ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪೊಗಳಲಳವಾರಿಗೆ ಎಲೆ ದೇವ ನಿನ್ನ ನಿಗಮ ಆಗಮಾತೀತ ಗರುವರಹಿತನ ಪ ನೆಲೆಬುಡತುದಿ ಮೊದಲಿಲ್ಲದವನು ನೀ ಪ್ರಳಯ ಪ್ರಳಯಕ್ಕಾದಿ ಆದಿಯಾದವನು ನೀ ನಲಿಯುವಿ ನಲಿಯದೆ ಚಲಿಸುವಿ ಚಲಿಸದೆ ತಿಳಿಯದೆ ತಿಳಿಯುವಿ ವಿಲಸಿತ ಮಹಿಮ 1 ಆರಾರರಿಯದ ಮಹದಾದಿ ಅನಾದಿ ನೀನು ಸಾರ ಚರಾಚರಕ್ಕಾಧಾರರಾದವ ನೀ ಕೋರುವಿ ಕೋರದೆ ತೋರುವಿ ತೋರದೆ ಬಾರದೆ ಬರುವಿಯೊ ಮೀರಿದ ಮಹಿಮ 2 ಗುಣಿಸಿ ನೋಡಲು ತುಸುಗುಣ ತೊರೆದವ ನೀನು ಗಣಿತಕ್ಕೆ ನಿಲುಕದಕಲಂಕ ಮಹಿಮ ನೀ ಜನಿಸುವಿ ಜನಿಸಿದೆ ಕುಣಿಸದೆ ಕುಣಿಸುವಿ ಮಣಿಸುವಿ ಮಣಿಸದೆ ಅನುಪಮಮಹಿಮ 3 ತೊಡರೆಡರಿಗಡರದೆ ಕಡೆಯಲಾಡುವಿ ನೀನು ತೊಡರಿನೊಳಗೆ ಬಿಡದೆ ತೋರುವಿ ನೀ ನುಡಿಯಿಲ್ಲದೆ ನುಡಿಸುವಿ ನಡೆಯಿಲ್ಲದೆ ನಡೆಸುವಿ ಮಡಿಯಿಲ್ಲದೆ ಮಡಿಯೆನಿಪ ಕಡುಚಿತ್ರ ಮಹಿಮ 4 ಮೀಸಲು ಮಡಿರಹಿತಪಾವನ ನೀನು ಸಾಸಿರನಾಮದಿ ಕರೆಸಿಕೊಂಬುವಿ ನೀ ವಾಸಿಸದೆ ವಾಸಿಸುವಿ ಪೋಷಿಸದೆ ಪೋಷಿಸುವಿ ಶ್ರೀಶ ಶ್ರೀರಾಮ ದಾಸಜನರ ಸುಲಭ ನಿನ್ನ 5
--------------
ರಾಮದಾಸರು