ಒಟ್ಟು 4 ಕಡೆಗಳಲ್ಲಿ , 2 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಯಜಯವೆಂದು ಶರಣೆನ್ನಿ ಹನುಮಯ್ಯಗ | ಜಯ ಭೀಮಶೇನಾನಂದ ತೀರ್ಥರೇಯಗ ಪ ಆದಿಲಿ ಅಂಜನಿ ಉದರದಲಿ ಬಂದಾ | ಸಾದರ ರಘುಪತಿ ಸೇವೆಯಲಿ ನಿಂದಾ | ಶ್ರೀದೇವಿ ಸುದ್ದಿ ಶರಧಿಯ ದಾಟಿ ತಂದಾ | ಭೇದಿಸಿ ರಾವಣನಾ ದಳವೆಲ್ಲಾ ಕೊಂದಾ 1 ತರಿ ತರಿದೊಟ್ಟದಾ ಕುರುಕುಲಾನ್ವಯ ವೃಂದಾ ಅರಸ ಯುಧೀಷ್ಠಿರನಾ ವಾಸಿಯ ತಂದಾ2 ಮೂರನೇ ರೂಪದಿ ಮಧ್ಯಗೇಹದಿ ಬಂದಾ ನೆರೆ ಬಾದರಾಯಣನಾಜ್ಞೆಲಿ ನಿಂದಾ ವರವರದ್ಹೇಳಿದ ತತ್ಪಾರ್ಥ ಛಂದಾ ಗುರುವರ ಮಹಿಪತಿ ನಂದನ ಮನಕಾನಂದಾ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಜಯದೇವಿ ಜಯದೇವಿ ಜಯ ಪಾವನಗಂಗೇ | ಜಯಜಯ ತ್ರಿಪಥಗಾಮಿನಿ ಜಯ ತುಂಗತರಂಗೇ ಪ ಆದಿಲಿ ಶ್ರೀಹರಿ ಕೋಮಲ ಪದನಖದಿಂದೊಗದು | ಸಾಧಿನಿ ವಾರಿಜಭವನಾ ಕರಪಾತ್ರಕೆ ಬಂದು | ಸಾದರದಿಂದಾಶಿವನ ಕೆಂಜೆಡೆಯೊಳು ನಿಂದು | ಮೇದಿನಿಗಿಳಿದು ನೀಬಂದೆ ಭಗೀರಥನೃಪಗೊಲಿದು 1 ಕಾಶಿಪ್ರಯಾಗದಿ ನಿಂದು ಉದ್ದರಿಸುತ ಕೆಲರಾ | ಆಶೆಯ ಪೂರಿಸಲಾಗಿ ದಕ್ಷಿಣ ದಿಶೆದವರಾ | ರಾಶಿಯ ಕನ್ಯಾ ಮೆಟ್ಟಲು ಸುರಗುರು ಗಂಭೀರಾ | ಭಾಶಿಶಿ ತೋರಿದೆ ಬಂದು ಕೃಷ್ಣವೇಣಿಲಿ ಸದರಾ 2 ಹರಿಹರ ದೇವರು ದ್ರವರೂಪದಿ ಹರಿವುತಲೀ | ನೆರೆನೀಕೂಡಿದ ಸಂಭ್ರಮ ಏನೆಂದುಸುರಲಿ | ದರುಶನ ಮಾತ್ರದಲಾದೆನು ಮುಕ್ತನು ಭವದಲಿ | ಗುರು ಮಹೀಪತಿಸುತ ಎನ್ನನು ರಕ್ಷಿಸು ಕರುಣದಲಿ |3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನ್ನಿಂತಾವಳೀ ಜಗದೊಳುಂಟೇನೆ ರಮಣೀ ಪ ನಿಂತಾಗೆ ನುಂಗಿದಳು ಕಂತೆ ಕಬ್ಬಾ ಅ.ಪ ಗರತಿಯು ತಾನಲ್ಲ ಗೌಡಿಯ ತಾನಲ್ಲ ಗುರುತೇಳುತದೆ ನೀವೆದ್ದರೆ ಕೇಳಿರೈ ಸರಿತಾಯಿ ಪರಿಯುತ್ತೆ ವರಗಂಡನಿಗೆ ಮೋಸ ಕರಿಯುತ್ತಳಿಹ ಪ್ರಖ್ಯಾತ ನಳ್ಳಿಯೊಳು 1 ಆದಿಲಿ ಹೊಗ ಪರಬೀದಿಯೊಳು ತಾನೆಂತೂ ವಾದಿಸಿ ಅವರೊಳು ಭೇದವಿಡಿದೆ ಕಾದಿರುವೆ ನಿನಗಾಗಿ ಕಾಮನಯ್ಯನೆ ಬಾರೊ ವೇದಗೋಚರ ಗುರು ಶ್ರೀತುಲಸೀರಾಮಾ2
--------------
ಚನ್ನಪಟ್ಟಣದ ಅಹೋಬಲದಾಸರು
ಹಾದಿಯ ಕೊಡುಹರಿ ಪರಗತಿಯಾ ಸಾಧಿಸಿ ಬಂದೇ ಕೇಳಿ ಕೀರುತಿಯಾ ಪ ಕ್ಷಿತಿಯೊಳು ಭರತ-ಖಂಡದ ದೇಶದ ಪತಿತರ ತಾಂಡೆಯದ ನಾಯಕನು ಮತಿ ಹೀನ ಕಾಮಕ್ರೋಧರಾಗಿಹ ಪುಂಡರು ಪಥ ನಡೆಗುಡಿಸರು ಅತಿಬಲರು 1 ಆದಿಲಿ ಅಜಮಿಳಾ ತಾಂಡ್ಯ ಹೋದ ಬಳಿಕಾ ಹಾದಿ ಮುಗ್ಗಿತಿ ಕಡೆ ಬಹುದಿನದೀ | ಸಾದರಲೆನಗನಿ ಅಭಯವ ಕೊಟ್ಟರ | ಭೇದಿಸಿ ಜನರನು ನೆರಹುವೆನು 2 ಏನಾರೆ ಗೋಣಿಗೆ ಭಾವದ ಲಹರೆ ಕÉೂಂಡು ಮಾನು ಭಾವರ ಪ್ಯಾಟಿ ಹೋಗಿಸುವುದು ಘನಗುರು ಮಹಿಪತಿ ನಂದನ ಸಾರಥೀ ದೀನ ವತ್ಸಲನೆಂಬ ಬಿರುದಹುದು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು