ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೃಷ್ಣಾ ಎಣಿಕ್ಯಾಕೈಯ್ಯ ನಮ್ಮ ಕೂಡ ತುಟ್ಟಿ ಮಿಸುಕಬಾರದು ನೋಡಬ್ಯಾಡ ಇಷ್ಟರಮೇಲೆ ತಿಳಿಯದ ನಾ ಮೂಢ 1 ಅಂದು ಏನಾಗಿತ್ತೈಯ್ಯ ನಿಮ್ಮ ಬುಧ್ದಿ ಬಂದು ಗೊಲ್ಲರೊಡನೆ ಕೂಡ್ಯಾಕಿದ್ದಿ ಸಂಧಿಸ್ಯವರುಚ್ಚಿಷ್ಟವೆಂದು ನೀ ಮೆದ್ದಿ ಇಂದು ಬ್ಯಾರೆ ನೋಡಲಿಕ್ಕೆ ಮರದ ಸುದ್ದಿ 2 ಕುಬ್ಜೆ ಕೂಡಿಕೊಂಬಾಗ ನೋಡಲಿಲ್ಲಿ ನಿಜಪದಕ ಯೋಗ್ಯಳ ಮಾಡಲಿಲ್ಲಿ ಅಜಮಿಳನೆಷ್ಟೆಂದು ಅರಿಯಲಿಲ್ಲಿ ಸೋಜಿಗೆಲ್ಲಾನು ನಿಮ್ಮದು ನಾ ಬಲ್ಲೆ 3 ಸುಮ್ಮನಿರಬೇಕೆನ್ನ ನೀ ಕೂಡಿಕೊಂಡು ನಿಮ್ಮ ಮಾತು ಒಡಿಯದು ಉದ್ದಂಡು ಇಮ್ಮನಾಗದಲ್ಲಿಂದ ಮನಗಂಡು ಬ್ರಹ್ಮಾನಂದ ಕೊಂಡಾಡುವೆ ಘನನುಂಡು 4 ಹಿಂದೆ ಭಕ್ತರೇನು ತಾಂ ಕೊಟ್ಟರಯ್ಯ ಇಂದು ನಾ ಕೊಡುವದೇನು ಹೇಳಯ್ಯ ಕಂದ ಮಹಿಪತಿ ನಾ ನಿಮ್ಮ ನಿಶ್ಚಯ ಎಂದು ಬಿಡದೆ ಸಲಹೊ ನೀ ನಮ್ಮಯ್ಯ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನೀನೆ ರಕ್ಷಿಸಬೇಕು ಹೀನಬುದ್ಧಿಯ ನರನ ಪಯೇನೆಂಬೆ ವಿಷಯಗಳೊಳು ಮನಮುಳುಗಿ ಧ್ಯಾನವನೊಮ್ಮೆಯು ಮಾಡದ ಮರುಳ ಅ.ಪಕಂಡುದನೆಲ್ಲವ ಬಯಸಿ ದಂಡಿಸಲಾರದೆ ಮನವಕೆಂಡಕೆ ಮುತ್ತುವ ಶಲಭನ ತೆರದಿ ಕಂಡು ನೊಂದು ಮತ್ತದ ಬಿಡದಿರಲು 1ಕಾಯವ ನಿತ್ಯವಿದೆಂದು ಹೇಯದಿ ತೋರಲು ಕಂಡು ನೋಯದೆ ತಾಪತ್ರಯಗಳನುಂಡು ಆಯಸಗೊಳುತಿರಲಿದ ನೀ ಕಂಡು 2ದುಃಖದಿ ನೋವರ ನೋಡಿ ಸುಕ್ಕುತಲಾಕ್ಷಣದೊಳಗೆದುಃಖವು ಬಂದರೆ ಪರಿಹರವಾಗದೆ ಸಿಕ್ಕಿರೆ ಬಲೆಯೊಳು ದುಃಖಿಸುತಿರಲು 3ಪ್ರಾಚೀನ ಕರ್ಮಗಳು ವೀಚಿಗಳಂದದಿ ಬರಲುಸೂಚಿಸಿ ಶಿಕ್ಷಿಪ ಶಾಸ್ತ್ರದ ನೆಳಲೊಳು ಚಾಚದೆ ತಾವೆ ತಾವಾಗಿರಲು 4ದುರಿತಗಳೆ ಬಹುವಾಗಿ ಸ್ಫುರಿಸುತ್ತಲಿರಲಾಗಿಮರುಗುವ ರಕ್ಷಕ ನೀನಿರಲಾಗಿ ಮರೆಯೊಗದಿರಲೀ ದುರಿತವ ನೀಗಿ 5ದ್ವಂದ್ವಗಳೊಂದೆಂದೊಮ್ಮೆ ನಿಂದಿರೆ ಕರ್ಮದ ಹೆಮ್ಮೆಹೊಂದದು ಎಂದಿಗು ಅದು ತನ್ನ ಸೊಮ್ಮೆಯೆಂದಿಗೆ ಹೃದಯದಿ ನಿಲುವೆ ನೀನೊಮ್ಮೆ 6ಮಾನವ ಬಿಟ್ಟರೆ ಬುದ್ಧಿ ಜ್ಞಾನದ ಸಾಧನ ಸಿದ್ಧಿತಾನೇ ಬರುವುದು ಪುಣ್ಯಸಮೃದ್ಧಿ ಜ್ಞಾನಾತ್ಮಕ ಕೃಷ್ಣ ನೀನಿರು ಹೊದ್ದಿ 7ಭಜಿಸಿದನೆ ಭಕ್ತಿಯಲಿ ಯಜಿಸಿದನೆ ಯಾಗದಲಿದ್ವಿಜತನವನ್ನಾದರು ಬಿಡದಿದ್ದನೆ ಅಜಮಿಳನೆ ನಿನ್ನೊಲವಿಗೆ ಸಾಕ್ಷಿ 8ಕರುಣಕಟಾಕ್ಷವ ನೀನು ುರಿಸಲು ಧನ್ಯನು ನಾನುತಿರುಪತಿ ನಿಲಯ ಶ್ರೀ ವೆಂಕಟ ಕಾಣು ಗುರು ವಾಸುದೇವರೂಪಿನ ಚಿದ್ಭಾನು 9ಓಂ ದಾನವೇಂದ್ರ ವಿನಾಶಕಾಯ ನಮಃ
--------------
ತಿಮ್ಮಪ್ಪದಾಸರು
ಭೂರಿ ಕರುಣಾಕರನೋ ಸಾರುವ ತೆರೆದೊಳು ತೋರಿಹ ಭಕ್ತರ ಪ. ಅಗಣಿತ ಮಹಿಮನ ಪೊಗಳುವೆ ನಾನೆಂತು ಬಗೆ ಬಗೆ ರೂಪದಿ ಸಿಗದೆಸಿಗುವ ಹಾಂಗೆ ಪೊಗಳಿಸಿಕೊಂಡು ತಾ ಝಗಝಗಿಸುತ ಬಹ ನಗೆಮೊಗ ಚೆನ್ನಿಗ ನಿಗಮಗೋಚರ ಕೃಷ್ಣಾ 1 ಭಕ್ತ ಪ್ರಹ್ಲಾದಗೆ ಅತ್ಯಧಿಕ ಹಿಂಸೆ ಯಿತ್ತ ಪಿತನ ಕೊಂದು ಇತ್ತ ಮುಕುತಿ ಅವ ನತ್ಯಪರಾಧವನೆತ್ಯಾಡಿದನೇ ಚಿತ್ತಜನೈಯ್ಯನು ಭಕ್ತವತ್ಸಲ ದೇವ 2 ಅಣುರೇಣು ತೃಣಕಾಷ್ಠ ಪರಿಪೂರ್ಣ ನೀನೆಂದು ಕ್ಷಣ ಬಿಡದಲೆ ಗಜರಾಜನು ಸ್ತುತಿಸೆ ಅನುವಿಲಿ ಚಕ್ರದಿ ನಕ್ರನ ಹರಿಸಲು ದಣಿದ ಹರಿಗೆ ಗಜರಾಜನೇನಿತ್ತನೋ 3 ಭಕ್ತರ ಮನದಘ ನಿತ್ಯದಿ ಕಳೆದನೋ ಅಶಕ್ತ ಅಜಮಿಳನೆಮ ಭೃತ್ಯರೆಳೆಯಲು ಇತ್ತು ನಾರಗನುಡಿ ಮತ್ತೆ ಯಮಭಟರ ಇತ್ತ ಮುಕುತಿ ದೇವ ಅತ್ಯಧಿಕ 4 ಮೂಗುತಿ ನೆವದೊಳು ಸಾಗಿಸಿ ಭಾಗ್ಯವ ಜಾಗರ ಮೂರುತೆ ಯೋಗಿಗಳರಸನು ಬಾಗಿಸಿ ತನ್ನವರಾಗಿಸಿ ದಾಸರ ಸರ್ವರ ಅನುರಾಗದಿ ಸಲಹುವ 5
