ಒಟ್ಟು 9 ಕಡೆಗಳಲ್ಲಿ , 6 ದಾಸರು , 8 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಮಹರ ಒಬ್ಬ ತಾನೆ ಬಲ್ಲಾ | ರಾಮ ರಾಮ ಸೀತಾರಾಮ ರಾಮನಲ್ಲದಿಲ್ಲವೆಂದು ಪ ಕೈಯಲಿ ಕಿನ್ನರಿ ಧರಿಸಿ ಸಿರಿಮೊಗದಿಂದ | ಕೈಲಾಸಗಿರಿಯಲ್ಲಿ ಪಾರ್ವತಿ ಕೂಡ ಜಗ ದಯ್ಯನಯ್ಯ ಜಗದೊಡಿಯ ರಾಮನಲ್ಲದಿಲ್ಲೆಂದು 1 ಫಣಿಯಾಭರಣವು ಪೆಡೆಯೆತ್ತಿ ಇರಲು | ಮಣಿ ರುಂಡಮಾಲೆ ತೂಗಾಡಲು | ಕುಣಿದು ಕಣಕಾಲಿಂದ ಥಕ್ ಥಕ್ ಥೈ ರು ಪತಿ ಸರ್ವೋತ್ತಮ ರಾಮನಲ್ಲದಿಲ್ಲವೆಂದು 2 ಕಾಳಕೂಟದ ವಿಷಬಿಂದು ಮಾತುರನುಂಗೆ | ತಾಳಲಾರದೆ ತಳಮಳವಗೊಂಡು | ಕಾಳಿಮರ್ದನ ಕಮಲಾಯತಾಕ್ಷ ಎನ್ನ | ಪಾಲಿಸಿದ ಪರಮಾತ್ಮ ರಾಮನಲ್ಲದಿಲ್ಲವೆಂದು3 ಗಜಮುಖ ತಾಳವ ಪಿಡಿದು ತಥೈ ಎನ್ನಿ | ಅಜಸುತ ರಿಪು ಮದ್ದಳಿಯೆ ಮುಟ್ಟಿ | ಗಜ ಚರ್ಮಾಂಬರ ಗಾಯನವ ಮಾಡುತ-ತ್ರಿ | ಜಗಾಧಿಪತಿ | ವಿಷ್ಣು ರಾಮನಲ್ಲದಿಲ್ಲವೆಂದು 4 ಆರು ಮುಖದವ ಶಂಖವನ್ನು ಊದೆ | ಭೈರವ ನಾಗಸ್ವರವ ನುಡಿಸೆ | ಚಾರು ಪ್ರಥಮ ಭೂತ ತಲೆ ಚಪ್ಪಳಿಡೇ| ಧಾರಣಿಧರ ಸೀತಾರಾಮನಲ್ಲದಿಲ್ಲವೆಂದು 5 ಗೋರಾಜ ಸರಿಗಮಪದನಿಸ ಎಂದು ನಲಿಯೇ | ಉರಗಾದಿ ಮೂಷಕಾದಿ ಚಿಗಿದಾಡಲು | ವಾರಣದ ಗಂಗೆ ಸಿರದಲಿ ತುಳುಕಲು | ನಾರಾಯಣ ಪರದೈವ ರಾಮನಲ್ಲದಿಲ್ಲವೆಂದು 6 ತುಂಬುರನಾರಂದ ತಂದನ್ನಾತಾ ಎನ್ನೆ | ಅಂಬರದಿಂದ ಪೂಮಳೆಗೆರೆಯೆ | ಅಂಬುಜಪತಿ ಶಿರಿ ವಿಜಯವಿಠ್ಠಲ ವಿ ಶ್ವಂಭರಜಾಂಡಕರ್ತು ರಾಮನಲ್ಲದಿಲ್ಲವೆಂದು 7
--------------
ವಿಜಯದಾಸ
