ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನು ಪುಣ್ಯವ ಮಾಡಿ ನಾನಿಂದು ನಿನ್ನ ಕಂಡೆ ದೀನ ವತ್ಸಲ ಸ್ವಾಮಿ ಕೃಷ್ಣ ಪ ಜ್ಞಾನಗಮ್ಯನೆ ನಿನ್ನ ಕಾಣಲು ಮನದಲ್ಲಿ ನಿತ್ಯ ಧ್ಯಾನವ ಮಾಡುವರಯ್ಯ ಅ.ಪ. ಶ್ರುತಿ ಶಾಸ್ತ್ರಗಳನೋದಿ ಮಥನವ ಮಾಡುವ ಮತಿಸಾಧನದಿಂದ ನಿನ್ನರಸುವರೊ ಪತಿತಪಾವನ ನಿನ್ನ ಕರುಣವೊಂದಿಲ್ಲದಿರೆ ಇತರ ಸಾಧನವೆಲ್ಲ ಗತಿದೋರದೋ ಸ್ವಾಮಿ 1 ನಿನ್ನ ಭಕ್ತರು ಮಾಳ್ಪ ಸಾಧನಂಗಳಿಗೆಲ್ಲ ನಿನ್ನ ಕಾರುಣ್ಯವೇ ಕಾರಣವಲ್ಲವೆ ನಿನ್ನ ನುತಿಸ ಬಂದ ನರರ ಕ್ಷೇಮದ ಭಾರ ನಿನ್ನದೆಂದು ತಿಳಿದು ನೀನಾಗಿ ಪೊರೆಯುವೆ 2 ಏನೊಂದು ಸಾಧನವರಿಯದ ಎನಗೀಗ ನೀನಾಗಿ ದಯಮಾಡಿ ಮೈದೋರಿದೆ ಏನು ಧನ್ಯನೊ ನಾನು ಆನಂದಕೆಣೆಗಾಣೆ ದಾನವಾಂತಕ ಸ್ವಾಮಿ ಕರಿಗಿರೀಶನೆ ಕೃಷ್ಣ 3
--------------
ವರಾವಾಣಿರಾಮರಾಯದಾಸರು
ತುಳಸಿದೇವಿ ಪದಕೇ | ನಾರೇರು | ಬೆಳಗಿರಿ ಆರುತಿಯಾ ಪ ಬೆಳಗುವುದೂ ನಮ್ಮ | ಅಳಗಿರಿ ರಂಗನಲಲನೆ ಶ್ರೀ ತುಳಸಿಗೆ | ಕಲಿಮಲ ಹಾಗೆ ಅ.ಪ. ದಳಪ್ರತಿ ದಳದಲ್ಲಿ | ಶ್ರೀಹರಿ | ನೆಲಸಿಹ ತಾನಲ್ಲಿಒಲಿಮೆಲಿ ಭಕುತರ | ಹಲವು ಸೇವೆಗಳಿಗೊಲಿದು ಅಭೀಷ್ಟವ | ಸಲಿಸುವ ದೇವಿಗೆ 1 ಅಮೃತ | ಕಲಶವ | ಧರಿಸುತ ಧನ್ವಂತ್ರಿಬರಲು ನಯನದಿಂ | ಮರುಳೆ ಆನಂದಕೆವರ ಬಿಂದೋದ್ಭವೆ | ಹರಿ ಪ್ರಿಯೆ ತುಳಸೀ 2 ಇಂಬು ತೋರಿ ಇರಲುಅಂಬುಜಾಕ್ಷ | ಗುರು ಗೋವಿಂದ ವಿಠಲನ |ತುಂಬಿ ದ್ವೈಭವದಿ | ಸಂಭ್ರಮ ಸೇವಿಪ 3
--------------
ಗುರುಗೋವಿಂದವಿಠಲರು
