ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಳವು ಕಲಿಸಿದರ್ಯಾರೊ ನಿನಗೆ ಕಂಜನಾಭನೆ ಪ ಕೇರಿಕೇರಿ ಮನೆಗಳಲ್ಲಿ ಕ್ಷೀರ ಗಡಿಗೆಯನೋಡಿವರೇನಲ್ಲಿ ಚೋರತನವ ನೀ ಕಲಿತಿಹುದೆಲ್ಲಿ ಜಾರನೆನಿಸಿಕೊಂಬುವುದು ಕೇಳಿ ಬಲ್ಲೆ 1 ಅಟ್ಟದ ಮ್ಯಾಲಿಟ್ಟಿದ್ದ ಬೆಣ್ಣೆ ಚಟ್ಟಿಗಿಯ ಒಡೆದಾಕಳ ಕಣ್ಣಿ ಕಟ್ಟಿ ಜುಟ್ಟ ಇವರÀ ಮನೆ ಹೆಣ್ಣಿ ಗಿಟ್ಟು ಮಾಡುವರೆ ಕಣ್ಣು ಸೊನ್ನಿ2 ಬಡವರ ಮನೆ ಅನ್ನದಲಿಷ್ಟು ತುಡುಗುತನವ ನೀ ಮಾಡುವುದೆಷ್ಟು ಪಿಡಿಯರವರು ಬರುವುದತಿ ಸಿಟ್ಟು ಹಿಡಿದು ಹಾಕೋರು ನಿನಗೊಂದು ಪೆಟ್ಟು3 ಕಡೆದ ಬೆಣ್ಣೆ ಕಾಸಿದ ತುಪ್ಪ ಕೊಡುವೆನ್ಹಾಲು ನೀ ಕುಡಿಯದಲ್ಯಾಕೊ ಮಡದಿಯರ ಸರಿ ನಿನಗೇನು ಬೇಕೊ ವಾಕು 4 ಬಣ್ಣದ್ವಲ್ಲಿ ಛಾದರ ಹೊದ್ದು ಅಣ್ಣ ರಾಮರಲ್ಲ್ಯಾಡದೆ ಇದ್ದು ಹೆಣ್ಣು ಮಕ್ಕಳುಡುವ ಸೀರೆ ಕದ್ದು ಇನ್ನು ಮರನೇರುವುದೇನು ಮುದ್ದು 5 ನಂದಗೋಪನ ಮುಂದ್ಹೇಳಿ ಸಿಟ್ಟು ಇಂದು ಬಡಿಸುವೆ ಭೀಮೇಶ ಕೃಷ್ಣ ಮಂದಿ ಮಕ್ಕಳೊಳಗೆ ನೀನೆ ಶ್ರೇಷ್ಠ ಹಾ- ಗೆಂದು ಬೇಡಿ ಕೊಂಬುವುದೊ ನೀಡಿಷ್ಟ6
--------------
ಹರಪನಹಳ್ಳಿಭೀಮವ್ವ
ಇಕ್ಕಲಾರೆ ಕೈಯಂಜಲು - ಚಿಕ್ಕಮಕ್ಕಳು ಅಳುತಾವೆ ಹೋಗೋ ದಾಸಯ್ಯ ಪ.ಮಡಿಕೆ ತೊಳೆಯುತೇನೆ ಮನೆಯ ಸಾರಿಸುತ್ತೇನೆಒಡೆಯರಿಲ್ಲ ಕಾಣೋ ಹೋಗೋ ದಾಸಯ್ಯತೊಡೆಯ ಮೇಲಣ ಕೂಸು ಮೊಲೆ ಹಾಲನುಣಿಸುತಿದೆನಡೆನಡೆ ಕರಕರೆ ಮಾಡದೆ ದಾಸಯ್ಯ 1ಅಟ್ಟದ ಮೇಲಿನ ಅಕ್ಕಿ ತೆಗೆಯಲಾರೆಹೊಟ್ಟೆನೋವು ಕಾಣು ಹೋಗೋ ದಾಸಯ್ಯಮುಟ್ಟಾಗಿ ಕುಳಿತೇನೆ ಮನೆಯವರಿಲ್ಲವೊಕಟ್ಟುಗ್ರ ಮಾಡದೆ ಹೋಗೋ ದಾಸಯ್ಯ 2ವೀಸದ ಕಾಸಿದ ದವಸವ ತಂದಾರೆಕೂಸಿಗೆ ಸಾಲದು ಹೇಗೋ ದಾಸಯ್ಯಆಸೆ ಮಾಡಲು ದೋಷಕಾರ್ತಿ ಬೇಡ ನಾನುಶೇೀಷಾದ್ರಿ ಪುರಂದರವಿಠಲದಾಸಯ್ಯ 3
--------------
ಪುರಂದರದಾಸರು
ಹೇಳಬಾರದೆ ಬುದ್ಧಿಯ - ಮಗನ ಊರ-|ಗೂಳಿಯ ಮಾಡಿದೆನೆ ? ಪಮೇಳದಿ ಓರಗೆಯವರ ಕೂಡಿಕೊಂಡು |ಹಾಳು ಮಾಡುತಾನೆ ಗೋವಳಗೇರಿಯ ಅ.ಪಅಟ್ಟದ ಮೇಲಿಟ್ಟಹ - ಚೆಟ್ಟಿಗೆ ಹಾಲು |ಬಟ್ಟನಿಕ್ಕಿ ಚೀಪುವ ||ದುಷ್ಟತನವ ಮಾಡಬೇಡ ಅಯ್ಯಾ ಎನೆ |ಕಷ್ಟವೇನೆಂಬೆ ಮುದ್ದಿಟ್ಟು ಓಡಿ ಪೋದ 1ಮೊಸರ ಮಥಿಸುತಿರಲು - ಬಂದು ಕುಳಿತ |ಹಸುಗೂಸು ಎನುತಿದ್ದೆನೆ ||ಕುಸುಮನಾಭನು ತನ್ನ ವಶವಾಗು ಎನುತಲಿ |ವಸನೆತೆಗೆದು ಮೊಲೆ ಪಿಡಿದು ಹೋದ ಮೇಲೆ 2ಬೆಣ್ಣೆಯ ಕಂಡರಂತೂ - ಅದರರೂಪ |ಕಣ್ಣಿಗೆ ತೋರನಲೆ ||ಸಣ್ಣವನೆಂದು ಬಗೆದು ನಾ ಕರೆದರೆ |ಬಣ್ಣದ ಮಾತಾಡಿ ಬಾ ಎಂದು ಕರೆವನು 3ಉಡುವ ಸೀರೆಯ ಕಳೆದು - ತಡಿಯಲಿಟ್ಟು |ಮಡುವಿನೊಳ್ ಮೈದೊಳೆಯೆ ||ದಡದಡ ಬಂದೊಯ್ದು ಕಡಹದ ಮರವೇರಿ |ಕೊಡು ಕೃಷ್ಣ ಎನುತಿರೆ ಪಿಡಿ ಜೋಡು ಕೈಯೆಂಬ 4ಎಷ್ಟು ಹೇಳಲಿ ನಿನಗೆ - ಯಶೋದೆ ಒಂ-|ದಿಷ್ಟು ಕರುಣವಿಲ್ಲವೆ |ಸೃಷ್ಟಿಗೊಡೆಯ ನಮ್ಮಪುರಂದರವಿಠಲ-------------------------- 5
--------------
ಪುರಂದರದಾಸರು