ಒಟ್ಟು 11 ಕಡೆಗಳಲ್ಲಿ , 10 ದಾಸರು , 11 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದುರ್ಗಾಪರಮೇಶ್ವರಿ ಇಡುಪ್ರೇಮವೆನ್ನೊಳತಿ ಪ ಅಡಿಗೆರಗುವೆ ತಾಯೆ | ಉಡುರಾಜವದನೆಯೆ || ಜಡರುಹದಳ ನೇತ್ರೆ | ಉಡುಪತಿಧರಜಾಯೆ ಅ.ಪ ಸಿರಿಯರಸನ ಸಹೋ | ದರಿ ನಿನ್ನ ನಂಬಿದೆ || ಪರಮಪಾವನೆ ಗೌರಿ | ಪರಮೇಶ್ವರಿ ದೇವಿ 1 ಆದಿಶಕ್ತಿಯು ನೀನೆ | ಆದಿ ಮಾಯೆಯು ನೀನೆ || ಮೋದದಾಯಕಿ ಜಗ | ದಾದಿ ನಾರಾಯಣಿ 2 ಪಾದ ಸೇವೆಗೆ || ವಿನಯದಿಂದರ್ಪಣೆ | ಯನುದಿನ ಗೈವಂತೆ3
--------------
ವೆಂಕಟ್‍ರಾವ್
ಅಂಬಾ ನಿಖಿಳಲೋಕ ಜನನಿ ಜಗದಂಬಾ ಪ. ನಿಖಿಳಲೋಕಸತಿ ಮುಕುತಿಪ್ರದಾಯಕಿ ಶುಕಶೌನಕಾದಿ ವಿನುತೇ ಕಾತ್ಯಾಯಿನಿ 1 ಆದಿಶಕ್ತಿ ದಿವಿಜಾದಿವಂದಿತೆ ಶಿವೆ ಯಾದವೇಂದ್ರ ದಾಮೋದರಭಗಿನಿ 2 ಕಂಬುಕಂಠಿಣಿ ಸ್ವರ್ಣಕುಂಭಯೋಧರಿ ಅಂಬುಜಾಸನವಿನುತೆ ಕಾತ್ಯಾಯಿನಿ 3 ಸರ್ಪವೇಣಿ ವರಬಪ್ಪ ಪುರೇಶ್ವರಿ ಮುಪ್ಪುರನಾಶನರ್ಧಾಂಗಿ ಕಾತ್ಯಾಯಿನಿ 4 ಸಿರಿಕಾತ್ಯಾಯಿನಿ ಗೌರಿ ಭವಾನಿ ಹರಿ ಲಕ್ಷುಮಿನಾರಾಯಣ ಭಗಿನಿ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಅಂಬಾ ನಿಖಿಳಲೋಕ ಜನನಿ ಜಗದಂಬಾ ಪ. ನಿಖಿಳಲೋಕಸತಿ ಮುಕುತಿಪ್ರದಾಯಕಿ ಶುಕಶೌನಕಾದಿ ವಿನುತೇ ಕಾತ್ಯಾಯಿನಿ1 ಆದಿಶಕ್ತಿ ದಿವಿಜಾದಿವಂದಿತೆ ಶಿವೆ ಯಾದವೇಂದ್ರ ದಾಮೋದರಭಗಿನಿ2 ಕಂಬುಕಂಠಿಣಿ ಸ್ವರ್ಣಕುಂಭಯೋಧರಿ ಅಂಬುಜಾಸನವಿನುತೆ ಕಾತ್ಯಾಯಿನಿ 3 ಮುಪ್ಪುರನಾಶನರ್ಧಾಂಗಿ ಕಾತ್ಯಾಯಿನಿ4 ಸಿರಿಕಾತ್ಯಾಯಿನಿ ಗೌರಿ ಭವಾನಿ ಹರಿ ಲಕ್ಷುಮಿನಾರಾಯಣ ಭಗಿನಿ5
--------------
