ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಯದೇವ ಜಯದೇವ ಜಯ ವಾಸುದೇವ ಭಾಸುವ ಭಾಸ್ಕರಕೋಟಿತೇಜನ ಮನದೈವ ಧ್ರುವ ಪ್ರಾರ್ಥಿಸುವದರ್ತಿ ಆರ್ಥಿಯ ಘನ ಸ್ಫೂರ್ತಿ ಸ್ಪೂರ್ತಿಗೆ ಸುಸ್ಥಾನಾಗಿಹ ನೀ ಘನಗುರು ಮೂರ್ತಿ ಮೂರ್ತಿ ನಿಮ್ಮ ಕೀರ್ತಿ ಬೆಳಗುದು ಭಾವಾರ್ತಿ ಅರ್ತಿ ಬೆಳಗುವ ಕಂಗಳಿಗ್ಯಾಗಿಹ ನೀ ಸಾರ್ಥಿ 1 ಸುಗುಣ ನಿರ್ಗುಣ ನೀನೆ ಪರಿಪೂರ್ಣ ಯೋಗಿಯ ಮಾನಸಹಂಸನಾಗುವೆ ನೀ ಪೂರ್ಣ ಬಗೆ ಬಗೆ ಭಾಸುವ ಭಕ್ತವತ್ಸಲ ಗುಣ ಸುಗಮಾಗೂದಕೆ ನಿಮ್ಮ ದಯ ಆಧಿಷ್ಠಾನ 2 ಮುನಿಜನಕಾಗುವ ಖೂನ ಸ್ವಾನುಭದ ಜ್ಞಾನ ಸನಕ ಸನಂದನ ವಂದಿತ ನೀನೆ ಅನುದಿನ ಘನಸುಖದಾಯಕ ಸದ್ಗುರು ನೀ ನಿಧಾನ ದೀನ ಮಹಿಪತಿ ಸ್ವಾಮಿ ನೀ ಸನಾತನ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನೋಡು ಮನವೆ ನಿನ್ನೊಳಾಡುವ ಹಂಸ ಇಡಾಪಿಂಗಳ ಮಧ್ಯನಾಡಿವಿಡಿದು ಧ್ರುವ ಆಧಾರವಂ ಬಲಿದು ಸ್ವಾಧಿಷ್ಠಾನವ ದಾಟಿ ಹಾದಿವಿಡಿದು ನೋಡು ಮಣಿಪುರದ ಒದಗಿ ಕುಡುವ ಅನಾಹತ ಹೃದಯಸ್ಥಾನವ ಸಾಧಿಸಿ ನೋಡುವದು ವಿಶುದ್ಧವ 1 ಭೇದಿಸಿ ನೋಡುವದಾಜ್ಞಾಚಕ್ರ ದ್ವಿದಳ ಸಾಧಿಸುವದು ಸುಖ ಸಾಧುಜನ ಅಧರದಲಿಹ್ಯ ತಾ ಆಧಿಷ್ಠಾನವ ನೋಡು ಆಧಿಪತಿ ಆಗಿಹಾಧೀನ ದೈವವ 2 ಮ್ಯಾಲಿಹ್ಯ ಬ್ರಹ್ಮಾಂಡ ಸಹಸ್ರದಳ ಕಮಲ ಹೊಳೆಯುತಿಹ ಭಾಸ್ಕರ ಪ್ರಭೆಯ ಕೂಡಿ ಮೂಲಸ್ಥಾನದ ನಿಜ ನೆಲೆ ನಿಭವ ನೋಡುವ ಬಾಲಕನೊಡೆಯ ಮಹಿಪತಿ ಸ್ವಾಮಿಯ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು