ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಲೆ ಮನವೆ ಸಲೆ ನಿನ್ನ ಮರೆವದು ಗುಣವೇ ಪ ಹರಿಯೋ ಮರವಿನ ಮುಸುಕಿದೆ ಮರೆಯೋ | ಸಿರಿ ಸೌಖ್ಯ ಮೃಗಜಳ ಪರಿಯೋ | ಚರವೆಂಬ ಹಂಬಲ ಮರಿಯೋ | ಪರಿ ವಾಸನೆಯ ಜರಿಯೋ | ಪ್ರಾರಬ್ಧ ನಿಜ ವೆಂದರಿಯೋ | ತಾಪ ಮೊನೆ ಮುರಿಯೋ | ಅರವಿನ ನಯನವದೆರಿಯೋ | ಪಾದ ಪದ್ಮಕ ಬೆರೆಯೋ 1 ತಿಳಿಯೋ ಇಳಿಯೊಳು ಸತ್ಪಥ ನೆಲಿಯೋ | ಕಳೇವರ ಸ್ಥಿರ ಬೊಬ್ಬುಳಿಯೋ | ನಲವಾರು ಅರಿಗಳ ನಳಿಯೋ | ಬಲಿತಿಹ ಹಮ್ಮಲ ಕಳಿಯೋ | ಬಳಲಿಪಾಗುಣ ಮಲ ತೊಳಿಯೋ | ಬಲು ಶಾಂತಿ ಹೃದಯದಲಿ ತಳೆಯೋ | ಒಲುವಂತೆ ಗುರುನಡಿ ಕಲಿಯೋ | ಸಲಹುವಾಗರದು ದಯ ಮಳಿಯೋ 2 ಜಡಿಯೋದೃಢ ಭಾವನೆಯನು ಹಿಡಿಯೋ | ಕೆಡುವ ಭಾವ ಮೂಲವ ಕಡಿಯೋ | ತಡಿಯದೆ ಮಹಿಪತಿ ದಯ ಪಡಿಯೋ | ಅಡಿಗಳಾಶ್ರಯವನು ಹಿಡಿಯೋ | ಒಡೆಯನಾಜ್ಞೆಯಂದದಿ ನಡೆಯೋ | ಕಡು ಪ್ರೀತಿಲಿ ಸ್ತುತಿ ನುಡಿಯೋ | ಮಡಿದ್ಹುಟ್ಟುವ ಜನ್ಮದ ಮುಡಿಯೋ | ಒಡನ ಹಾದಿದರಿಂದ ಕಡಿಯೋ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಪಾಲಿಸು ಶ್ರೀಶನೆ ಪರಮ ಪವಿತ್ರನೆ ಪಾವನ್ನ ಚರಿತನೆ ಪಾಲಿಸೆನ್ನ ಪ ಕಾಲಕಾಲಕೆ ನಿನ್ನ ಮಹಿಮೆಯ ತೋರಿಸಲಹುದು ಸರ್ವವ್ಯಾಪಕ ಮಾಯಾದೇವಿಯರಮಣ ಶ್ರೀಪತೆ ಕಾಯೊ ಶ್ರೀಹರಿವಾಸುದೇವನೆಅ.ಪ ವಾಸುದೇವನೆ ನಿನ್ನ ಸೋಸಿಲಿ ಭಜಿಪರ ಕ್ಲೇಶಗಳ್ಹರಿಸಿ ಸಂತೋಷವಿತ್ತು ದೋಷದೂರನ ನಾಮ ಆಸೆಯಿಂದ ಭಜಿಪರಸಂಗವನೂ ನೀಡೆನುತ ಬಿನ್ನೈಸುವೆನೂ ಎನ್ನೊಡೆಯ ನೀನೆಂದೆನುತ ಅಡಿಗಳಿಗೆರಗುವೆನೂ ಧೃಡಭಕುತಿ ನಿನ್ನೊಳಗಿರಿಸಿ ರಕ್ಷಿಪುದೆಂದು ಬೇಡುವೆನೂ ನುಡಿನುಡಿಗೆ ನಿನ್ನಯ ನುಡಿಗಳನು ನುಡಿವಂಥ ಭಕ್ತರ ಅಡಿಗಳಾಶ್ರಯ ಕೊಟ್ಟು ಕಾಯ್ವುದು ಬಡವನೆನ್ನಲಿ ಬೇಡ ಎನ್ನನು ಬಡವರಾಧಾರಿ ಶ್ರೀಹರಿ 1 ಶಂಖು ಚಕ್ರವು ಪದ್ಮಗದೆಯು ಹೊಳೆಹೊಳೆಯುತ್ತ ಬಿಂಕದಿಂದಲಿ ನಿಂತು ನೋಡುತಲಿ ಮಂಕುಮತಿಗಳನ್ನು ಶಂಕೆಯೊಳಗೆ ತಳ್ಳಿನೋಡುತ್ತ ನಿನ್ನಯ ಸದ್ಭಕ್ತರ ಶಂಕೆಗಳೆಲ್ಲವನು ಕ್ಷಿಪ್ರದಿ ಕಳೆಯುತ್ತ ಶ್ರೀಹರಿ ನಿನ್ನ ಪಾದ ಪಂಕಜಗಳೆ ಚಿಂತಿಸುವರಿಗೆ ಹರುಷ ನೀಡುತ್ತ ವೈರಿ ನಿನ್ನಯ ವಿಧವಿಧದ ಲೀಲೆಗಳ ತೋರುತ್ತ ಉದಯ ಭಾಸ್ಕರನಂತೆ ಪೊಳೆಯುತ್ತ ಮುದದಿ ಸಿರದಿ ಕಿರೀಟ ಹೊಳೆಯುತ್ತ ಸದಮಲಾತ್ಮಕ ಸತ್ಯಮೂರುತಿ2 ಹೃದ್ಗೋಚರನಾಗು ಪದ್ಮಾನಾಭ ಉದ್ಧರಿಸೆನ್ನನು ಉದ್ಧವಸಖನೆಂದು ನಂಬಿರುವೆ ಮನ್ಮನದ ಭಯಗಳವದ್ದು ಬಿಸುಡುತ ಸಲಹೊ ನರಹರಿಯೆ ಮಮಸ್ವಾಮಿ ನಿನ್ನಯ ಪದ್ಮ- ಪಾದಕೆ ನಮಿಪೆ ಶ್ರೀಹರಿಯೆ ಮೋಹಕ ಬಂಧವ ಬಿಡಿಸಿರಕ್ಷಿಸುತೆನ್ನ ಸಲಹು ಮಾಯಾಪತಿಯೆ ಬಹು ವಿಧದಿ ಪ್ರಾರ್ಥಿಪೆ ತೋಯಜಾಕ್ಷನೆ ತೋರು ನಿನ್ನಯ ಚಾರು ಚರಣಕೆ ಬಾಗಿ ನಮಿಸುವೆ ಕಾಯ್ವುದೆನ್ನನು ಕಮಲನಾಭವಿಠ್ಠಲನೆ ಶ್ರೀಹರಿ ವಾಸುದೇವನೆ 3
--------------
ನಿಡಗುರುಕಿ ಜೀವೂಬಾಯಿ
ಹರಿಹರಿ ಕೊಡು ನಿನ್ನಯಚ್ಚರನು ಶರಣವಾ ಧೃಡದಲಿ ಬಂದೆನಾನು ಪ ಅವಿದ್ಯೆಮಬ್ಬಿನಲಿ ಹರಿಬಂದ ಹಾವಿನ ಪರಿಯಾಗಿ ವಿವೇಕ ಯವಿಮುಚ್ಚಿಕಂಗಾಣದೆ ಸೇವೆಗೆ ಹೊರತಾದೆ 1 ನ್ಯೂನವ ನಾಲಿಸಲು ತಪ್ಪಿಗೆ ತಾನೆಣಿಕೆಗಳಿಲ್ಲಾ ಏನರಿಯದ ಮೂಢಾ ಇವನೆಂದು ನಿನುದ್ಧರಿಸೆನ್ನಾ 2 ಎಂದೆಂದು ಪ್ರೇಮದಲಿಂದಾ ಗೆಳೆತನಾ ಛೆಂದವೆನಗ ನಿನಗ | ಎಂದೇ ಮನೆಯೊಳಿದ್ದು ಮಾತಾಡದೇ ನಿಂದುದುಚಿತವಲ್ಲ 3 ಕಡೆಗಣ್ಣಿಲಿ ನೋಡೋ ಉದಾಸೀನ ನುಡಿಯ ಮಾಡಲಿಬೇಡ | ಒಡೆಯಾ ನಿನ್ನಂಘ್ರಿಮದಾ ದಾಸರಾ ಅಡಿಗಳಾಶ್ರಯದಲಿಡೋ 4 ಕಾಲಬಿದ್ದರವು ರಾಕುಡುವರು ಕೆಳೆಲೋ ಗಾದಿಯನು ಪಾಲಿಸೋಮಹಿಪತಿ ಸುತ ಪ್ರಭು ಒಲುಮೆಯಾ ಸುಖನೀಡೋ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು