ಚನ್ನ ಕೇಶವ ನಮೋ ನಮೋ
ಭಿನ್ನ ರೂಪನೆ ನಮೋ ನಮೋ ಪ
ಅಜಮಿಳರಕ್ಷಕ ನಮೋ ನಮೋ
ಭಜಕರ ಪಾಲಕ ನಮೋ ನಮೋ
ಸುಜನರ ಸೇವಕ ನಮೋ ನಮೋ
ಕುಜನರ ನಾಶಕ ನಮೋ ನಮೋ1
ಸುರಮುನಿ ವಂದಿತ ನಮೋ ನಮೋ
ಸುರಗಣ ಸೇವಿತ ನಮೋ ನಮೋ
ತರಳರ ಪಾಲಕ ನಮೋ ನಮೋ
ಶರಣರ ರಕ್ಷಕÀ ನಮೋ ನಮೋ 2
ದಾಶರಥೆ ಹರಿ ನಮೋ ನಮೋ
ವಾಸುಕಿಶಯನನ ನಮೋ ನಮೋ
ಈಶ ಪರಾತ್ಪರ ನಮೋ ನಮೋ
ಮಾಧವ ನಮೋ ನಮೋ 3