ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವಿಜಯ ರಾಯರ ಭಜಿಸದವ ನಿರ್ಭಾಗ್ಯ ಕಾಣೋ ಪ ಅಜಭವರಕಿಂತಧಿಕ ಗಜವರದ ಪರನೆಂದಾ ಅ.ಪ. ಋಷಿಗಳೆಲ್ಲರು ಕಲೆತು ಸತ್ರಯಾಗವ ಮಾಡೆಹೃಷಿಕೇಶ ಚತುರಾಸ್ಯ ಕೈಲಾಸ ವಾಸಾ |ಈಸು ಮೂರ್ತಿಗಳಲ್ಲಿ ಮಿಗಿಲಾರು ಎಂದೆನ್ನೆಸೂಸಿ ಮೂರ್ಲೋಕಗಳ ಶ್ರೀಶ ಪರನೆಂದಾ 1 ದೇವಮುನಿ ನರನಾಗಿ ಭುವಿಯಲ್ಲಿ ಜನಿಸುತಾದೇವದೇವನ ಸ್ತೋತ್ರ ಕವನವನೆ ಗೈದಾ |ಆವ ಲಕ್ಷವು ಪಂಚಕೆ ನ್ಯೂನ ಪಾದವ ಮಾಡ್ದದೇವ ಮುನಿ ಸುತ ಗುರು ಮಧ್ವಪತಿ ವಿಠಲಾ 2 ಜವನವರು ಕೊಂಡ್ಯೋಗೆ ಜವಪುರಿಗೆ ತನಯನಾಜವನೊಡನೆ ಶೆಣೆಶಾಡಿ ಹರಿಗೆ ಮೊರೆಯಿಡಲು |ಜೀವದಾನವ ಪೊಂದಿ ಚಿಪ್ಪಗಿರಿಗೆ ತೆರಳಲುಜೀವಂತ ನಾದನೈ ತನಯ ಮೋಹನ್ನಾ 3 ಪೂರ್ಣಬೋಧರ ಮತವ ಗಾನ ರೂಪದಿ ಪೇಳಿಪೂರ್ಣಗುಣ ಹರಿಯೆಂದು ಸ್ಥಾಪಿಸುತಲೀ |ಪೂರ್ಣ ಸಂಪ್ರೀತಿಯಲಿ ನೆಲೆಸಿ ಚಿಪಗಿರಿಯಲ್ಲಿಪೂರ್ಣನಂಘ್ರಿಯ ಭಜಿಸಿ ಭಕ್ತರನೆ ಪೊರೆದಾ 4 ಯುವ ಸಂವತ್ಸರದ ಸುಕಾರ್ತಿಕದ ಸಿತಪಕ್ಷಯಾದು ಗುರುದಿನ ದಶಮಿ ಮೊದಲ್ಯಾಮದಿ |ಪವನಾಂತರಾತ್ಮ ಗುರು ಗೋವಿಂದ ವಿಠ್ಠಲನಸ್ತವನದಿಂದಲಿ ಪೊರಟ ಹರಿಯ ಪುರಕಾಗಾ 5
--------------
ಗುರುಗೋವಿಂದವಿಠಲರು