ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿನ್ನ ನೋಡಲಿ ಬಂದೆ ಘನ್ನ ಮಹಿಮನೆ ಕೃಷ್ಣಾ ಮನ್ನಿಸಿ ಕೃಪೆಯ ಮಾಡೊ ಪ. ನಿನ್ನ ದರುಶನವಿತ್ತು ಎನ್ನ ಪಾಪವ ಕಳೆದು ನಿನ್ನ ಪಾದವನೆ ತೊರೋ ಸ್ವಾಮಿ ಅ.ಪ. ರಜತಪೀಠಾಪುರದಿ ರಮ್ಯ ಮಂದಿರದಲ್ಲಿ ರಾಜಿಸುತ್ತಿಹ ದೇವನೆ ಕುಜನಮರ್ಧನ ಎನ್ನ ರಜ ತಮೋಗುಣ ಕಳದು ನಿಜಭಕ್ತರೊಡನಾಡಿಸಿ ಸುಜನವಂದಿತ ನಿನ್ನ ಭಜನೆಯಿಂದಲಿ ನಲಿದು ನಿಜರೂಪ ನೋಡುವಂತೆ ವಿಜಯಸಾರಥಿಯೆ ನೀ ಈ ತೆರದಿ ಪೊರೆಯದಿರೆ ಭಜಿಸಲ್ಯಾತಕೆ ನಿನ್ನನು ದೇವ 1 ಶ್ರೀ ತಂದೆ ಮುದ್ದುಮೋಹನದಾಸರೆಂತೆಂಬ ನೀತ ಗುರುದ್ವಾರದಿಂದ ನಾ ತಿಳಿದು ಬಂದೆ ನಿನ್ನಯ ಮಹಿಮೆ ಜಾಲಗಳ ಪ್ರೀತನಾಗಿ ಕಾಯೋ ನೀತಿಯಲ್ಲವು ನಿನಗೆ ಮಹಿಮೆ ತೋರದೆ ಎನ್ನ ಘಾತಿಗೊಳಿಸುವರೆ ಹೀಗೆ ನಾಥ ನಿನ್ನಗಲಿ ನಾನರಘಳಿಗೆ ಇರಲಾರೆ ಸೋತು ಬಂದಿಹೆನೊ ಭವದಿ ಮನದಿ 2 ಸತ್ಯಸಂಕಲ್ಪ ನೀನಾದಡೆ ಎನಗಿನ್ನು ಅತ್ಯಧಿಕ ರೂಪ ತೋರೊ ಮೃತ್ಯು ಬೆನ್ಹತ್ತಿ ಆಯುಷ್ಯವ ಪರಿಹರಿಸುವುದು ಎತ್ತ ಪೋದರು ಬಿಡದೆಲೊ ಭೃತ್ಯತನವನೆ ವಹಿಸಿ ನಿನ್ನ ತೋರೆಂದೆನಲು ಮತ್ತೆ ಕರುಣವಿಲ್ಲವೆ ಚಿತ್ತಜಾಪಿತ ನಿನ್ನ ಒಲುಮೆ ಮಾರ್ಗವನರಿಯೆ ಚಿತ್ತಕ್ಕೆ ತಂದು ಕಾಯೊ ಕೃಷ್ಣ 3 ಆನಂದಮುನಿವರದ ಆನಂದ ಕಂದನೆ ಆನಂದನಿಲಯವಾಸ ಆನಂದರತ್ನಪ್ರಭಾದಿಂದ ರಾಜಿತನೆ ಆನಂದಮೂರ್ತಿ ಕೃಷ್ಣ ಆನಂದಗೋಕುಲದಿ ಆನಂದದಲಿ ಮೆರೆದು ಆನಂದ ಸುಜನಕಿತ್ತೆ ನೀನಿಂದು ಎನ್ನ ಮನಕೆ ಆನಂದವನೆ ಇತ್ತು ಆನಂದರೂಪ ತೋರೊ ಕೃಷ್ಣ 4 ಥರವಲ್ಲ ನಿನಗೆನ್ನ ಕರಕರೆಗೊಳಿಸುವುದು ಪೊರೆವರಿನ್ಯಾರು ಜಗದಿ ಮರೆತು ಗರ್ವದಿ ಎನ್ನ ಮರೆವರೆ ನೀನ್ಹೀಗೆ ಗುರುಗಳಂತರ್ಯಾಮಿಯೆ ಸರ್ವನಿಯಾಮಕ ಸರ್ವವ್ಯಾಪಕನೆಂಬ ಬಿರುದು ಪೊತ್ತಿಲ್ಲವೇನೊ ಕರುಣಾಳು ಗೋಪಾಲಕೃಷ್ಣವಿಠ್ಠಲ ನಿನ್ನ ಪರಿಪರಿಯ ರೂಪ ತೋರೊ ಕೃಷ್ಣ 5
