ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏಳು ಶ್ರೀನಿವಾಸ ಏಳು ಲಕ್ಷ್ಮೀರಮಣ ಏಳು ಬೆಟ್ಟದೊಡೆಯ ಏಳು ಭಕ್ತರ ಪ್ರೀಯ ಏಳಯ್ಯ ಬೆಳಗಾಯಿತು ಹರಿಯೇ ಪ. ಆದಿಶೇಷನ ಮೇಲೆ ಅಪ್ರಮೇಯನು ನೀನು ಆದರದಿ ಮಹಲಕ್ಷ್ಮಿಯೊಡನಿರಲೂ ಸುರರು ಸನಕ ಸನಂದನರು ಆದರಿಸೆ ಬಾ ಬೇಗ ಬಾಗಿಲನು ತೆಗೆದು ಆದಿಮೂರುತಿ ನಿನ್ನ ಮುಖ ದರ್ಶನವ ಮಾಡಿ ಮೋದ ಪಡುತಲೆ ಭಕ್ತ ಕೋಟಿ ಸ್ತುತಿ ಮಾಡಲು ಮಾಧವನೆ ಹಾಸು ಮಂಚವನಿಳಿದು ಬಾ ಕತ್ತಲೆ ಹರಿಪಾ ದಿವಾಕರನ ತೆರದಿ ಹರಿಯೇ ಏಳಯ್ಯ ಬೆಳಗಾಯಿತು 1 ಕಾಸಿದ್ಹಾಲನೆ ತಂದು ಕಾವಡಿಯಲಿ ತುಂಬಿ ಲೇಸಾಗಿ ನಿನ್ನ ಭಕ್ತರು ನಿಂತಿದಾರೆ ವಾಸುದೇವನೆ ನಿನಗೆ ಮಲ್ಲಿಗೆ ಕುಸುಮ ಭಾಸುರಾಂಗನೆ ತಂದು ಅರ್ಪಿಸಲು ಭಕ್ತರು ಏಸು ಹೊತ್ತಿನಿಂದ ತುಳಸೀ ದಳ ತಂದು ವಾಸುಕೀಶಯನಗೆಂದು ಭೂಸುರರು ನಿಂದಾರೆ ವೇದ ಘೋಷದಿಂದ ಈಸು ನುಡಿಗಳು ನಿನ್ನ ಕರ್ಣಕೇಳಲಿಲ್ಲವೆ ಏಸು ಮೆಚ್ಚಿಸಿಹಳೋ ಲಕ್ಷ್ಮೀ ನಿನ್ನ ಸರಸದೊಳು ವಾಸುಕೀಶಯನ ಹಾಸಿಗೆಯಿಂದೇಳೋ ದೊರೆಯೆ ಏಳಯ್ಯ ಬೆಳಗಾಯಿತು2 ಕರುಣಾಸಾಗರ ನಿನಗೆ ಕರುಣೆ ಬರುವಾತೆರ ಪರಿಪರಿಯ ಸ್ತೋತ್ರದೊಳು ನಾರಿಯೇರು ಕರೆವರೋ ಕರಗತ ಕಾಮಧೇನು ನೀನೆಂದು ಕರದೊಳಾರತಿಯ ಪಿಡಿದೂ ತರತರದ ಉಡಿಗೆ ತೊಡಿಗೆ ನಿನಗೀಯಲು ಸರಸರನೆ ದೇಶದೇಶದಿ ಬಂದು ನಿಂತಿದ್ದಾರೆ ಶರಧಿ ಗಂಭೀರನೆ ವರ ಶ್ರೀ ಶ್ರೀನಿವಾಸನೆ ಕರುಣೆ ತೋರುತ್ತ ನಿನ್ನ ಭಕ್ತರ ಮೇಲೆ ವರ ನಾರಿಯರ ನಾಟ್ಯ ವೈಭವದಿ ವರದುಂದುಭಿ ವಾದ್ಯದಲಿ ವರ ತಾಳ ಮೇಳದಿಂ ವರ ಶೇಷಾದ್ರಿವಾಸ ವೆಂಕಟೇಶನೆ ಏಳಯ್ಯ ಬೆಳಗಾಯಿತು 3
