ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಹುದೋ ದೇವ ನೀ ದಯಯುತನೆಂಬುದು ಸಹಜವೋ ಎಲೆ ರಂಗ ಪ ಮಹದುಪಕಾರವ ಗೈವೆ ಜಗಕೆಲ್ಲ ಅಹುದೋ ಅಹುದೋ ಸಲೆ ಸಲಹುವ ಪಿತ ನೀ ಅ.ಪ ಅಜಗೆ ನೇತ್ರವನಿತ್ತೆ ಗಜಕೆ ಪ್ರಾಣವನಿತ್ತೆ ಅಜಮಿಳನಿಗೆ ಮೋಕ್ಷಪದವಿಯನಿತ್ತೆ ಭಜನೆಗೈಯುವ ತುಂಬುರು ನಾರದರಿಂಗೆ ನಿಜಸುಖ ಸಾಮ್ರಾಜ್ಯ ಪದವಿಯನಿತ್ತೆ 1 ತರಳನ ನುಡಿಕೇಳಿ ಕಂಬದೊಳುದಯಿಸಿ ದುರುಳರಕ್ಕಸನಶಿಕ್ಷಿಸಿದೆ ತರಳ ಧ್ರುವನು ಗೈದಾ ತಪಸಿಗೆ ನಲಿಯುತೆ ವರಸುಖಪದವಿತ್ತ ಕರುಣಾಕರನೀ 2 ಭೂತಳದೊಳು ಜನ್ಮವಾಂತಿಹ ಸಾಸಿರ ಚೇತನಾಚೇತನ ವಸ್ತುಗಳನು ನೀ ಪ್ರೀತಿಸಿ ಪೊರೆಯುವ ರೀತಿಯದಾಶ್ಚರ್ಯ ಏ ತೆರ ಪೇಳ್ದೊಡನಂತಮಹಿಮ ನೀ 3 ದೇವದೇವನೆ ನಿನ್ನ ಪಾವನಚರಣವು ದೇವಮುನಿಗಳೆಲ್ಲ ಸೇವಿಸಲರಿದೈ ಭಾವಜಪಿತ ರಾಮದಾಸಾಚೇತ ಸಾಕು ಜನ್ಮವಬಿಡಿಸೊ ಮಾವಿನಕೆರೆರಂಗಾ 4
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಆನೆಯ ನೋಡಿರಯ್ಯ ನೀವೆಲ್ಲರುಆನಂದ ಪಡೆಯಿರಯ್ಯ ಪ ತಾನು ತನ್ನವರೆಂಬ ಮಾನವರ ಸಲಹಿದಅ ಪಾಂಡು ಚಕ್ರೇಶನ ಸುತರಿಗೊಲಿದಾನೆಗಂಡುಗಲಿ ಮಾಗಧನ ಒರಸಿದಾನೆಹಿಂಡು ಗೋವಳರೊಳಗೆ ಹಿರಿಯನ ಕಳೆಯದಾನೆಲಂಡರಿಗೆ ಎದೆಗೊಡುವ ಪುಂಡಾನೆ 1 ಬಾಲಕನ ನುಡಿಗೇಳಿ ಖಳನ ಸೀಳಿದಾನೆಪಾಲುಂಡು ವಿದುರನ ಸಲಹಿದಾನೆಲೋಲಾಕ್ಷಿ ಮಾನಭಂಗಕ್ಕೊದಗಿದಾನೆಖೂಳ ಶಿಶುಪಾಲನನು ಸೀಳಿದಾನೆ2 ಅಜಮಿಳನಿಗೆ ನಿಜಪದವಿಯ ಕೊಟ್ಟಾನೆಕುಜನರೆಲ್ಲರನು ಒರಗಿಸಿದಾನೆಅಜಪಿತ ಕಾಗಿನೆಲೆಯಾದಿಕೇಶವಾನೆತ್ರಿಜಗವಲ್ಲಭ ತಾನು ಭಜಕರ ವಶವಾನೆ 3
--------------
ಕನಕದಾಸ