ಭಜಿಸೊ ಮನವೆ ಪೂರ್ಣ ಅಜಸುರೊಂದಿತ ಚರಣ
ಸುಜನ ಹೃದಯ ಪ್ರಾಣ ಗಜಭಯ ನಿವಾರಣ 1
ಹಿಡಿಯ ಬ್ಯಾಡನುಮಾನ ಜಡಿಯೊ ನಿಜಧ್ಯಾನ
ಅಮೃತ ಪೂರ್ಣ 2
ಸಾಧಿಸಬೇಕೊಂದೇ ಮನ ಬುಧಜನರ ಜೀವನ
ಸದಮಲಾನಂದ ಸದ್ಗತಿ ಸುಖಸಾಧನ 3
ಪಾವನಗೈಸುವದಾ ಭಾವಿಸೊ ಗುರುಪಾದ
ಬೋಧ ಸೇವಿಸು ನಿಜ ಸುಸ್ವಾದ 4
ತ್ಯಜಿಸಿ ತನುಮನ ದ್ವಂದ್ವ ಭಜಿಸೊ ಭಾವಾರ್ಥದಿಂದ
ಪೂಜಿಸೊ ಮಹಿಪತಿ ಆನಂದ ನಿಜಗುರು ಪಾದಾರವಿಂದ 5