ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗೋವಿಂದ ಗೋವಿಂದ ಗೋವಿಂದನೆನ್ನಲು ಪ ಏನೆಂದು ಪೇಳಲಿ ಆನಂದವನು ನಾ ಅ.ಪ ಹಸಿವು ತೋರದೆನಗೆ ತೃಷೆಯು ತೋರದೆನಗೆ ಪರಿ ನಾಮರಸವ ಸೇವಿಸುತಿರೆ 1 ದ್ವೇಷವು ತೋರದು ರೋಷವು ತೋರದು ಶೇಷಶಯನ ನಿನ್ನ ಹರುಷದಿ ಪೊಗಳಲು 2 ಭಯವು ತೊಲಗುವುದು ಜಯವು ತೋರವುದು ನಯನಗಳಲಿ ಸುಖ ಜಲವು ಸುರಿಯುವುದು 3 ಎಂದಿನ ಪುಣ್ಯವೊ ಇಂದರಿತೆನು ಗೋ- ವಿಂದನಾಮ ಮಕರಂದದ ಸವಿಯನು4 ನಿನ್ನ ಸುಕರುಣದ ಚಿನ್ಹೆ ಕಾಣಿಸಿತು ಪ್ರ ಸನ್ನನಾಗುವಿಯೆಂದು ಚೆನಾÀÀ್ನಗಿ ಅರಿತೆನು5
--------------
ವಿದ್ಯಾಪ್ರಸನ್ನತೀರ್ಥರು
ಬಂದು ಕೂಡೋ ನಂದ ಬಾಲನೆ ಪ ಇಂದು ಮುಖವನೋಡಿ ಸ್ತುತಿಪೆಬಂಧದೊಳು ವಂದಿಸುತ ಆನಂದವನು ಪೊಂದುವೆನಾ 1 ಬಾಲಕೃಷ್ಣ ನಿನ್ನವೆರಡು ತೋಳು ತಾರೋ ಅಪ್ಪಿಕೊಂಬುವೆಭಾಳಾ ದಿನ ತವಲೀಲೆ ಕೇಳದೆ ಮನ ತಾಳದಿಹುದು2 ಮುರಳಿ ಸ್ವರದಿ ಭೂಷಿತಾನನ ತ್ವರದಿ ತೋರೋಉಮ್ಮ ಕೊಡುವೆಕರುಣಾನಿಧಿ ಇರಲಾರೆನು ಮರುಳಾದೆನು ತವ ಪಾದಕೆ 3 ಇಂದಿರೇಶ ಇಷ್ಟು ಜನುಮ ಹಿಂದೆ ಕಳೆದೆ ನಿನ್ನ ನೋಡದೆಇಂದಿರೆಯ ಪೊಂದಿಹ ನಂದಾತ್ಮಜ ಬಂದು ಪೊರೆಯೋ 4
--------------
ಇಂದಿರೇಶರು
ಭುವನದೊಳಗೆ ಒಬ್ಬ ಶಿವಯೋಗಿನಾ ಕಂಡೆ ಅವತರಿಸಿರುವನದ್ಯಾರಮ್ಮಾ ಪ ತುಂಬಿ ನಡುನಾಡಿಯೊಳಗಾಡೊ ಪವನರೂಪನ ಬೇಗ ತೋರಮ್ಮಾ ಅ.ಪ ಉಪಜೀವಿಯನು ಕಂಡು ಉಷ್ಣಶೀತವನಳಿದು ತಪಸು ಮಾಡುವನ್ಯಾರದೇಳಮ್ಮಾ ಅಪಮೃತ್ಯುವನು ಕಂಡು ಆನಂದವನು ಬಿಟ್ಟಾ ವಿಪರೀತವೇನಿದು ಹೇಳಮ್ಮಾ 1 ಬುದ್ಧಿ ಮನಸು ಚಿತ್ತ ಅದ್ವಯವನು ಮಾಡಿ ಇದ್ದನಹುದು ಆತಾ ಕಾಣಮ್ಮಾ ಮದ್ಗುರುವಾದ ಶ್ರೀ ತುಲಶಿರಾಮದಾಸ ಪರೀಕ್ಷಿತ ಕಾಣಮ್ಮಾ 2
--------------
ಚನ್ನಪಟ್ಟಣದ ಅಹೋಬಲದಾಸರು