ಫಲವೇನೊ ಫಲವೇನೊ ಫಲವೇನೊ ಮನುಜ ಪ
ಫಲವೇನೊ ಬಾಳಿ ಹರಿದಾಸನಾಗದ ಮೇಲೆ ಅ.ಪ.
ಆಧಿಕಾರವನು ಮಾಡಿ ಮಧುವೈರಿಯನು ಮರೆತು
ಎದುರಿಲ್ಲ ಎನಗೆಂದು ಬಲು ಮದದಿಂದ ಮೆರೆದೆ1
ಬಡವಾರ ಬಡಿಯುತ ಕಡುದುಷ್ಟನಿವನೆನಿಸಿ
ಹೆಡಿಗೇಲಿ ಹೊನ್ನ ತಂದು ನಿನ ಮಡದೀಗೆ ಕೊಡಲು 2
ಮಡದಿ ಮಕ್ಕಳು ನಿನ ಹಡೆದ ತಾಯ್ತಂದೆ
ಕಡು ಸುಖಪಟ್ಟಾರು ನಿನ ಒಡಗೂಡಿ ಬರುವಾರೆ 3
ಅನುದಿನದÀಲಿ ನೀನು ತನುವ ಪೋಷಿಸುತ
ಅನುರಾಗದಿಂದಾಲಿ ನಿನ್ನ ಮನಸಿನಂತಿದ್ದು 4
ನರಜನ್ಮವನು ಕೊಟ್ಟ ರಂಗೇಶವಿಠಲನ
ಹರುಷದಿಂ ಪಾಡುವ ಹರಿದಾಸನಾಗದ ಮೇಲೆ 5