ತುಪಾಕಿ ವೆಂಕಟರಮಣಾಚಾರ್ಯ
ಜಗದಂಬಿಕೆ ಪೊರೆ | ಭವಾನಿ | ಅಘಸಂಹರೆ | ಲೋಕೈಕ ಮಾತೆ ಪ. ಪರಮ ಪಾವನೆ | ಗೌರಿ ಮನೋಹರೆ || ಪರಮೇಶ್ವರಿ | ಕರುಣಾಕರೆ ಶ್ರೀಅ.ಪ. ಸುಂದರಾಂಗಿಯೆ || ಚಂದದೀ ಪೊರೆ | ಚಂದ್ರಚೂಡಪ್ರಿಯೆ1 ಆದಿಶಕ್ತಿ ದೇವಿ ಆದಿನಾರಾಯಣಿ | ಮೋದದೀ ಪೊರೆ | ಮೋದದಾಯಕಿಯೆ2 ಶಂಖಚಕ್ರಧರೆ | ಕಿಂಕರಪ್ರಿಯಕರೆ || ವೆಂಕಟೇಶನಾ | ಸೋದರಿ ಶಂಕರಿ3
--------------
ವೆಂಕಟ್‍ರಾವ್
ಜನನಿ ಜಾನಕೀ ನೀದಯಮಾಡೇ ಜಗದೀಶ್ವರ ನಾಯಕೀ ಪ ಫಣಿವಿಲಾಸನ ಪ್ರೀಯೆ ಭಜಕರ ಮನವಿಗಳ ನೀಕಾಯೆ ತಾಯಳೇ ಪ್ರಣವರೂಪಳೆ ಪ್ರಣಮಿಸುವೆ ತ್ರಿಣಯಸಖನಾರಾಣಿ ಸುಂದರೀ 1 ಸರ್ವತಂತ್ರಳೆ ಸಾಕ್ಷರೂಪಿಣಿ ದುರ್ಮದಾಂತಕಿ ದುಃಖದೂರಳೆ ನಿರ್ವಿಕಲೆ ಗೀರ್ವಾಣೆ ಶುಭಕರಿ ಉರ್ವಿಪಾಲಿಕಳಾದ ಸೀತೆಯ 2 ಆದಿಶಕ್ತಿ ಅನಂತರೂಪಳೆ ವೇದಮಾನಿನಿ ವಾದಿಭೀಕರಿ ಪಾದಸೇವ ಕನಿಷ್ಟಮೊದಗಿಸೆ ಭೂಧರಗೆ ನಿಜರಾಣಿ ವೈಭವೆ 3 ರಂಗನಾಯಕಿ ರಾಧೆ ಶ್ರೀ ಜಯ ಮಂಗಳಾಂಗಿ ಸಮೋದೆ ನಿಚ್ಚಲೆ ಜಂಗಮಾರ್ಚಿತ ಗುರುವು ತುಳಸೀ ಬೆಂಗಳೂರೊಳಗಿರುವ ಕಾರಣ4
--------------
ಚನ್ನಪಟ್ಟಣದ ಅಹೋಬಲದಾಸರು
ಜಯದೇವಿ ಜಯದೇವಿ ಜಯ ಆದಿಶಕ್ತಿ| ಜಯಜಯಚಂದ್ರಲೆಮಾತೆ ರವಿಶತ ನಿಜದೀಪ್ತಿ ಪ ಸುರಮುನಿ ಸೇವಿತವಾದಾ ಚಾರುವಿಲಾಸದಲೀ | ಇರುತಿರೆ ನಾರಾಯಣಮುನಿ ಭಕುತಿಗೆ ಪ್ರೇಮದಲೀ | ಕರುಣದಿಭೀಮರಥಿಯಾ ಬಂದು ನೀ ತೀರದಲಿ | ದಾರಿ ತಪ್ಪಿದ ದುರುಳನ ಮರ್ದಿಸಿ ಭೃಮರದಲಿ 1 ಅಂದಿಗಿಂದಿಗೆ ನಿಂತು ಪ್ರಸನ್ನತಿ ಗ್ರಾಮದಲಿ | ದ್ವಂದ್ವಚರಣವ ದೋರಿ ಮುಕುತಿಗೆ ಖೂನದಲಿ | ಬಂದವ ದರ್ಶನ ಸ್ಪರ್ಶನ ಪೂಜನ ಮಾಡುತಲಿ | ಚಂದದಿ ಇಹಪರ ಸುಖವಾ ಪಡೆದರು ಸುಲಭದಲಿ2 ವಿವೇಕ ಹರಿವಾಣದಿ ಭಾವದಾರತಿ ನಿಲಿಸಿ | ತೀವಿದ ಸಮ್ಮಜ್ಞಾನದ ಜ್ಯೋತಿಯ ಪ್ರಜ್ವಲಿಸಿ | ಆವಗುಬೆಳಗುವ ಮಹೀಪತಿ ನಂದನತಾನಮಿಸಿ | ಅನುದಿನ ಅಪರಾಧವ ಕ್ಷಮಿಸಿ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಧನ್ಯತೆಯಾಂತೆನಿಂದು ದೇವಿಯಕಂಡು ಮಾನ್ಯತೆ ಪಡೆವೆನೆಂದು ಪ. ಚಿನ್ಮಯರೂಪನ ಚೆನ್ನೆ ಲಕ್ಷ್ಮಿಯ ಸಂ ಪನ್ನ ಮೂರ್ತಿಯ ಕಂಡಿನ್ನೆನಗೆಣೆಯಾರೆನೆ ಅ.ಪ. ನಾಗವೇಣಿಯರೆಲ್ಲರು ಪಾಡುತ ಶಿರ ಬಾಗಿ ವಂದಿಸುತಿರಲು ರಾಗದಿಂ ನಲವೇರೆ ಭೋಗಭಾಗ್ಯವನೀವ ಯೋಗೇಶ್ವರಿಯ ದಯಾಸಾಗರಿಯ ಕಂಡು 1 ಐದೆಯರತಿಮುದದಿ ವೈದೇಹಿಯೆ ಯೆಮ್ಮ ಆದರ್ಶ ಮಹಿಳೆಯೆಂದು ಆದಿಶಕ್ತಿಯೇ ಈ ಶ್ರೀದೇವಿ ನಿಜವೆಂದು ಆದರಿಸುತ್ತಿರಲಾಮೋದವಾಂತುದರಿಂ 2 ಅರಿದಾವುದೆಮಗಿಳೆಯೊಳು ಶೇಷಗಿರೀಶನ ಅರಸಿಯೆಮ್ಮವಳಾದಳು ದುರಿತರೋಗವು ದೂರ ಸರಿದುದು ಮನವಾರ 3
--------------
ನಂಜನಗೂಡು ತಿರುಮಲಾಂಬಾ
ನೀನೆ ಸರ್ವ ಸೂತ್ರಧಾರನು ಪ ಕರ್ತು ನೀನೆ ಆದಿಶಕ್ತಿ ವಸ್ತು ಅ.ಪ ಮೂರು ಗುಣಗಳಲ್ಲಿ ನಿಲ್ಲಿಸಿ|| ಸಾರ ಮೂರು ಆರು ದೋಷದೂರ | ಮೂರು ಸುಖಕ್ಕೈಕ್ಯನೆನಿಸೊ 1 ತರಳ ಧ್ರುವನ ಮನವ ಪರಿಕಿಸಿ | ಮೇಲ್ ಲೋಕವಿತ್ತೆ | ನಿರತ ಭಕ್ತಿ ಪಾಲಿಸಿದ | ದುರಿತಹರನೆ ಶರಣು ಶರಣು 2 ಕರೆದು ಪತ್ನೀಸುತರನಿತ್ತು | ನಿಲದೆ ಮೋಕ್ಷದೊಳಗೆ ಪೊರೆದೆ 3 ಭೋಗದೀಶರಾಗಿ ಸುಖದ | ಸಾಗರದೊಳು ಮೆರೆದರಯ್ಯ 4 ತಂದೆ ಶ್ರೀನಿವಾಸ ನಿನ್ನ | ಮಂದಿರದೊಳೆನ್ನ ಸಲಹೊ 5
--------------
ಸದಾನಂದರು
