ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂದಿಗೆ ನಿಮ್ಮ ಪದ ಕಾಂಬೆನೊ | ಗುರು ಎಂದಿಗೆ ನಿಮ್ಮ ಪದ ಕಾಂಬೆನೊ ಪ. ಎಂದಿಗೆ ನಿಮ್ಮ ಕಾಂಬೆ ಅಂದಿಗೆ ಮುಕ್ತಳಹೆ ಅ.ಪ. ಸಕಲ ಶಾಸ್ತ್ರಗಳನೆ ಶೋಧಿಸಿ | ಬಹು ಅಕಳಂಕ ತತ್ವವ ಸಾಧಿಸಿ | ಬೇಗ ಮುಕುತಿ ಯೋಗ್ಯರಿಗೆಲ್ಲ ಸುಖವ ತೋರುವ ಗುರು 1 ಮನದಿ ನೆಲಸಿ ಲೀಲೆ ತೋರುತ | ದೃಢ ಮನದಿ ಮನಸಿಜನ ಗೆಲ್ಲುತ | ದೇವ ಮನಸಿಜನಯ್ಯನ ಮನಸಿನೊಳ್ ತೋರುತ 2 ಕಷ್ಟಪಡುವುದು ಕಾಣುತ | ಬಹು ತುಷ್ಟರಾಗಿ ಅಭಯ ನೀಡುತ | ಮನ ಮುಟ್ಟಿ ರಕ್ಷಿಪೆನೆಂದು ಇಷ್ಟು ಸಲಿಪ ಗುರು 3 ನರಹರಿ ಧ್ಯಾನಿಪ ಶ್ರೀ ಗುರು | ಬಹು ಕರುಣಾಳುವೆ ದೇವತರು | ನಿಮ್ಮ ಅರಘಳಿಗೆ ಬಿಟ್ಟು ಇರಲಾರೆ ಧರೆಯೊಳು 4 ಮುಕ್ತಿ ಸೌಭಾಗ್ಯವ ನೀಡುವ | ಬಹು ಶಕ್ತರಹುದು ನಿಮ್ಮ ಭಾವವ | ನಾನು ಎತ್ತ ಯೋಚಿಸೆ ಕಾಣೆ ಸತ್ಯವಚನವಿದು 5 ಆನಂದಪಡಿಸುವ ಶ್ರೀ ಗುರು | ನಿಮ್ಮ ಏನೆಂದು ಸ್ತುತಿಹಲಿ ಪಾಮರರು | ನಿಮ್ಮ ಕಾಣರು ಜಗದಲಿ ಏನೆಂಬೆ ಮಹಿಮೆಯ 6 ಗೋಪಾಲಕೃಷ್ಣವಿಠ್ಠಲನ | ಶುಭ ರೂಪವ ತೋರುವ ಕಾರುಣ್ಯ | ದೇವ ಪರಿ ನಿಮ್ಮ ಸ್ತುತಿಸಿ ನಾ ಪಾರು ಕಾಂಬೆನು 7
--------------
ಅಂಬಾಬಾಯಿ
ಕೂಗೆಲೋ ಮನುಜ ಕೂಗೆಲೋ ಪ ಸಾಗರಶಯನನೆ ಜಗಕೆ ದೈವವೆಂದು ಅ ಮಾಧವ ಕೃಷ್ಣ ಸಚ್ಚಿದಾನಂದೈಕ ಸರ್ವೋತ್ತಮ ಸಚ್ಚರಿತ ರಂಗ ನಾರಾಯಣ ವೇದ ಮತ್ಸ್ಯ ಮೂರುತಿಯೆಂದು1 ನರಹರಿ ಮುಕುಂದ ನಾರಾಯಣ ದೇವ ಪರಮ ಪುರುಷ ಹರಿ ಹಯವದನ ಸಿರಿಧರ ವಾಮನ ದಾಮೋದರ ಗಿರಿ ಕೂರ್ಮ ಮೂರುತಿಯೆಂದು2 ಪುರುಷೋತ್ತಮ ಪುಣ್ಯಶ್ಲೋಕ ಪುಂಡರೀಕ ವರದ ಅಪಾರ ಸದ್ಗುಣನಿಲಯ ಮುರುಮರ್ದನ ಮಂಜು ಭಾಷಣ ಕೇಶವ ನಿರ್ಮಲ ದೇವ ಭೂವರಾಹಮೂರುತಿ ಯೆಂದು 3 ನಿಗಮವಂದಿತ ವಾರಿಜನಾಭ ಅನಿರುದ್ಧ ಅಪ್ರಾಕೃತ ಶರೀರ ಸುಗುಣ ಸಾಕಾರ ಜಗದತ್ಯಂತ ಭಿನ್ನ ನರಮೃಗ ರೂಪಾನೆಂದು 4 ವಟಪತ್ರಶಯನ ಜಗದಂತರ್ಯಾಮಿ ಕೌಸ್ತುಭ ವಿಹಾರ ತಟಿತ್ಕೋಟಿ ನಿಭಕಾಯ ಪೀತಾಂಬರಧರ ನಿಟಿಲಲೋಚನ ಬಾಲವಟು ಮೂರುತಿಯೆಂದು5 ವಿಷ್ಣು ಸಂಕರುಷಣ ಮಧುಸೂದನ ಶ್ರೀ ಕೃಷ್ಣ ಪ್ರದ್ಯುಮ್ನ ಪ್ರಥಮ ದೈವವೆ ಸಾರಥಿ ರಾಮ ಅಚ್ಯುತಾಧೋಕ್ಷಜ ಸೃಷ್ಟಿಗೊಡೆಯ ಭಾರ್ಗವ ಮೂರುತಿಯೆಂದು 6 ಇಭರಾಜ ಪರಿಪಾಲ ಇಂದಿರೆಯರಸ ನಭ ಗಂಗಾಜನಕ ಜನಾದರ್Àನನೆ ವಿಭುವೇ ವಿಶ್ವರೂಪ ವಿಶ್ವನಾಟಕ ಋ ಷಭ ದತ್ತಾತ್ರೇಯ ಶ್ರೀ ರಾಮಮೂರುತಿಯೆಂದು 7 ವಾಸುದೇವ ರಂಗ ನವನೀತ ಚೋರ ಜಾರ ಗೋಕುಲವಾಸಿ ಗೋವಳರಾಯ ಶ್ರೀಧರ ಏಕಮೇವ ಶ್ರೀ ಕೃಷ್ಣ ಮೂರುತಿಯೆಂದು 8 ಹೃಷಿಕೇಶ ಪರಮಾತ್ಮ ಮುಕ್ತಾಮುಕ್ತಾಶ್ರಯ ಭಂಜನ ಕುಸುಮ ಶರನಯ್ಯ ಶಾರ್ಙಧರಾಚಕ್ರಿ ವಿಷಹರ ಧನ್ವಂತ್ರಿ ಬೌದ್ಧ ಮೂರುತಿಯೆಂದು 9 ಸರ್ವಮಂಗಳ ಸರ್ವಸಾರ ಭೋಕ್ತ ಸರ್ವಾಧಾರಕ ಸರ್ವ ಗುಣಗಣ ಪರಿಪೂರ್ಣ ಸರ್ವ ಮೂಲಾಧಾರ ಕಲ್ಕಿ ಮೂರುತಿಯೆಂದು 10 ಪರಿ ಅಪಾರ ಜನ್ಮ ಬೆಂಬಿಡದಲೆ ಸಪ್ತ ದ್ವೀಪಾಧಿಪ ನಮ್ಮ ವಿಜಯವಿಠ್ಠಲರೇಯ ಅಪವರ್ಗದಲ್ಲಿಟ್ಟು ಆನಂದಪಡಿಸುವ 11
--------------
ವಿಜಯದಾಸ