--------------
ಸರಸ್ವತಿ ಬಾಯಿ
ವೆಂಕಟೇಶ ನೀನೆ ಧೊರೀ ಧೊರೀ ಪ ಸಂಕಟವೆಲ್ಲವ ಪರಿಹರಿಸುವಂಥ ಅ.ಪ. ಎತ್ತಿನ ಪೆಸರುಳ್ಳ ಮತ್ತ ರಕ್ಕಸನ್ನ ಕುತ್ತಿಗೆ ಕೊಡಲುತ್ತಮ ಪದವಿತ್ತೆ 1 ಅಂಜನೆಯೆಂಬೊ ಮಂಜುಕಿಸಾಲಿಯ [?] ಅಂಜದೆ ತಪಿಸಲು ಸಂಜೀವನವಿತ್ತೆ2 ಸಾಸಿರ ಮುಖವುಳ್ಳ ಶೇಷನಹಂಕಾರ ಸ್ವಸನನ ಕೈಯಿಂದ ನಾಶಮಾಡಿಸಿದಂಥ3 ಮಾಧವ ಮಾದಿಗ ಹಾದಿಯ ಮೆಟ್ಟಲು ಮಾಧವ ಅವನನ್ನು 4 ಶ್ರೀದವಿಠಲ ನಿನ್ನ ಪಾದಾಶ್ರಿತರ ಮೋದದಿ ಸಲಹೊ ಆದರಿಸೆನ್ನನು 5
--------------
ಶ್ರೀದವಿಠಲರು
ಶರಣು ಗಿರಿಯ ತಿಮ್ಮಾ | ಶರಣು ಪುರುಷೋತ್ತಮಾ | ಶರಣು ಮಹಾ ಮಹಿಮ | ಶರಣು ಪರಬೊಮ್ಮಾ | ಪರಿಹರಿಸುವದು ಹಮ್ಮಾ ಪ ವರೇಣ್ಯ | ಭಂಗ | ಹರಿಸಿದ ಶಿರಿ ರಂಗ | ವಿಹಂಗ | ತುರಗ ತುರಗ ವದನ | ಸದನ ಕರ ಮುಗಿವೆನೈಯಾ | ಕರದ ಮಾತಿಗೆ ಜೀಯಾ | ಭರದಿಂದ ಕೊಡು ಮತಿಯಾ 1 ಪಾದದಲಿ ಪೆಣ್ಣಾ | ಮೋದದಲಿ ಪೆತ್ತ ಚಿಣ್ಣಾ | ನಾದ ಬಲು ಪಾವನ್ನಾ | ಭೇದಾರ್ಥ ಜ್ಞಾನ | ಆದರಿಸೆ ಅನುದಿನಾ | ನೀ ದಯದಲಿ ಕೊಡು | ಈ ದೇಹ ನಿನ್ನ ಬೀಡು | ಯಾದುದೆ ಇತ್ತ ನೋಡು 2 ಜಲದೊಳಗಾಡಿದೆ | ಚಲಕೆ ಬೆನ್ನ ನೀಡಿದೆ | ನೆಲ ಬಂದು ನೆಗಹಿದೆ | ಖಳನನ್ನ ಕೆಡಹಿದೆ | ಇಳಿಯ ಮೂರಡಿ ಮಾಡಿದೆ | ಕುಲವ ಕೂಡಲಲಿ ಹಾರ | ಜಾರ ಚೋರ | ಅಳಿದೆ ಮುಪ್ಪುರು ಶೂರಾ | ವಿಜಯವಿಠ್ಠಲ ಪಾರಾ | ಫಲವೀವೆ ಧರಣೀಧರಾ 3
--------------
ವಿಜಯದಾಸ