ಒಟ್ಟು 6 ಕಡೆಗಳಲ್ಲಿ , 4 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಷ್ಟು ಸಾಹಸವಂತ ನೀನೆ ಬಲವಂತದಿಟ್ಟಮೂರುತಿ ಭಳಭಳಿರೆ ಹನುಮಂತ ಪ. ಅಟ್ಟುವ ಖಳರೆದೆ ಮೆಟ್ಟಿ ತುಳಿದು ತಲೆಗಳಕುಟ್ಟಿ ಚೆಂಡಾಡಿದ ದಿಟ್ಟ ನೀನಹುದೊ ಅ.ಪ. ರಾಮರಪ್ಪಣೆಯಿಂದ ಶರಧಿಯ ದಾಟಿಆ ಮಹಾ ಲಂಕೆಯ ಕಂಡೆ ಕಿರೀಟಸ್ವಾಮಿಕಾರ್ಯವನು ಪ್ರೇಮದಿ ನಡೆಸಿದಿಈ ಮಹಿಯೊಳು ನಿನಗಾರೈ ಸಾಟಿ1 ದೂರದಿಂದಸುರನ ಪುರವ[ನ್ನು] ನೋಡಿಭರದಿ ಶ್ರೀರಾಮರ ಸ್ಮರಣೆಯನು ಮಾಡಿಹಾರಿದೆ ಹರುಷದಿ ಸಂಹರಿಸಿ ಲಂಕಿಣಿಯನುವಾರಿಜಮುಖಿಯನು ಕಂಡು ಮಾತಾಡಿ 2 ರಾಮರ ಕ್ಷೇಮವ ರಮಣಿಗೆ ಪೇಳಿತಾಮಸ ಮಾಡದೆ ಮುದ್ರೆನೊಪ್ಪಿಸಿಪ್ರೇಮದಿಂ ಜಾನಕಿ ಕುರುಹನು ಕೊಡಲಾಗಆ ಮಹಾ ವನದೊಳು ಫಲವನು ಬೇಡಿ 3 ಕಣ್ಣ್ಣಿಗೆ ಪ್ರಿಯವಾದ ಹಣ್ಣ[ನು] ಕೊಯ್ದುಹಣ್ಣಿನ ನೆವದಲಿ ಅಸುರರ ಹೊಯ್ದುಪಣ್ಣಪಣ್ಣನೆ ಹಾರಿ ನೆಗೆನೆಗೆದಾಡುತಬಣ್ಣಿಸಿ ಅಸುರರ ಬಲವನು ಮುರಿದು4 ಶೃಂಗಾರವನದೊಳಗಿದ್ದ ರಾಕ್ಷಸರಅಂಗವನಳಿಸಿದೆ ಅತಿರಣಶೂರನುಂಗಿ ಅಸ್ತ್ರಗಳ ಅಕ್ಷಯಕುವರನಭಂಗಿಸಿ ಬಿಸುಟಿಯೊ ಬಂದ ರಕ್ಕಸರ 5 ದೂರ ಪೇಳಿದರೆಲ್ಲ ರಾವಣನೊಡನೆಚೀರುತ್ತ ಕರೆಸಿದ ಇಂದ್ರಜಿತುವನೆಚೋರಕಪಿಯನು ನೀ ಹಿಡಿತಹುದೆನ್ನುತಶೂರರ ಕಳುಹಿದ ನಿಜಸುತನೊಡನೆ 6 ಪಿಡಿದನು ಇಂದ್ರಜಿತು ಕಡುಕೋಪದಿಂದಹೆಡೆಮುರಿ ಕಟ್ಟಿದ ಬ್ರಹ್ಮಾಸ್ತ್ರದಿಂದಗುಡುಗುಡುಗುಟ್ಟುತ ಕಿಡಿಕಿಡಿಯಾಗುತನಡೆದನು ಲಂಕೆಯ ಒಡೆಯನಿದ್ದೆಡೆಗೆ 7 ಕಂಡನು ರಾವಣನುದ್ದಂಡ ಕಪಿಯನುಮಂಡೆಯ ತೂಗುತ್ತ ಮಾತಾಡಿಸಿದನುಭಂಡುಮಾಡದೆ ಬಿಡೆನೋಡು ಕಪಿಯೆನೆಗಂಡುಗಲಿಯು ದುರಿದುರಿಸಿ ನೋಡಿದನು 8 ಬಂಟ ಬಂದಿಹೆನೊಹಲವು ಮಾತ್ಯಾಕೊ ಹನುಮನು ನಾನೆ 9 ಖುಲ್ಲ ರಕ್ಕಸನೆತೊಡೆವೆನೊ ನಿನ್ನ ಪಣೆಯ ಅಕ್ಷರವ 10 ನಿನ್ನಂಥ ದೂತರು ರಾಮನ ಬಳಿಯೊಳುಇನ್ನೆಷ್ಟು ಮಂದಿ ಉಂಟು ಹೇಳೊ ನೀ ತ್ವರಿಯಾನನ್ನಂಥ ದೂತರು ನಿನ್ನಂಥ ಪ್ರೇತರುಇನ್ನೂರು ಮುನ್ನೂರು ಕೋಟಿ ಕೇಳರಿಯಾ11 ಕಡುಕೋಪದಿಂದಲಿ ಖೂಳರಾವಣನು ಸುಡಿರೆಂದ ಬಾಲವ ಸುತ್ತಿ ವಸನವನುಒಡೆಯನ ಮಾತಿಗೆ ತಡೆಬಡೆಯಿಲ್ಲದೆಒಡನೆಮುತ್ತಿದರು ಗಡಿಮನೆಯವರು 12 ತÀಂದರು ವಸನವ ತಂಡತÀಂಡದಲಿಒಂದೊಂದು ಮೂಟೆ ಎಂಬತ್ತು ಕೋಟಿಯಲಿಚಂದದಿ ಹರಳಿನ ತೈಲದೊಳದ್ದಿಸೆನಿಂದ ಹನುಮನು ಬಾಲವ ಬೆಳೆಸುತ 13 ಶಾಲು ಸಕಲಾತ್ಯಾಯಿತು ಸಾಲದೆಯಿರಲುಬಾಲೆರ ವಸ್ತ್ರವ ಸೆಳೆದುತಾರೆನಲುಬಾಲವ ನಿಲ್ಲಿಸೆ ಬೆಂಕಿಯನಿಡುತಲಿಕಾಲಮೃತ್ಯುವ ಕೆಣಕಿದರಲ್ಲಿ14 ಕುಣಿಕುಣಿದಾಡುತ ಕೂಗಿ ಬೊಬ್ಬಿಡುತಇಣಿಕಿನೋಡುತ ಅಸುರರನಣಕಿಸುತಝಣಝಣಝಣರೆನೆ ಬಾಲದಗಂಟೆಯುಮನದಿ ಶ್ರೀರಾಮರ ಪಾದವ ನೆನೆಯುತ 15 ಮಂಗಳಂ ಶ್ರೀರಾಮಚಂದ್ರ ಮೂರುತಿಗೆಮಂಗಳಂ ಸೀತಾದೇವಿ ಚರಣಂಗಳಿಗೆಮಂಗಳವೆನುತ ಲಂಕೆಯ ಸುಟ್ಟುಲಂಘಿಸಿ ಅಸುರನ ಗಡ್ಡಕೆ ಹಿಡಿದ 16 ಹತ್ತಿತು ಅಸುರನ ಗಡ್ಡಮೀಸೆಗಳುಸುತ್ತಿತು ಹೊಗೆ ಬ್ರಹ್ಮಾಂಡಕೋಟಿಯೊಳುಚಿತ್ತದಿ ರಾಮರು ಕೋಪಿಸುವರು ಎಂದುಚಿತ್ರದಿ ನಡೆದನು