ಒಟ್ಟು 5 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಅನಂತಚತುರ್ದಶಿಯ ದಿನದ ಪ್ರಾರ್ಥನೆ) ಪದ್ಮನಾಭ ಪರಿಪಾಲಿಸು ದಯದಿಂದ ಪದ್ಮಜಾದಿ ವಂದ್ಯ ಪರಮ ದಯಾಳೊ ಪದ್ಮಿಯಳರಸ ಹೃತ್ಪದ್ಮನಾಮಕ ಸ್ವರ್ಣ ಸದ್ಮ ವೃತ್ತಿಪದಪದ್ಮವ ತೋರೊ ಪ. ಚಿಂತಿತದಾಯಕ ಸಂತರ ಕುಲದೈವ ಕಂತು ಜನನಿಯೊಡಗೂಡಿ ನೀನು ನಿಂತು ಎನ್ನಲಿ ಕೃಪೆ ಮಾಡೆಂದು ನಮಿಪೆ ಧು- ರಂತ ಮಹಿಮ ನಿನ್ನ ಚರಣಾಬ್ಜಯುಗಲಾ 1 ಆದಿ ಮಧ್ಯಾಂತವಿದೂರ ನಿನ್ನಲಿ ಮಹ ದಾದಿ ತತ್ವಗಳೆಲ್ಲ ನಿಂತಿಹವು ಆದಿ ಭೌತಿಕ ಮೊದಲಾದ ತಾಪಗಳನ್ನು ಶ್ರೀದ ನೀ ಬಿಡಿಸಲು ಸದರವಾಗಿಹವು 2 ಒಂದರಿಂದೊಂದಾದರಿಂದ ಮೂರು ಮೂರ್ತಿ ಇಂದಿರೆ ಸಹಿತಾವಿರ್ಭೂತನಾಗಿ ಮುಂದಿನ ಮಹದಾದಿ ತತ್ವವ ನಿರ್ಮಿಸಿ ನಿಂದನಂತಾಸಂತರೂಪನಾದವನೆ 3 ಭವ ಚಕ್ರದೊಳು ತಂದು ನವ ನವ ಕರ್ಮಗಳನೆ ಮಾಡಿಸಿ ಅವರ ಯೋಗ್ಯತೆ ಮೀರದಲೆ ಫಲಗಳನಿತ್ತು ನಿತ್ಯ ತೃಪ್ತನಾಗಿರುವಿ 4 ಮಛ್ವಾದ್ಯನಂತವತಾರಗಳನೆ ಮಾಡಿ ಸ್ವೇಚ್ಛೆಯಿಂದ ಸುಜನರ ಸಲಹಿ ಕುಚ್ಛಿತ ಜನರಿಗೆ ತುಚ್ಛಗತಿಯನೀವೆ ಸ್ವಚ್ಛ ಬ್ರಮ್ಹಾದಿಕ ವಿವ್ಛಾ(?)ವಿಷಯನೆ 5 ನಾನಾವತಾರದಿ ನಂಬಿದ ಸುರರಿಗೆ ಆನಂದವಿತ್ತು ರಕ್ಷಿಪೆ ಕರುಣದಿ ದಾನವರಿಗೆ ಅಧ:ಸ್ಥಾನವ ನೀಡುವಿ ಮಾನವರನು ಮಧ್ಯಗತರ ಮಾಡಿಸುವಿ 6 ಹಿಂದೆ ಮುಂದಿನ ಭವದಂದವ ತಿಳಿಯದ ಮಂದಾಗ್ರೇಸರ ನಾನಾದೆಂಬುದನು ಅಂಧಕರಾರಣ್ಯದಿಂದ ಮೂಢನಾದಂ ದಿಂದ ಬಿನ್ನೈಪೆನು ಇಂದಿರಾಧವನೆ 7 ಮಾಡುವ ಕರ್ಮವು ನೋಡುವ ವಿಷಯಗ- ಳಾಡುವ ಮಾತು ಬೇಡುವ ಸೌಖ್ಯವು ನೀಡುವ ದಾನವೋಲ್ಯಾಡುವ ಚರ್ಯವ ನೋಡಲು ತಾಮಸ ಪ್ರಹುಡನಾಗಿಹೆನು 8 ಆದರು ನಿನ್ನಯ ಪಾದಾರವಿಂದ ವಿ- ನೋದ ಕಥಾಮೃತ ಪಾನದೊಳು ಸ್ವಾದ ಲೇಶದಾದರ ತೋರ್ಪದ- ನಾದಿ ಮೂರುತಿ ನೀನೆ ತಿಳಿಸಬೇಕದನೂ 9 ಇದರಿಂದಲೇ ಮುಂದೆ ಮದನನಯ್ಯನೆ ನಿನ್ನ ಪದವ ಕಾಣುವೆನೆನುತೊದರುವೆನು ಹೃದಯ ಮಂಟಪದಿ ನೀ ಹುದುಗಿರುವುದರಿಂದ ಕದವ ತೆರೆದು ತೋರೊ ವಿಧಿಭವವಿನುತಾ 10 ಕನ್ನೆ ಸುಶೀಲೆಯ ಕರಸೂತ್ರ ರೂಪದ ನಿನ್ನ ತಿಳಿಯದೆ ಕೌಂಡಿಣ್ಯನಂದು ಮನ್ನಿಸದಿರೆ ಮದ ಮೋಹಗಳೋಡಿಸಿ ನಿನ್ನ ರೂಪವ ತೋರ್ದ ನಿಜಪೂರ್ಣ ಸುಖದಾ 11 ಬ್ರಹ್ಮಾದಿಗಳನೆಲ್ಲ ನಿರ್ಮಿಸಿ ರಕ್ಷಿಸಿ ತಮ್ಮ ತಾವರಿಂiÀiದ ನಿಮ್ಮ ಸ್ತುತಿಪರೆ ಕು- ಕರ್ಮಿ ನಾನೆಂದಿಗಾದರೂ ಶಕ್ತನಹುದೆ 12 ಅದು ಕಾರಣದಿಂದ ಪದುಮನಾಭ ನಿನ್ನ ಪದ ಕಮಲಗಳಲಿ ರತಿಯನಿತ್ತು ಸದರದಿ ಸಲಹಯ್ಯ ವಿಧುಶೇಖರಾರ್ಚಿತ ಮದನನಯ್ಯ ಮರುದಾದಿ ವಂದಿತನೆ 13 ದೋಷರಾಶಿಗವಕಾಶನಾದರೂ ಯೆನ್ನ ಶ್ರೀಶ ನಿನ್ನ ದಾಸದಾಸನೆಂದು ಘೋಷವಾದುದರಿಂದ ಪೋಷಿಸಬೇಕಯ್ಯ ಶೇಷಗಿರೀಶ ಸರ್ವೇಶ ನೀ ದಯದಿ 14
--------------
ತುಪಾಕಿ ವೆಂಕಟರಮಣಾಚಾರ್ಯ
ಇಂದು ಮುಂದಿಲ್ಲ ಪ ಶ್ರೀ ಮುಕುಂದಗೆ ಸಮರೆನಿಸುವರು ಲೋಕದೊಳು ಅ.ಪ. ವನಧಿ ಮಥನದಲ್ಲಿ ಅನಿಮಿಷರನ ಬಿಟ್ಟು ಜನನಿ ಲಕುಮಿ ನಾರಾಯಣನೊಲಿಸಿದಳಾ 1 ಪ್ರಪಿತಾಮಹನು ಲೋಕಾಧಿಪ ಬ್ರಹ್ಮಗೆ ತಪ ತಪವೆಂದು ಪೇಳಿದಗುಪಮೆ ಎನಿಸುವವರು 2 ಕೊಂದು ಶಿವನ ಕಾಯ್ದ ಇಂದಿರಾಪತಿಗೆಣೆ 3 ಮಂದರಾದ್ರಿಯನೆತ್ತಿ ಸಿಂಧುಮಥನ ಮಾಡಿ ವೃಂದಾರಕರಿಗೆ ಆನಂದವಿತ್ತು ಪರಿ4 ಭೃಗು ಮುನಿಪನು ಬ್ರಹ್ಮಾದಿಗಳ ಪರೀಕ್ಷಿಸಿ ಜಗನ್ನಾಥವಿಠಲ ತ್ರಿಗುಣವರ್ಜಿತನೆಂದು 5
--------------
ಜಗನ್ನಾಥದಾಸರು
ನಾ ಕಂಡ ಕನಸು ಕನಸಲ್ಲ ಅದು ಹೇಳಲು ಬಾರದು ಕೇಳಲು ಬಾರದು ಪ ಕಂಗಳ ಮುಟ್ಟಿ ನಾನಿರುತಿಹೆ ಅಂತರಂಗದೊಳಗೆ ದೃಷ್ಟಿಯನಿಡೆಮಂಗಳವಿತ್ತು ಮಹತ್ತುಯಿತ್ತು ಜಂಗಮವಿತ್ತು ಜಗತ್ತು ಇತ್ತು1 ಧ್ಯಾನವು ಗುರುಪಾದದಲ್ಲಿರೆ ಒಳ್ಳೆ ಗಾನವು ಕಿವಿಗೆ ಕೇಳಿಸುತಲಿರೆಆನಂದವಿತ್ತು ಸುಖತರವಿತ್ತು ತನ್ಮಯವಿತ್ತು ಥಳಿಥಳಿಸಿತ್ತು 2 ಆನಂದ ಮನೆಯೊಳಗಾನಿರೆ ಚಿದಾನಂದ ದೇವರ ಕೂಡಿರೆತಾನೆ ತಾನಿತ್ತು ತವೆ ಬೆರೆತಿತ್ತು ಏನೇನೋ ಇತ್ತು ಎಂತೆಂತೋ ಇತ್ತು 3