ನೀನೆ ಮಾಡಿದ ಲೀಲೆ ಬಲು ಸುಖವೊ | ಆನೇನು ದು:ಖವನು ಬಡುವುದಿಲ್ಲವೋ ಜೀಯ |ಪ ತೋಟವನು ಮಾಡಿಸಿ ಅದರೊಳಗೆ ಒಂದು ಫಲ | ನಾಟಿಸಲು ಬೆಳೆದ ಫಲ ಪಕ್ವವಾಗೆ | ನೀಟಾದ ಫಲವೆಂದು ಅರಸು ಕೊಯ್ ತರಿಸಲು ತೋಟಿಗಾಗೇನು ದು:ಖ ಅರಸಿನಿಂಗೇನೈಯ1 ನಿನ್ನ ಸಂಕಲ್ಪನೆ ಸ್ಥಿರವಾಗಿ ಇದೆ ಇದೆ ಅನಂತ ವೇದಗಳು ಪೊಗಳೂತಿವಕೊ ಪನ್ನಗಶಯನನೆ ನೀನು ಮಾಡಿದ ಕ್ಲುಪ್ತ ಅನ್ಯಥಾವಾಗುವದೆ ಅನುಭವಾದಿಗಳಿಗೆ 2 ಸುಖ ದು:ಖವೆ ಎರಡು ನಿನ್ನ ವಶವಾಗಿದೆ ಸಖನಾಗಿ ಸುಖ ಉಣಿಸಲು ಹಿಗ್ಗುವೆ ದು:ಖ ತಂದಿತ್ತರೆ ಅಳಲಿ ಬಳಲುವದ್ಯಾಕೆ ಅಖಿಳ ನೀನಾವದಿತ್ತದೇ ಬಲು ಲೇಸು 3 ನೀನೆ ಕಲ್ಪಿಸಿದರೆ ಸೈರಿಸಲಾರದೆ ವೇಗ | ನಾನು ವ್ಯಧಿಕರಣ ಪೇಳಿದರಾಯಿತೆ | ಆನಂದಕೆ ಹ್ರಾಸ ಬರುವುದೆ ಶಾಶ್ವತ | ಏನಾದರೇನು ನೀನಾಡಿದಾಟವೆ ಸಮ್ಮತ | 4 ಸತ್ಪಾತ್ರರಾ ನೋಡಿ ದಾನವಿತ್ತರೆ ಅವಗೆ | ಉತ್ತಮಾ ಪದ ಉಂಟು ಪುಶಿಯಲ್ಲವೋ | ಸತ್ಪಾತ್ರ ನೀನೆಂದು ಪುತ್ರಾಖ್ಯ ಧನವಿತ್ತೆ | ಉತ್ತುಮಾ ಗತಿ ನೀಯೋ ವಿಜಯವಿಠ್ಠಲ ಕರುಣಿ 5
--------------
ವಿಜಯದಾಸ
ಸಂತರವರೆ ನೋಡಿರೈ ಕೈವಲ್ಯದಸಂತರವರೆ ನೋಡಿರೈ ಪ.ಸತ್ಯ ರಮೇಶನ ಸೃಷ್ಟಿಯೆ ಸತ್ಯಹತ್ತೆರಡೈದು ತತ್ವವೆ ಸತ್ಯಸತ್ಯಾತ್ಮೇಶರ ಭೇದವೆ ಸತ್ಯಸತ್ಯಾತ್ಮಕನ ಪದ ಸತ್ಯೆನುವ 1ಹರಿಭಕ್ತರ ಕಂಡಪ್ಪುತ ನಿರುತಹರಿಸಲ್ಲಾಪ ಕಥಾಶ್ರಯ ಬಲಿದಹರಿಭೃತ್ಯರಿಗನ್ನೋದಕನೀವರುಹರಿಸಂಕೀರ್ತನೆ ಮನಮನೆಯವರು2ಆನಂದಕೆ ಕವಲಿಲ್ಲದ ಸುಖದು:ಖಾನಂದವನನುಭವಿಸಿ ಬಿಡುವರುಆನಂದಮುನಿಯ ಮತಪ್ರಿಯನಿತ್ಯಆನಂದ ಪ್ರಸನ್ವೆಂಕಟಪತಿಯವರು 3
--------------
ಪ್ರಸನ್ನವೆಂಕಟದಾಸರು