ಅರಸನಿದ್ದೆಡೆಗೆ 17 ಸೀತೆಯಕ್ಷೇಮವ ರಾಮರಿಗ್ಹೇಳಿಪ್ರೀತಿಯಿಂ ಕೊಟ್ಟಕುರುಹ ಕರದಲ್ಲಿಸೇತುವೆ ಕಟ್ಟಿ ಚತುರಂಗ ಬಲಸಹಮುತ್ತಿತು ಲಂಕೆಯ ಸೂರೆಗೈಯುತಲಿ 18 ವೆಗ್ಗಳವಾಯಿತು ರಾಮರ ದಂಡುಮುತ್ತಿತು ಲಂಕೆಯ ಕೋಟೆಯ ಕಂಡುಹೆಗ್ಗದ ಕಾಯ್ವರ ನುಗ್ಗುಮಾಡುತಿರೆಝಗ್ಗನೆ ಪೇಳ್ದರು ರಾವಣಗಂದು 19 ರಾವಣಮೊದಲಾದ ರಾಕ್ಷಸರ ಕೊಂದುಭಾವಶುದ್ಧದಲಿ ವಿಭೀಷಣ ಬಾಳೆಂದುದೇವಿ ಸೀತೆಯನೊಡಗೊಂಡಯೋಧ್ಯದಿದೇವ ಶ್ರೀರಾಮರು ರಾಜ್ಯವಾಳಿದರು 20 ಶಂಖದೈತ್ಯನ ಕೊಂದೆ ಶರಣು ಶರಣಯ್ಯಶಂಖಗಿರಿಯಲಿ ನಿಂದೆ ಹನಮಂತರಾಯಪಂಕಜಾಕ್ಷ ಹಯವದನನ ಕಟಾಕ್ಷದಿಬಿಂಕದಿ ಪಡೆದೆಯೊ ಅಜನಪದವಿಯ21
--------------
ವಾದಿರಾಜ
ಕಾಯ ಬಲು ಹೇಯವೊ | ಸಾಕು ಸಾಕು ಸಂಸಾರ ನೆಚ್ಚದಿರು ಎಚ್ಚರಿಕೆ ಪ ಊಧ್ರ್ವಾಧೋ ಭಾಗದಿಂದ ಕೂಡಿದಾ ರಕ್ತಶುಕ್ಲ | ಅರ್ಧರ್ಧ ಪ್ರವೇಸಿಯಾಗಿ | ವರ್ಧನಾಗಿ ಮಾಂಸ ಪಿಂಡಿಕೆಯಲಿ ಬೆಳೆದು | ಅರ್ಧವದೊಳಗೆ ಬಳುಲುವುದೇನೊ ಮಹಾ ಕಠೀಣಾ 1 ಸನ್ನಿರೋಧವಾದ ಪ್ರಾದೇಶದಲಿ ನೀನು | ಬನ್ನ ಬಡುವದು ಜನಕೆ ಅರಿಯನಲ್ಲಾ | ಮುನ್ನೆ ಇಂದ್ರನಿಗಾಗಿ ವರವಿತ್ತ ಸಂಪತ್ತು | ಇನ್ನು ನಿನ್ನ ಸುತ್ತ ಬಂದದೆ ತಿಳಿದುಕೋ 2 ವಾತ ಶೈತ್ಯಜ್ವರ ಕೆಮ್ಮು | ಸಪುತ ಧಾತುಗಳಿಂದ ಬರುವ ರೋಗ | ಕ್ಲೇಶ ಮೋಹಗಳೊಡನೆ | ಮಾಯಾ 3 ಕಾಮ ಮದ ಗರ್ವದಲಿ ಪುಂಜನಾಗಿ ದುರಳ ನಿ | ಜ ಮಗಳ ಕೂಡ ಬೆರದಾಡಿ ಬೆರೆದು | ರೋಮರೋಮ ವಿಷಯ ಪೂರ್ತಿಯಾಗಿ ಚರಿಸಿ | ಪಾಮರನಾಗಿ ಬಳಲದಿರು ಬಹು ಜೋಕೆ 4 ಸತಿ ಸುತರು ಮಿಕ್ಕಾದ ಬಂಧುಗಳು ನೆರೆನೆರೆದು | ಪ್ರತಿದಿವಸದಲಿ ಅಟ್ಟುವುದು ನೋಡು| ಮತಿ ಚಂಚಲವಾಗಿ ಸತ್ಕರ್ಮ ವೃತ್ತಿಗೆ | ಪ್ರತಿಕೂಲವಾಗುವದು ಪ್ರೀತಿಯಾಗದು ಮುಂದೆ 5 ಎಂತು ನೋಡಲು ವಿಷಯ ಅನುಭವಿಸಿದರು ಅದರ | ಅಂತು ಕಂಡವರಾರು ವಲ್ಲೆನೆಂದು | ಭ್ರಾಂತಿಯಿಂದಲಿ ತಿರುಗಿ ಬಯಲಾಗೋದಲ್ಲದೆ | ಚಿಂತೆ ಇಷ್ಟಷ್ಟು ಏನೆಂದು ಪೇಳಲಿ 6 ಯಲೋ ಮನವೆ ಸಾರಿ ಪೇಳಿದೆನು ಚನ್ನಾಗಿ ನೀ | ನೆಲೆ ಮಾಡಿಕೋ ಜ್ಞಾನ ಭಕುತಿ ವಿತ್ತಾ | ಸುಲಭ ದೇವರ ದೇವ ವಿಜಯವಿಠ್ಠಲರೇಯ | ಕೆಲಕಾಲ ನೆನೆದು ಸುಖಿಯಾಗು ಸುಜನರಾ ಕೇಳು 7
--------------
ವಿಜಯದಾಸ
ಬಾರಕ್ಕಾ ನಾವಿಬ್ಬರಾಡುವಾ ಯೋಗ ಸಾಧನವೆಂಬುದು ಮಾಡುವಾ ತಾಮಸ ತನುಗುಣಗಳ ಬಿಟ್ಟು ಸುಜ್ಞಾನ ಕ್ಷೀರ ಸಾಗರದೊಲಗಾಡುವಾ ಪ ಕಳೆಗೂಡಿ ಒಳನೋಟ ನೋಡುವಾ ಅಲ್ಲಿ ಒಳಸಭೆ ಪ್ರಭೆಯೊಳಗಾಡುವಾ ಥಳಥಳಿಸುವ ಮೆರೆವ ಚಿದಾತ್ಮನ ಬೆಳಕಿನೊಳ್ ಬೆಳಕಾಗಿ ಪರವಶವಾಗುವಾ 1 ಅಂಬಾ ಚಂದನ ಗಂಧಿಯೇ ಶಾರ ದಾಂಬಾ ಸುಪ್ರದವೇಣಿಯೇ ಶಂಭು ಸದ್ಗುರು ಎನ್ನೊಳು ಕಡೆನೋಡೆ ಕಂಬುಕಂಠಿನಿ ಚಲ್ವ ಕಮಲದಳಾಕ್ಷಿ 2 ಎಂಟೆರಡು ಕದಗಳ ಕಟ್ಟುವಾ ಅಲ್ಲಿ ಬಂಟರ ತಡೆಗಳ ಅಟ್ಟುವಾ ಮಂಟಪವೆಂಬುದು ಮಹಾಲಿಂಗನದೆಡೆ ಅಂತರಂಗದ ಕಾಂತೆಗಾಡುವಾ 3 ಮಂದರ ಗಿರಿಯಂತೆ ಅಲ್ಲಿ ಭೋರೈಸುವ ಘಂಟಾ ಧ್ವನಿಯಂತೆ ಸಾರ ಅಮೃತವುಂಡು ಕ್ಷೀರಸಾಗರಮಿಂದು ತೋರುವ ಗುರು ವಿಮಲಾನಂದಾ 4
--------------
