನೆಂದೆನಿಸುವ ತಿಳಿ ನೀನು4 ಕೃಷ್ಣವೇಣಿಯೆ ಅವನ್ಹೆಸರೇನು? ಶ್ರೀ ಕೃಷ್ಣನೆಂದೆನಿಸುವ ತಿಳಿ ನೀನು5 ತಾಯಿ ತಂದೆಗಳೆಂಬುವರಾರು?ತಿಳಿ ದೇವಕಿ ವಸುದೇವರು ಅವರು 6 ಚಂದಾಗಿ ಕುಲದಾವದ್ಹೇಳಮ್ಮ ಶುಭ ಚಂದ್ರಮನ ಕುಲಕೇಳಮ್ಮ 7 ಶ್ರೇಷ್ಠವಾಗಿಹ ಗೋತ್ರದಾವದು?ವಾ ಶಿಷ್ಠ ನಾಮಕವಾಗಿರುತಿಹುದು 8 ನಕ್ಷತ್ರ ಪೇಳು ಪನ್ನಗವೇಣಿ ಶ್ರವಣ ನಕ್ಷತ್ರ ತಿಳಿ ರಾಜನ ರಾಣಿ 9 ವಿದ್ಯೆಯಿಂದ ಹ್ಯಾಂಗಿರುವ? ಬ್ರಹ್ಮ ವಿದ್ಯೆಯಿಂದಲಿ ಗಮ್ಯ ಎನಿಸುವ 10 ಧನವಂತನೇನಮ್ಮ ಗುಣನಿಧಿಯೇ? ಬಹು ಧನವಂತರಾಗುವರವನಿಂದೆ 11 ಕಣ್ಣುಮೂಗಿಲೆ ಹ್ಯಾಗಿರುವವ?ಕೋಟಿ ಮನ್ಮಥ ಲಾವಣ್ಯ ಎನಿಸುವ 12 ಹೆಣ್ಣಿನ ಮನಸೀಗೆ ಬಂದೀತೇ? ಅವನ ಕಣ್ಣಿಲಿ ಕಂಡರೆ ತಿಳಿದೀತೆ 13 ಅದಾವು ದಿವಸೆಷ್ಟು ಪೇಳಮ್ಮಾ?ಇಪ್ಪ- ತ್ತೈದರ ಮೇಲಿಲ್ಲ ತಿಳಿಯಮ್ಮ 14 ಚಿಕ್ಕಂದು ಮದುವೆ ಇಲ್ಯಾಕಮ್ಮ?ಅವನ ತಕ್ಕ ಹೆಂಡತಿ ಇರುತಿಹಳಮ್ಮ 15 ಮುಖ್ಯಳಿರಲು ಮದುವ್ಯಾಕಮ್ಮ?ತಿಳಿ ಮಕ್ಕಳಿಲ್ಲದ ಕಾರಣವಮ್ಮ 16 ನೇಮದಿಂದಿರುತಿಹ ತಾನೆಲ್ಲಿ ತಿಳಿ ಶ್ರೀಮದನಂತಾದ್ರಿಯಲಿ 17 ರಾಗ:ಯರಕಾಲ ಕಾಂಬೋದಿ ಭಿಲಂದಿತಾಳ ಕಾಂತನ ಮುಂದ್ಹೇಳಿದಳೇ ಅಂತರಂಗದೊಳು ಚಿಂತೆ ಮಾಡಲು ಬೇಡ ಕೇಳು ಸಂತೋಷದ ಸುದ್ದಿ 1 ಕೊರವಿ ಬಂದಿದ್ದಳು ಮರಗುತ ಮಲಗಿದ ಕೊರವಿ ಕಾಲ್ಗುಣದಿ 2 ಪರಿ ಕೊರವಿ ನಾಡ ಸಖಿಯರ ಕೂಡಿ ಪ್ರೌಢ ಪುರುಷನ 3 ಪ್ರಾಕೃತ ಪುರುಷನಲ್ಲ ಜ್ವರಮಗಳಿಗೆ ಬಂತೆಂದು ಕಾಮಜ್ವರವಂತೆ ಕೇಳು 4 ನಾಶಾವಾಯಿತು ಇನ್ನು ನಿತ್ಯನಿವಾಸಿಯೆನಿಸುವ ಅವಗೆ ತೋಷದಿ ಕೊಟ್ಟರೆ ಜ್ವರ ನಿಶ್ಯೇಷ ಹೋಗುವದು 5 ಎನ್ನ ಮನೆಯಲಿ ಚೆನ್ನಾಗಿ ಪೇಳುವಳು ಚೆನ್ನಿಗವನನ್ಯಾರೆಂದು 6 ಪೇಳುವಳು ಇನ್ಯಾತಕೆ ಸಂಶಯ ಮಾಡಿನ್ನು ಶುಭಶೀಘ್ರಾ 7 ವಚನ ಸಂಭ್ರಮದಿ ಆನಂದವೆಂಬ ತುಂಬ ರೋಮಗಳುಬ್ಬಿ ರಂಭೆ ಪೂರ್ವದ ಪುಣ್ಯ ಎಂಬುವರು ಮುಕ್ತ ಬಹಳ ಗಂಭೀರ ಅಂಬುಜೋದ್ಬವ ಪಿತನ ತುಂಬಿ ಕುಳಿತದ್ದು ಕಣ್ಣುತುಂಬ ನೋಡೇನು ಎಂದು ಅಂಬುಜಾಕ್ಷಿ 1 ಆಕಾಶಪರಿವೃಡನು ಕ್ಲೇಶದ ಮಗಳಿದ್ದಲ್ಲೆ ನಡೆದು ಒಡೆದು ಆಡಿದನು ಹರುಷ ಹಿಡಿಯಲಾಗದು ನಿನ್ನೊಳು ನೀನೆ ಮಿಡುಕಿ ಬೇಡ ಎನ್ಹಡೆದವ್ವನೆ ನೀನು ಮೂಡಲಗಿರಿ ಒಡೆಯ ವೇಂಕಟಪತಿಗೆ ಕೊಡುವೆ ನಿನ್ನ 2 ಶುಭ ಪತ್ರವನು ಕೊಟ್ಟು ಬೃಹಸ್ಪತಿಯು ವೃತ್ರಾರಿ ಧರಿತ್ರೀಯಲ್ಲೀ ಪೃಥ್ವೀಶ ತಾನು ನತಿಸಿ ವಿಧಿಯುಕ್ತ ಪೂಜೆ ಉತ್ತಮನೆ ನೀ ಕೇಳು ಸತ್ಯ ನಿತ್ಯ ನೀನೆ 3 ಪನ್ನಗಾಚಲದಲ್ಲಿ ನಿನ್ನ ಅನುಮತಿಯಿಂದ ಬಿನ್ನಹದ ನುಡಿ ಕೇಳಿ ಮನಸಿಗೆ ಹರುಷ ಪೇಳುವೆ ಕೇಳು ಚನ್ನಾಗಿ 4 ನಿತ್ಯ ಅವನ ಆ ವಿಸ್ತಾರವೆಲ್ಲ ಪಂಚಕೋಶದಲಿ ಇಲ್ಲಿರುವ ಅವನೇ ಶ್ರೀ ಶುಕಾಚಾರ್ಯ
--------------
ಅನಂತಾದ್ರೀಶ - ಕಥನಕಾವ್ಯಗಳು
ಅಪ್ಪಾ ಕೇಳೊ ನಿನ್ನ ಗುರುತ ನೀನೆ ತಪ್ಪಿದೆಪ್ಪ | ತುಪ್ಪ ಹಾಲು ಬಿಟ್ಟು ನೀ ಅಡವಿಯ ಸೊಪ್ಪು ಮೆಲಬ್ಯಾಡಪ್ಪ ಪ ಅನುದಿನ ನೆನೆದು ಮಾಡುವ ಕರ್ಮವು ನಿನಗಿಲ್ಲಪ್ಪ | ಚಿನುಮಯಾತ್ಮಕ ಬ್ರಹ್ಮನು ನೀನು ಅನುಮಾನ ಇದಕಿಲ್ಲಪ್ಪ 1 ನಿತ್ಯ ಬೋಧಾಮೃತವ ಕುಡಿಯಪ್ಪ | ನಾದ ಬಿಂದು ಕಲಾತೀತರು ಹಾಡುವ ಪದವ್ಯಾಕಪ್ಪ | ಸಾಧು ಪುರುಷರು ಹೋದ ಹಾದಿಯ ಹಿಡಿದು ಮುಕ್ತಿ ಪಡೆಯಪ್ಪ 2 ಇಂದು ನಾಳೆ ಎಂಬುವದೊಂದು ಸಂಶಯ ನಿನಗೆ ಬ್ಯಾಡಪ್ಪ | ಕುಂದು ಕೊರತೆಯು ಇಲ್ಲಾತನಿಗೆ ಆನಂದವೆ ಸ್ವಾದವಪ್ಪ | ಬಂದು ಹೋಗಿ ನೀ ಭವಸಾಗರದೊಳು ಬಹು ಪರಿಯಿಂದಲಿ ನೊಂದೆಪ್ಪ | ತಂದೆಯಾದ ಭವತಾರಕನ ಹೊಂದಿ ದಿನವ ಕಳೆಯಪ್ಪ 3
--------------
ಭಾವತರಕರು
ಆನಂದಮೆಂದಿದಕೆ ಹೆಸರಿಟ್ಟೀ ಪಾಪಿ ಪ ಮನಬಂದತೆರ ಸೇಂದಿ ಸೆರೆಕುಡಿದು ಉಬ್ಬಿ ಅ.ಪ ಕೊಡ ಪಡಗ ಹೆಂಡವನು ಕುಡಿದು ಎಚ್ಚರದಪ್ಪಿ ತಡೆಯದಲೆ ಮಲಮೂತ್ರ ಬಿಡುತದರೋಳುರುಳಿ ಬಡಿಸಿಕೊಂಡಟ್ಟೆಯಿಂ ಒಡನೆ ಎಚ್ಚರವೊಂದಿ ಕೆಡಿಸಿದಾನಂದಮ್ಹಿಡಿ ಕೊಡುವೆ ಶಾಪೆನುವಿ 1 ಅವಸರದಿಂ ಜಿಹ್ವೆಯ ಸವಿರುಚಿ ಲವಲವಿಕೆಯಿಂ ಭವಿಜನುಮಿಗಳು ಎಲ್ಲ ಕವಿದುಬಂದಿಳಿದು ಸವಿಯಬಾರದ್ದು ಸವಿದು ಶಿವನೆನಾವೆಂದೆನುವ ಭವಿಗಳೆಲ್ಲರು ಜಗದಿ ಶಿವನ ಪೋಲುವರೆ2 ಕದ್ದು ಮುಚ್ಚಿಲ್ಲದಲೆ ಮುದ್ದೆ ಮುದ್ದೆ ಗಾಂಜವನು ಸಿದ್ಧಪತ್ರೆಂದೆನುತ ಶುದ್ಧಮತಿಗೆಟ್ಟು ಬದ್ಧರೆಲ್ಲ ಸೇದಿ ನಿಜ ಪದ್ಧಿತಿಯನ್ಹದಗೆಡಿಸಿ ಶುದ್ಧಾತ್ಮರೆನಲು ಪರಿಶುದ್ಧರಾಗುವರೆ 3 ನಾನುನೀನೆಂದೆಂಬ ಖೂನಡಗಿ ಎತ್ತ ತಾನೆ ತಾನೆಂದು ಹೊಳೆವ ಬ್ರಹ್ಮ ಆನಂದ ಸೊಬಗು ಏನೊಂದು ತಿಳಿಯದೆ ಆನಂದವೆಂದೆನುತ ಶ್ವಾನನಂದದಿ ಕೂಗ್ವಿ ಜ್ಞಾನಾಂಧ ಅಧಮ 4 ಹುಚ್ಚುಮನುಜನೆ ನಿನಗೆ ಹೆಚ್ಚಿನ ಗೋಜ್ಯಾಕೆ ನಿಶ್ಚಲಭಕುತಿಂ ಬಚ್ಚಿಟ್ಟು ಮನದಿ ಅಚ್ಯುತ ಶ್ರೀರಾಮನ ಹೆಚ್ಚೆಂದು ದೃಢವಹಿಸಿ ಎಚ್ಚರದಿ ಭಜಿಸಿ ಭವಕಿಚ್ಚಿನಿಂದುಳಿಯೊ 5
--------------
ರಾಮದಾಸರು