ಜಂಭಾರಿಸುತ ಅಭವ ಪ ಪುರಹರ ಸಾಂಬ ತ್ರಿಯಂಬಕ ಶಂಬಕಾರಿ ರಿಪುಗಂಭೀರ ಕರುಣಿ ಅ. ಪ. ಭಸಿತ ಭೂಷಿತ ಶರೀರ-ಭಕ್ತರುದ್ಧಾರ ವಿಷಕಂಠ ದುರಿತಹರ ಪಶುಪತಿ ಫಣಿಹಾರ-ಪಾವನಕಾರ ನೊಸಲನಯನ ವಿಕಸಿತಾಂಬುಜ ಮುಖ ಶಶಿಧರ ಮತ್ತರಕ್ಕಸ ಮದ ಮರ್ದನ ಘಸಣೆಗೊಳಿಪ ತಾಮಸವ ಕಳೆದು ಮಾ- ಬಿಸಜ ಪಾದವ ತೋರೊ 1 ರಜತ ಪರ್ವತ ನಿವಾಸ ನಿರ್ಮಲ ಭಾಸ ಗಜವೈದ್ಯನಾಶ ಗಿರೀಶ ಸುಜನರ ಮನೋವಿಲಾಸ ವ್ಯೋಮಕೇಶ ತ್ರಿಜಗದಲ್ಲಣ ಗೌರೀಶ ಅಜಸುತನಧ್ವರ ಭಜನೆಯ ಕೆಡಸಿದೆ ಅಜಗರ ಮಂದಿ ಗಜಮುಖ ಜನಕನೆ ಗಜಗಮನ ಮುನಿ ತನುಜನ ಕಾಯ್ದನೆ ವಜ್ರಮುನಿ ವಂದಿತ ಭಜಿಸುವೆ ನಿನ್ನ2 ಮಧರಾಪುರಿ ನಿಲಯ ಮೃತ್ಯುಂಜಯ ಸದಮಲ ಸುಮನಗೇಯ ಸದಾ ನಮಿಪರ ಹೃದಯದೊಳಗುಳ್ಳ ಭಯ- ಸದೆಯುತ್ತ ಕೊಡು ಅಭಯ ಜಾಹ್ನವಿ ಧರಕೃತ ಮಾರಾ ನದೀತೀರದಿ ವಾಸವಾಗಿಪ್ಪ ಸೌಂದರ್ಯ ಮಧುಪುರಿ ವಿಜಯವಿಠ್ಠಲನ ಪದಾಬ್ಜಕೆ ಮಧುಪನೆನಿಪ ಪಂಚವದನ ಕೈಲಾಸ 3
--------------
ವಿಜಯದಾಸ
ಪವನಾ ಸಂಭೂತಾ ಒಲಿದೂತವಕಾದಿ ಕಾಯಬೇಕೂ |ಇವನಾರೋ ಎಂದೂ ದಾಸಿನಾ | ಮಾಡದಲೆ ಎನ್ನಾ ಪ ಹರಿವೇಷಧರನೆ ನರ |ಹರಿಭಕುತರ ಪೊರೆಯುವದಕ್ಕೇ ||ಹರಿಯಂತೆ ಒದಗುವೆಯೋ ನೀನೂ | ಹರಿದಾಸ ನಾನೂ 1 ಕಪಿಪಾ ಕಪಿಯಾಜ್ಞದಂತೇ |ಕಪಿಲನ್ನ ಪತ್ನಿಯನ್ನೂ ||ಕಪಿಗಳು ಹುಡುಕಿ ಮಿಡುಕಲು | ಕಾಯ್ದೆ ಆವಾಗಲೂ 2 ಅಜಸುತನ ಶಾಪದಿಂದ |ಅಜಗರನಾದ ವನಪಾದ ||ರಜದೀ ಪೂನೀತನ ಮಾಡಿದನೇ | ಅಜಪದವಿಗೆ ಬಹನೇ3 ಕಲಿಯುಗದಿ ಕವಿಗಳೆಲ್ಲಾ |ಕಲಿಯಾ ಬಾಧೆಗೆ ಬಳಲಿ |ಕಲಿವೈರಿ ಮುನಿಯೆಂದೆನಿಸಿದೇ | ಕಲಿಮಲವಾ ಕಳೆದೆ 4 ಗುರು ಪ್ರಾಣೇಶ ವಿಠಲಾ |ಗುರುವರನೆಂಬೊ ಜ್ಞಾನಾ ||ಗುರು ಮಧ್ವರಾಯಾ ಕರುಣಿಸೋ | ಗುರುಮತಿಯನು ಬಿಡಿಸೋ 5
--------------
ಗುರುಪ್ರಾಣೇಶವಿಠಲರು
ಪಾದುಕೆಗಳ ದಯಪಾಲಿಸು ಪರಮ ಪಾವನ ಮಹಿಮ ಸುದೇವ ಲಲಾಮ ಪ ನೀ ದಯದಿಂ ತವಪಾದ ಪಯೋಜಗ ಳಾದರದಲಿ ಕೊಡು ಹೇ ದಯಧಾಮ ಅ.ಪ. ಅಜನವ್ಯಯನಪ್ರಾಕೃತ ಮಹಿಮನು ಅಜನಪಿತನು ತನ್ನಿಚ್ಛೆಯೊಳು ಅಜಸುತ ದಶರಥ ಸುತನೆಂದೆನಿಸಿದ ತ್ರಿಜಗ ನೋಡೆ ಆಶ್ಚರ್ಯದೊಳು 1 ತುಂಗಮಹಿಮ ತವ ಮಂಗಳಕರ ಚರ ಣಂಗಳು ಈ ತ್ರಿಜಗಂಗಳ ಪಾಲಿಪುವು ಅಂಗಜಕೋಟಿ ಶುಭಾಂಗನೆ ತವಪದ ಭೃಂಗನೆನಿಸಿ ಕೃಪಾಪಾಂಗದಿ ಈಕ್ಷಿಸೊ ಮಂಗಳಕರ ರಘುಪುಂಗವ ಕರಿಗಿರಿ ರಂಗ ನೃಸಿಂಹ ಸೀತಾಂಗನೆಯರಸ 2
--------------
ವರಾವಾಣಿರಾಮರಾಯದಾಸರು
ಪಾಲಿಸು ಪರಮೇಶ | ಪಾಪ ವಿನಾಶ ಪ ಫಾಲನಯನ ತ್ರಿಶೂಲಧರ ಕರು ಣಾಲವಾಲ ವಿಶಾಲ ಮಹಿಮನೆ ಕಾಲಕಾಲ ಕಪಾಲಧರ ಸುರ ಜಾಲನುತ ಪದ ಶೈಲಜಾವರ ಅ.ಪ. ಶಂಕರ ಶಶಿಶೇಖರ | ಸದಾಶಿವ ಸಂಕಟಹರ ಈಶ್ವರ | ವರದಾನ ಶೂರ ಶಂಕೆಯಿಲ್ಲದೆ ತ್ವತದಾಂಬುಜ ಪಂಕ ಕಳೆವ ಅಕ ಳಂಕ ಮತಿಯನು ಕರುಣಿಸುವ ಮೀ ನಾಂಕ ಮದಹರ ಮೃಡಸುರೇಶ್ವರ 1 ಗಜ ಚರ್ಮಾಂಬರಧರನೆ | ಗೌರೀವರನೆ ಅಜಸುತಾಧ್ವರ ಹರನೆ | ಪ್ರಣಿತಾರ್ಥಿಹರನೆ ನಿಜಪದಾಂಬುಜ ಪೂಜೆ ಮಾಡುವ ಸುಜನ ಮನ ಅಂಬುಜ ದಿವಾಕರ ಭಂಜನ ಭುಜಗಭೂಷಣ ನಿಜ ಚರಣ ಪಂಕಜವ ತೋರಿಸಿ..... 2 ಹರಿನೀಲನಿಭಕಂಧರ | ಮುಪ್ಪುರಹರ ಶರಣಜನ ಮಂದಾರ | ಕೈಲಾಸಮಂದಿರ ವರ ವಿನಾಯಕ ಜನಕ ಜಾಹ್ನವಿ ಧರನೇ ಕರುಣಾಭರಣ ಪಾವನಕರಿಗಿರೀಶನ ಪರಮಪ್ರಿಯ ಹರಿ..... 3
--------------
ವರಾವಾಣಿರಾಮರಾಯದಾಸರು