ಮನುವಂಶ ಜಲಧಿಜಾತೆ ಸೀತೆ ಪೊರೆಯೆ ಜಾನಕಿ ಘನ ಪುಣ್ಯವಿನಯೆ ದಿವ್ಯರೂಪೆ ಜನನಿ ಭಾಮಿನಿ ಪ ರಾಮಚಂದ್ರ ಭಾಸಮಾನ ಹೃದಯ ಕುವಲಯೆ ಕಾಮದಗ್ಧ ದನುಜನಯನ ಕಾಲರೂಪಿಣಿ 1 ಲಕ್ಷ್ಮಣಾದಿ ಭಕ್ತಪಾಲೆ ನಿತ್ಯರೂಪಿಣಿ ಚಿತ್ತದಲ್ಲಿ ನೆಲಸು ದೇವಿ ತತ್ವಭೂಷಿಣೆ 2 ಆದಿಶಕ್ತಿ ಭೇದರಹಿತೆ ಮೋದದಾಯಕಿ ಮಾಧವಾಂಘ್ರಿ ಯುಗಳ ಸೇವೆಯನ್ನು ಕರುಣಿಸು 3 ಭೂಮಿತನಯೆ ಭೂಮ ಮಹಿಮೆ ಕಾಮಿನೀ ರಮೆ ಸಾಮಜಾಕರೋರು ಯುಗಳೆ ರಾಮ ಸುಂದರಿ4 ಪಂಕಜಾದಿ ಕುಸುಮಲೋಲೆ ಶಂಕರೀಪ್ರಿಯೆ ಅಂಕದಲ್ಲಿ ಪೊರೆಯೆ ಮಾತೆ ಪಂಕಜಾನನೆÀ 5
--------------
ಬೇಟೆರಾಯ ದೀಕ್ಷಿತರು
ಶರಣು ಶ್ರೀ ಪಾರ್ವತಿದೇವಿಗೆ ಶರಣು ಶಾಂಭವಿಗೌರಿಗೆ | ನಮ್ಮ ಶರ್ವಾಣಿಗೆ ಪ ಲಂಬ ಕರ್ಣನ ಬಿಂಬಛಿದ್ರನ ಸಂಭ್ರಮದಿ ಪಡೆದಮ್ಮಗೆ ಶಂಬರಾರಿಯ ಅಂಬಿಗಾಹರ ನಂಬಿದಾ ಪಟ್ಟದರಸಿಗೆ 1 ಅಮಿತ ಮಹಿಮಳೆ ಜ್ಯೋತಿ ಆದಿಶಕ್ತಿ ದುರ್ಗಾಂಬೆಗೆ ಹೇಮವರ್ಣ ಭವಾನಿಗೆ 2 ಹೊಡೆವ ಮೃಡಾಣಿಗೆ ಸ್ಮರಿಸದವರನ ಕಾಯ್ವಳೆ 3
--------------
ಹೆನ್ನೆರಂಗದಾಸರು
ಸ್ಥಿರದಿ ಸ್ಥಿರದಿ ನಿತ್ಯಾನಂದ ಭರಿತವಾಗಿರಲುಭರಿತವಾದಾನಂದ ಭರಿಸುತಿರಲುಪಆದಿಶಕ್ತಿಯು ಎಂಬ ಆಕಳನೆ ಬರಿಸಿಸಾಧುಗುರು ಕರುವೆಂಬುದದನೆ ಮುಂದಿರಿಸಿವೇದನಾಲಕು ಎಂಬ ಮೊಲೆಗಳನೆ ತೊರೆಸಿಭೇದರಹಿತಾದವರು ಹಿಂಡಿಲನು ಕರೆಸಿ1ಸ್ಥೂಲತನುವೆಂದೆಂಬ ಪಾತ್ರೆಯನೆ ತಂದುಲೋಲಸಾಂಖ್ಯವು ಎಂಬ ಕ್ಷೀರವನೆ ಕರೆದುಮೂಲಭೂತವದೆಂಬ ಹೆಪ್ಪನೆರೆದುಜೋಲುಮನಸಿನ ಬಡತನವನೆಲ್ಲ ಹರಿದು2ಸಾಧಕಾಂಗಗಳೆಂಬ ಮೊಸರನ್ನು ಮಥಿಸಿವಾದಹರವೆಂದೆಂಬ ಬೆಣ್ಣೆಯನು ತೆಗೆಸಿಸಾಧು ಶಾಂತಜÕವೆಂಬ ಪುಟದ ಮೇಲಿರಿಸಿಆತಘೃತಚಿದಾನಂದ ಜ್ಯೋತಿಯೊಡ ಬೆರಸಿ3
--------------
ಚಿದಾನಂದ ಅವಧೂತರು