ಒಟ್ಟು 5 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀ ರಮೇಶನೆ | ಶ್ರೀ ನಾರಸಿಂಹ ಶ್ರೀ ರಮೇಶನೆ ಪ. ಶ್ರೀ ರಮೇಶ ಸುರ ಸಾರ್ವಭೌಮ ಭವ ತಾರಕಗೊಳಿಸುವ ಕಾರಣಪುರುಷ ಅ.ಪ. ಆದಿಮೂಲನೆ | ಅಪಾರ ಮಹಿಮ ಖೇದದೂರನೆ ವಾದಿಪ ಪಿತನೊಳು ಸಾಧಿಪೆ ನಿನ ಮತ ಮೋದಗೊಳಿಸಿ ಪ್ರಹ್ಲಾದನ ಪೊರೆದೆ 1 ಶೌರಿ ಭೂಧರಾ ದೊರೆ ಕಾದಿದ ದುಷ್ಟ ದೈತ್ಯಾದಿಗಳ ಕೊಂಡು ಮೋದವಿತ್ತೆ ಭೂದೇವಿಗೆದೆ ಶ್ರೀಶಾ 2 ಭೂಪರೈವರು | ಎದುರಲ್ಲಿ ಇರಲು ಪಾಪಿ ಖೂಳರು ದ್ರೌಪದಿ ವಸನವ ಕೈಪಿಡಿದೆಳೆಯಲು ಪತಿ ಸಲಹೆನೆ ತಾಪವ ಬಿಡಿಸದೆ 3 ನೀರೊಳಾಡಿದೆ | ನೀ ಕಲ್ಲು ಪೊತ್ತು ನಾರಿಯ ತಂದೆ ನಾರಸಿಂಹ ವಟು ವೀರರಾಮಚಂದ್ರ ಜಾರಚೋರ ವಸ್ತ್ರದೂರನೆ ಕಲ್ಕಿ 4 ಗೋಪಾಲಕೃಷ್ಣ | ವಿಠ್ಠಲದೇವ ಕಾಪಾಡೊ ಕೃಷ್ಣ ರೂಪ ರೂಪಾಂತರ ವ್ಯಾಪಿಸಿ ಜಗದೊಳು ಶ್ರೀಪತಿ ಹೃದಯದಿ ರೂಪವ ತೋರೊ 5
--------------
ಅಂಬಾಬಾಯಿ
ಶ್ರೀನಿವಾಸಗಾರುತೀಯ ಮಾನುನೀಯರು ಬೆಳಗಿರೀಗ ಪ ಗಾನಲೋಲ ದೀನಪಾಲ ಆನಂದಕಂದ ಸುಂದರಾಂಗ ಅ.ಪ ಭಕ್ತಪಾಲಾಸಕ್ತÀ್ತಶೀಲಾ ಮುಕ್ತೀಶ ರಮಾಲೋಲಗೀಗ ಮುತ್ತಿನಾರುತೀಯನೆತ್ತೀರೆ ಭಕ್ತವತ್ಸಲ ದೇವಗೆ ಬೇಗ 1 ಆದಿಮೂಲನೆ ವೇದೋದ್ಧಾರನೆ ಸಾಧುವಂದ್ಯ ಗಿರಿಧರನೆ ಕಂದಗೊಲಿದಾನಂದ2 ಭೂಮಿ ಅಳಿದ ಭೂಪರ ಕೊಂದ ಭೂಮಿಜೆ ಅರಸ ಭೂಪ ಕೃಷ್ಣಾ ಭಾಪುರೆ ಬೌದ್ಧ ಭೂಪ ಕಲ್ಕಿ ಶ್ರೀಪ ಶ್ರೀಶ್ರೀನಿವಾಸನಾದ 3
--------------
ಸರಸ್ವತಿ ಬಾಯಿ
ಶ್ರೀಹರಿ ಸ್ತೋತ್ರ ಪಾಲಿಸೆನ್ನನು ಶ್ರೀ ಹರಿಯೆ ಸಿರಿದೇವಿ ಧೊರೆಯೇ | ಸರಸಿಜಾಸನ ಪಿತನೇ|| ಪ ಪಾರ್ಥಸೂತ ಪನ್ನಗಗಿರಿ ನಿಲಯ ಪವಮಾನ ವಂದ್ಯ | ಶ್ರೀ ಭೂರಮಣನೇ ಸೃಷ್ಟಿಗೊಡೆಯನೆ | ಕ್ಲೇಶ ಕಳೆಯುವ ಕೈಟಭಾರಿ ಕರುಣ ಶರಧಿಯೆ ಅ.ಪ ಬ್ರಹ್ಮಾದಿ ಮನುಜಾಂತ ಶ್ರವಣ ಮನನ ಧ್ಯಾನ ದಿಂದಲೇ ಕಾಂಬೋರು ನಿನ್ನ ರೂಪ ಯೋಗ್ಯತಾನುಸಾರ | ನಿಯಮ ಭಂದ ಮೋಕ್ಷ ಕರ್ತನೆ | ಶಾಂತಿ ಕೈತಿ ಜಯಾ ರಮಣನೀನೇ ಮೋಕ್ಷದಾಯಕ ಮಾಯಾಪತಿಯೇ ಸರ್ವ ಆಶ್ರಯ ಲಕ್ಷ್ಮೀ ರಮಣನೇ ಸಮರು ಅಧಿಕರು ಇಲ್ಲದಂಥಾ | ಸಾರ್ವಭೌಮನೇ ಆದಿಮೂಲನೆ ಅಪ್ರಮೇಯನೆ ಅನಿರುದ್ಧ ಮಾರುತಿ | ಎನ್ನ ಅಪವಳಿಗಳನೆ ತಂದು ಚÉನ್ನವಾಗಿ ನಿನ್ನ ತೋರಿಸಿದ 1 ಸದೋಷಿ ನಾನಹುದೋ ಸಂಕರ್ಷಣ ಮದ್ದೋಷ ಪರಿಹರಿಸೋ ನಿಗಮ ವೇದ್ಯನೆ ನಿನ್ನಧೀನವು ಎಲ್ಲಾ | ವಿಶ್ವ ತೇಜಸ ಪ್ರಾಜ್ಞರೂಪನೇ ಮೂರು ಸ್ಥಿತಿಯಲ್ಲಿ ಮುಖ್ಯ ಪ್ರವರ್ತಕ | ಅಂಡ ಪಿಂಡ ಬ್ರಹ್ಮಾಂಡದಲ್ಲಿ ಒಳ ಹೊರಗೆ ವ್ಯಾಪ್ತನೆ ವಿಶ್ವತೋಮುಖ ವಿಧಿಭವ ನುತ ವಿಚಿತ್ರ ಮಹಿಮ ವಿಭೂತಿರೂಪನೇ ವಾಸುದೇವನೇ ವಾರಿಜಾಸನ ವಂದ್ಯ ವರಾಹನೆ ಇರುವ ತಾ¥ಟಿÀ ಹರಿದು 2 ನಿರ್ಗುಣ ಗುಣ ಭರಿತಾ ನಿನ್ನ ಪರೋಕ್ಷ ಬೇಡುವೆ ಬಹುವಿಧದಿ ಭವದ ಕ್ಲೇಶಗಳ ಬಿಡಿಸೋ ಭಕ್ತವತ್ಸಲ | ಪತಿ ಸನ್ನುತ | ಪರಮ ಹಂಸೋಪಸ್ಯ ತುರ್ಯನೆ ಆತ್ಮ ಅಂತರಾತ್ಮ | ಪರಮ ಆತ್ಮ ಜ್ಞಾನಾತ್ಮ ನೀನೆ | ಕೂರ್ಮ ಕ್ರೋಢ ನರಹರಿ ಮಾಣವಕ | ಮೋದ ಕೊಡುವ ಮುದ್ದು ಬುದ್ಧನೆ | ಕಠಿಣ ಖಳರ ಕಡಿವ ಕಲ್ಕಿಯೆ ಅನಂತ ಗುಣ ಕ್ರಿಯಾ ರೂಪದಲಿ ನೀ ಸ್ವಗತ ಭೇದ ವಿವರ್ಜಿತಾತ್ಮನೇ | ನಿರಂಜನ ನಾರಾಯಣನೇ | ಪತಿ ಪ್ರಭಂಜನ ಪ್ರಿಯ ರಾಗರಹಿತ ರಾಘವೇಂದ್ರ ಸಂಸೇವ್ಯ ನರಹರಿಯೆ | ಅಜನ ತಾತ ಪ್ರಸನ್ನ ಶ್ರೀನಿವಾಸ ಲಕ್ಷ್ಮೀ ಈಶ ಹರಿಯೆ | ಪ್ರಣತಾರ್ತಿಹರ ಪ್ರಮೋದಿ ನೀನೇ 3
--------------
ಪ್ರಸನ್ನ ಶ್ರೀನಿವಾಸದಾಸರು
ಬಾರೊ ಮುನಿಸೇತಕೆಭಾವಜನಯ್ಯಪಮಾವನಳಿಯನೆ ಬಾರೊ ಭಾವತನಯನೆ ಬಾರೊ |ಮಾವನ ಮಡದಿಯ ಮಗಳ ಸೊಸೆಯಗಂಡ1ಅತ್ತಿಗೆಮೈದುನನೆ ಬಾರೊ ಅತ್ತಿಗೆಯ ಮಗಳಗಂಡ|ಮತ್ತೆ ಮೇಲೆ ಅತ್ತಿಗೆಯ ಪುತ್ರಿಯ ಮುದ್ದಾಡುತ 2ಅಂಬುಜನಯನನೆ ಬಾರೊ ಆದಿಮೂಲನೆ ಬಾರೊ |ಕಂಬದಿಂದೊಡೆದು ಬಂದ ಪುರಂದರವಿಠಲಯ್ಯ 3
--------------
ಪುರಂದರದಾಸರು
ಹೊಯ್ಯಾಲೊ ಡಂಗುರವ - ಜಗ - |ದಯ್ಯನಯ್ಯ ಶ್ರೀಹರಿ ಅಲ್ಲದಿಲ್ಲವೆಂದುಪ.ಅಷ್ಟೈಶ್ವರ್ಯದ ಲಕುಮಿಯ ಅರಸೆಂದು |ಸೃಷ್ಟಿ - ಸ್ಥಿತಿ - ಲಯಕರ್ತನೆಂದು ||ಗಟ್ಟಿಯಾಗಿ ತಿಳಿದುಹರಿ ಎನ್ನದವರೆಲ್ಲ |ಭ್ರಷ್ಟರಾದರು ಇಹ - ಪರಕೆ ಬಾಹ್ಯರು ಎಂದು 1ಹರಿಯೆಂಬ ಬಾಲನ ಹರಹರ ಎನ್ನೆಂದು |ಕರುಣವಿಲ್ಲದೆ ಪಿತ ಬಾಧಿಸಲು ||ತರಳನ ಮೊರೆಕೇಳಿ ನರಮೃಗರೂಪದಿ |ಹರಿಯ ನಿಂದಕನ ಸಂಹರಿಸಿದ ಮಹಿಮೆಯ 2ಕರಿ ಆದಿಮೂಲನೆ ಕಾಯೆಂದು ಮೊರೆಯಿಡೆ |ಸುರರನು ಕರೆಯಲು ಬಲ್ಲದಿರೆ ||ಗರುಡನನೇರದೆ ಬಂದು ಮಕರಿಯ ಸೀಳ್ದು |ಕರಿರಾಜನ ಕಾಯ್ದ ಪರದೈವ ಹರಿಯೆಂದು 3ಸುರಪಗೊಲಿದು ಬಲಿಯ ಶಿರವನೊದ್ದಾಗಲೇ |ಸುರಸವು ಉದಿಸೆ ಶ್ರೀ ಹರಿಪಾದದಿ ||ಪರಮೇಷ್ಟಿ ತೊಳೆಯಲು ಪವಿತ್ರೋದಕವೆಂದು |ಹರ ತನ್ನ ಶಿರದಲ್ಲಿ ಧರಿಸಿದ ಮಹಿಮೆಯ 4ಮಾನಸಲಿಂಗಪೂಜೆಗೆ ಮೆಚ್ಚಿ ಶಿವ ಬಂದು |ಬಾಣನ ಬಾಗಿಲ ಕಾಯ್ದಿರಲು |ದಾನವಾಂತಕ ಸಾಸಿರ ತೋಳ ಕಡಿವಾಗ |ಮೌನದಿಂದೊಪ್ಪಿಸಿಕೊಟ್ಟ ಶಿವನು ಎಂದು 5ಭಕ್ತಗೊಲಿದು ಭಸ್ಮಾಸುರಗೆ ಶಿವ ವರವಿತ್ತು |ಭಕ್ತನ ಭಯದಿಂದ ಓಡುತಿರೆ ||ಯುಕ್ತಿಯಿಂದಸುರನ ಸುಟ್ಟು ಶಿವನ ಕಾಯ್ದ |ಶಕನು ಶ್ರೀಹರಿ ಅಲ್ಲದಿಲ್ಲವೆಂದು 6ಗರಳಜ್ವಾಲೆಗೆ ಸಿರಿರಾಮ - ರಾಮನೆಂದು |ಸ್ಮರಿಸುತಿರಲು ಉಮೆಯರಸನಾಗ ||ಕೊರಳು ಶೀತಲವಾಗೆ ಸಿತಿಕಂಠ ತನ್ನಯ |ಗಿರಿಜೆಗೆ - ರಾಮಮಂತ್ರವ ಕೊಟ್ಟ ಮಹಿಮೆಯ 7ಹರಬ್ರಹ್ಮ ಮೊದಲಾದ ಸುರರನುದಶಶಿರ |ಸೆರೆಹಿಡಿದು ಸೇವೆಯ ಕೊಳುತಿರಲು ||ಶರಧಿಯ ದಾಟಿ ರಾವಣನ ಸಂಹರಿಸಿದ |ಸುರರ ಲಜ್ಜೆಯ ಕಾಯ್ದ ಪರದೈವ ಹರಿಯೆಂದು 8ಜಗದುದ್ಧಾರನು ಜಗವ ಪೊರೆವನೀತ |ಜಗ ಬ್ರಹ್ಮಪ್ರಳಯದಿ ಮುಳುಗಲಾಗಿ ||ಮಗುವಾಗಿ ಜಗವನುದ್ಧರಿಸಿ ಪವಡಿಸಿ ಮತ್ತೆ |ಜಗದ ಜನಕಪುರಂದರವಿಠಲನೆಂದು9
--------------
ಪುರಂದರದಾಸರು