--------------
ಅಂಬಾಬಾಯಿ
ಧನ್ಯ ಧನ್ಯ ನಂದಗೋಕುಲ ಪ.ಆ ನಂದವ್ರಜದ ಪೂರ್ವಪುಣ್ಯವೇನೊಆ ನಂದನಾ ಗೋಪಿಕಂದನಾ ಕಿಶೋರಾನಂದವೇನೊಆನಂದಮುನಿವರದನಾನಂದವೇನೊ ಅ.ಪ.ಗೋವರೆಳೆಯಮ್ರ್ಯಾಳ ನಿವಹದಲ್ಲಿನಿಂತು ರಂಗ ಕೋಹುಕ್ಕಕೋಹೊಹವಳಿ ಹಂಡಿ ಕಾಳಿ ಬಾ ಕೋಹುಕ್ಕ ಕೋಹೊಧವಳಿ ಚಿಂಚಿ ಕಪಿಲೆ ಬಾ ಕೋಹುಕ್ಕ ಕೋಹೊಗೌರಿ ಮೈಲಿ ನೀಲಿ ಬಾಯೆಂದುವಿವರಿಸಿ ಕರೆದು ತೃಣದ ಕವಳವನ್ನೀಡುವಾಆವಿನ್ನಾವ ಸಂಚಿತೊ ಪಾವÀನೆಂತೊ ಪುಲ್ಲಿನಾ 1ಅಮ್ಮೆಶೋದೆ ಕಟ್ಟಿದ ನಿರ್ಮಲ ಕಲ್ಲಿಯ ಬುತ್ತಿಡೋಹಕ್ಕಡೋಹೋತÀಮ್ಮ ಬನ್ನಿರುಣ್ಣ ಬನ್ನಿ ಡೋಹಕ್ಕಡೋಹೊನಮ್ಮ ಬುತ್ತಿ ನಿಮ್ಮ ಬುತ್ತಿ ಡೋಹಕ್ಕಡೋಹೊನಮ್ಮ ನಿಮ್ಮುಪ್ಪಿನಕಾಯಿ ಡೋಹಕ್ಕಡೋಹೊಕಮ್ಮಗಿಹುದೆಂದು ಕೊಡುವ ಒಮ್ಮೆ ಸೆಳೆದು ಮೆಲ್ಲುವಾ ಉತ್ತಮ್ಮರಾವ ಜೀವರೊ ಧರ್ಮದೊದಗೆಂತುಟೊ 2ಮಾಧವಮಂಜುಳ ಶಬ್ದದೂದುವ ಸುವರ್ಣವೇಣುನಾದಸ್ವಾದ ಲುಬ್ಧರಾದರಾ ಗೋಪಕನ್ಯೇರುನಾದಸ್ವಾದ ಲುಬ್ಧವಾದವಾ ಗೋವತ್ಸವುನಾದಸ್ವಾದ ಲುಬ್ಧವಾದವಲ್ಲಿ ವೃಕ್ಷವುಆದರಿಪ ನಾರಿಯರಗಾಧ ತಪವಲ್ಲವೆಪಾದಪ ಪಶುಗಳೆಲ್ಲ ಆ ದೇವರ್ಕಳಲ್ಲವೆ 3ತುರುವ ಮೇಯಿಸಿ ವ್ರಜಕೆ ಮರಳಿಸಿಗೋಪಾಲರೇಯ ಹೈಯಿ ಹೈಯೆಂದುತರುಬಿ ತಡೆಯಿರೆನ್ನುತ ಹೈಯಿ ಹೈಯೆಂಬಸ್ವರದಿ ಕೊಳಲನೂದುತ ಹೈಯಿ ಹೈಯೆಂದುಭರದಿಚೆಂಡು ಚಿಮ್ಮುತ ಹೈಯಿಹೈಯೆಂದುಧರೆಯ ಮೇಲಿಂಬಾಡುವ ಕರದ ದಂಡಿಗೇರುವತರಳರಾವ ಭಾಗ್ಯರೊ ಧರಣಿ ಯಾವ ಮಾನ್ಯಳೊ 4ಒಪ್ಪುವ ಗೋಧೂಳಿ ಮೈಯಲಿಪ್ಪ ಪೊಂದೊಡಿಗೆ ಚೆಲ್ವಶಾಮಲಾಮಲಾಂಗಗುಪ್ಪಾರತ್ಯೆತ್ತಿದರು ಶಾಮಲಾಮಲಾಂಗಗೆಕುಪ್ಪಿರಿವ ಕರುಗಳ ಶಾಮಲಾಮಲಾಂಗದÀರ್ಪಿನಾವ ರಂಬಿಸೆ ಶಾಮಲಾಮಲಾಂಗಕ್ಷಿಪ್ರಪಾಲ್ಗರೆದು ನಂದ ಗೋಪಾಂಗನೆಯರೀವ ನಮ್ಮಪ್ಪ ಪ್ರಸನ್ನವೆಂಕಟಾಧಿಪ್ಪನೆಂದು ಕಾಂಬೆನಾ 5
--------------
ಪ್ರಸನ್ನವೆಂಕಟದಾಸರು