ರಜತಗಿರೀಶ್ವರ ಮಹಾನುಭಾವ ಗಜಚರ್ಮಾಂಬರ ನಮೋ ನಮೋ ಪ ವಿಜಯರಾಮಾರ್ಚಿತ ಪದಕಮಲ ಅಜಸುತ ಸೇವಿತ ನಮೋ ನಮೋ ಅ.ಪ ವಾರಣಾಸಿ ಸುಕ್ಷೇತ್ರ ನಿವಾಸ ಪರಮೋಲ್ಲಾಸ ನಮೋ ನಮೋ ಭೂರಿ ವೈಭವಾನಂದ ವಿಲಾಸ ರವಿಶತಭಾಸಾ ನಮೋ ನಮೋ 1 ನಾದಾಲಂಕೃತ ವರದಾತಾ ಶ್ರೀ ಗೌರಿಯುತ ನಮೋ ನಮೋ ಭಾಗೀರಥೀಪ್ರಿಯ ಲೋಕನುತ ದೇವೇಂದ್ರಾತ ನಮೋ ನಮೋ2 ಮಂಗಳದಾಯಕ ಶಶಿಶಿಖರ ಸಂಗವಿದೂರಾ ನಮೋ ನಮೋ ಮಾಂಗಿರಿ ಶೃಂಗವಿರಾಜಿತಶಂಕರ ಶರಣಶುಭಂಕರ ನಮೋ ನಮೋ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ರುದ್ರದೇವರ ಸ್ತೋತ್ರ ಇಂದುಧರನೆ ಬಾರೊ | ಸುರ | ವೃಂದವಂದ್ಯನೆ ಬಾರೊಕುಂದಾದೆನ್ನ ಮನಸಿಗೇ ಮುಕುಂದ ಪ್ರಿಯನೆ ಬಾರೋ ಪ ರಜತಾದ್ರಿ ನಿವಾಸನೆ ಬಾರೋಗಜದೈತ್ಯ ವಿನಾಶನೆ ಬಾರೋ ||ಅಜಸುತನಧ್ವರ ಭಜನೆಯ-ಗೆಡೆಸಿದ ಗಜಮುಖನಯ್ಯನೆ ಬಾರೋ 1 ಅಗಣಿತ ಶೌರ್ಯನೆ ಬಾರೋಸರ್ಪ ಭೂಷಣನೆ ಬಾರೋ 2 ಕಂದನ ತಲೆ ಕೆಡಹಿದವನೆ ಬಾರೋಇಂದ್ರ ಅಜಗೊರಳಗೊಲಿದನೆ ಬಾರೋ ||ಅಂಧಕಾಂತಕ ಇಂದ್ರವಂದಿತನಂದಿವಾಹನನೆ ಬಾರೋ 3 ಅಂಬರ ಪುರಹರನೆ ಬಾರೋ ತ್ರಿ-ಯಂಬಕ ಮಹದೇವನೆ ಬಾರೋ ||ಅಂಬಿಕೆ ವಲ್ಲಭ ಸಿಂಧೂರ ಮುಖ ಪಿತಶಂಭು ಮೂರುತಿಯೆ ಬಾರೋ 4 ಸುರ ನದಿಯ ಪೊತ್ತವನೆ ಬಾರೋವರ ಪಂಪಾಪುರ ನಿಲಯನೆ ಬಾರೋ ||ಶಿರಿ ಮೋಹನ್ನ ವಿಠಲನ್ನಪರಮ ದಾಸನೆ ಬಾರೋ 5
--------------
ಮೋಹನದಾಸರು
ಶೂರ್ಪಾಲಯ ಕ್ಷೇತ್ರದ ನರಹರಿ ಸ್ತೋತ್ರ (ಕೃಷ್ಣಾತೀರ) ನರಹರೀ ಪಾಹಿ | ಮರನೂರ ನರಹರೀ ಪ ಪರಿ ಭವಣೆಯ | ಪರಿಹರಿಸುತ ಮುನ್ನವರ ವೈರಾಗ್ಯವನಿತ್ತು | ಕರುಣೀಸೊ ಸಂಪನ್ನ ಅ.