--------------
ಚಿದಾನಂದ ಅವಧೂತರು
ಭವ ಕಾಮಹರ ನಿನ್ನಂಘ್ರಿ ತಾಮರಸಯುಗಳ ಭಜಿಸುವೆ | ಭಜಿಸಿ ಬಿನ್ನೈಸುವೆ ಶ್ರೀ ಮನೋಹರನ ತೋರಯ್ಯ 1 ಕೃತ್ತಿವಾಸನೆ ಎನ್ನ ಚಿತ್ತದಲಿ ಹರಿಯಪದ ನಿತ್ಯದಲಿ ಭಜಿಪ ಮತಿ ನೀಡೊ | ಮತಿ ನೀಡೊ ಪಾರ್ವತಿ ಚಿತ್ತದೊಲ್ಲಭನೆ ನಮಿಸುವೆ 2 ಸುವರ್ಣಮುಖರಿಯ ತೀರದಲಿ ನೆಲಸಿರುವೆ ಶ್ರೀ ವರಾಹನಂಘ್ರಿ ಭಜಿಸುತ್ತ | ಭಜಿಸುತ್ತ ನೆಲಸಿರುವ ಪಾವನರೂಪ ಸಲಹಯ್ಯ 3 ಕಾಳಸ್ತಿನಿಲಯನೆ ಪೇಳಲಿನ್ನೇನು ನಾ ತಾಳಲಾರೆನು ಈ ಭವಬಂಧ | ಭವಬಂಧ ಬಿಡಿಸುವ ವ್ಯಾಳ ಶಯನನ್ನ ತೋರೈಯ್ಯ 4 ಭಕ್ತರಿಗೊಲಿದು ಅಪಮೃತ್ಯು ಪರಿಹರಿಸಿದೆ ಸತ್ಯ ಸಂಕಲ್ಪ ನಿನ್ನಂಘ್ರಿ | ನಿನ್ನಂಘ್ರಿ ಕಮಲಗಳ ಚಿತ್ತದಲಿ ತೋರಿ ಸಂತೈಸು 5 ಮನಕೆ ಗುರು ನೀನಹುದು ಮನವ ಹರಿಯಲಿ ನೆಲಸೊ ವೈರಿ ಮಮತೆಯಿಂ | ಮಮತೆಯಿಂದಲಿ ನಿತ್ಯ ಮನಶುದ್ಧಿಗೈದು ಕಾಯಯ್ಯ 6 ಶಂಖಚಕ್ರವ ಪಿಡಿದ ಸಂಕರ್ಷಣನ ರೂಪ ನಿತ್ಯ ಭಜಿಸುವೆ | ಭಜಿಸುವೆ ಕೈಲಾಸ ಅಂಕದಲಿ ನೆಲಸಿ ಹರುಷದಿ 7 ನರಸಿಂಹ ರೂಪವನು ಸ್ಮರಿಸುತ್ತ ಮೈಮರೆವೆ ಉರುತರ ಭಾವ ಭಕ್ತಿಯಲಿ | ಭಕ್ತಿಯಲಿ ಭಜಿಪ ನಿನ್ನ ಸ್ಮರಿಸುವರ ಭಯವ ಹರಿಸುವೆ 8 ಶ್ರೀ ರಾಮನಾಮವನು ಪ್ರೇಮದಿಂದುಮೆಗರುಹಿ ಆರಾರು ಅರಿಯದಾನಂದ | ಆನಂದವಿತ್ತೆ ಭವ ತಾರಕವೆಂದು ಕರುಣಾಳೂ 9 ಅಜನ ಭ್ರೂಮಧ್ಯದಲಿ ಜನಿಸಿದೆಯೊ ಜಗದಲ್ಲಿ ಭಂಜನ | ಭಂಜನಗೊಳಿಸಿದೆ ತ್ರಿಜಗದಲಿ ನಿನಗೆ ಸರಿಯುಂಟೆ 10 ಶೇಷ ಪರ್ಯಂಕನಿಗೆ ಹಾಸಿಗೆಯಾಗಲು ತೋಷದಲಿ ತಪವಾಚರಿಸಿದೆ | ಚರಿಸಿ ಸಾಧಿಸಿದೆ ನೀ ಶೇಷ ಪದವಿಯನು ತ್ರಿನೇತ್ರ 11 ಶರಧಿ ಮಥಿಸಲು ಗರಳ ಉದ್ಭವಿಸಿ ಭಯವಾಗೆ | ಭಯವಾಗಿ ಪರಿಹರಿಸಿ ಗರಳವನೆ ಕುಡಿದೆ ಶ್ರೀ ಕಂಠ 12 ಅಸುರರ ವಂಚಿಸಿದ ವಶವಲ್ಲದ ಹೆಣ್ಣು ವಶವಾಗಲೆಂದು ಹಾರೈಸಿ | ಹಾರೈಸಿ ಬಳಲುತಿರೆ ಬಿಸಜಾಕ್ಷ ನಿನ್ನ ಸಲಹಿದ 13 ತಾರಕಾಸುರನಿಂದ ಘೋರಪಡುತಿರೆ ಜಗವು ಮಾರ ಪೂಅಸ್ತ್ರ ಎಸೆಯಲು | ಎಸೆಯಲು ದಹಿಸಿ ಕು- ಮಾರನನು ಪಡೆದೆ ಗಿರಿಜೇಶ 14 ಸ್ತುತಿಪ್ರಿಯ ನಿನ್ನ ನಾ ಸ್ತುತಿಸಲಾಪೆನೆ ಮಂದ ಮತಿ ಎಂದು ನೀನೆ ಸಂತೈಸೊ | ಸಂತೈಸಬೇಕಿನ್ನು ಮತಿಯಿತ್ತು ಹರಿಯ ಪದದಲ್ಲಿ 15 ಶಿರದಲ್ಲಿ ಗಂಗೆ ಚಂದ್ರನ ಮೆರೆಯುವ ಉರಗ ಭೂಷಣನೆ ಕೇಳಿನ್ನು | ಕೇಳಿನ್ನು ಎನ್ನ ಮನ ಮರೆಯದೆ ಹರಿಯ ನೆನೆಯಲಿ 16 ವಿಷ್ಣು ಭಕ್ತರೊಳಗೆ ಶ್ರೇಷ್ಠ ನೀನಹುದಯ್ಯ ಜಿಷ್ಣುವಿಗೆ ಮೆಚ್ಚಿ ಧನುವಿತ್ತೆ | ಧನುವಿತ್ತೆ ಗೋಪಾಲ- ಕೃಷ್ಣವಿಠ್ಠಲನ ತೋರಯ್ಯ 17
--------------
ಅಂಬಾಬಾಯಿ
ಶ್ರೀ ಹನುಮ ಮಾಂ ಪಾಹಿ ಪವನ ಜ ಖಗ ವಾಹನನ ದಾಸ ನೇಹದಲಿ ಬಿಂಬರೂಪ ತೋರೆನಗೆ ಪ ಭಾನುಸುತ ಪವಮಾನ ನಂದನ ನೀನೆ ಸಲಹಿದೆ ಮಾನನಿಧಿ ರಾಮಬಾಣದಲಿ ಇಂದ್ರ ಸೂನುವಿನ ಪ್ರಾಣ ಹಾನಿಯ ಗೈಸಿ ಮೇಣ್ ಆ ಕಿಷ್ಕಿಂಧ ನಗರದಲ್ಲಿ ವಾನರೇಂದ್ರಗೆ ನಾನಾ ಪರಿಯಲ್ಲಿ ಆನಂದವಿತ್ತ ಜ್ಞಾನಿ ನಿನ್ನ ಅಧೀನದವನೆಂದೆಂದು 1 ಸುರೇಶನಂದನ ಮಾರುತನೆ ನಿನ್ನ ಕರುಣವು ಎನ್ನೊ ಳಿರದ ಕಾರಣ ಹರಿ ಮುನಿದನೆಂದು ಅರಿದು ಮನದಿ ದ್ವಾ ಪರದಲ್ಯವ ತರಿಸಿ ಗುರುವರ್ಯ ನಿಮ್ಮ ಚರಣ ಸೇವಿಸೆ ಪೊರೆದೆ ಅಂದು ಸಮರದಿ ಕೃಷ್ಣನ ಪರಮಕೃಪೆ ಪಡೆದವರಿಗೆ ನಿನ್ನಯ ಕರುಣ ಕಾರಣವೊ 2 ಮೂರನೆಯ ಅವತಾರದಿಂದಲಿ ಧಾರುಣಿಯೊಳು .......... ಬೀರಿದ್ದ ಶಾಸ್ತ್ರವ ಬೇರೊರಿಸಿ ಕೀಳ್ದು ತೋರಿಸಿದಿ ಹರಿಯ ಆರು ನಿನ್ನನು ಆರಾಧಿಪರೊ ಆ ಧೀರರಿಗೆ ದೋಷ ಸೇರಲಮ್ಮವು ಮಾರಪಿತ ಜಗನ್ನಾಥ ವಿಠಲನ ಕರುಣ ವಾಹುದೊ 3
--------------
ಜಗನ್ನಾಥದಾಸರು