ಭಜಿಸು ಮಾನಸ ತ್ರಿಜಗದರಸ ಪ.
ನಿಜಭಜಕ ಜನಾಶ್ರಯ ಸುಜನಬಾಂಧವ
ಅಜಮುಖಾರ್ಚಿತ ಪಾದಪಂಕಜ ಅಜಾಮಿಳವರದನಂಘ್ರಿಯ ಅ.ಪ.
ಪವನನಂದನ ಸೇವ್ಯನ ಪದ್ಮಾಕ್ಷನ ಪಾವನಗುಣಶೀಲನ
ಪರಮಾತ್ಮನ ಪತಿತಪಾವನ ನಾಮನ ಅಪಾರ ಮಹಿಮನ
ಸುರನರೋರುಗ ನಮಿತ ಚರಣನ ತರಣಿವಂಶಾಬ್ಧಿ ಚಂದ್ರಮನ
ಪುರವೈರಿ ಪ್ರಿಯಸಖನ ಪರಂತಪ ರಾಘವೇಂದ್ರನ 1
ವಿಕ್ರಮನ ಭಯನಾಶನ ಕಾಕುತ್ಸ್ಧಕುಲದೀಪನ ಸುಗುಣಾ ರಾಮನ
ಪಾಕಾರಿವಿನುತ ಸಾಕೇತನಿಲಯನ ರಾಕೇಂದುನಿಭಾಸ್ಯ ಶ್ರೀ ವರನ
ಲೋಕಮೋಹನ ಮೇಘ ಶ್ಯಾಮನ ವೈಕುಂಠಪತಿ ಲಕ್ಷ್ಮೀಶ ಕೇಶವನ2
ಪಾಲಲೋಚನನ ಪಂಕಜಾಸನ ಪಾಕಾರಿಮುಖ ನಮಿತ ಚರಣನ
ಶ್ರೀಲೋಲ ಶೇಷಾಚಲನಿಲಯ ಶ್ರೀವೇಂಕಟನ3