ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಕ್ಷತ್ರದಾರತಿ ಬೆಳಗೀರೇ ಜಗ ದ್ರಕ್ಷ ಕೃಪಾನಿಧೇ ಪಕ್ಷಿವಾಹನಗೆ ಪ ಪಕ್ಷಿಯು ತಾನಾಗಿ ಪ್ರಜ್ವಲಿಪಾ ಯಕ್ಷರಕ್ಷಕ ಸರ್ವಶಿಕ್ಷಾ ದಯಾಕರ ಲಕ್ಷ್ಮೀಪತಿಯಾದ ಮೋಕ್ಷದಾಯಕಗೇ 1 ಆದಿರೂಪನಿಗೆ ಆಧ್ಯಾತ್ಮನಾದವನಿಗೆ ಸಾಧುಶಿಖರನಾದ ಸರ್ವಸ್ವತಂತ್ರಗೆ ನಾದಬಿಂದು ಕಳೆಯೊಳಾಡುತಿರುವವಗೆ 2 ಅಖಿಳಾಂಡಕೋಟಿ ಬ್ರಹ್ಮಾಂಡನಾಯಕನಿಗೆ ಪ್ರಕಟಿತಮಾಗಿಹ ಪರತತ್ವಗೆ ಚಿಕಟಾಯಿಸಿದ ನಮ್ಮ ಗುರುವು ತುಲಸಿರಾಯಾ ಸಖನಾದ ಶಿವಗೆ ಶಂಕರಗೆ ಶ್ರೀಹರಿಗೆ 3
--------------
ಚನ್ನಪಟ್ಟಣದ ಅಹೋಬಲದಾಸರು
ನಿತ್ಯ ಶುಭ ಮಂಗಳಂ ಭಯ ವಿನಾಶನದೇವ ಶ್ರೀನಿವಾಸನಿಗೆ ಪ. ಮಂಗಳಂ ಜಲಚರಗೆ ಮಂಗಳಂ ಗಿರಿಧರಗೆ ಮಂಗಳಂ ಭೂದೇವಿ ರಕ್ಷಕನಿಗೆ ಮಂಗಳಂ ನರಹರಿಗೆ ಮಂಗಳಂ ಮಾಣವಗೆ ಮಂಗಳಂ ಭಾರ್ಗವಗೆ ದಾಶರಥಿಗೆ 1 ಮಂಗಳಂ ಗೋಪಾಂಗನೆಯರ ಕಾಯ್ದವನಿಗೆ ಮಂಗಳಂ ತ್ರಿಪುರ ಸುರರಳಿದ ಹರಿಗೆ ಮಂಗಳಂ ಹಯವೇರಿ ಕಲಿಮುಖರ ಗೆಲಿದವಗೆ ಮಂಗಳಂ ಶ್ರೀಕೃಷ್ಣ ಶ್ರೀನಿವಾಸನಿಗೆ 2 ಆಪಾದಮೌಳಿ ಪಾವನರೂಪನಿಗೆ ಆಪನ್ನ ರಕ್ಷಕಗೆ ಆದಿರೂಪನಿಗೆ ಆಪದ್ಭಾಂಧವ ಶ್ರೀಗುರುಗಳಂತರ್ಗತಗೆ ಗೋಪಾಲಕೃಷ್ಣವಿಠ್ಠಲಮೂರ್ತಿಗೆ 3
--------------
ಅಂಬಾಬಾಯಿ