ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪೊರೆಯಮ್ಮ ವಾಣಿ ತರುಣಿ ವಿಧಿರಾಣಿ ರಮಣಿ ಪ. ಸರಸ್ವತಿ ನಿನ್ನನೇ ನೆರೆ ಭಜಿಸುತ್ತಿಹ ಅರಿಯದೀ ತರಳರಂ ಕರುಣದೊಳೀಕ್ಷಿಸು 1 ದೇವಿ ನಿನ್ನಿಂದ ಲೇ ಜೀವಕೋಟಿಗಳಿಂತು ಜೀವಿಪುದಾರೆಯೆ ದೇವಿ ಸಂಜೀವಿನಿ 2 ಜ್ಞಾನಾಧಿದೇವತೆ ಆನಂದಪ್ರದಾತೆ ಮುನಿಜನ ಸಂಸ್ತುತೆ ವನಜಜದಯಿತೇ 3 ಸದಯ ನೀಂ ದಯೆಗೈಯೆ ಸದಸದ್ವಿಚಾರಮಂ ಹೃದಯ ಸಂಶುದ್ಧಿಯಂ ಪದುಳಮಂ ಧೈರ್ಯಮಂ4 ದೇಶಸೇವೆಗೆಂದು ಆಶಿಪರೊಳಿಂದು ಶೇಷಗಿರೀಶನ ದಾಸರೆನಿಸೆಂದು 5
--------------
ನಂಜನಗೂಡು ತಿರುಮಲಾಂಬಾ
ಬಾರಮ್ಮ ಲೋಕಮಾತೆ ಆನಂದಪ್ರದಾತೆ ಪ ಸಿಂಧುರಾಜತನಯೆ ಅರವಿಂದ ಮಂದಿರೆ ಸಿಂಧುಶಯನನ ಪ್ರಿಯೆ ಮುದದಿಂದೆಮ್ಮನು ಕಾಯೆ 1 ಕಮಲಸಂಭವನ ಮಾತೆ ಕಮಲಾಕ್ಷಗೆ ಪ್ರೀತೆ ಕಮಲಶರನ ಪೆತ್ತ ಕಮಲಾರಿ ಕೋಟಿಕಾಂತೆ 2 ರಂಗೇಶವಿಠಲನ ಉರದಲಿ ಮೆರೆಯುವ ಮಂಗಳದೇವತೆ ಸ್ಮಿತ ತಿಂಗಳ ಬೀರುತ್ತ 3
--------------
ರಂಗೇಶವಿಠಲದಾಸರು