ಇಂದು ಶ್ರೀ ಗುರುಪಾದಪದ್ಮ ನೋಡುವ ಎಂದೆಂದು ಬಿಡದೆ ಭಾವಭಕ್ತಿ ಮಾಡುವ ಧ್ರುವ ಮನವೆಂಬ ಮನಮಂಟಪವನಾಡುವ ನೆನವು ನವರತ್ನದ ಸಿಂಹಾಸನಿಡುವ ಙÁ್ಞನಧ್ಯಾನದಡಬಲದಿ ಪಿಡಿವ ಅನುವಾಗಿ ಅನಿಮಿಷದಲಿ ನೋಡುವ 1 ತನುವೆಂಬ ತಾರತಮ್ಯಭಾವ ಮಾಡುವ ಅನುಭದಿಂದನುಪಮನ ನೋಡುವ ಆನಂದವೆಂಬ ಅಭಿಷೇಕವ ಮಾಡುವ ಮನೋ ಅಭೀಷ್ಟೆಯ ಸುವಸ್ತ್ರನೀಡುವ 2 ಬುದ್ಧಿ ಭಾವನೆಯ ಗಂಧಾಕ್ಷತಿಡುವ ಶುದ್ಧ ಸುವಾಸನೆ ಪರಿಮಳ ಮಾಡುವ ಶಬ್ದ ಸುವಾಕ್ಯವೇ ಪುಷ್ಪವ ನೀಡುವ ಸಿದ್ಧಾಂತವೆಂಬುದೇ ಸುಸೇವೆ ಮಾಡುವ 3 ಪ್ರಾಣ ಪಂಚವೇ ಪಾದಪೂಜೆಯ ಮಾಡುವ ಪುಣ್ಯಪೂರ್ವಾರ್ಜಿತ ಫಲಗಳಿಡುವ ಅನೇಕವಾದ ಪರಿಪೂಜೆ ಮಾಡುವ ಧನ್ಯ ಧನ್ಯವಾಗುವ ಮುಕ್ತಿಬೇಡುವ 4 ನಿರ್ವಿಕಲ್ಪ ನಿಜಮೂರುತಿ ನೋಡುವ ಪೂರ್ವಕರ್ಮವೆಂಬ ಧೂಪಾರ್ತಿ ಮಾಡುವ ಅರುವೆಂಬ ದೀಪದಿ ಏಕಾರ್ತಿ ಮಾಡುವ ಸರ್ವಕಾಲದಲಿ ಸಂತೋಷಬಡುವ 5 ಜೀವ ಭಾವನೆಂಬ ನೈವೇದ್ಯವಿಡುವ ವಿವೇಕುದಕ ಸಮರ್ಪಣೆ ಮಾಡುವ ತ್ರಿವಿಧಗುಣವೆಂಬ ತಾಂಬೋಲನಿಡುವ ಅವಾವಪರಿಯು ಪ್ರಾರ್ಥನೆ ಮಾಡುವ 6 ಪಂಚತತ್ವದ ಪಂಚಾರತಿ ಮಾಡುವ ಚಂಚಲವಿಲ್ಲದೆ ಚಿದ್ಛನ ನೋಡುವ ಪಂಚಭೂತವೆಂಬಾರತಿ ಮಾಡುವ ಸಂಚಿತಕ್ರಿಯ ಮಂತ್ರಪುಷ್ಪನೀಡುವ 7 ದಿವ್ಯ ಯೋಗ ಭೋಗ ಚೌರ ಢಾಳಿಸುವ ಅವಲೋಕನೆಯ ಬೀಸಣಿಕೆ ಬೀಸುವ ಪಾದ ನಮಿಸುವ ಭವಬಂಧನದ ಮೂಲ ಛೆÉೀದಿಸುವ 8 ನಮ್ರತವೆಂಬ ಸಮಸ್ಕಾರ ಮಾಡುವ ಸಂಭ್ರಮದಿಂದ ಸ್ವಸ್ವರೂಪ ನೋಡುವ ಪ್ರೇಮಪ್ರೀತೆಂಬ ಪ್ರದಕ್ಷಿಣಿ ಮಾಡುವ ಜನ್ಮ ಮರಣದ ಹಾದಿಯು ಬಿಡುವ 9 ನಿರ್ಗುಣದಿಂದ ಸ್ವರೂಪ ನೋಡುವ ನಿಗಮಗೋಚರನೆಂದು ಸ್ತುತಿ ಪಾಡುವ ಅಗಣಿತಗುಣ ಸುಕೀರ್ತಿ ಸೂರ್ಯಾಡುವ ಜಗದೊಳಾನಂದದಿಂದ ನಲಿದಾಡುವ 10 ಅನಾಹತವೆಂಬ ಧ್ವನಿವಾದ್ಯ ಮಾಡುವ ಅನಂದೋ ಬ್ರಹ್ಮದೊಳು ಮುಳಗ್ಯಾಡುವ ಭಾನುಕೋಟಿತೇಜ ಪ್ರಕಾಶ ನೋಡುವ ದೀನಮಹಿಪತಿ ಸ್ವಾಮ್ಯೆಂದು ಕೊಂಡಾಡುವ 11