ಭಟಕಳ ಅಪ್ಪಯ್ಯ
ಬಾರಯ್ಯ ಯದುಕುಲತಿಲಕ ತೋರಯ್ಯ ನಿನ್ನ ಮುದ್ದು ಮುಖವಓರಂತೆ ಮುದ್ದಿಸಿ ಯಶೋದೆ ಕುಮಾರನೆ ಬಾರೆಂದಳೈಪ. ಅಂದವಾದ ನಿನ್ನ ಮುದ್ದುಮುಖದ ಚೆಂದವನ್ನು ತಾ ನೋಡಿಕಂದಿಕುಂದಿ ಇಂದಿರೆಯು ಮರುಳಾಗಿ ಕಂದ ನಿನ್ನ ಪೊಂದೇನೆಂದಳೈ 1 ಕೃಷ್ಣ ನಿನ್ನ ಮಕ್ಕಳಾಟಿಕೆ ಶ್ರೇಷ್ಠರಿಗೆ ಮೋಹನವಾಯಿತುದುಷ್ಟಮತಮಾತಂಗಕ್ಕೆ ಅಟ್ಟುವೊ ಸಿಂಹದ ಮರಿಯೆ2 ಇಂಥ ಹಯವದನನ ಇಂಥ ದೇವರ ನಾ ಕಾಣೆಪಂಥವೇನೊ ಎನ್ನ ಕೂಡೆ ದಿನಮಣಿ ತಿಂತಿಣಿಯೆ ಬಾರೆಂದಳೈ3
--------------
ವಾದಿರಾಜ
ಬೂದಿಯ ಹಚ್ಚಿರೊ ಶುದ್ಧ ವೈಷ್ಣವರಿದ- ರಾದಿಯ ತಿಳಿಯಲು ಕೇಳಿ ಬಲ್ಲವರು ಪ ಮೂಲಾಗ್ನಿಯಿಂದಲೆ ಸುಟ್ಟಿಹ ಬೂದಿ ಮೂಲ ಮಂತ್ರಂಗಳ ಜಪಿಸುವ ಬೂದಿ ಮೂಲಾಧಾರವ ತೋರುವ ಬೂದಿ ಕಾಲ ಕರ್ಮಂಗಳ ಕಡಿವಂಥ ಬೂದಿ 1 ಏಳು ಸುತ್ತಿನ ಒಳಗೆ ಇರುವಂಥ ಬೂದಿ ಏಳು ವೈರಗಳನ್ನು ಕಳೆವಂಥ ಬೂದಿ ಏಳು ಅಗಳ ದಾಟಿ ಹಾರುವ ಬೂದಿ ಬ- ಹಳ ಜ್ಞಾನಿಗಳೆಲ್ಲ ಧರಿಸುವ ಬೂದಿ 2 ಒಂಭತ್ತು ಕಡೆಯಿಂದ ಒಲಿದಿಟ್ಟ ಬೂದಿ ಕುಂಭಕದೊಳಗದ ಇರಿಸುವ ಬೂದಿ ಸಂಭ್ರಮದಿ ಅರಸನ ಗೆಲುವಂಥ ಬೂದಿ ಅಂಬರಕಾಗಿಯೆ ಲಂಬಿಪ ಬೂದಿ 3 ಪಂಚಾಗ್ನಿಯಿಂದಲೆ ಬೆಂದಿಹ ಬೂದಿ ಪಂಚತತ್ವಂಗಳನು ಗೆಲುವಂಥ ಬೂದಿ ಪಂಚ ಮೃತ್ಯುಗಳನ್ನು ಕಳೆವಂಥ ಬೂದಿ ವಂಚಿಸಿಕೊಳ್ಳದೆ ಧರಿಸುವ ಬೂದಿ 4 ಆರು ವೈರಿಗಳನ್ನು ತೂರುವ ಬೂದಿ ಆರು ಭಾವಗಳನ್ನು ಬೇರಿಟ್ಟ ಬೂದಿ ಆರು ಭ್ರಮೆಗಳನ್ನು ಕಡಿದಿಟ್ಟ ಬೂದಿ ಆರಿಗೂ ತೋರದೆ ಹಾರುವ ಬೂದಿ 5 ಅಷ್ಟಮದಂಗಳ ಕಟ್ಟುವ ಬೂದಿ ದುಷ್ಟಾತ್ಮರನ್ನು ಅಟ್ಟುವ ಬೂದಿ ಕುಟ್ಟೆ ಹಿಡಿವ ಬೀಜಕಿಟ್ಟಿಹ ಬೂದಿ ಭ್ರಷ್ಟಕರ್ಮಗಳನ್ನು ಸುಟ್ಟಂಥ ಬೂದಿ 6 ಸಕಲ ಋಷಿಗಳೆಲ್ಲ ಧರಿಸುವ ಬೂದಿ ತ್ರಿಕರ್ಣ ಶುದ್ಧದಿ ತುಂಬಿದ ಬೂದಿ ಮಕರಕುಂಡಲಧರ ಮರುಳಹ ಬೂದಿ ಸಖನಹ ವರಾಹತಿಮ್ಮಪ್ಪ ಬೂದಿ 7
--------------
ವರಹತಿಮ್ಮಪ್ಪ
ಮಂತ್ರಾಲಯನಿವಾಸ ಉತ್ತಮ ಹಂಸ | ಸಂತಾಪ ಪರಿಹರಿಸ ಕೊಡು ಎನಗೆ ಲೇಸÀ ಪ ಯತಿಗಳ ಶಿರೋರನ್ನ ಯೋಗಸಂಪನ್ನ | ಕ್ಷಿತಿಯೊಳಗೆ ನಿನಗೆ ಸರಿಗಾಣೆನೊ || ನುತಿಸುವೆ ಭಕ್ತಿಯಲಿ ಬಿಡದೆ | ಮುಕುತಿಯಲಿ ಸತತಾನಂದದಲಿಪ್ಪ 1 ಕಪಿಲ ತೀರ್ಥದಲಿ ಶರಣ ಶುದ್ಧಿಯಲ್ಲಿ | ತÀಪವ ಮಾಡುವ ಜ್ಞಾನಿ ಸೌಮ್ಯಜ್ಞಾನಿ || ಕೃಪೆಮಾಡಿ ಕೊಡು ಗುರುವೆ ಶಿಷ್ಯಸುರತÀರುವೆ 2 ತಮೋಗುಣ ಕಾರ್ಯ ಪೋಗಲಾಡು ವ್ಯಾಪ್ತಿಯಾ | ಶಮೆದಮೆಯಲ್ಲಿ ಉಳ್ಳ ಮಹಿಮೆಯಾ || ನಮಗೆ ಪೇಳುವೆ ವೇದಬಲ್ಲ ವಿನೋದ | ಸುಮನ ಸುಗುಣವ ಮೆಚ್ಚೆ ದುರ್ಮತಕೆ ಕಿಚ್ಚೆ 3 ಕಾಶಿ ಸೇತುವೆ ಮಧ್ಯೆ ಮೆರೆವೇ ಜನರಲ್ಲಿ | ಭೇದ ವಿದ್ಯಾ ಸಜ್ಜನಕೆ ತಿಳಿಸು ಮನಸು ನಿಲ್ಲಿಪೆ || ಪೋಷಿಸುವೆ ಅವರ ಅಟ್ಟುವ ಮಹದುರ | ದೋಷವ ಕಳೆವಂಥ ವಿಮಲ ಶಾಂತ4 ವರಹಜ ತೀರದಲ್ಲಿದ್ದ ಸುಪ್ರಸಿದ್ದ | ಮರುತ ಮತಾಂಬುಧಿ ಸೋಮ ನಿಸ್ಸೀಮ || ನರಸಿಜಾಪತಿ ನಮ್ಮ ವಿಜಯವಿಠ್ಠಲನಂಘ್ರಿ | ಸ್ಮರಿಸುವ ಸುಧೀಂದ್ರ ಸುತ ರಾಘವೇಂದ್ರ 5
--------------
ವಿಜಯದಾಸ