ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆನೆಂತು ವರ್ಣಿಸಲಿ ಆ ದಿವ್ಯ ಮೂರುತಿಯನ ಪ ಆನಂದಮಯ ನಮ್ಮ ಆನಂದಕಂದನನು ಅ.ಪ. ಪಾದ ಆ ಜಾನು ಆ ನಡುವು ಆ ನಾಭಿ ಆ ವಕ್ಷ ಆ ಬಾಹು ಆ ಮುಖದ ಭಾವ ಆ ನೇತ್ರ ಆ ನಿಲುವು ಆ ಮಂದಹಾಸಗಳ ಆದ್ಯಂತ ಬಣ್ಣಿಸಲು ಆದಿಶೇಷಗೆ ವಶವೆ 1 ಆವನಿಗೆ ಸಮರÀಧಿಕರಿಲ್ಲವಾತಗಿನ್ನು ಆವಸಾಮ್ಯವ ಕೊಟ್ಟು ಬಣ್ಣಿಸುವೆನು ಆವನೀ ಜಗಕ್ಕೆಲ್ಲ ಆಧಾರವಾಗಿಹನೊ ಆವನಂಘ್ರಿಗಳ ಮುನಿಗಳಾವಾಗ ಚಿಂತಿಪರೊ 2 ಆವ ಮಂಗಳ ಮೂರ್ತಿಯಾ ಲಕ್ಷಣಗಳೆಲ್ಲ ಆವ ಶಾಸ್ತ್ರದೊಳುಂಟು ಅವನಿಯೊಳಗೆ ವಾಸುದೇವ ತಾನಾವಾಗಲೆಲ್ಲರೊಳು ಆವಾಸವಾಗಿಹನು ಆ ಕರಿಗಿರೀಶನು 3
--------------
ವರಾವಾಣಿರಾಮರಾಯದಾಸರು
ಲೋಕನೀತಿಯ ಹಾಡುಗಳು ಆರು ಹಿತರಾದಾರು ಈ ವಿಶ್ವದೊಳಗೆ ಕೃತಿ ಹೊರತು ಪ ಪಿತನಲ್ಲ ಸುತನಲ್ಲ ರತಿಯಲ್ಲ ಸುತೆಯಲ್ಲ ಅತಿ ಪ್ರೀತಿಯಿಂ ಪೊರೆದ ನಿಜಮಾತೆಯಲ್ಲಾ ಸುತನಪೇಕ್ಷಿಸಿ ಹೆದರಿ ಅಜಮಿಳನು ಕರೆಯಲ್ಕೆ ಪತಿತ ಪಾವನ ಹರಿಯ ನಾಮ ಹಿತವಾಯ್ತು 1 ಧನವಲ್ಲ ಸಿರಿಯಲ್ಲ ಬಹು ಬೆಳೆದ ಮೈಯಲ್ಲ ಹಣ ರಾಶಿ ಗಳಿಸುವ ದುರ್ಬುದ್ಧಿಯಲ್ಲ ಮನ ಮತ್ಸರಗಳಲ್ಲ ಕಾಮಕ್ರೋಧಗಳಲ್ಲ ತನುವಲ್ಲ ಡಂಬರದ ವೇದಾಂತವಲ್ಲ2 ತರಳನಾಗಿಹ ಧೃವಗೆ ತರುಣ ಪ್ರಲ್ಹಾದನಿಗೆ ಕರಿರಾಜ ಹನುಮಾದಿ ನಿಜ ಭಕ್ತರಿಂಗೇ ವರಧರ್ಮ ಪುತ್ರನಿಗೆ ಮಧ್ಯ ಪಾಂಡವನಿಗೇ ಪರಮ ಪತಿವ್ರತಾ ರಮಣಿ ದ್ರೌಪದಿಗೇ 3 ಧರಣಿಯನು ಹೊತ್ತಿರುವ ಆದಿಶೇಷಗೆ ಮತ್ತೆ ನಿರುತವೂ ಭಜಿಸಿದ ಪರಮ ದಾಸರಿಗೆ ಸಿರಿಯರಸ ಶ್ರೀಹರಿಯ ಭಜನೆಯೊಂದುಳಿದು 4 ಜನ್ಮಬಂಧವ ನೀಗಿ ಪರಮ ಪದವಿಯ ಕೊಡುವ ಸನ್ನುತವು ನಿಜ ಸೌಖ್ಯವನ್ನು ಕರುಣಿಸುವ ಪ್ರಾಣಿಯಲಿ ಆತ್ಮನಲಿ ಶ್ರಧ್ಧೆ ಹುಟ್ಟಿಸುವಂಥ ಚನ್ನಕೇಶವ ಸ್ವಾಮಿ ಭಕ್ತಿಯೊಂದುಳಿದು 5
--------------
ಕರ್ಕಿ ಕೇಶವದಾಸ