ಪ. ಸತಿ | ಕೃಷ್ಣೆಗಕ್ಷಯ ವಸನಸೃಷ್ಟಿಗಿತ್ತವ ಹರಿ | ಕೃಷ್ಣನೆ ಸಲಹೆನ್ನ 1 ಬುದ್ಧ | ಆಘಹರ ಕಲ್ಕಿಯೆ 2 ಜನಿತ ಸುಖ ಜಲ ಕಣ್ಣ | ಬಿಂದುಯುಗಳವು ಬೀಳೆ ಪಾವನ್ನ | ವೃಕ್ಷಯುಗಳೋದಯವಾಯ್ತು ಮುನ್ನ | ಆಹಅಗಣಿತ ಮಹಿಮ | ಅಶ್ವತ್ಥ ಸನ್ನಿಹಿತನೆನಿಗಮ ವೇದ್ಯನೆ ಸರ್ವ | ಜಗದೀಶ ಸಲಹೆನ್ನ 3 ಶೂಲಿಯಿಂದೊಡಗೂಡಿ ರಾಮ | ಚಂದ್ರಪಾಲಿಸುತಿಹ ಸಾರ್ವಭೌಮ | ಸುಜನಾಳಿ ಪಾಪಾರಣ್ಯ ಧೂಮ | ಕೇತುಓಲೈಪ ಜನರಘ ಭಸ್ಮ | ಆಹಲೀಲೆಯಿಂದಲಿ ಗೈವ | ಆಲಯವಿದು ಶೂರಪಾಲೀಯ ಕ್ಷೇತ್ರದಿ | ಶ್ರೀಲೋಲ ನರಹರಿ 4 ನಡು ನದಿಯೋಳು ಕೋಟೇಶ | ಮತ್ತೆಪಡುವಲಯದೋಳು ಕಂಕೇಶ | ಇನ್ನುಬಡಗ ನರಹರಿ ಬಳಿ ಬೈಲೇಶ | ಆಹರೊಡಗೂಡಿ ನೆಲಸೀಹ | ಕಡು ಮುದ್ದು ರೂಪದಿದೃಢ ಭಕ್ತನೆನಿಸೀಹ | ಮೃಡನಿಂದ ಪೂಜಿತ 5 ಅಜಪಿತ ಪದಜಳು ಎನಿಪ | ಮತ್ತೆಅಜಾಂಡ ಕಟಹದಿಂ ಬರ್ಪ | ಇನ್ನುಅಜಸುತ ಶಿರದಲಿ ಧರಿಪ | ಸಗರಜರ ಪಾಪವನ್ನು ಹರಿಪ | ಆಹಮಝಬಾಪು ಗಂಗೆಯ | ನಿಜ ಪಾಪ ಕಳೆಯಲುಅಜಸುತ ನಾಜ್ಞೆಯಿಂ | ಬಿಜಯಿಸಿದಳು ಇಲ್ಲಿ 6 ಪರರಘಗಳ ಹೊತ್ತು ಗಂಗೆ | ಬಂದುಹರ ಪೇಳಿದಂಥ ದ್ವಿಜಂಗೆ | ಶೂರ್ಪವರ ವಾಯು ನ್ವಿತ್ತಳವಂಗೆ | ಪಾಪಹೊರದೂಡಿದಳು ಮಂಗಳಾಂಗೆ | ಆಹಗುರುಕನ್ಯಾಗತನಾಗೆ | ಸರಿದ್ವರ ಕೃಷ್ಣೇಲಿಬೆರೆಯುತ ಸುರ ನದಿ | ಹರಿಪಳು ಜನರಘ 7 ಮಧ್ವಾರ್ಯ ಸಂತತಿ ಜಾತ | ಗುರುವಿದ್ಯಾಧೀಶರು ಇಲ್ಲಿ ಖ್ಯಾತ | ದ್ವಾದಶಬ್ದ ಪರಿಯಂತನುಷ್ಠಾತ | ಪ್ರಾಣಮುದ್ದು ಪ್ರತಿಮೆ ಪ್ರತಿಷ್ಠೀತ | ಆಹಶುದ್ಧ ದ್ವಾದಶಿ ದಿನ | ಸದ್ವೈಷ್ಣ್ವ ಲಕ್ಷರ್ಗೆವಿಧ್ಯುಕ್ತ ಭೋಜನ | ಶ್ರದ್ಧೆಯಿಂದಲಿ ಗೈದರ್ 8 ಪರ ತತ್ವವೆನಿಸಿ | ಸ್ತುತಿಸ್ಕಂದೋಕ್ತ ಮಹಿಮೆಯ ಸ್ಮರಿಸಿ | ಆಹಇಂದುಪ ಗುರು ಗೋ | ವಿಂದ ವಿಠಲನಹೊಂದಿ ಭಜಿಪರ್ಗ | ಬಂಧನವೆಲ್ಲಿಹದೋ 9
--------------
ಗುರುಗೋವಿಂದವಿಠಲರು