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಜಯಮಂಗಳಂನಿತ್ಯಶುಭಮಂಗಳಂಪ.ಗುರುಭಕ್ತಿಯೆಂತೆಂಬ ಗಮಕದೋಲೆಯನಿಟ್ಟುಹರಿಧ್ಯಾನವೆಂಬ ಆಭರಣವಿಟ್ಟು ||ಪರತತ್ತ್ವವೆಂತೆಂಬ ಪಾರಿಜಾತವ ಮುಡಿದುಪರಮಾತ್ಮ ಹರಿಗೆ ಆರತಿಯೆತ್ತಿರೆ 1ಆದಿ ಮೂರತಿಯೆಂಬ ಅಚ್ಚ ಅರಿಸಿಣ ಬಳೆದುವೇದ ಮುಖವೆಂಬ ಕುಂಕುಮವನಿಟ್ಟು ||ಸಾಧು - ಸಜ್ಜನ ಸೇವೆಯೆಂಬ ಸಂಪಿಗೆ ಮುಡಿದುಮೋದದಿಂ ಲಕ್ಷ್ಮೀಗಾರತಿಯೆತ್ತಿರೆ 2ತನುವೆಂಬ ತಟ್ಟಿಯಲಿ ಮನದ ಸೊಡರನು ಇಡಿಸಿಘನಶಾಂತಿಯೆಂಬ ಆಜ್ಯವನುತುಂಬಿ ||ಆನಂದವೆಂತೆಂಬ ಜ್ಯೋತಿಯನು ಹಚ್ಚಿತುಚಿನುಮಯ ಹರಿಗೆ ಆರತಿಯೆತ್ತಿರೆ 3ಕಾಮಾಂಧವಳಿದಂತ ಕಮಲದ ತಟ್ಟೆಯಲಿನೇಮವೆಂತೆಂಬ ಹರಿದ್ರವನು ಕದಡಿ ||ಆ ಮಹಾಸುಜ್ಞಾನವೆಂಬ ಸುಣ್ಣವ ಬೆರಸಿಸೋಮಧರವರದಗಾರತಿಯೆತ್ತಿರೆ 4ನಾರದವಂದ್ಯಗೆನವನೀತ ಚೋರಗೆನಾರಾಯಣಗೆ ಶ್ರೀ ವರಲಕ್ಷ್ಮೀಗೆ ||ಸಾರಿದವರನು ಪೊರೆವ ಪುರಂದರವಿಠಲಗೆನೀರಜಮುಖಿಯರಾರತಿಯೆತ್ತಿರೆ5
--------------
ಪುರಂದರದಾಸರು
ರಾಮನಾಮ ಪಾಯಸಕ್ಕೆ ಕೃಷ್ಣನಾಮ ಸಕ್ಕರೆ |ನಾಮವಿಠಲ ತುಪ್ಪ ಬೆರೆಸಿ ಬಾಯಿ ಚಪ್ಪರಿಸಿರೊ ಪಒಮ್ಮನ ಗೊದಿಯ ತಂದು | ವೈರಾಗ್ಯ ಕಲ್ಲಲಿ ಬೀಸಿ |ಸುಮ್ಮನ ಸಜ್ಜಿಗೆ ತೆಗೆದು | ಸಣ್ಣ ಸೇವಗೆ ಹೊಸೆದು 1ಹೃದಯವೆಂಬ ಪಾತ್ರೆಯೊಳಗೆ | ಮನವೆಂಬ ಎಸರನಿಟ್ಟು |ಬುದ್ದಿಯಿಂದ ಪಾಕ ಮಾಡಿ |ಹರಿವಾಣತುಂಬಿರೋ 2ಆನಂದ ಆನಂದವೆಂಬ ತೇಗು ಬಂದ ಪರಿಯಲಿ |ಆನಂದ ಮೂರುತಿ ನಮ್ಮ ಪುರಂದರವಿಠಲ 3
--------------
ಪುರಂದರದಾಸರು