--------------
ಸರಸ್ವತಿ ಬಾಯಿ
ಮಾನವ ಪ ಗರುವವೇತಕೆ ನಿನಗೆ ಎಲೆ ಮಂಕು ಜೀವಅ ರೂಪದಲಿ ಮನ್ಮಥನೆ ಶಾಪದಲಿ ಗೌತಮನೆಕೋಪದಲಿ ದೂರ್ವಾಸ ಮುನಿಯೆ ನೀನುತಪದಲ್ಲಿ ವ್ಯಾಸನೆ ಕೃಪೆಯಲ್ಲಿ ಬಲೀಂದ್ರನೆನಿಪುಣತ್ವದಲಿ ನಾರದ ಮುನಿಯೆ ನೀನು 1 ಯತಿಯಲ್ಲಿ ಅಗಸ್ತ್ಯನೆ ಕ್ಷಿತಿಪರಲಿ ಜನಮೇಜಯನೆಗೀತದಲಿ ಗಂಧರ್ವನೇ ನೀನುವ್ರತದಲ್ಲಿ ಲಕ್ಷ್ಮಣನೆ ಮತಿಯಲ್ಲಿ ಕಶ್ಯಪನೆವಿತರಣ ಗುಣದಲಿ ಯಮಧರ್ಮನೆ ನೀನು 2 ಮಾನವ 3 ಕೊಡುವುದಕೆ ಕರ್ಣನೆ ನಡತೆಯಲಿ ಧರ್ಮಜನೆದೃಢ ಮನಸಿನಲಿ ರುಕ್ಮಾಂಗದನೆ ನೀನುಪಡೆಯಲ್ಲಿ ಕೌರವನೆ ನುಡಿಯಲ್ಲಿ ಗಾಂಗೇಯನೆಮಡದಿಯರ ಭೋಗಕ್ಕೆ ಸುರಪತಿಯೆ ನೀನು4 ಬಾಣದಲಿ ರಾಮನೇ ತ್ರಾಣದಲಿ ಭೀಮನೇಕೇಣದಲಿ ಶಿಶಪಾಲನೇನೊಗುಣದಲಿ ಸುಧರ್ಮನೇ ರಣದಲಿ ಶಲ್ಯನೆ ಆನುಗುಣ್ಯವಾದದಲಿ ನರಪತಿಯೆ ನೀನು5 ಛಲದಲ್ಲಿ ರಾವಣನೆ ಬಲದಲ್ಲಿ ವಾಲಿಯೇನಿಲುಗಡೆಯ ಮನದಲ್ಲಿ ದ್ರೋಣನೆ ನೀನುಕುಲದಲಿ ವಸಿಷ್ಠನೇ ಗೆಲುವಿನಲಿ ಪಾರ್ಥನೇಬಿಲುವಿದ್ಯೆಯಲಿ ಪರಶುರಾಮನೆ ನೀನು 6 ಶಕ್ತಿಯಲಿ ಹನುಮನೇ ಭಕ್ತಿಯಲಿ ವಿಭೀಷಣನೆಕೀರ್ತಿಯಲಿ ಹರಿಶ್ಚಂದ್ರರಾಯನೆ ನೀನುಅರ್ತಿಯಲಿ ಶುಕಮುನಿಯೆ ಸ್ಫೂರ್ತಿಯಲಿ ಸೂರ್ಯನೇಮುಕ್ತಿ ಸಾಧನಕೆ ಪ್ರಹ್ಲಾದನೆ ನೀನು7 ಗೋತ್ರದಲಿ ಬ್ರಹ್ಮನೇ ಸೂತ್ರದಲಿ ಕೌಶಿಕನೆಪಾತ್ರದಲಿ ವಾಲ್ಮೀಕಿ ಋಷಿಯೆ ನೀನುಮಾತಿನಲಿ ಗುರುಸುತನೆ ಜ್ಯೋತಿಯಲಿ ಬೃಹಸ್ಪತಿಯೆನೀತಿಮಾರ್ಗದಲಿ ಸಹದೇವನೇ ನೀನು 8 ಅಂಗದಲಿ ಅಜಮಿಳನೆ ಶೃಂಗದಲಿ ಮಾರುತನೆಕಂಗೊಳಿಪ ತನದಲ್ಲಿ ಕಾಮಸುತನೆಗಂಗೆಯನು ಪಡೆದಂಥ ನೆಲೆಯಾದಿಕೇಶವನಹಿಂಗದೆ ಭಜಿಸಿ ಪಾವನನಾಗು ಮನುಜ 9
--------------
ಕನಕದಾಸ