ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭಯವ್ಯಾಕೆ ಭಕ್ತ ಜನಕೆಪ. ನಯದಿಂದ ಗೆಲಿಸುವನು ನಾಲ್ದಿಕ್ಕಿನೊಳಗಿದ್ದ ಮಾಯವಾದಿಗಳನ್ನು ಅ.ಪ. ಆದಿಯಲ್ಲಿ ಬ್ರಹ್ಮನಿಗೆ ಭೀತಿಯನು ಬಿಡಿಸಿದ ನಾದಮಯನಾದ ದೇವ ಭೇದವಿಲ್ಲದೆ ಎಲ್ಲಾ ಭೇದವೆಂಬುವರನ್ನು ಕಾದ ಬಾಣಲೆಗೆ ತಟ್ಟಿ ಮೋದಿಸಿ ಕೊಲುವ 1 ಉದಯದಲ್ಲಿ ಎದ್ದು ನರ ಸದಮಲಾತ್ಮಕನಾಗಿ ಹೃದಯದೊಳಗೆ ಹರಿಯ ತಂದು ಮುಂದು ಸದಯನು ನೀನೆನುತ ಸದ್ವøತ್ತಿಲುದಯನು ನೀನೆನುತ ದಧಿಚೋರ ಕೃಷ್ಣನ್ನ ಮುದದಿ ಭಜಿಪರಿಗೆ 2 ದುಷ್ಟಮಲ್ಲರ ಎದೆ ಮೆಟ್ಟಿ ಮೆರೆವ ಜಗ- ಜಟ್ಟಿ ಮಧ್ವರಾಯರ ಮುಟ್ಟಿ ಭಜಿಸುತ ನಿತ್ಯ ಇಷ್ಟವನು ಬೇಡಿದರೆ ಕಷ್ಟಗಳನು ಕಳೆವ ಉ- ತÀ್ಕøಷ್ಟ ಹಯವದನ ದೊರೆ 3
--------------
ವಾದಿರಾಜ
ದುರಿತ ತ್ಯಜಿಸೋ | ವರ ಮಾನವಿ ಪುರದಿ ಮೆರೆವ ಪ ಆದಿಯಲ್ಲಿ ಪ್ರಹ್ಲಾದನ ಸಹೋದರನೀತ | ಯೋಧ ಶಲ್ಯ ದ್ವಾಪರದಿ ರಾಧೇಯಗೆ ಸೂತ | ಪುರಂದರ ದಾಸಾರ್ಯರ ಪ್ರೀತ | ಸಾಧುರಂಗವೊಲಿದ ಭಾಗವತರತಿ ಖ್ಯಾತ 1 ತ್ವರವಾಟದಿ ಕರುಣಿಕ ನರಸಾರ್ಯರಪುತ್ರ | ಧರೆಸುರ ಪರಿಪಾಲಕ ವರದೇಂದ್ರ ಛಾತ್ರ ತುರ ರಕ್ಷಕ ದಾಸರಾಯರ ಕರುಣಕೆ ಪಾತ್ರ ದುರಿತಾಟವಿ ವೀತಿ ಹೋತ್ರ ಘನ ಸುಚರಿತ್ರ 2 ಸೀಮದಿಂದ ಭಜಿಸುವರ ಕಾಮಿತ ಫಲವಾ | ಪ್ರೇಮದಿಂದ ಗರೆಯಲು ಸ್ತಂಭ ದೊಳಿರುವಾ || ಶಾಮಸುಂದರ ಸ್ವಾಮಿಯ ಕಥೆಪೀಯೂಷರಸವ | ಭೂಮಿ ವಿಬುಧ ಸ್ತೋಮಕೆರೆದ ಮಹಾನುಭಾವ 3
--------------
ಶಾಮಸುಂದರ ವಿಠಲ
ಮಾನಸ ಪೂಜೆಯನು ಮಾಡು | ಧ್ಯಾನ ಪೂರ್ವದಿಂದ ಕುಳಿತು ಪ ಜ್ಞಾನ ಭಕುತಿಯ ವಿಡಿದು ಲಕುಮಿ | ಪ್ರಾಣನಾಥನ ಪ್ರೇರಣೆಯಿಂದ ಅ.ಪ ಕಾಮ ಕ್ರೋಧವ ಹಳಿದು ವಿಷಾದವೆಂಬೋ | ಸ್ತೋಮಗಳನು ತೊರೆದು ರಜೋ ಮೊದಲಾದ || ತಾಮಸದ ಬುದ್ಧಿ ಬಿಟ್ಟು ನೇಮನಿತ್ಯ ತೀರಿಸಿಕೊಂಡು | ಈ ಮನಸ್ಸು ಇಟ್ಟು 1 ಹೃದಯ ಪದುಮದೊಳಗೆ ಹರಿಯ ಪದುಮ ಪದಗಳಿಟ್ಟು | ದೇಹ ಕದಲದಂತೆ ಇದ್ದು ಜ್ಞಾನ ಉದಿತವಾದ ದೃಷ್ಟಿಯ || ಹದುಳದಿಂದ ತಿಳಿದು ಅಂತರವೆಲ್ಲವನು ನೋಡಿ | ಕದವ ತೆರೆದು ಕೊಟ್ಟ ಮುದದಿ ದೃಢವ ಸಂಪಾದಿಸಿ2 ನೀಲ ರತುನದಂತೆ ಹೊಳೆವ ಪಾಲಸಾಗರತನುಜೆ | ಮೇಲು ಮಂಗಳರಮಣನಾದ ಮೇಲುಗಿರಿಯ ತಿಮ್ಮನ || ತವಕ ಬೀಳದಲೆ ಪೂಜೆ ವಿಧಾ | ಸಾಲುಗಳನು ತಿಳಿದು ವಿಶಾಲ ಬುದ್ಧಿ ಯುಕುತಿಯಿಂದ 3 ವೇದ ಮಂತ್ರಗಳನು ಪೇಳಿ ಆದಿಯಲ್ಲಿ ಪೀಠಪೂಜೆ- | ಯಾದ ತರುವಾಯ ವಿನೋದದಿಂದಲಾವರಣ || ಆದರಣೆಯಿಂದ ಬಳಿಕ ಮಾಧÀವರಿಗೆ ಸಕಲ ಭೂಷ- | ಣಾದಿಗಳನು ರಚಿಸಿ ಪುಣ್ಯಹಾದಿಯನು ತಪ್ಪದೆ 4 ದೋಷರಾಶಿಗೆ ದ್ವೇಷನಾಗಿ ಈ ಶರೀರವÀ ಘಾಸಿಮಾಡದೆ | ಪಾದ || ಲೇಸಿನಿಂದ ಭಜನೆಗೈದು ವಾಸವಾಗು ಪದದಲ್ಲಿ | ಶ್ರೀಶ ವಿಜಯವಿಠ್ಠಲರನ್ನ ದಾಸ-ದಾಸರ ದಾಸನೆಂದು5
--------------
ವಿಜಯದಾಸ